• Home
  • »
  • News
  • »
  • state
  • »
  • Draupadi Murmu: ರಾಷ್ಟ್ರಪತಿಗೆ ಪೌರ ಸನ್ಮಾನ; ಇದು ದೇಶದ ಮಹಿಳಾ ವರ್ಗಕ್ಕೆ ಸಂದ ಸತ್ಕಾರ ಎಂದ್ರು ಮುರ್ಮು

Draupadi Murmu: ರಾಷ್ಟ್ರಪತಿಗೆ ಪೌರ ಸನ್ಮಾನ; ಇದು ದೇಶದ ಮಹಿಳಾ ವರ್ಗಕ್ಕೆ ಸಂದ ಸತ್ಕಾರ ಎಂದ್ರು ಮುರ್ಮು

ರಾಷ್ಟ್ರಪತಿಗೆ ಪೌರ ಸನ್ಮಾನ

ರಾಷ್ಟ್ರಪತಿಗೆ ಪೌರ ಸನ್ಮಾನ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅದ್ಧೂರಿಯಾಗಿ ಪೌರ ಸನ್ಮಾನ ನೆರವೇರಿಸಲಾಗಿದೆ. ರೇಷ್ಮೆ ಶಾಲು ಹೊದಿಸಿ, ಏಲಕ್ಕಿ ಹಾರ ಹಾಕಿ, ಬೆಳ್ಳಿ ಮೂರ್ತಿ ನೀಡಿ ಸತ್ಕರಿಸಲಾಯಿತು. ಇದನ್ನು ಕಣ್ತುಂಬಿಕೊಳ್ಳಲೆಂದು ಬುಡಕಟ್ಟು ಸಮುದಾಯದವರನ್ನು ಆಹ್ವಾನಿಸಲಾಗಿತ್ತು.

  • Share this:

ಹುಬ್ಬಳ್ಳಿ (ಸೆ.26): ತಳ ವರ್ಗದಿಂದ ಬಂದ ನನ್ನನ್ನು ನಿಮ್ಮ ಊರಿಗೆ ಕರೆಯಿಸಿ ಸನ್ಮಾನ ಮಾಡಿದ್ದೀರಿ. ಇದು ನನಗೊಬ್ಬಳಿಗೆ ಮಾಡಿದ ಸನ್ಮಾನವಲ್ಲ. ಇದೇ ಭಾರತದ ಮಹಿಳಾ ಕುಲಕ್ಕೆ ಮಾಡಿದ ಸತ್ಕಾರ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಸಂತಸ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ- ಧಾರವಾಡ (Hubbali- Dharwad) ಮಹಾನಗರ ಪಾಲಿಕೆಯಿಂದ ಆಯೋಜಿಸಲಾಗಿದ್ದ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರುಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಕುಟುಂಬ (Family) ಸಮೇತ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಹುಬ್ಬಳ್ಳಿಯಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು.


ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಸನ್ಮಾನ


ಜಿಮ್ ಖಾನ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪಾಲಿಕೆ ವತಿಯಿಂದ ಪೌರ ಸನ್ಮಾನ ಮಾಡಲಾಯಿತು. ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ರಾಷ್ಟ್ರಪತಿಗಳನ್ನು ಸನ್ಮಾನಿಸಿ ಗೌರವಿಸಿದರು. 900 ಗ್ರಾಂ ತೂಕದ ಸಿದ್ಧಾರೂಢ ಸ್ವಾಮೀಜಿಗಳ ಬೆಳ್ಳಿ ಮೂರ್ತಿ ಸ್ಮರಣಿಕೆಯಾಗಿ ಕೊಟ್ಟು ಯಾಲಕ್ಕಿ ಹಾರ ಹಾಕಿ ಸತ್ಕರಿಸಲಾಯಿತು. ಧಾರವಾಡ ದ ಪೇಡಾವನ್ನೂ ಕೊಡಲಾಯಿತು. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿದ್ಧಾರೂಢರ ಚರಿತ್ರೆ ಪುಸ್ತಕವನ್ನು ರಾಷ್ಟ್ರಪತಿಗಳಿಗೆ ನೀಡಿದರು.


ನಿಮ್ಮ ಪ್ರೀತಿಗೆ ನಾನು ಚಿರಋಣಿ


ಪೌರ ಸನ್ಮಾನ ಸ್ವೀಕರಿಸಿ ಮಾತಮಾಡಿದ ದ್ರೌಪದಿ ಮುರ್ಮು, ನಿಮ್ಮೆಲ್ಲರ ಪ್ರೀತಿಗೆ ನಾನು ಚಿರರುಣಿ. ಸಾಧಾರಣ ಕುಟುಂಬದಿಂದ ಬಂದ ನನಗೆ ಸನ್ಮಾನಿಸಿದ್ದೀರಿ. ಇದು ಕೇವಲ ನನಗೊಬ್ಬಳಿಗೆ ಮಾಡಿರೊ ಸನ್ಮಾನವಲ್ಲ. ನನ್ನ ಮೂಲಕ ಭಾರತದ ಎಲ್ಲ ಹೆಣ್ಣುಮಕ್ಕಳಿಗೆ ಅಭಿನಂದಿಸಿದ್ದೀರಿ. ಇದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು. ಅವಳಿ ನಗರದ್ದುದಕ್ಕೆ ಆಗಮಿಸಿ ನನಗೆ ಬಹಳ ಸಂತೋಷವಾಗಿದೆ. ಭಾರತದ ಗೌರವಾನ್ವಿತ ಅವಳಿ ನಗರ ಹುಬ್ಬಳ್ಳಿ- ಧಾರವಾಡವಾಗಿದೆ.


ನ್ನಡ, ಮರಾಠಿ ಭಾಷೆಗಳ ಸಂಗಮ ಇಲ್ಲಿದೆ


ಐತಿಹಾಸಿಕ ನಗರದ ಭಾಗವಾಗಿರುವ ನಿಮಗೆಲ್ಲಾ ಶುಭಾಶಯಗಳು. ಕನ್ನಡ, ಮರಾಠಿ ಭಾಷೆಗಳ ಸಂಗಮ ಇಲ್ಲಿದೆ. ಎಲ್ಲಾ ಜಾತಿ ಧರ್ಮದ ಜನರು ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದೀರಿ. 2ನೇ ರಾಷ್ಟ್ರಪತಿ ರಾಧಾಕೃಷ್ಣನ್ ಅವರು ಇಲ್ಲಿ ಆಗಮಿಸಿದ್ದರು. ನಿಮ್ಮ ಬಳಿ ಆಗಮಿಸಿದ ನನಗೆ ಗೌರವದ ಭಾವನೆ ಬರುತ್ತಿದೆ ಎಂದರು.


ಇದನ್ನೂ ಓದಿ: Mysuru Dasara 2022: ಕನ್ನಡದಲ್ಲಿಯೇ ದಸರಾ ಶುಭಾಶಯ ತಿಳಿಸಿದ ರಾಷ್ಟ್ರಪತಿಗಳು; ಅರಮನೆಯಲ್ಲಿ ಖಾಸಗಿ ದರ್ಬಾರ್


ದ.ರಾ. ಬೇಂದ್ರೆ, ಗೋಕಾಕ್ ರಂತಹ ಮಹಾನ್  ಸಾಹಿತಿಗಳು ಇಲ್ಲಿಯವರಾಗಿದ್ದಾರೆ. ಬಸವರಾಜ ಬೊಮ್ಮಾಯಿ ಮತ್ತು ಪ್ರಲ್ಹಾದ್ ಜೋಶಿ ನಿಮ್ಮ ನಡುವೆ ಹುಟ್ಟಿ ಬೆಳೆದವರು. ಇಂತಹ ಉತ್ತಮ ನಾಯಕರನ್ನು ನೀವು ನಾಡಿಗೆ ಕೊಟ್ಟಿದ್ದೀರಿ. ಇಡೀ ದೇಶ ಬಸವೇಶ್ವರರ ಸಾಮಾಜಿಕ ಶಿಕ್ಷಣ, ಸಿದ್ಧಾರೂಢರ ಆಧ್ಯಾತ್ಮಿಕ ಸಂದೇಶದಿಂದ ಪ್ರೇರಿತವಾಗಿದೆ. ಗಂಗೂಬಾಯಿ ಹಾನಗಲ್, ಬಸವರಾಜ್ ರಾಜಗುರು ಹಿಂದೂಸ್ತಾನಿ ಸಂಗೀತಕ್ಕೆ ಹೊಸ ಆಯಾಮ ಕೊಟ್ಟಿದ್ದಾರೆ. ಕಿತ್ತೂರು ಚೆನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದರು.


ಧಾರವಾಡ ಜಿಲ್ಲೆ ವಿದ್ಯಾಕಾಶಿಬಗ್ಗೆ ಎಂದು ಹಾಡಿ ಹೊಗಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ದೊಡ್ಡ ದೊಡ್ಡ ಸಾಹಿತಿಗಳು ಇಲ್ಲಿ ಹುಟ್ಟಿ ಬೆಳೆದಿದ್ದಾರೆ. ವಿದ್ಯೆ ಹಾಗೂ ವಿದ್ವತ್ ಎರಡೂ ಇಲ್ಲಿವೆ. ಸಿದ್ಧರೂಢರ ಆಧ್ಯಾತ್ಮಿಕತೆಯಿಂದ ಈ ನೆಲ ಪುಣ್ಯ ಭೂಮಿಯಾಗಿದೆ ಎಂದು ಬಣ್ಣಿಸಿದರು.


ಕಾಂಗ್ರೆಸ್ ನಿಂದ ಪ್ರತಿಭಟನೆ ಬಿಸಿ


ರಾಷ್ಟ್ರಪತಿ ಪೌರಸನ್ಮಾನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಸದಸ್ಯರಿಗೆ ಕೂಡಲು ಆಸನ ಸಿಗದೇ ಇರೋದಕ್ಕೆ ಆಕ್ರೋಶ ವ್ಯಕ್ತಪಡಿಸಲಾಯಿತು. ವೇದಿಕೆಯ ಎದುರಿನ ಸ್ಥಳದಲ್ಲಿ ನೆಲದ ಮೇಲೆ ಕುಳಿತು ಪ್ರತಿಭಟನೆ ಮಾಡಲಾಯಿತು. ಪಾಲಿಕೆ ಸದಸ್ಯರಿಗೆ ಹಾಕಿದ ಆಸನಗಳ ಲ್ಲಿ ಬಿಜೆಪಿ ಕಾರ್ಯಕರ್ತರು ಕುಳಿತಿದ್ದಾರೆ. ಪಾಲಿಕೆ ಕಾರ್ಯಕ್ರಮ ಆಗದೆ ಬಿಜೆಪಿ ಕಾರ್ಯಕ್ರಮವಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಕಿಡಿಕಾರಿದರು.


ಇದನ್ನೂ ಓದಿ:  Mysuru Dasara 2022: ನಾಡಹಬ್ಬ ದಸರಾಗೆ ಚಾಲನೆ ನೀಡಿದ ರಾಷ್ಟ್ರಪತಿಗಳು


ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಾಲಿಕೆ ಸದಸ್ಯರ ಕಡೆಗಣನೆ ಮಾಡಲಾಗಿದೆ. 82 ಪಾಲಿಕೆ ಸದಸ್ಯರ ಪೈಕಿ, 34 ಜನ ಕಾಂಗ್ರೆಸ್ ಸದಸ್ಯರಿದ್ದಾರೆ. ಆದರೆ ಯಾರೊಬ್ಬರಿಗೂ ಆಸನದ ವ್ಯವಸ್ಥೆ ಇಲ್ಲ ಎಂದು ಕಿಡಿಕಾರಿದರು. ನಂತರ ಬೇರೆ ಆಸನ ಹಾಕಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು. ರಾಷ್ಟ್ರಪತಿ ಗಳು ವೇದಿಕೆಗೆ ಆಗಮಿಸೊ ಮುನ್ನ ಪ್ರತಿಭಟನಾ ಘಟನೆ ನಡೆದಿದೆ. ಮೊದಲು ರಾಷ್ಟ್ರಪತಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದ್ದ ಕಾಂಗ್ರೆಸ್ ಸದಸ್ಯರು, ನಂತರ ಅದನ್ನು ವಾಪಸ್ ಪಡೆದು ಭಾಗಿಯಾಗೋಕೆ ಆಗಮಿಸಿದ್ದರು.


ಬುಡಕಟ್ಟು ಸಮುದಾಯವದರ ಸಂಭ್ರಮ


ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ ಹಿನ್ನೆಲೆಯಲ್ಲಿ, ಕಾರ್ಯಕ್ರಮಕ್ಕೆ ಬುಡಕಟ್ಟು ಜನಾಂಗದ 50 ಜನ ಆಗಮಿಸಿದ್ದಾರೆ. ಬುಡಕಟ್ಟು ಜನಾಂಗದಿಂದ ಸಾಂಪ್ರದಾಯಿಕ ಉಡುಗೆ ತೊಟ್ಟು ವೇದಿಕೆ ಬಳಿ ಹಾಜರಾಗಿದ್ದಾರೆ. ಡೊಳ್ಳು, ಕೊಳಲು ಸೇರಿ ಬುಡಕಟ್ಟು ಶೈಲಿಯ ವಾದ್ಯಗಳೊಂದಿಗೆ ಆಗಮಿಸಿದ್ದಾರೆ. ಧಾರವಾಡ, ಕಲಘಟಗಿ, ಅಳ್ನಾವರ ಹಾಗೂ ಯಲ್ಲಾಪುರದಿಂದ ಆಗಮಿಸಿದ್ದಾರೆ. ರಾಷ್ಟ್ರಪತಿ ಮುರ್ಮು ಅವರನ್ನ ನೋಡಲು ಉತ್ಸುಕತೆ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶದ ರಾಷ್ಟ್ರಪತಿಗಳು ಬುಡಕಟ್ಟು ಸಮಯದಾಯದವರು. ಅವರನ್ನು ನೋಡಲು ಸಂತರ ಎನ್ಮಿಸುತ್ತಿದೆ. ರಾಷ್ಟ್ರಪತಿಗಳನ್ನ ನೋಡಲು ಸರ್ಕಾರ ನಮಗೆ ಅವಕಾಶ ಮಾಡಿಕೊಟ್ಟಿದೆ. ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಬುಡಕಟ್ಟು ಜನಾಂಗದವರು ಸಂತಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿರೋ ಹಿನ್ನೆಲೆಯಲ್ಲಿ ಆಹ್ವಾನ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಉಪಸ್ಥಿತರಿರೊ ಬುಡಕಟ್ಟು ಸಮುದಾಯದವರ ಸಂಭ್ರಮ ಮುಗಿಲು ಮುಟ್ಟಿದೆ.

ಸಿದ್ಧಿ, ಗೌಳಿ, ಧನಗರ್ ಮತ್ತಿತರ ಸಮುದಾಯಗಳ ಜನರ ಉಪಸ್ಥಿತರಿದ್ದಾರೆ. ಇಂತಹ ಬೃಹತ್ ಕಾರ್ಯಕ್ರಮ ನೋಡ್ತಿರೋದು ಇದೇ ಮೊದಲು ಎಂದು ಬುಡಕಟ್ಟು ಸಮುದಾಯದ ಮಹಿಳೆ ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಬುಡಕಟ್ಟು ಸಮುದಾಯದವರು ರಾಷ್ಟ್ರಪತಿ ಆಗಿರೋದು ಹೆಮ್ಮೆ. ಅಂಥವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿರೋದಕ್ಕೆ ಖುಷಿಯಾಗ್ತಿದೆ ಎಂದು ಬಡುಕಟ್ಟು ಸಮುದಾಯದ ಪ್ರತಿನಿಧಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ಸಾಂಪ್ರದಾಯಿಕ ವಾದ್ಯ ನುಡಿಸೊ ಮೂಲಕ ಹರ್ಷಿಸಿದ್ದಾರೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು