• Home
  • »
  • News
  • »
  • state
  • »
  • Pitru Paksha: ಪದೇ ಪದೇ ಕೆಟ್ಟು ಹೋಗುವ ಸರ್ಕಾರಿ ಕಚೇರಿಗಳ ಸರ್ವರ್​​ಗಳಿಗೆ ಪಿಂಡ ಇಟ್ಟ ಅರ್ಚಕ

Pitru Paksha: ಪದೇ ಪದೇ ಕೆಟ್ಟು ಹೋಗುವ ಸರ್ಕಾರಿ ಕಚೇರಿಗಳ ಸರ್ವರ್​​ಗಳಿಗೆ ಪಿಂಡ ಇಟ್ಟ ಅರ್ಚಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸರ್ವರ್ ಸಮಸ್ಯೆಯಿಂದ ಮೂರು ದಿನಗಳಿಂದ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಬೇಸತ್ತ ಅರ್ಚಕ ಪ್ರಸನ್ನಕುಮಾರ್ ಪಿಂಡ ಪ್ರದಾನ ಮಾಡಿದ್ದಾರೆ.

  • Share this:

ಸರ್ ಸರ್ವರ್ ಸಮಸ್ಯೆ (Server Problem) ಇದೆ, ಇವತ್ತು ನಿಮ್ಮ ಕೆಲಸ ಆಗಲ್ಲ ಎಂಬ ಮಾತುಗಳು ಸರ್ಕಾರಿ ಕಚೇರಿಯಲ್ಲಿ (Government Office) ಸಾಮಾನ್ಯ. ಎಷ್ಟೋ ಜನರು ಸರ್ವರ್ ಸಮಸ್ಯೆ ಅಂತ ಹೇಳಿ ಸಾರ್ವಜನಿಕರು (Public) ಹೊರ ಬರುತ್ತಾರೆ. ಆದರೆ ಈ ಸರ್ವರ್ ಯಾವಾಗ ಚೆನ್ನಾಗಿ ಕೆಲಸ ಮಾಡುತ್ತೆ ಅನ್ನೋದು ಉತ್ತರ ಸಿಗದ ಪ್ರಶ್ನೆಯಾಗಿದೆ. ಸರ್ವರ್​ ಸಮಸ್ಯೆ ಅನ್ನೋ ಒಂದು ಕಾರಣದಿಂದ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ವಿಳಂಬವಾಗುರತ್ತವೆ. ಕಂದಾಯ, ಸಾರಿಗೆ, ಮುನ್ಸಿಪಲ್ ಕಾರ್ಪೊರೇಷನ್‌ಗಳು ಮತ್ತು ಉಪ-ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ ಹೆಚ್ಚಾಗಿರುತ್ತದೆ. ಇದರಿಂದ ಬೇಸತ್ತ ಅರ್ಚಕರೊಬ್ಬರು (Priest), ಪಿತ್ರು ಪಕ್ಷ (Pitru Paksha) ಪ್ರಯುಕ್ತ ಕೆಟ್ಟು ಹೋಗುವ ಸರ್ಕಾರಿ ಕಚೇರಿಗಳ ಸರ್ವರ್​ಗೆ ಪಿಂಡ ಪ್ರದಾನ (Pinda Pradana) ಮಾಡಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ (Banagrapete, Kolar) ತಾಲೂಕಿನ ಕರಪನಹಳ್ಳಿ ನಿವಾಸಿ ಅರ್ಚಕ ಮತ್ತು ಸಾಮಾಜಿಕ ಹೋರಾಟಗಾರರು ಆಗಿರುವ ಪ್ರಸನ್ನ ಕುಮಾರ್ ಸರ್ಕಾರಿ ಕಚೇರಿಗಳಲ್ಲಿ ಕೆಟ್ಟು ಹೋಗುವ ಸರ್ವರ್​ಗಳಿಗೆ ಪಿಂಡ ಪ್ರದಾನ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.


ಸರ್ವರ್ ಹೇಗೆ ಕಾಣುತ್ತೆ ಮತ್ತು ಎಲ್ಲಿರುತ್ತೆ ಅನ್ನೋದು ನನಗೆ ಗೊತ್ತಿಲ್ಲ. ಸರ್ವರ್ ಹೇಗೆ ಕಾಣುತ್ತೆ ಎಂಬುವುದು ಸಹ ನನಗೆ ತಿಳಿದಿಲ್ಲ. ಯಾವುದಾರೂ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಹೋದಾಗ ಅಧಿಕಾರಿಗಳು ಸ್ಪಂದಿಸಲ್ಲ. ಅಧಿಕಾರಿಗಳನ್ನು ಪ್ರಶ್ನೆ ಮಾಡಿದಾಗ, ಸರ್ವರ್ ಇಲ್ಲ, ಡೌನ್ ಎಂದು ಪದೇ ಪದೇ ಹೇಳುತ್ತಾರೆ. ಆದ್ದರಿಂದ ಸತ್ತು ಹೋಗಿರುವ ಎಲ್ಲಾ ಸರ್ವರ್​​ಗಳಿಗೆ ತರ್ಪಣ ನೀಡುವ ಮೂಲಕ ಮೋಕ್ಷ ಪಡೆಯಲು ನೆರವಾಗಿದ್ದೇನೆ ಎಂದು ಪ್ರಸನ್ನಕುಮಾರ್ ಹೇಳಿದ್ದಾರೆ.


ಪಹಣಿ ಪಡೆಯಲು ಹೋದಾಗಲೂ ವಿಳಂಬ


ನಾನು ಜಮೀನಿನ ಪಹಣಿ ಪಡೆಯಲು ಕಂದಾಯ ಇಲಾಖೆ ಕಚೇರಿಗೆ ಹೋಗಿದ್ದೆ. ಸರ್ವರ್ ಡೌನ್ ಎಂದು ಹೇಳಿದ ಅಧಿಕಾರಿಗಳು ಪಹಣಿ ನೀಡಲು ತಡ ಮಾಡಿದರು. ಪಡಿತರ ಚೀಟಿ, ಆಧಾರ್ ಕಾರ್ಡ್ ಬಯೋಮೆಟ್ರಿಕ್ ಮಾಡಿಸಲು ಹೋದಾಗಲೂ ಸರ್ವರ್ ಇಲ್ಲ, ಡೌನ್ ಅಂತಾನೇ ಹೇಳಿದ್ದರು ಎಂದು ಪ್ರಸನ್ನಕುಮಾರ್ ಹೇಳುತ್ತಾರೆ.


ಪ್ರಸನ್ನಕುಮಾರ್ ಗ್ರಾಮದ ಎರಡು ಮುಜರಾಯಿ ದೇವಸ್ಥಾನಗಳಲ್ಲಿ ಅರ್ಚಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಈ ಕೆಲಸದ ಜೊತೆಗೆ ಏಳು ಅನಾಥ ಮಕ್ಕಳನ್ನು ದತ್ತು ಪಡೆದುಕೊಂಡು ನೋಡಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ:  Pitru Paksha 2022: ಪಿತೃ ಪಕ್ಷ ಅವಧಿಯಲ್ಲಿ ತಪ್ಪದೇ ಈ ಕೆಲಸ ಮಾಡಿದ್ರೆ ಪೂರ್ವಜರಿಗೆ ಶಾಂತಿ


ಆಧಾರ್ ಕಾರ್ಡ್​ ಮಾಡಿಸಲು ಹೋದಾಗಲೂ ಸಮಸ್ಯೆ


ಈ ಮಕ್ಕಳ ಆಧಾರ್ ಕಾರ್ಡ್ ಮಾಡಿಸಲು ಸೇವಾ ಕೇಂದ್ರಕ್ಕೆ ಹೋದಾಗ ತೊಂದರೆ ಅನುಭವಿಸಿದ್ದಾರೆ. ಸರ್ವರ್ ಸಮಸ್ಯೆಯಿಂದ ಮೂರು ದಿನಗಳಿಂದ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಬೇಸತ್ತ ಅರ್ಚಕ ಪ್ರಸನ್ನಕುಮಾರ್ ಪಿಂಡ ಪ್ರದಾನ ಮಾಡಿದ್ದಾರೆ.


ಇನ್ನು ಕೆಲಸ ಮಾಡದ ಅಧಿಕಾರಿಗಳು ಸರ್ವರ್ ಸಮಸ್ಯೆಯ ನೆಪ ಹೇಳಿ ಕಾಲಹರಣ ಮಾಡುತ್ತಾರೆ. ಕೆಲಸ ಮಾಡಿಕೊಡದೇ ಸಾರ್ವಜನಿಕರನ್ನು ಪದೇ ಪದೇ ಕಚೇರಿಗೆ ಅಲೆಸುತ್ತಾ ಕಿರುಕುಳ ನೀಡುತ್ತಾರೆ. ಜಾಗೃತಿ ಮೂಡಿಸಲು ಪಿಂಡ ಪ್ರದಾನ ಮಾಡಿದ್ದೇನೆ ಎಂದು ಪ್ರಸನ್ನಕುಮಾರ್ ಹೇಳಿದ್ದಾರೆ. ಈ ಹಿಂದೆ ಗುಂಡಿಬಿದ್ದ ರಸ್ತೆಗಳಿಗೆ ತರ್ಪಣ ನೀಡಿದ್ದರು.


Bengaluru Traffic: ಬೆಂಗಳೂರಿಗರೇ ಗಮನಿಸಿ, 3 ದಿನ ಈ ರೋಡ್ ಕಡೆ ಹೋಗ್ಬೇಡ


ಬೆಂಗಳೂರಿನ ಪ್ರಯಾಣಿಕರಿಗೆ ಟ್ರಾಫಿಕ್ ಪೊಲೀಸರು ಮಹತ್ವದ ಸೂಚನೆ ನೀಡಿದ್ದಾರೆ. ಇಂದಿನಿಂದ (ಸೆಪ್ಟೆಂಬರ್ 26) ಮೂರು ದಿನಗಳ ಕಾಲ ಅಂದರೆ ಸೆಪ್ಟೆಂಬರ್ 26ರವರೆಗೆ ಗಣ್ಯವ್ಯಕ್ತಿಗಳು ನಗರಕ್ಕೆ ಭೇಟಿ ನೀಡಲಿರುವ ಕಾರಣ ಬೆಂಗಳೂರಿನ ಪ್ರಯಾಣಿಕರಿಗೆ ಟ್ರಾಫಿಕ್ ಪೊಲೀಸರು ಮಹತ್ವದ ಸೂಚನೆ ನೀಡಿದ್ದಾರೆ.


ಇದನ್ನೂ ಓದಿ: Pitru Paksha:ಕರ್ಣನಿಗೂ ಪಿತೃ ದೋಷಕ್ಕೂ ಇರುವ ಸಂಬಂಧ ಏನು?


ರಾಜಭವನ ಮುಖ್ಯ ದ್ವಾರದಿಂದ ಪೊಲೀಸ್ ತಿಮ್ಮಯ್ಯ ವೃತ್ತದವರೆಗೆ, ರಿಚ್ಮಂಡ್ ವೃತ್ತದಿಂದ ಬಾಲ್ಡ್ವಿನ್ ಬಾಲಕಿಯರ ಶಾಲೆಯ ವೃತ್ತದವರೆಗೆ ಒನ್ ವೇ ರಸ್ತೆಗಳನ್ನು ತಾತ್ಕಾಲಿಕವಾಗಿ ಟುವೆ ಆಗಿ ಮಾರ್ಪಾಡು ಮಾಡಲಾಗಿದೆ

Published by:Mahmadrafik K
First published: