ಬೆಂಗಳೂರು (ಏ.26): ಪೆಟ್ರೋಲ್ , ಡಿಸೇಲ್ ಆಯ್ತು ಕರೆಂಟ್ ಬೆಲ್ ಕೂಡ ಏರಿಕೆ ಆಯ್ತು ಇದೀಗ ಹಾಲಿನ ಸರದಿ, KMF ಹಾಲು ಒಕ್ಕೂಟ ಸಂಘಗಳು ಇದೀಗ ಬೆಲೆ ಏರಿಕೆಗೆ (Price Hike) ಪ್ರಸ್ತಾವನೆ ಸಲ್ಲಿಸಿದ್ದಾರೆ. KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ KMF ಹಾಲಿನ ಬೆಲೆ ಏರಿಕೆ ಸಂಬಂಧ ಪ್ರಸ್ತಾವನೆ ಸಲ್ಲಿಸಿ ಮನವಿ ಮಾಡಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಮನವಿ ಸ್ವೀಕರಿಸಿದ ಸಿಎಂ ಬೊಮ್ಮಾಯಿ ಇನ್ನು ಎರಡು ದಿನಗಳಲ್ಲಿ ಹಾಲಿನ ದರ ಏರಿಕೆ ಅಥವಾ ಯಥಾಸ್ಥಿತಿ ಕುರಿತು ಅಧಿಕೃತ ಮಾಹಿತಿ ನೀಡೋದಾಗಿ ತಿಳಿಸಿದ್ದಾರೆ.
ಪ್ರತಿ ಲೀಟರ್ ಹಾಲಿಗೆ 3 ರೂ. ದರ ಹೆಚ್ಚಳ?
2 ತಿಂಗಳ ಹಿಂದೆಯೂ ಹಾಲಿನದರ ಏರಿಕೆಗಾಗಿ KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಬಳಿ ಮನವಿ ಮಾಡಿದ್ರು. ಆದ್ರೆ ಸಿಎಂ ಬೊಮ್ಮಾಯಿ ಬೆಲೆ ಏರಿಕೆ ಪ್ರಸ್ತಾವವನ್ನು ಮುಂದೂಡಿದ್ರು. ಇದೀಗ ಎಲ್ಲಾ ಬೆಲೆಗಳು ಏರಿಕೆಯಾಗಿದ್ದು, ಹಾಲು ಉತ್ಪಾದನೆಯ ಖರ್ಚು-ವೆಚ್ಚ ಹೆಚ್ಚಾಗಿದೆ. ಹೀಗಾಗಿ ಹಾಲಿನ ದರವನ್ನು ಏರಿಕೆ ಮಾಡುವಂತೆ ಬಾಲಚಂದ್ರ ಜಾರಕಿಗಹೊಳಿ ಮನವಿ ಮಾಡಿದ್ದಾರೆ.
ಇನ್ನೇರಡು ದಿನಗಳಲ್ಲಿ ಏರಲಿದೆ ಹಾಲಿನ ದರ
ಈ ಬಾರಿ ಬಾಲಚಂದ್ರ ಜಾರಕಿಹೊಳಿ ಸಲ್ಲಿಸಿರೋ ಪ್ರಸ್ತಾವಕ್ಕೆ, ಸಿಎಂ ಬಸವರಾಜ ಬೊಮ್ಮಾಯಿ ಸಮ್ಮತಿ ಸೂಚಿಸೋ ಸಾಧ್ಯತೆ ಇದೆ ಎಂದು ಹೇಳಲಾಗಿದೆ. KMF ಹಾಲಿನ ದರವನ್ನು 3 ರೂಪಾಯಿ ಹೆಚ್ಚಿಸಲು ಮನವಿ ಮಾಡಲಾಗಿದೆ. ಹೆಚ್ಚಳದ 3 ರೂಪಾಯಿನಲ್ಲಿ, ಕನಿಷ್ಠ 2 ರೂ. ಹಾಲು ಉತ್ಪಾದಕರಿಗೆ ಮತ್ತು 1 ರೂ. ಹಾಲು ಉತ್ಪಾದಕ ಸಹಕಾರಿ ಸಂಘ, ಹಾಲು ಒಕ್ಕೂಟ ಮತ್ತು ಹಾಲು ಮಾರಾಟಗಾರರಿಗೆ ನೀಡಲಾಗುವುದು ಎಂದು ಪ್ರಸ್ತಾವನೆಯಲ್ಲಿ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಇದೇ ವೇಳೆ ಬಾಲಚಂದ್ರ ಜಾರಕಿಹೊಳಿ ಅವರು, KMF ನ ಸಾಧನೆ ಹಾಗೂ ಅಂತರಾಜ್ಯಗಳೊಂದಿಗಿನ ವ್ಯವಹಾರ, ಆರ್ಥಿಕತೆ ಚೇತರಿಕೆಯ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Mysuru: ಕಾಡಾನೆಗಳ ಉಪಟಳ, ನಂಜನಗೂಡಿನಲ್ಲಿ ವಿಷದ ಬಾಟೆಲ್ ಹಿಡಿದು ರೈತರ ಪ್ರತಿಭಟನೆ
ಬೆಲೆ ಏರಿಕೆ ಅನಿವಾರ್ಯವಿದೆ
ಈ ಹಿಂದೆ ಬೆಳಗಾವಿಯಲ್ಲಿ ಮಾತಾಡಿದ್ದ ಬಾಲಚಂದ್ರ ಜಾರಳಿಹೊಳಿ, ಬೆಲೆ ಏರಿಕೆಯ ಅನಿವಾರ್ಯತೆ ಇದೆ ಎಂದು ಹೇಳಿದ್ರು. ಬೇಸಿಗೆ ಕಾಲದಲ್ಲಿ ಹಾಲು ಕಡಿಮೆ ಬರುತ್ತೆ. ಹೀಗಾಗಿ ಹೆಚ್ಚಿನ ದರ ಕೊಟ್ಟರೆ ರೈತರಿಗೆ ಅನುಕೂಲ ಆಗುತ್ತೆ. ಬೆಳಗಾವಿಯಲ್ಲಿ (Belagavi) ಆಕಳು ಹಾಲು 23 ರೂಪಾಯಿಯಷ್ಟು ಇತ್ತು 25 ರೂಪಾಯಿ ಮಾಡಿದ್ದೇವೆ. ಎಮ್ಮೆ ಹಾಲು 36 ರೂಪಾಯಿ ಇದ್ದದ್ದನ್ನು 38 ರೂಪಾಯಿಗಳಷ್ಟು ಮಾಡಿದ್ದೇವೆ.
ಬೇರೆಡೆ ಹಾಲಿನ ದರ ಹೆಚ್ಚಿದೆ
ಇಡೀ ಭಾರತದಲ್ಲೇ (India) ನಾವು ಅತಿ ಕಡಿಮೆ ದರದಲ್ಲಿ ಹಾಲು ಮಾರುತ್ತೇವೆ. ಬೇರೆಡೆ ಹಾಲಿನ ದರ ಹೆಚ್ಚಿದೆ. ಗ್ರಾಹಕರಿಗೆ ಹೊರೆ ಆಗದ ಹಾಗೇ ಹಾಲಿನ ದರ ಹೆಚ್ಚು ಮಾಡಿದರೆ ರೈತರಿಗೆ (Farmers) ಅನುಕೂಲ ಆಗುತ್ತೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವ ನಿರ್ಧಾರ ತಗೆದುಕೊಳ್ಳುತ್ತಾರೆ ನೋಡಿ ನಾವು ನಿರ್ಣಯ ಕೈಗೊಳ್ಳುತ್ತೇವೆ ಎಂದು ಜಾರಕಿಹೊಳಿ ತಿಳಿಸಿದ್ದಾರೆ.
ಇದನ್ನೂ ಓದಿ: Corona Vaccine: ಮುಂದಿನ ದಿನಗಳಲ್ಲಿ ವರ್ಷಕ್ಕೊಂದು ಡೋಸ್ ಪಡೆಯಬೇಕಾ? ಸಚಿವ ಸುಧಾಕರ್ ಹೇಳಿದ್ದು ಹೀಗೆ
ಪ್ರತಿದಿನ 75 ಲಕ್ಷ ಲೀಟರ್ ಸಂಗ್ರಹ:
ಸದ್ಯ ಕೆಎಂಎಫ್ ಅಧೀನದಲ್ಲಿ ಬಮೂಲ್ ಸಹಿತ 14 ಹಾಲು ಒಕ್ಕೂಟಗಳು ಇವೆ. ಎಲ್ಲ ಒಕ್ಕೂಟಗಳು ಸೇರಿ ಪ್ರತಿನಿತ್ಯ 75 ಲಕ್ಷ ಲೀಟರ್ ಹಾಲು ಸಂಗ್ರಹ ಆಗುತ್ತಿದೆ. ಪ್ರತಿನಿತ್ಯ ಗ್ರಾಹಕರಿಗೆ ನೀಡುವ ಪಾಕೆಟ್ ಹಾಲುಗಳು, ಮೊಸರು, ಮಜ್ಜಿಗೆ, ತುಪ್ಪ, ಐಸ್ಕ್ರೀಮ್, ಸಹಿ ಪದಾರ್ಥಗಳು ಮತ್ತು ಕ್ಷೀರಭಾಗ್ಯ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರುವ ಹಾಲಿನ ಪುಡಿ ಸಹಿತ ವಿವಿಧ ರೀತಿಗಳನ್ನು ಪ್ರತಿನಿತ್ಯ ಇಷ್ಟು ಹಾಲನ್ನು ವಿಲೇವಾರಿ ಮಾಡಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ