• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • HD Deve Gowda: ಇದೇ ಮೊದಲ ಬಾರಿಗೆ ವ್ಹೀಲ್​ಚೇರ್​ನಲ್ಲಿ ಕಾಣಿಸಿಕೊಂಡ ಮಾಜಿ ಪ್ರಧಾನಿ ದೇವೇಗೌಡ

HD Deve Gowda: ಇದೇ ಮೊದಲ ಬಾರಿಗೆ ವ್ಹೀಲ್​ಚೇರ್​ನಲ್ಲಿ ಕಾಣಿಸಿಕೊಂಡ ಮಾಜಿ ಪ್ರಧಾನಿ ದೇವೇಗೌಡ

ವ್ಹೀಲ್​ಚೇರ್​ನಲ್ಲಿ ಹೆಚ್​ಡಿಡಿ

ವ್ಹೀಲ್​ಚೇರ್​ನಲ್ಲಿ ಹೆಚ್​ಡಿಡಿ

ಸೊಸೆ ಅನಿತಾ ಕುಮಾರಸ್ವಾಮಿ ಹೆಚ್.ಡಿ.ದೇವೇಗೌಡ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.

  • Share this:

ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ (HD Deve Gowda) ವ್ಹೀಲ್ ಚೇರ್​ನಲ್ಲಿ ಬಂದು ಮತದಾನ ಮಾಡಿದ್ದಾರೆ. ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ವ್ಹೀಲ್ ಚೇರ್​ನಲ್ಲಿ (HD Deve Gowda On WheelChair) ಕಾಣಿಸಿಕೊಂಡಿದ್ದಾರೆ. ತಮ್ಮ ಮಗ ಹೆಚ್.ಡಿ.ರೇವಣ್ಣ ಅವರ ಜೊತೆ ವ್ಹೀಲ್ ಚೇರ್​ನಲ್ಲಿ ಆಗಮಿಸಿದ ಮಾಜಿ ಪ್ರಧಾನಿ ಹೆಚ್ .ಡಿ.ದೇವೇಗೌಡ ರಾಷ್ಟ್ರಪತಿ ಚುನಾವಣೆಯಲ್ಲಿ (Presidensial Election 2022) ಮತದಾನ ಮಾಡಿದ್ದಾರೆ. ಅವರ ಸೊಸೆ ಅನಿತಾ ಕುಮಾರಸ್ವಾಮಿ ಹೆಚ್.ಡಿ.ದೇವೇಗೌಡ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.
ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24ರಂದು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ನೂತನ ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ ನಡೆಯುತ್ತಿದೆ. ಬುಡಕಟ್ಟು ಸಮುದಾಯದ ನಾಯಕಿ ದ್ರೌಪದಿ ಮುರ್ಮು ಹಾಗೂ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಕಣದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖರು ಈಗಾಗಲೇ ಮತದಾನ ಮಾಡಿದ್ದಾರೆ.


ಕರ್ನಾಟಕದ ಶಾಸಕರ ಮತದ ಮೌಲ್ಯ ಎಷ್ಟು?
ನೂತನ ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದೆ. ಸಂಸತ್‌ನ 776 ಸದಸ್ಯರು ಮತ್ತು 4,033 ಶಾಸಕರು ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಮತಗಳ ಒಟ್ಟು ಮೌಲ್ಯ 10,86,431 ಆಗಿದ್ದು, ಇದರಲ್ಲಿ ಶಾಸಕರ ಮತಗಳು 5,43,231 ಮತ್ತು ಸಂಸದರ ಮತಗಳು 5,43,200 ಆಗಿದೆ. ಜುಲೈ 21ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಮತದಾನ ಮಾಡಿದ್ದಾರೆ.


ವ್ಹೀಲ್ ಚೇರ್‌ನಲ್ಲಿ ಬಂದು ಮತ ಹಾಕಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಾಷ್ಟ್ರಪತಿ ಚುನಾವಣೆಯಲ್ಲಿ ವೋಟ್ ಮಾಡಿದ್ದಾರೆ. ಅನಾರೋಗ್ಯ ಇದ್ದರೂ ವ್ಹೀಲ್ ಚೇರ್‌ನಲ್ಲಿ ಬಂದು, ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ತಮ್ಮ ಸಹಾಯಕರ ಹೆಲ್ಪ್ ಪಡೆದು ಮನಮೋಹನ್ ಸಿಂಗ್ ವೋಟ್ ಮಾಡಿದ್ದಾರೆ.


ರಾಜ್ಯದಲ್ಲೂ ಹಲವರ ಮತದಾನ
ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸಚಿವ ಗೋವಿಂದ ಕಾರಜೋಳ ಮತದಾನ ಮಾಡಿದ್ರು. ಬಳಿಕ ಅವರು ಬೆಳಗಾವಿಗೆ ತೆರಳಿದರು. ಇದಾದ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಸಚಿವರು, ಶಾಸಕರು ಮತದಾನ ಮಾಡಿದ್ರು.


ಇದನ್ನೂ ಓದಿ: ಒಳ ಉಡುಪು ತೆರೆದಿಟ್ಟು NEET ಪರೀಕ್ಷೆ ಬರೆಯಲು ವಿದ್ಯಾರ್ಥಿನಿಗೆ ಸೂಚನೆ; ಕೇರಳದಲ್ಲಿ ಶಾಕಿಂಗ್ ಘಟನೆಗೋವಾ ಸಿಎಂ ಪ್ರಮೋದ್ ಸಾವಂತ್ ರಾಷ್ಟಪತಿ ಚುನಾವಣೆಗೆ ಮತದಾನ ಮಾಡಿದ್ರು. ಈ ವೇಳೆ ಮಾತನಾಡಿದ ಅವರು, ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಭಾರತದ ರಾಷ್ಟ್ರಪತಿಯಾಗಿ, ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ. ಈ ದೇಶದಲ್ಲಿ ಸಂತಸದ ಭಾವ ಮೂಡಿದೆ. ಭಾರತದ ಬುಡಕಟ್ಟು ಸಮುದಾಯಕ್ಕೆ ಹಿಂದೆಂದೂ ಈ ಸ್ಥಾನವನ್ನು ಹೊಂದಲು ಅವಕಾಶವಿರಲಿಲ್ಲ ಅಂತ ಹೇಳಿದ್ರು.


top videos
    First published: