• Home
 • »
 • News
 • »
 • state
 • »
 • ಜನರಲ್ ಕೆ.ಎಸ್ ತಿಮ್ಮಯ್ಯ ವಸ್ತುಸಂಗ್ರಹಾಲಯ ಉದ್ಘಾಟನೆ ಮಾಡಿದ ರಾಷ್ಟ್ರಪತಿ

ಜನರಲ್ ಕೆ.ಎಸ್ ತಿಮ್ಮಯ್ಯ ವಸ್ತುಸಂಗ್ರಹಾಲಯ ಉದ್ಘಾಟನೆ ಮಾಡಿದ ರಾಷ್ಟ್ರಪತಿ

ರಾಷ್ಟ್ರಪತಿಗಳು

ರಾಷ್ಟ್ರಪತಿಗಳು

ಇದೇ ವೇಳೆ ಕೊಡಗಿನ ತಲಾಕಾವೇರಿಗೆ ಪತ್ನಿ ಜೊತೆ ತೆರಳಿದ ರಾಷ್ಟ್ರಪತಿಗಳು ವಿಶೇಷ ಪೂಜೆ ಸಲ್ಲಿಸಿದರು.

 • Share this:

  ಮಡಿಕೇರಿ (ಫೆ. 6): ಮಡಿಕೇರಿಯಲ್ಲಿ ನಿರ್ಮಾಣವಾಗಿರುವ ಜನರಲ್​ ತಿಮ್ಮಯ್ಯ ವಸ್ತು ಸಂಗ್ರಹಾಲಯವನ್ನು ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್ ಇಂದು​ ಲೋಕಾರ್ಪಾಣೆ ಮಾಡಿದರು. ಈ ವೇಳೆ ಭಾರತ ರಕ್ಷಣಾ ಪಡೆಯ ಮುಖ್ಯಸ್ಥ ಬಿಪಿನ್​ ರಾವತ್​, ಜನರಲ್​ ತಿಮ್ಮಯ್ಯ ಜೊತೆ ಕಾರ್ಯನಿರ್ವಹಿಸಿದ್ದ ಕುಮಾವ್​ ರೆಜಿಮೆಂಟ್​ನ ಕಮಾಂಡಿಂಗ್​ ಆಫೀಸರ್​ ಆರ್​ಪಿ ಕಾಲಿಟಾ ಸೇರಿದಂಥೆ ಸೇನಾ ಪಡೆಗಳ ವಿವಿಧ ಅಧಿಕಾರಿಗಳು ಹಾಜರಿದ್ದರು. ವಸ್ತು ಸಂಗ್ರಹಾಲಯ ಉದ್ಘಾಟನೆಗೂ ಮುನ್ನ ರಾಷ್ಟ್ರಪತಿಗಳು ಸಂಗ್ರಹಾಲಯದ ಆವರಣದಲ್ಲಿರುವ ಹುತಾತ್ಮ ಸ್ಮಾರಕಕ್ಕೆ ತೆರಳಿ ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಕೊಡಗಿನ ತಲಾಕಾವೇರಿಗೆ ಪತ್ನಿ ಜೊತೆ ತೆರಳಿದ ರಾಷ್ಟ್ರಪತಿಗಳು ವಿಶೇಷ ಪೂಜೆ ಸಲ್ಲಿಸಿದರು.
  ಇಡೀ ದೇಶಕ್ಕೆ ಮಾದರಿಯಾಗಿದ್ದ ತಿಮ್ಮಯ್ಯ ಅವರು ಹುಟ್ಟಿ ಬೆಳೆದಿದ್ದ ಮನೆ ಈಗ ದೇಶದ ಸೇನೆಯ ಮಹತ್ವ ಸಾರುವ ಮ್ಯೂಸಿಯಂ ಆಗಿ ಮಾರ್ಪಟ್ಟಿದೆ. ಮಡಿಕೇರಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಸನ್ನಿಸೈಡ್ ಇದೀಗ ದೇಶದ ಗಮನ ಸೆಳೆಯುವ ಸ್ಥಳವಾಗಿ ನಿರ್ಮಾಣಗೊಂಡಿದೆ. ಈ ಸ್ಥಳದ ಮಹಾದ್ವಾರವನ್ನು ಪ್ರವೇಶಿಸುತ್ತಿದ್ದಂತೆ ಬಲಬದಿಗೆ ಕಾಣುವ ಯೋಧರ ಸ್ಮಾರಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇದರ ಜೊತೆಗೆ  ಯುದ್ಧ ಟ್ಯಾಂಕರ್, ಸುಕೋಯ್ ಯುದ್ಧ ವಿಮಾನಗಳು ದೇಶದ ಸೇನಾ ಶಕ್ತಿಯನ್ನು ಸಾರಿ ಹೇಳುತ್ತಾ ಸೈನ್ಯದ ಅದ್ಬುತ ದೃಶ್ಯಗಳನ್ನು ಕಣ್ಣಿಗೆ ಕಟ್ಟಿಕೊಡುತ್ತದೆ.
  ಈ ಮನೆ  ಒಳಹೊಕ್ಕು ನೋಡುತ್ತಾ ಸಾಗಿದಂತೆ, ದೇಶವು ವಿವಿಧ ದೇಶಗಳ ಮೇಲೆ ನಡೆಸಿದ ಯುದ್ಧಗಳಲ್ಲಿ ಬಳಕೆಯಾದ ವಿವಿಧ ಗನ್ ಗಳು, ಯುದ್ಧ ಡೈರಿ ನಿಮ್ಮನ್ನು ಆಕರ್ಷಕಗೊಳಿಸುತ್ತವೆ. ಒಟ್ಟಿನಲ್ಲಿ ದೇಶದ ಸೇನೆಯ ಮೊದಲ ದಂಡಾನಾಯಕರಾಗಿದ್ದ ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಮನೆ ಈಗ ಭಾರತೀಯ ಸೇನೆಯ ಶಕ್ತಿ, ಶೌರ್ಯ ತ್ಯಾಗ ಎಲ್ಲವನ್ನೂ ಸಾರುವ ಮ್ಯೂಸಿಯಂ ಆಗಿದೆ
  ಪ್ರತಿಯೊಬ್ಬರಿಗೂ ದೇಶಕ್ಕಾಗಿ, ದೇಶದ ಸೇನೆಗಾಗಿ ತಾನ್ನೂ ಏನನ್ನಾದರೂ ಮಾಡಬೇಕೆಂಬ ಹುಮ್ಮಸ್ಸು, ಮನೋಭಾವ ಮೂಡುತ್ತದೆ.  ಆ ಕೆಲಸವನ್ನು ಇಲ್ಲಿ ನಡೆಸಲಾಗಿದೆ ಎನ್ನುತ್ತಾರೆ ಜನರಲ್ ತಿಮ್ಮ ಫೋರಂನ ಸಂಚಾಲಕ ಮೇಜರ್ ನಂಜಪ್ಪ.ಪ್ರಪಂಚದ ಸೈನಿಕರಿಗೆ ಮಾದರಿಯಾಗುವಂತೆ ಬದುಕಿದ್ದವರು ಜನರಲ್ ತಿಮ್ಮಯ್ಯ. ಹೀಗಾಗಿ ಅವರು ಬಳಸುತ್ತಿದ್ದ ಪ್ರತೀ ವಸ್ತುವನ್ನು ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದು ನಾಡಿನ ಯುವಜನತೆಯನ್ನು ಉರಿದುಂಬಿಸಲಿದೆ

  Published by:Seema R
  First published: