• Home
  • »
  • News
  • »
  • state
  • »
  • Hubballi: ಮುರ್ಮು ಭೇಟಿ; ಕ್ಲೀನ್, ಗ್ರೀನ್ ಸಿಟಿಯಾಗಿ ಬಿಂಬಿಸಲು ಹರಸಾಹಸ, ಡ್ರೈನೇಜ್​​​​ಗಳಿಗೂ ಹಸಿರು ಹೊದಿಕೆ

Hubballi: ಮುರ್ಮು ಭೇಟಿ; ಕ್ಲೀನ್, ಗ್ರೀನ್ ಸಿಟಿಯಾಗಿ ಬಿಂಬಿಸಲು ಹರಸಾಹಸ, ಡ್ರೈನೇಜ್​​​​ಗಳಿಗೂ ಹಸಿರು ಹೊದಿಕೆ

ಹಸಿರು ಹೊದಿಕೆ

ಹಸಿರು ಹೊದಿಕೆ

ರಾಷ್ಟ್ರಪತಿ ಸಾಗುವ ರಸ್ತೆಗಳನ್ನು ಅಲಂಕರಿಸಲಾಗಿದೆ. ಹುಬ್ಬಳ್ಳಿಯ ಪ್ರಮುಖ ರಸ್ತೆಗಳು ಬ್ಯಾನರ್ ಬಂಟಿಂಗ್, ಫ್ಲೆಕ್ಸ್​​ಗಳಿಂದ ರಾರಾಜಿಸ್ತಿವೆ. ಅರ್ಧ ಗಂಟೆಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದೆ.

  • Share this:

ಹುಬ್ಬಳ್ಳಿ ವಾಣಿಜ್ಯ ನಗರಿ (Commercial City) ಅಂತಲೇ ಫೇಮಸ್. ಹುಬ್ಬಳ್ಳಿ – ಧಾರವಾಡ (Hubballi-Dharwad) ಅವಳಿ ನಗರಗಳೆನಿಸಿಕೊಂಡಿದ್ದು, ಬೆಂಗಳೂರು (Bengaluru) ನಂತರ ಅತಿ ದೊಡ್ಡ ಸಿಟಿ ಎಂಬ ಖ್ಯಾತಿಗೂ ಪಾತ್ರವಾಗಿವೆ. ಸ್ಮಾರ್ಟ್ ಸಿಟಿ (Smart City) ಯೋಜನೆಗೆ ಆಯ್ಕೆಯಾದ ನಂತರ ಸ್ಮಾರ್ಟ್ ಆಗ್ತೇವೆ ಅಂತ ಕನಸು ಕಂಡಿದ್ದ ಜನತೆಗೆ ನಿರಾಸೆಯಾಗಿದೆ. ಇದರ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ಹುಬ್ಬಳ್ಳಿಗೆ (Hubballi) ಭೇಟಿ ನೀಡ್ತಿರೋದ್ರಿಂದ ಹುಬ್ಬಳ್ಳಿ ಕ್ಲೀನ್ & ಗ್ರೀನ್ ಅಂತ ಬಿಂಬಿಸೋಕೋ ಮಹಾನಗರ ಪಾಲಿಕೆ ಹರಸಾಹಸಪಡುತ್ತಿದೆ.


ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಕೆಲಸ ನಡೆದಿದ್ದರೂ ಅವಳಿ ನಗರ ಡರ್ಟಿ ಡರ್ಟಿಯಾಗಿಯೇ ಕಾಣುತ್ತಿದೆ. ಆದರೆ ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪಾಲಿಕೆಯಿಂದ ಪೌರ ಸನ್ಮಾನ ಆಯೋಜನೆ ಮಾಡಿರೋದರಿಂದ ಗಣ್ಯಾತಿ ಗಣ್ಯರು ವಾಣಿಜ್ಯ ನಗರಿಗೆ ಆಗಮಿಸುತ್ತಿದ್ದಾರೆ.


ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ ಸ್ವಾಗತಕ್ಕೆ ಭರದ ಸಿದ್ಧತೆ ನಡೆದಿವೆ. ರಾಷ್ಟ್ರಪತಿ ಸಾಗೋ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಬಿರುಸುಗೊಂಡಿದೆ. ಡ್ರೈನೇಜ್ ಗಳು ಕಾಣದಂತೆ ಪಾಲಿಕೆಯಿಂದ ಗ್ರೀನ್ ಕಾರ್ಪೆಟ್ ಹೊದಿಕೆ ಹಾಕಿಸಲಾಗ್ತಿದೆ.


ಕ್ಲೀನ್, ಗ್ರೀನ್ ಸಿಟಿಯಾಗಿ ಬಿಂಬಿಸಲು ಪಾಲಿಕೆ ಹರಸಾಹಸ


ದೇಶಪಾಂಡೆ ನಗರ ಸೇರಿ ನಗರದ ವಿವಿಧೆಡೆ ಗ್ರೀನ್ ಕಾರ್ಪೆಟ್ ಮೂಲಕ ಚರಂಡಿ ಮರೆಮಾಚುವ ಯತ್ನ ನಡೆದಿದೆ. ಕ್ಲೀನ್, ಗ್ರೀನ್ ಸಿಟಿಯಾಗಿ ಬಿಂಬಿಸಲು ಪಾಲಿಕೆ ಹರಸಾಹಸಪಡುತ್ತಿದೆ. ಸುಣ್ಣ, ಬಣ್ಣದ ಜೊತೆಗೆ ಸಣ್ಣಪುಟ್ಟ ಗುಂಡಿಗಳಿಗೂ ಸಿಬ್ಬಂದಿ ತೇಪೆ ಹಾಕುವ ಕಾರ್ಯದಲ್ಲಿ ನಿರತವಾಗಿದೆ. ರಾಷ್ಟ್ರಪತಿ ಸ್ವಾಗತಕ್ಕೆ  ಮಹಾನಗರ ಪಾಲಿಕೆ ಭರದ ತಯಾರಿ ನಡೆಸಿದೆ.


president draupadi murumu visits hubballi today municipality cover drainage using green mat saklb mrq
ಹಸಿರು ಹೊದಿಕೆ


ಮುರ್ಮು ಸ್ವಾಗತಕ್ಕೆ ಭರ್ಜರಿ ತಯಾರಿ


ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವಾಗತಕ್ಕೆ ಹುಬ್ಬಳ್ಳಿಯಲ್ಲಿ ಸಿದ್ಧತೆ ಪೂರ್ಣಗೊಂಡಿವೆ. ಇಂದು ಬೆಳಗ್ಗೆ ಹುಬ್ಬಳ್ಳಿಯ ಜಿಮ್ ಖಾನಾ ಮೈದಾನದಲ್ಲಿ ಮಹಾನಗರ ಪಾಲಿಕೆಯಿಂದ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.


ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ 12.15ಕ್ಕೆ ಹುಬ್ಬಳ್ಳಿಗೆ ಆಗಮಿಸಲಿರುವ ದ್ರೌಪದಿ ಮುರ್ಮು ನೇರವಾಗಿ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಲಿದ್ದಾರೆ. 12.45ಕ್ಕೆ ರಾಷ್ಟ್ರಪತಿಗಳಿಗೆ ಪೌರ ಸನ್ಮಾನ ಕಾರ್ಯಕ್ರಮ ನಡೆಯಲಿದೆ.


ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಸಿಂಗ್ ಗೆಹ್ಲೋಟ್, ರಾಜ್ಯಪಾಲ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಅಶ್ವಥ್ ನಾರಾಯಣ, ಶಂಕರ್ ಪಾಟೀಲ್ ಮುನೇನಕೊಪ್ಪ, ಬೈರತಿ ಬಸವರಾಜ, ಹಾಲಪ್ಪ ಆಚಾರ ಹಾಗೂ ಹುಬ್ಬಳ್ಳಿ ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ಉಪಸ್ಥಿತರಿರಲಿದ್ದಾರೆ. ಪಾಲಿಕೆಯಿಂದ ಸನ್ಮಾನಿತರಾಗ್ತಿರೋ ಎರಡನೆಯ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಿದ್ದಾರೆ.


president draupadi murumu visits hubballi today municipality cover drainage using green mat saklb mrq


ರಾಷ್ಟ್ರಪತಿಗಳಿಗೆ ಬೆಳ್ಳಿ ಮೂರ್ತಿ, ಏಲಕ್ಕಿ ಹಾರ


ರಾಷ್ಟ್ರಪತಿ ಪೌರ ಸನ್ಮಾನಕ್ಕೆ ಸಂಭ್ರಮದ ಸಿದ್ಧತೆ ಮಾಡಿಕೊಳ್ಳಲಾಗಿದೆ. 900 ಗ್ರಾಂ ತೂಕದ ಬೆಳ್ಳಿಯ ಸಿದ್ಧಾರೂಢ ಮೂರ್ತಿ ಹಾಗೂ ಏಲಕ್ಕಿ ಮಾಲೆಯಿಂದ ಸನ್ಮಾನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.


ಸಿದ್ಧರೂಢರು ಹುಬ್ಬಳ್ಳಿಯ ಆರಾಧ್ಯ ದೈವವಾಗಿದ್ದಾರೆ. ಹೀಗಾಗಿ ಅವರ ಆಶೀರ್ವಾದ ದ್ರೌಪದಿ ಮುರ್ಮು ಅವರಿಗೆ ಇರಲಿ ಅಂತ ವಿಶೇಷವಾಗಿ ಸಿದ್ಧಪಡಿಸಿರೋ ಬೆಳ್ಳಿ ಮೂರ್ತಿ ನೀಡಲಾಗುತ್ತಿದೆ. ಪಕ್ಕದ ಹಾವೇರಿ ಜಿಲ್ಲೆ ಏಲಕ್ಕಿ ಮಾಲೆಗೆ ಖ್ಯಾತಿ ಪಡೆದಿದ್ದು, ದೊಡ್ಡ ಗಾತ್ರದ ಏಲಕ್ಕಿ ಹಾರ ಹಾಕಲು ತಯಾರಿ ಮಾಡಿಕೊಳ್ಳಲಾಗಿದೆ.


ಇದನ್ನೂ ಓದಿ:  Hubballi: ಬಲವಂತದ ಮತಾಂತರ ಪ್ರಕರಣಕ್ಕೆ ಟ್ವಿಸ್ಟ್; ಪ್ರೀತಿಸಿದ ಹುಡುಗಿಯನ್ನ ಕನ್ವರ್ಟ್​ ಮಾಡಲು ಬಂದಿದ್ದನಾ?


president draupadi murumu visits hubballi today municipality cover drainage using green mat saklb mrq
ಹಸಿರು ಹೊದಿಕೆ


5 ಸಾವಿರ ಜನರು ಭಾಗಿಯಾಗುವ ನಿರೀಕ್ಷೆ


ರಾಷ್ಟ್ರಪತಿ ಸಾಗುವ ರಸ್ತೆಗಳನ್ನು ಅಲಂಕರಿಸಲಾಗಿದೆ. ಹುಬ್ಬಳ್ಳಿಯ ಪ್ರಮುಖ ರಸ್ತೆಗಳು ಬ್ಯಾನರ್ ಬಂಟಿಂಗ್, ಫ್ಲೆಕ್ಸ್​​ಗಳಿಂದ ರಾರಾಜಿಸ್ತಿವೆ. ಅರ್ಧ ಗಂಟೆಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದೆ.


ಹುಬ್ಬಳ್ಳಿಯ ಗಣ್ಯರಿಗೆ ಆಹ್ವಾನ ನೀಡಿರೋದಾಗಿ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ ತಿಳಿಸಿದ್ದಾರೆ. ಪಾಲಿಕೆ ಅಸ್ತಿತ್ವಕ್ಕೆ ಬಂದು 60 ವರ್ಷಗಳಾಗಿದ್ದು, ಗಣ್ಯಾತಿಗಣ್ಯರಿಗೆ ಪೌರಸನ್ಮಾನ ಸಲ್ಲಿಸಲಾಗಿದೆ.


ಇದನ್ನೂ ಓದಿ:  Shivamogga: ನೀರಿನ ತೊಟ್ಟಿಗೆ ಬಿದ್ದು 11 ತಿಂಗಳ ಮಗು ಸಾವು; ಮೊದಲ ಹುಟ್ಟುಹಬ್ಬಕ್ಕೆ ಕಾದಿತ್ತು ಆಘಾ


ಇದೀಗ ದೇಶದ ಎರಡನೇ ಮಹಿಳಾ ಮತ್ತು ಬುಡಕಟ್ಟು ಸಮುದಾಯದಿಂದ ಮೊದಲ ರಾಷ್ಟ್ರಪತಿ ಆಗಿರುವ ದ್ರೌಪದಿ ಮುರ್ಮು ಈ ಪೌರ ಸನ್ಮಾನಕ್ಕೆ ಪಾತ್ರರಾಗುತ್ತಿದ್ದಾರೆ. 1986-87 ರ ಅವಧಿಯಲ್ಲಿ ಅಂದಿನ ರಾಷ್ಟ್ರಪತಿ ಗ್ಯಾನಿ ಜೇಲ್‍ಸಿಂಗ್ ಅವರು ಹುಬ್ಬಳ್ಳಿಗೆ ಭೇಟಿ ನೀಡಿದ್ದಾಗ ಪಾಲಿಕೆಯಿಂದ ಪೌರ ಸನ್ಮಾನ ಮಾಡಲಾಗಿತ್ತು.  35 ವರ್ಷಗಳ ನಂತರ ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ.


president draupadi murumu visits hubballi today municipality cover drainage using green mat saklb mrq
ಹಸಿರು ಹೊದಿಕೆ


ಜಿಲ್ಲೆಗೆ ಭೇಟಿ ನೀಡುತ್ತಿರುವ 5ನೇ ರಾಷ್ಟ್ರಪತಿ


ದ್ರೌಪದಿ ಮುರ್ಮು ಅವರು ಧಾರವಾಡ ಜಿಲ್ಲೆಗೆ ಭೇಟಿ ನೀಡುತ್ತಿರುವ ಐದನೇ ರಾಷ್ಟ್ರಪತಿ ಅನ್ನೋದು ಮತ್ತೊಂದು ವಿಶೇಷ. ರಾಷ್ಟ್ರಪತಿಗಳಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್, ಗ್ಯಾನಿ ಜೇಲ್‍ಸಿಂಗ್, ಡಾ.ಅಬ್ದುಲ್ ಕಲಾಂ, ಪ್ರಣವ್ ಮುಖರ್ಜಿ ಅವರು ಧಾರವಾಡ ಜಿಲ್ಲೆಗೆ ಭೇಟಿ ನೀಡಿದ್ದರು. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದು, ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ.

Published by:Mahmadrafik K
First published: