ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ನಿಮಗೆ ಆಸಕ್ತಿ ಜಾಸ್ತಿ ಇದ್ದಂಗಿದೆ; ಪತ್ರಕರ್ತರ ಪ್ರಶ್ನೆಗೆ ಮರುಪ್ರಶ್ನೆ ಹಾಕಿ ಕಿಚಾಯಿಸಿದ ಸಚಿವ ಕೆ.ಎಸ್. ಈಶ್ವರಪ್ಪ
ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸೂಚನೆ ನೀಡಿರುವುದು ನಮಗೆ ಗೊತ್ತಿಲ್ಲ. ಆದರೆ, ಈ ವಿಚಾರದಲ್ಲಿ ನಮಗಿಂತ ನಿಮಗೆ ಹೆಚ್ಚು ಆಸಕ್ತಿ ಇದ್ದಂತೆ ಕಾಣುತ್ತಿದೆ. ಈ ಚಿಕ್ಕ ವಯಸ್ಸಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಯಾಕೋ ಆಸಕ್ತಿ ಹೆಚ್ಚು ಇದ್ದಂತಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಪತ್ರಕರ್ತರನ್ನು ಕಿಚಾಯಿಸಿದ್ದಾರೆ.

ಸಚಿವ ಕೆ.ಎಸ್. ಈಶ್ವರಪ್ಪ
- News18 Kannada
- Last Updated: September 17, 2019, 11:08 PM IST
ಶಿವಮೊಗ್ಗ (ಸೆಪ್ಟೆಂಬರ್.17); ಅಕ್ರಮವಾಗಿ ಹಣ ಗಳಿಕೆ ಆರೋಪದ ಮೇಲೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕಳೆದ ಎರಡು ವಾರಗಳಿಂದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದೇ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಲಕ್ಷ್ಮೀ ಹೆಬ್ಬಾಲ್ಕರ್ ಅವರಿಗೂ ಇಂದು ಸಮನ್ಸ್ ಜಾರಿ ಮಾಡಿದೆ. ಈ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವ ಭರದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಪತ್ರಕರ್ತರನ್ನೇ ಕಿಚಾಯಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಪ್ರಸ್ತುತ ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಪ್ರಕರಣದ ದಿನದಿಂದ ದಿನಕ್ಕೆ ಕಾವು ಪಡೆಯುತ್ತಲೇ ಇದೆ. ಅಲ್ಲದೆ ಬ್ಯಾಂಕ್ ಖಾತೆ ಮೂಲಕ 100 ಕೋಟಿ ಹಣ ವರ್ಗಾವಣೆ ಮಾಡಿರುವ ಕುರಿತು ಲಕ್ಷ್ಮೀ ಹೆಬ್ಬಾಲ್ಕರ್ ಅವರನ್ನೂ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಇಂದು ಸೂಚನೆ ನೀಡಿರುವುದು ಪ್ರಸ್ತುತ ಈ ಕಾವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಪತ್ರಕರ್ತರು ಈಶ್ವರಪ್ಪ ಅವರ ಬಳಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿಚಾರಣೆಯ ಕುರಿತಾಗಿ ಪ್ರಶ್ನೆ ಮುಂದಿಟ್ಟಿದ್ದಾರೆ. ಆದರೆ, ಇದಕ್ಕೆ ಪತ್ರಕರ್ತರನ್ನೇ ಹಾಸ್ಯದ ದಾಟಿಯಲ್ಲಿ ಕಿಚಾಯಿಸಿರುವ ಈಶ್ವರಪ್ಪ, "ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸೂಚನೆ ನೀಡಿರುವುದು ನಮಗೆ ಗೊತ್ತಿಲ್ಲ. ಆದರೆ, ಈ ವಿಚಾರದಲ್ಲಿ ನಮಗಿಂತ ನಿಮಗೆ ಹೆಚ್ಚು ಆಸಕ್ತಿ ಇದ್ದಂತೆ ಕಾಣುತ್ತಿದೆ. ಈ ಚಿಕ್ಕ ವಯಸ್ಸಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಯಾಕೋ ಆಸಕ್ತಿ ಹೆಚ್ಚು ಇದ್ದಂತಿದೆ" ಎಂದು ಕಿಚಾಯಿಸಿದ್ದಾರೆ. ಅಲ್ಲದೆ, "ಲಕ್ಷ್ಮೀ ಹೆಬ್ಬಾಳ್ಕರ್ ನನ್ನ ಸಹೋದರಿ ಇದ್ದಂತೆ" ಎಂದೂ ಇದೇ ಸಂದರ್ಭದಲ್ಲಿ ಸಮಜಾಯಿಷಿ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ಕುರಿತು ಮಾತನಾಡಿದ ಅವರು, "ನಾನು ಯಾವುದೇ ತಪ್ಪು ಮಾಡಿಲ್ಲ, ನ್ಯಾಯಾಲಯದ ಮುಖಾಂತರ ನನಗೆ ನ್ಯಾಯ ಸಿಗುತ್ತೆ, ಪಕ್ಷ ಮತ್ತು ಸಮಾಜ ನನ್ನ ಜೊತೆ ಇದೆ. ಹೀಗಾಗಿ ನಾನು ಆರೋಪ ಮುಕ್ತನಾಗಿ ಹೊರಬರುತ್ತೇನೆ ಎಂದು ಡಿಕೆಶಿ ಹೇಳಿದ್ದರು. ಆದರೆ, ಈಗ ಇಡಿ ವಿಚಾರಣೆ ಬಳಿಕ ಅವರ ಬೇನಾಮಿ ಆಸ್ತಿ ಇರುವುದು ಮತ್ತು 172 ಬ್ಯಾಂಕ್ ಗಳಲ್ಲಿ ಅಕೌಂಟ್ ಇದೆ ಎಂದು ತಿಳಿದು ಬಂದಿದೆ.
ಅವರು ತಪ್ಪೆಸಗಿದ್ದರೆ ಅವರಿಗೆ ಶಿಕ್ಷೆಯಾಗಲಿದೆ ಇಲ್ಲವೆಂದರೆ ಹೊರಬರುತ್ತಾರೆ. ಡಿಕೆಶಿ ನ್ಯಾಯಾಂಗದಲ್ಲಿ ನ್ಯಾಯ ಸಿಗುತ್ತೆ ಎಂದಿದ್ದರು. ಆದರೆ, ಇದೀಗ ಜಾಮೀನು ಅರ್ಜಿ ತಿರಸ್ಕೃತವಾಗಿದೆ ಇದರ ಅರ್ಥವೇನು? ಅವರು ತಪ್ಪು ಮಾಡಿರಬಹುದು, ಇಲ್ಲದೆಯೂ ಇರಬಹುದು. ಆ ಕುರಿತು ನಮಗೆ ಗೊತ್ತಿಲ್ಲ. ಆದರೆ, ಭ್ರಷ್ಟರ ಪೈಕಿ ಒಬ್ಬರನ್ನು ಹಿಡಿದರೆ ಅದರಲ್ಲಿ ಶಾಮೀಲಾದವರು ಹೊರ ಬಂದೇ ಬರುತ್ತಾರೆ. ಇದೀಗ ಯಾರು ಭ್ರಷ್ಟರೆನಿಸಿಕೊಂಡಿದ್ದರೋ ಅವರೆಲ್ಲ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿಯವರು ಹೇಳಿದಂತೆ, ಪಿಚ್ಚರ್ ಅಭಿ ಬಾಕಿ ಹೈ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಆರ್ಥಿಕ ಹಿಂಜರಿತದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಭಾಷೆಯ ಕಿಡಿ ಹೊತ್ತಿಸಿದೆಯೇ?; ಅನುಮಾನ ವ್ಯಕ್ತಪಡಿಸಿದ ಕಮಲಹಾಸನ್
ಪ್ರಸ್ತುತ ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಪ್ರಕರಣದ ದಿನದಿಂದ ದಿನಕ್ಕೆ ಕಾವು ಪಡೆಯುತ್ತಲೇ ಇದೆ. ಅಲ್ಲದೆ ಬ್ಯಾಂಕ್ ಖಾತೆ ಮೂಲಕ 100 ಕೋಟಿ ಹಣ ವರ್ಗಾವಣೆ ಮಾಡಿರುವ ಕುರಿತು ಲಕ್ಷ್ಮೀ ಹೆಬ್ಬಾಲ್ಕರ್ ಅವರನ್ನೂ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಇಂದು ಸೂಚನೆ ನೀಡಿರುವುದು ಪ್ರಸ್ತುತ ಈ ಕಾವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಪತ್ರಕರ್ತರು ಈಶ್ವರಪ್ಪ ಅವರ ಬಳಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿಚಾರಣೆಯ ಕುರಿತಾಗಿ ಪ್ರಶ್ನೆ ಮುಂದಿಟ್ಟಿದ್ದಾರೆ. ಆದರೆ, ಇದಕ್ಕೆ ಪತ್ರಕರ್ತರನ್ನೇ ಹಾಸ್ಯದ ದಾಟಿಯಲ್ಲಿ ಕಿಚಾಯಿಸಿರುವ ಈಶ್ವರಪ್ಪ,