ಖಾಸಗಿ ಸಾಲಮನ್ನಾ ಕಾಯ್ದೆ ಸುಗ್ರೀವಾಜ್ಞೆ; ರಾಷ್ಟ್ರಪತಿಗಳ ಅಂಕಿತಕ್ಕೆ ಕ್ಷಣಗಣನೆ

news18
Updated:August 31, 2018, 6:03 PM IST
ಖಾಸಗಿ ಸಾಲಮನ್ನಾ ಕಾಯ್ದೆ ಸುಗ್ರೀವಾಜ್ಞೆ; ರಾಷ್ಟ್ರಪತಿಗಳ ಅಂಕಿತಕ್ಕೆ ಕ್ಷಣಗಣನೆ
news18
Updated: August 31, 2018, 6:03 PM IST
ನ್ಯೂಸ್​18 ಕನ್ನಡ

ಬೆಂಗಳೂರು (ಆ. 31): ರಾಜ್ಯ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ ಋಣಮುಕ್ತ ಅಧಿನಿಯಮ ಕಾಯ್ದೆ 2018ಗೆ ಅಂಕಿತ ಬೀಳಲು ಕ್ಷಣಗಣನೆ ಆರಂಭವಾಗಿದ್ದು,  ರಾಷ್ಟ್ರಪತಿಗೆ ಕಡತವನ್ನು ರವಾನಿಸಲಾಗಿದೆ.

ಅಧಿನಿಯಮಕ್ಕೆ ಒಪ್ಪಿಗೆ ಸೂಚಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಲ್ಲಿ  ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದರು. ಈಗಾಗಲೇ ರಾಜ್ಯ ಕಾನೂನು ಇಲಾಖೆಯಿಂದ ಕೇಂದ್ರ ಗೃಹ ಇಲಾಖೆಗೆ ಕಡತ ರವಾನೆಯಾಗಿದೆ.  ಕೇಂದ್ರ ಗೃಹ ಇಲಾಖೆಯಿಂದ ರಾಷ್ಟ್ರಪತಿಗಳಿಗೆ ಕಡತ ರವಾನೆ ಆಗಲಿದೆ.
 ಕರ್ನಾಟಕ ಋಣ ಪರಿಹಾರ ಅಧಿನಿಯಮ 2018 ಜಾರಿಗೊಳಿಸಿ ಭೂರಹಿತ ಕೃಷಿ ಕಾರ್ಮಿಕರು, ಸಣ್ಣ ರೈತರು ಮತ್ತು ದುರ್ಬಲ ವರ್ಗದ ವ್ಯಕ್ತಿಗಳು ಪಡೆದಿರುವ ಋಣದಿಂದ ಅವರನ್ನು ಮುಕ್ತಗೊಳಿಸುವ ಕಾನೂನಾತ್ಮಕ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರನ್ನು ಭೇಟಿಯಾಗಿದ್ದ ಸಿಎಂ ಕುಮಾರಸ್ವಾಮಿ, ಋಣಮುಕ್ತ ಪರಿಹಾರ ಸುಗ್ರೀವಾಜ್ಞಯ  ಸಾಧಕ ಬಾಧಕಗಳ ಬಗ್ಗೆ ವಿವರಣೆ ನೀಡಿದ್ದರು.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ