• Home
  • »
  • News
  • »
  • state
  • »
  • Mysuru Dasara 2022: ನಾಡಹಬ್ಬ ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿಗಳು

Mysuru Dasara 2022: ನಾಡಹಬ್ಬ ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿಗಳು

ಮೈಸೂರು ದಸರಾ ಉದ್ಘಾಟನೆ

ಮೈಸೂರು ದಸರಾ ಉದ್ಘಾಟನೆ

ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ನಾಡಹಬ್ಬ ದಸರೆಗೆ (Mysuru Dasara 2022) ಚಾಲನೆ ನೀಡಿದರು. ವಿಮಾನ ನಿಲ್ದಾಣದಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ (Chamundi Hill) ತೆರಳಿದ ರಾಷ್ಟ್ರಪತಿಗಳು ತಾಯಿಯ ದರ್ಶನ ಪಡೆದರು.

  • Share this:

ಇಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ನಾಡಹಬ್ಬ ದಸರೆಗೆ (Mysuru Dasara 2022) ಚಾಲನೆ ನೀಡಿದರು. ವಿಮಾನ ನಿಲ್ದಾಣದಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ (Chamundi Hill) ತೆರಳಿದ ರಾಷ್ಟ್ರಪತಿಗಳು ತಾಯಿಯ ದರ್ಶನ ಪಡೆದರು. ನಂತರ ಚಾಮುಂಡಿ ದೇವಿಗೆ (Goddess Chamundi Devi) ಪುಷ್ಪಾರ್ಚನೆ ಮೂಲಕ ದಸರಾ ಮಹೋತ್ಸವವನ್ನು ಉದ್ಘಾಟನೆ ಮಾಡಿದರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿಗಳನ್ನು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj  Bommai) ಬರಮಾಡಿಕೊಂಡರು.


ಮೈಸೂರು ದಸರಾ-ಇಂದು ಯಾವ ಕಾರ್ಯಕ್ರಮ?


ಮಧ್ಯಾಹ್ನ 12: ಕೈಗಾರಿಕಾ ದಸರಾ ಉದ್ಘಾಟನೆ
ಮಧ್ಯಾಹ್ನ 12:30 : ಶಿವರಾಜ್​ಕುಮಾರ್​ರಿಂದ ಚಲನಚಿತ್ರೋತ್ಸವ ಉದ್ಘಾಟನೆ
ಮಧ್ಯಾಹ್ನ12.30: ಫಲಪುಷ್ಪ ಪ್ರದರ್ಶನ ಉದ್ಘಾಟನೆ
ಮಧ್ಯಾಹ್ನ 1: ಆಹಾರ ಮೇಳ ಉದ್ಘಾಟನೆ
ಮಧ್ಯಾಹ್ನ 3:30: ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟನೆ
ಮಧ್ಯಾಹ್ನ 4:00: ದಸರಾ ವಸ್ತು ಪ್ರದರ್ಶನ ಉದ್ಘಾಟನೆ
ಸಂಜೆ 5: ಯೋಗ ದಸರಾ ಉದ್ಘಾಟನೆ
ಸಂಜೆ 6: ಅರಮನೆ ವೇದಿಕೆ ಕಾರ್ಯಕ್ರಮ, ಸಿಎಂ ಉದ್ಘಾಟನೆ
ಸಂಜೆ‌ 6:30 : ವಿದ್ಯುತ್ ದೀಪಾಲಂಕಾರ ಉದ್ಘಾಟನೆ


President Draupadi Murmu inaugurated Dasara mrq
ರಾಷ್ಟ್ರಪತಿಗಳನ್ನು ಸ್ವಾಗತಿಸಿದ ಸಿಎಂ ಬೊಮ್ಮಾಯಿ


ಇಂದು ದರ್ಬಾರ್ ಹಾಲ್‌ನಲ್ಲಿ ವಿಶೇಷ ಪೂಜೆ ಪುನಸ್ಕಾರ


ಇಂದು ಸಿಂಹಾಸನಕ್ಕೆ ವಜ್ರ ಖಚಿತ ಸಿಂಹದ ತಲೆ ಜೋಡಣೆ ಮಾಡಲಾಗುತ್ತದೆ. ನಂತರ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಕಳಶ ತಂದು, ಚಾಮುಂಡಿ ತೊಟ್ಟಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಕಂಕಣ ಧಾರಣೆ ಮಾಡಲಿದ್ದಾರೆ. ಇಂದು ಪಟ್ಟದ ಆನೆ, ಹಸು, ಒಂಟೆ, ಕುದುರೆಗಳಿಗೆ ಪೂಜೆ ನಡೆಯಲಿದೆ. 8ನೇ ಬಾರಿಗೆ ಯದುವೀರ್ ರಿಂದ ಖಾಸಗಿ ದರ್ಬಾರ್ ನಡೆಸಲಿದ್ದಾರೆ.


President Draupadi Murmu inaugurated Dasara mrq
ರಾಷ್ಟ್ರಪತಿಗಳನ್ನು ಸ್ವಾಗತಿಸಿದ ಸಿಎಂ ಬೊಮ್ಮಾಯಿ


ವಿದ್ಯುತ್ ದೀಪಾಲಂಕಾರ ವಿಸ್ತರಣೆ


ಈ ಬಾರಿ ವಿದ್ಯುತ್ ದೀಪಾಲಂಕಾರವನ್ನ 90 ಕಿ.ಮೀ ಉದ್ದದಿಂದ 124 ಕಿ.ಮೀಗೆ ವಿಸ್ತರಿಸಲಾಗಿದೆ. 56 ವೃತ್ತಗಳಲ್ಲಿ ದೀಪಾಂಲಕಾರದ ವ್ಯವಸ್ಥೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ದಸರಾ ಸರಳವಾಗಿ ನಡೆದಿತ್ತು. ಈ ಬಾರಿ ದಸರಾ ತನ್ನ ಗತವೈಭವ ಮರುಕಳಿಸುವ ರೀತಿ ಮಾಡಲಾಗಿದೆ.


President Draupadi Murmu inaugurated Dasara mrq
ಮೈಸೂರು ದಸರಾ


ಇದನ್ನೂ ಓದಿ:  Udupi: ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದ IAS ಅಧಿಕಾರಿ; ಹೂಡೆ ಬೀಚ್​​ನಲ್ಲಿ ನೀರು ಪಾಲಾದ ಮೂವರು


ಗೋಕರ್ಣನಾಥ ಕ್ಷೇತ್ರದ ದಸರಾ ಉತ್ಸವಕ್ಕೆ ಕ್ಷಣಗಣನೆ


ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ದಸರಾ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಬೆಳಗ್ಗೆ 11. 15ಕ್ಕೆ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಉದ್ಘಾಟನೆ ಆಗಲಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಉಧ್ಘಾಟನೆ ಮಾಡಲಿದ್ದಾರೆ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ.


President Draupadi Murmu inaugurated Dasara mrq
ದಸರಾ ಆನೆಗಳು (ಫೋಟೋ ಕೃಪೆ: ಟ್ವಿಟರ್)


ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ, ಮಹಾಲಿಂಗ ನಾಯ್ಕ್ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.'

Published by:Mahmadrafik K
First published: