• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Muniratna: ಸಚಿವ ಸ್ಥಾನಕ್ಕಾಗಿ ಮುನಿರತ್ನರಿಂದ ಒತ್ತಡ ತಂತ್ರ; ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿರುವ ಸಿಎಂ!

Muniratna: ಸಚಿವ ಸ್ಥಾನಕ್ಕಾಗಿ ಮುನಿರತ್ನರಿಂದ ಒತ್ತಡ ತಂತ್ರ; ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿರುವ ಸಿಎಂ!

ಮುನಿರತ್ನ.

ಮುನಿರತ್ನ.

ಈಗಾಗಲೇ ಬಿಜೆಪಿ ಬಿಡುಗಡೆ ಮಾಡಿರುವ 8 ಜನ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುನಿರತ್ನ ಅವರ ಹೆಸರು ಇಲ್ಲ. ಹೀಗಾಗಿ ಶಾಸಕ ಮುನಿರತ್ನ ಇಂದು ಬೆಳಗ್ಗೆಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಆರ್​. ಅಶೋಕ್​ ಜೊತೆಗೆ ಬಿಎಸ್​ವೈ ಮನೆಗೆ ಭೇಟಿ ನೀಡಿದ್ದು, ತಮಗೂ ಸಚಿವ ಸ್ಥಾನ ನೀಡಿ ಎಂದು ಒತ್ತಾಯಿಸಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಜನವರಿ 13); ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ವಿಸ್ತರಣೆಯಾಗುವುದು ಕೊನೆಗೂ ಖಚಿತವಾಗಿದೆ. ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಕಳೆದ ಸೋಮವಾರ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸುವ ಸಲುವಾಗಿ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರೊಂದಿಗೆ ಚರ್ಚೆ ನಡೆಸಿದ್ದರು. ಅಮಿತ್​ ಶಾ ಸಹ ಗ್ರೀನ್​ ಸಿಗ್ನಲ್ ನೀಡಿದ ಬೆನ್ನಿಗೆ ಸಂಪುಟ ವಿಸ್ತರಣೆ ರೂಪುರೇಷೆ ಸಿದ್ದವಾಗಿದೆ. 8 ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಸ್ವತಃ ಬಿ.ಎಸ್. ಯಡಿಯೂರಪ್ಪ ಸಿದ್ದಗೊಳಿಸಿದ್ದಾರೆ. ​ಆದರೆ, 7 ಸಚಿವ ಸ್ಥಾನಗಳು ಮಾತ್ರ ಖಾಲಿ ಇದ್ದು, ಅಬಕಾರಿ ಸಚಿವ ಹೆಚ್​. ನಾಗೇಶ್​ ಅವರ ಸ್ಥಾನವನ್ನು ತೆರವುಗೊಳಿಸಿ ಆ ಸ್ಥಾನವನ್ನು ಆರ್​. ಶಂಕರ್​ಗೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಡುವೆ ಆರ್​.ಆರ್​. ನಗರ ಶಾಸಕ ಮುನಿರತ್ನ ಸಹ ಪ್ರಬಲ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದು, ಬಿಎಸ್​ವೈ ಮೇಲೆ ಒತ್ತಡ ತಂತ್ರಕ್ಕೆ ಮುಂದಾಗಿದ್ದಾರೆ. ಹೀಗಾಗಿ ಇಂದು ನಡೆಯಲಿರುವ ಸಚಿವ ಸಂಪುಟ ಸಭೆ ಸಾಕಷ್ಟು ಮಹತ್ವ ಪಡೆದುಕೊಳ್ಳಲಿದೆ ಎನ್ನಲಾಗುತ್ತಿದೆ.


ಕಳೆದ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನ ನೀಡಲಿಲ್ಲ ಎಂಬ ಕಾರಣಕ್ಕಾಗಿಯೇ ಮುನಿರತ್ನ ಸೇರಿದಂತೆ ಸುಮಾರು 17 ಜನ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಅವರು ಬಿಜೆಪಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಹುಮದ ಸರ್ಕಾರ ರಚನೆಗೆ ನೆರವಾಗಿದ್ದರು. ಹೀಗಾಗಿ ಪಕ್ಷಾಂತರ ಮಾಡಿದ್ದ ಎಲ್ಲಾ ಶಾಸಕರಿಗೂ ತಾವು ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಆಶ್ವಾಸನೆ ನೀಡಿದ್ದರು. ಹೀಗಾಗಿ ಮುನಿರತ್ನ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.


ಈಗಾಗಲೇ ಬಿಜೆಪಿ ಬಿಡುಗಡೆ ಮಾಡಿರುವ 8 ಜನ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುನಿರತ್ನ ಅವರ ಹೆಸರು ಇಲ್ಲ. ಹೀಗಾಗಿ ಶಾಸಕ ಮುನಿರತ್ನ ಇಂದು ಬೆಳಗ್ಗೆಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಆರ್​. ಅಶೋಕ್​ ಜೊತೆಗೆ ಬಿಎಸ್​ವೈ ಮನೆಗೆ ಭೇಟಿ ನೀಡಿದ್ದು, ತಮಗೂ ಸಚಿವ ಸ್ಥಾನ ನೀಡಿ ಎಂದು ಒತ್ತಾಯಿಸಿದ್ದಾರೆ ಎಂಬ ಮಾಹಿತಿಗಳು ನ್ಯೂಸ್​18ಗೆ ಲಭ್ಯವಾಗಿದೆ. ಹೀಗಾಗಿ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬಿಎಸ್​ವೈ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ಇಂದು ಸಚಿವ ಸಂಪುಟ ವಿಸ್ತರಣೆ; ಹೆಚ್​. ನಾಗೇಶ್​ಗೆ ಕೊಕ್, ಮುನಿರತ್ನ ಕೈ ತಪ್ಪಿತಾ ಮಂತ್ರಿಗಿರಿ?


ಇಂದು ಬೆಳಗ್ಗೆ 11.30 ಕ್ಕೆ ಸರಿಯಾಗಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಈ ವೇಳೆ ಸ್ವತಃ ಬಿ.ಎಸ್.​ ಯಡಿಯೂರಪ್ಪ ಸಚಿವ ಹೆಚ್​. ನಾಗೇಶ್​ ಅವರಿಗೆ ಕೋಕ್ ನೀಡಿ ಆ ಸ್ಥಾನವನ್ನು ಆರ್​. ಶಂಕರ್​ಗೆ ನೀಡಲಿದ್ದಾರೆ ಎನ್ನಲಾಗಿದೆ. ಈ ನಡುವೆ ಮುನಿರತ್ನ ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಕಾರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಅಥವಾ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯನ್ನು ಸಂಪುಟದಿಂದ ಕೈಬಿಟ್ಟು ಆ ಸ್ಥಾನವನ್ನು ಮುನಿರತ್ನ ಅವರಿಗೆ ನೀಡುವ ಸಾಧ್ಯತೆ ಇದೆ.


ಬೇರೆಯವರಿಗೆ ಅವಕಾಶ ಕೊಡಬೇಕು, ಹೀಗಾಗಿ ನೀವು ರಾಜೀನಾಮೆ ಕೊಡಿ ಎಂದು ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಈ ನಾಯಕರನ್ನು ಒತ್ತಾಯಿಸಿ ಆ ಸ್ಥಾನವನ್ನು ಅತೃಪ್ತರಿಗೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಇಂದಿನ ಸಚಿವ ಸಂಪುಟ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ? ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗುತ್ತಾ? ನೂತನ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿದೆ? ಎಂಬುದನ್ನು ಕಾದು ನೋಡಬೇಕಿದೆ.

First published: