• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mango Price: ಈ ಬಾರಿ ಮಾವಿನ ಹಣ್ಣು ಬಲು ದುಬಾರಿ; ರೇಟ್ ಕೇಳಿ ಶಾಕ್ ಆಗ್ತಿದ್ದಾನೆ ಗ್ರಾಹಕ

Mango Price: ಈ ಬಾರಿ ಮಾವಿನ ಹಣ್ಣು ಬಲು ದುಬಾರಿ; ರೇಟ್ ಕೇಳಿ ಶಾಕ್ ಆಗ್ತಿದ್ದಾನೆ ಗ್ರಾಹಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾವಿನ ಬೆಳೆ ಈ ಬಾರಿ ಕಡಿಮೆಯಾಗಿದ್ದು, ಬೆಲೆ ಏರಿಕೆಯಾಗಿ ಸಾಮಾನ್ಯ ವರ್ಗದವರ ಕೈಗೆಟುಕದಂತಾಗಿದೆ. ಕಳೆದ ವರ್ಷಾಂತ್ಯದಲ್ಲಿ ‌ಸುರಿದ ಮಳೆಯಿಂದ (Rain) ಭರ್ಜರಿಯಾಗಿ ಹೂಕಟ್ಟಿದ್ದ ಮಾವು ಕಾಯಿ ಕಚ್ಚಿಲ್ಲ.

  • Share this:

ಚಿಕ್ಕಬಳ್ಳಾಪುರ (ಮೇ 9):  ಈ ವರ್ಷ  ಏಪ್ರಿಲ್ (April) ನಾ ಕೊನೆ ವಾರದಿಂದ ಪ್ರಾರಂಭವಾದ ಮಳೆಗೆ ಕೆಲವು ರೈತರ (Farmer) ಮುಖದಲ್ಲಿ ಮಂದಹಾಸ ಮೂಡಿದರೆ ಇನ್ನೂ ಕೆಲ ರೈತರಿಗೆ ಶಾಪವಾಗಿದೆ.  ವರ್ಷವೆಲ್ಲಾ ಕಾದು ಇನ್ನೇನು ಬೆಳೆ ಕೈಗೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ವರವಾಗಿ ಕಂಡಿದೆ. ಅಕಾಲಿಕ ಮಳೆ ಬಿದ್ದ ಕಾರಣ ಕೆಲವು ಬೆಳೆ ನೆಲಕಚ್ಚಿದೆ. ಆದರೆ  ಹಣ್ಣುಗಳ ರಾಜ (Fruits King) ಎಂದೇ ಕರೆಯಿಸಿಕೊಳ್ಳುತ್ತಿರುವ ‘ಮಾವಿನ ಹಣ್ಣು’ (Mango) ಬೆಳೆ ಈ ಬಾರಿ ಕಡಿಮೆಯಾಗಿದ್ದು, ಬೆಲೆ ಏರಿಕೆಯಾಗಿ ಸಾಮಾನ್ಯ ವರ್ಗದವರ ಕೈಗೆಟುಕದಂತಾಗಿದೆ. ಕಳೆದ ವರ್ಷಾಂತ್ಯದಲ್ಲಿ ‌ಸುರಿದ ಮಳೆಯಿಂದ (Rain) ಭರ್ಜರಿಯಾಗಿ ಹೂಕಟ್ಟಿದ್ದ ಮಾವು ಕಾಯಿಕಚ್ಚಿಲ್ಲ.


ಮಾವು ಬಲು ದುಬಾರಿ


ಆದರೆ ಕೆಲವೆಡೆ ಮಾವು ಕೊಂಚ ಕಾಯಿಗಳು ಕಾಣುತ್ತಿದೆ. ಆದರೆ ಪ್ರಸ್ತುತ ಮೇ ತಿಂಗಳ ಪ್ರಾರಂಭದಿಂದ ಮಾವು ಬೆಳೆಯುವ ಅನೇಕ ಪ್ರದೇಶಗಳಲ್ಲಿ ಅಲ್ಲಲ್ಲಿ  ಬಿರುಗಾಳಿ, ಆಲಿಕಲ್ಲು ಸಮೇತ ಮಳೆ ಬೀಳುತ್ತಿರುವ ವರದಿಯಾಗಿದೆ. ಇದರಿಂದ ಕಟಾವಿಗೆ ಸಿದ್ದವಾಗಿರುವ  ಮಾವಿನಕಾಯಿಗಳಿಗೆ ಹೆಚ್ಚಿನ ಹಾನಿ ಆಗುತ್ತಿರುವುದು ವರದಿಯಾಗಿದೆ. ಅಲ್ಲದೆ ವಾತಾವರಣದಲ್ಲಿ ತೇವಾಂಶ ಅಧಿಕಗೊಂಡು ಹಣ್ಣಿನ ಊಜಿನೊಣಗಳ ಹಾವಳಿ ಸಹ ಹೆಚ್ಚುವ ಸಾಧ್ಯತೆ ಇದೆ.


ಆದ್ದರಿಂದ ಪ್ರಸಕ್ತ ಸನ್ನಿವೇಶದಲ್ಲಿ ಮಾವು ಬೆಳೆಗಾರರು ತಮ್ಮ ಫಸಲನ್ನು ರಕ್ಷಿಸುವುದು ಅತ್ಯಗತ್ಯವಾಗಿದೆ. ಇದಕ್ಕಾಗಿ ಜಿಲ್ಲೆಯ ತೋಟಗಾರಿಕಾ ಇಲಾಖೆ ‌ಕೆಲವು ಕ್ರಮಗಳನ್ನು ತಿಳಿಸಿದೆ. ಫಸಲು ಕುಸಿತ ಪ್ರಮುಖವಾಗಿ ಬಯಲುಸೀಮೆ ಜಿಲ್ಲೆಗಳಲ್ಲಿ ಉತ್ತಮ ಮಾವು ಬೆಳೆಯಲಾಗುತ್ತದೆ. ಮಾವಿಗೆ‌ ಗ್ರಾಮಾಂತರ ‌ಜಿಲ್ಲೆಯಲ್ಲಿ‌ ಉತ್ತಮ ಮಾರುಕಟ್ಟೆಯಿದೆ. ಆದರೆ ಮಳೆ ತೇವಾಂಶದಿಂದ ಮಾವು ಬೆಳೆಗೆ ಭಾರಿ ಹಾನಿಯಾಗಿದೆ.ಜಿಲ್ಲೆಯ ೪ ತಾಲೂಕುಗಳಲ್ಲಿ ‌೮ ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಭೂಮಿಯಲ್ಲಿ ಮಾವು ಬೆಳೆಯಲಾಗುತ್ತದೆ. ಆದರೆ ಈ ಬಾರಿಯ ಫಸಲಿನಲ್ಲಿ ಶೇ.40 ರಿಂದ 50ರಷ್ಟು ಹಾನಿಯಾಗಿದೆ.


ಇದನ್ನೂ ಓದಿ: Murder: ಎಣ್ಣೆ ಏಟಲ್ಲಿ ಯುವಕನ ಎದೆಗೆ ಚೂರಿ; ಬರ್ತ ಡೇ ಪಾರ್ಟಿ ಮಾಡಲು ಹೋದವನು ಹೆಣವಾಗಿದ್ದು ಯಾಕೆ?


ಈ ಬಾರಿ ಮಾವಿನ ಫಸಲು ಕಡಿಮೆ


ಪ್ರಮುಖವಾಗಿ ಚಿಂತಾಮಣಿ ತಾಲೂಕಿನ ಭಾಗದಲ್ಲಿ ಫಸಲು ಕಡಿಮೆ ಆಗಿದೆ.
ಬೆಲೆ ಏರಿಕೆ.ಜಿಲ್ಲೆಯ ಬಹುತೇಕ ಅಂಗಡಿಗಳಲ್ಲಿ ಮಾವಿನ ಹಣ್ಣುಗಳು ಇನ್ನೂ ಅಷ್ಟಾಗಿ ಕಂಡು ಬರದಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾವಿನ ಮಾರಾಟದ ಭರಾಟೆ ಅಷ್ಟೊಂದು ಜೋರಾಗಿ ನಡೆಯುತ್ತಿಲ್ಲ.ವರ್ಷ ಅಕಾಲಿಕ ಮಳೆ ಬಂದ ಹಿನ್ನೆಲೆಯಲ್ಲಿ ಮಾವಿನ ಫ‌ಸಲಿನಲ್ಲಿ ವ್ಯತ್ಯಯ ಉಂಟಾಗಿ ನಿರೀಕ್ಷಿಸಿದ ಮಟ್ಟಿಗೆ ಮಾವಿನ ಹಣ್ಣು ಇನ್ನೂ ಹೇರಳವಾಗಿ ಬಂದಿಲ್ಲ.  ಆದರೂ, ಇರುವ ಮಾವಿನ ಹಣ್ಣುಗಳು ಪ್ರತಿ ಕೆಜಿಗೆ 100 ರೂಪಾಯಿ ವರೆಗೂ ಇದೆ.ಗ್ರಾಹಕರಿಗೆ ಮಾವು ಸೇಬು ದರ ತಲುಪಿರುವ ಬಿಸಿ‌ ಮುಟ್ಟಿಸಿದೆ.


ಊಜಿ ನೋಣಗಳ ಹಾವಳಿ


ಕ್ರಿಮಿನಾಶಕಗಳ ಬಳಕೆ ಮರದಲ್ಲಿ ಮಾವಿನಕಾಯಿಗಳು ಬಳಲುತ್ತಿದ್ದರೆ ಅವುಗಳನ್ನು ತಡಮಾಡದೇ ಶೀಘ್ರವಾಗಿ ಕೊಯ್ಲು ಮಾಡಬೇಕು. ಹಣ್ಣಿನ ಊಜಿನೊಣಗಳನ್ನು ಹತೋಟಿಯಲ್ಲಿಡಲು ಎಕರೆಗೆ ಕನಿಷ್ಠ8-10 ಮೋಹಕ ಬಲೆಗಳನ್ನು ಕಟ್ಟಬೇಕು. ಹಣ್ಣಿನ ಊಜಿನೊಣಗಳನ್ನು ನಾಶಪಡಿಸಲು ಮರಗಳಿಗೆ  ಕೀಟನಾಶಕವನ್ನು ಪ್ರತಿ ಲೀಟರ್ ನೀರಿನಲ್ಲಿ 1.0 ಮಿ.ಲಿ. ಪ್ರಮಾಣದಲ್ಲಿ ಬೆರಸಿ ಸಿಂಪಡಿಸುವುದು. 10 ದಿನಗಳ ನಂತರ ಈ ಕ್ರಮವನ್ನು ಮತ್ತೆ ಪುನರಾವರ್ತಿಸುವುದು . ತೋಟದಲ್ಲಿ ಈಗಾಗಲೇ ಹಣ್ಣಿನ ಊಜಿನೊಣಗಳ ಹಾವಳಿಗೆ ತುತ್ತಾಗಿ ನೆಲಕ್ಕೆ ಬಿದ್ದಿರುವ ಹಣ್ಣುಗಳನ್ನು ತಡಮಾಡದೇ ಸಂಗ್ರಹಿಸಿ ಅವುಗಳನ್ನು 1 ಅಡಿ ಆಳದ ಗುಣಿ ತೋಡಿ ಹೂತು ಹಾಕಿ ಮಣ್ಣು ಮುಚ್ಚುವುದು. ಇದರಿಂದ  ಆ ಹಣ್ಣುಗಳ ಒಳಗೆ ಬೆಳೆಯುತ್ತಿರುವ ಊಜಿನೊಣದ ಕೋಶಗಳನ್ನು ನಾಶಪಡಿಸಲು ಸಾಧ್ಯವಾಗಲಿದೆ.


ಕಟಾವಿಗೆ ಸಿದ್ದತೆ


* ಕೈಗೆ ನಿಲುಕುವ ಕಾಯಿಗಳನ್ನು ತೊಟ್ಟು ಸಮೇತ ಕೊಯ್ಲು ಮಾಡಿ


*2 ಸೆ.ಮೀ. ತೊಟ್ಟನ್ನು ಉಳಿಸಿಕೊಳ್ಳುವುದು.


*ಕೈಗೆ ನಿಲುಕದ ಕಾಯಿಗಳನ್ನು ಏಣಿಯ ಸಹಾಯದಿಂದ ಅಥವಾ ದೋಟಿ ಉಪಯೋಗಿಸಿ ಕಾಯಿಗಳನ್ನು ಕೊಯ್ಲು ಮಾಡುವುದು.


* ಸೊನೆಯು ಕಾಯಿಗಳ ಮೇಲೆ ಅಂಟಿಕೊಂಡಿರುವುದನ್ನು ಬಟ್ಟೆಯ ಸಹಾಯದಿಂದ ಒರಸಿ .


* ಕಾಯಿಗಳನ್ನು ಪ್ರಖರ ಬಿಸಿಲಿನಲ್ಲಿ ಕೊಯ್ಲು ಮಾಡಬಾರದು. * ಮುಂಜಾವು ಮತ್ತು ಸಾಯಂಕಾಲದಲ್ಲಿ ಮಾತ್ರ ಕಾಯಿಗಳನ್ನು ಕೊಯ್ಲು ಮಾಡುವುದು ಉತ್ತಮ


ಇದನ್ನೂ ಓದಿ: PSI Recruitment Scam: ಅಕ್ರಮವಾಗಿ ಎಕ್ಸಾಂ ಬರೆದು ಸಕ್ಸಸ್ ಆಗಿದ್ದಕ್ಕೆ ಫೋಟೋಶೂಟ್, ಸಿಬ್ಬಂದಿಗೆ 4000 ಕೊಟ್ಟ ದಿವ್ಯಾ ಹಾಗರಗಿ


ಮಾವಿನ ಹಣ್ಣಿಗೆ  ಕೀಟಗಳ ಕಾಟ


ಇನ್ನೂ ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ತಾಲೂಕುಗಳಾದ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚು  ಮಾವು ಬೆಳೆ ಬೆಳೆಯುತ್ತಿದ್ದು, ಶ್ರೀನಿವಾಸಪುರ ಮಾರುಕಟ್ಟೆ ಸಾಗಣೆ ಮಾಡುತ್ತಿದ್ದಾರೆ.
ಇನ್ನೂ ತೋಟಗಾರಿಕೆ ಇಲಾಖೆ  ಉಪನಿರ್ದೇಶಕ ಗುಣವಂತ್ ಮಾತನಾಡಿ, ಜಿಲ್ಲೆಯಲ್ಲಿ ಕೊಯ್ಲು ಮಾಡಿದ ಕಾಯಿಗಳನ್ನು ಯಾವುದೇ ಕಾರಣಕ್ಕೂ ಬಿಸಿಲಿಗೆ ಒಡ್ಡಬಾರದು.  ಈ ರೀತಿ ಕೊಯ್ಲು ಮಾಡಿದ ಕಾಯಿಗಳು ಬಿಸಿಲಿನಲ್ಲಿ ಇಡಲ್ಪಟ್ಟರೆ ಅವುಗಳಿಂದ ಹಣ್ಣುಗಳಲ್ಲಿ ಗರ್ಭ ಉಂಟಾಗುವ ಅಪಾಯವಿರುತ್ತದೆ. ಆದ್ದರಿಂದ ಕೊಯ್ಲು ಮಾಡಿದ ಕಾಯಿಗಳನ್ನು ತಕ್ಷಣವೇ ನೆರಳಿನಲ್ಲಿ ಇಡುವುದು ಸೂಕ್ತ. ಕೊಯ್ಲು ಮಾಡಿದ ಕಾಯಿಗಳನ್ನು ನೇರವಾಗಿ ಕ್ರೀಟಗಳಿಗೆ ತುಂಬುವುದು ಸರಿಯಾದ ಕ್ರಮವಾಗಿದೆ ಎಂದರು.


ಮನುಕುಮಾರ್ ಹೆಚ್ ಕೆ.ಚಿಕ್ಕಬಳ್ಳಾಪುರ

Published by:ಪಾವನ ಎಚ್ ಎಸ್
First published: