Karnataka Crime Bill: ಆರೋಪಿ ಇಲ್ಲದಿದ್ದರೂ ನಡೆಯುತ್ತಾ ವಿಚಾರಣೆ? ಕರ್ನಾಟಕ ಅಪರಾಧ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

ಇಲ್ಲಿಯವರೆಗೆ ನ್ಯಾಯಾಲಯದ ಕಲಾಪ ನಡೆಯುತ್ತಿರುವ ವೇಳೆಯಲ್ಲಿ ಮಾತ್ರ ಸಾಕ್ಷಿಗಳ ವಿಚಾರಣೆ ನಡೆಸಿ, ಅವರ ಹೇಳಿಕೆಗಳನ್ನು ದಾಖಲಿಸಿ ಕೊಳ್ಳಬಹುದಾಗಿತ್ತು. ಇದೂ ಸಹ ಆರೋಪಿ ಬಂಧನಕ್ಕೊಳಗಾಗಿದ್ದರೆ ಮಾತ್ರ ಸಾಧ್ಯವಿತ್ತು. ಆದರೆ ಈ ವಿಧೇಯಕದ ಪ್ರಕಾರ ಹಲವು ಬದಲಾವಣೆ ತರಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಕರ್ನಾಟಕ ಅಪರಾಧ ವಿಧೇಯಕಕ್ಕೆ (Karnataka Criminal Bill) ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅಂಕಿತ (assent) ಹಾಕಿದ್ದಾರೆ. ಇಲ್ಲಿಯವರೆಗೆ ನ್ಯಾಯಾಲಯದ ಕಲಾಪ (Court proceedings) ನಡೆಯುತ್ತಿರುವ ವೇಳೆಯಲ್ಲಿ ಮಾತ್ರ ಸಾಕ್ಷಿಗಳ (witnesses) ವಿಚಾರಣೆ ನಡೆಸಿ, ಅವರ ಹೇಳಿಕೆಗಳನ್ನು ದಾಖಲಿಸಿ ಕೊಳ್ಳಬಹುದಾಗಿತ್ತು. ಇದೂ ಸಹ ಆರೋಪಿ (Accused) ಬಂಧನಕ್ಕೊಳಗಾಗಿದ್ದರೆ ಮಾತ್ರ ಸಾಧ್ಯವಿತ್ತು. ಆದರೆ ಈ ವಿಧೇಯಕದ ಪ್ರಕಾರ ಅಪರಾಧ ಪ್ರಕರಣಗಳಲ್ಲಿ ಆರೋಪಿ ತಪ್ಪಿಸಿಕೊಂಡಿದ್ದರೂ ವಿದ್ಯುನ್ಮಾನ ಸಾಧನ (Electronic device) ಬಳಸಿ, ಸಾಕ್ಷಿಗಳ ಹೇಳಿಕೆಗಳನ್ನು ಆಡಿಯೋ ಮತ್ತು ವಿಡಿಯೋ ಮಾರ್ಗವಾಗಿಯೂ ಪಡೆದುಕೊಳ್ಳಬಹುದು. ಈ ವೇಳೆ ಆರೋಪಿ ಪರ ವಕೀಲರು (Lawyer) ಹಾಜರಿದ್ದರೆ ಸಾಕು ಎನ್ನಲಾಗಿದೆ. ಇನ್ನು ಕರ್ನಾಟಕದ ಜೊತೆಗೆ ಜಾರ್ಖಂಡ್ (Jharkhand) ರಾಜ್ಯದ ಅಪರಾಧ ವಿಧೇಯಕಕ್ಕೂ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಕರ್ನಾಟಕ ಹಾಗೂ ಜಾರ್ಖಂಡ್ ರಾಜ್ಯಗಳ ಎರಡು ಮಸೂದೆಗಳಿಗೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಡಿಯೋ, ವಿಡಿಯೋ ಸಾಕ್ಷಿಗೆ ಮಾನ್ಯತೆ

ಕರ್ನಾಟಕ ಅಪರಾಧ ವಿಧೇಯಕದ ಪ್ರಕಾರ ಸಾಕ್ಷ್ಯಗಳ ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಅನ್ನು ಅನುಮತಿಸಲಾಗುತ್ತದೆ. ಜೊತೆಗೆ ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ನ್ಯಾಯಾಲಯಗಳು ವಿಚಾರಣೆಗಳನ್ನು ನಡೆಸಲು ಮತ್ತು ಅವರ ಅನುಪಸ್ಥಿತಿಯಲ್ಲಿ ಅವರನ್ನು ಶಿಕ್ಷಿಸಲು ದಾರಿ ಮಾಡಿಕೊಡುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರಪತಿಗಳ ಅಂಕಿತ ಪಡೆದ ವಿಧೇಯಕದಲ್ಲಿ ಏನಿದೆ?

ಕ್ರಿಮಿನಲ್ ಪ್ರೊಸೀಜರ್ ಕೋಡ್ (ಕರ್ನಾಟಕ ತಿದ್ದುಪಡಿ) ಮಸೂದೆ 2021ರ ಪ್ರಕಾರ ಆರೋಪಿ ಮತ್ತು ಅವರ ವಕೀಲರ ಸಮ್ಮುಖದಲ್ಲಿ ಆಡಿಯೋ ಮತ್ತು ವಿಡಿಯೋ ಮೂಲಕ ಸಾಕ್ಷ್ಯವನ್ನು ದಾಖಲಿಸಲು ಅನುಮತಿಸುತ್ತದೆ. ಅತ್ತ ಜಾರ್ಖಂಡ್‌ನ ಅಪರಾಧ ಪ್ರಕ್ರಿಯಾ ಸಂಹಿತೆ ಮಸೂದೆ  2020ರ ಪ್ರಕಾರ ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ವಿಚಾರಣೆ ನಡೆಸಲು ಮತ್ತು ಅವರ ಅನುಪಸ್ಥಿತಿಯಲ್ಲಿ ಅವರನ್ನು ಶಿಕ್ಷಿಸಲು ನ್ಯಾಯಾಲಯಗಳಿಗೆ ಅನುಕೂಲ ಕಲ್ಪಿಸುತ್ತದೆ.

ಇದನ್ನೂ ಓದಿ: Arvind Kejriwal: ನಾಪತ್ತೆಯಾದ್ರಾ ಆಮ್‌ ಆದ್ಮಿ ಶಾಸಕರು? ಬಿಜೆಪಿ ವಿರುದ್ಧ ಕೇಜ್ರಿವಾಲ್ ಕೆಂಡ!

ಕರ್ನಾಟಕ ಅಪರಾಧ ವಿಧೇಯಕದಲ್ಲಿ ಏನಿದೆ?

ಇಲ್ಲಿಯವರೆಗೆ ಕೋರ್ಟ್ ಕಲಾಪ ನಡೆಯುತ್ತಿರುವ ವೇಳೆಯಲ್ಲಿ ಮಾತ್ರ ಸಾಕ್ಷಿಗಳ ವಿಚಾರಣೆ ನಡೆಸಿ, ಅವರ ಹೇಳಿಕೆ ದಾಖಲಿಸಿಕೊಳ್ಳಬಹುದಾಗಿತ್ತು. ಇದೂ ಸಹ ಈ ಪ್ರಕರಣದ ಆರೋಪಿ ಬಂಧನಕ್ಕೊಳಗಾಗಿದ್ದರೆ ಮಾತ್ರ ಸಾಧ್ಯವಿತ್ತು. ಆದರೆ ಇದೀಗ ಆರೋಪಿಯ ಗೈರಿನಲ್ಲೇ ವಿಚಾರಣೆ ನಡೆಸಿ, ಶಿಕ್ಷೆಯನ್ನೂ ಪ್ರಕಟಿಸಬಹುದು. ಈ ಕುರಿತ ಕರ್ನಾಟಕದ ತಿದ್ದುಪಡಿ ಮಸೂದೆ ‘ದ ಕೋಡ್‌ ಆಫ್ ಕ್ರಿಮಿನಲ್‌ ಪ್ರೊಸೀಜರ್‌-2021’ (The Code of Criminal Procedure (Amendment) Bill 2021) ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.

ವಕೀಲರ ಸಮ್ಮುಖದಲ್ಲಿ ಸಾಕ್ಷಿ ದಾಖಲಿಸಲು ಅವಕಾಶ

ಈ ಕಾಯ್ದೆಯ ಅಡಿಯಲ್ಲಿ ಸಾಕ್ಷಿಯ ಸಾಕ್ಷ್ಯವನ್ನು ಆಡಿಯೋ-ವಿಡಿಯೋ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಅಪರಾಧದ ಆರೋಪಿಯ ವಕೀಲರ ಸಮ್ಮುಖದಲ್ಲಿ ಅಂತಹ ರೀತಿಯಲ್ಲಿ ದಾಖಲಿಸಲು ಅವಕಾಶ ನೀಡುತ್ತದೆ.

ಇದನ್ನೂ ಓದಿ: Hemant Soren Disqualification: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್​ಗೆ ಅನರ್ಹತೆ ಭೀತಿ!

ಜಾರ್ಖಂಡ್‌ನ ಮಸೂದೆಯಲ್ಲಿ ಏನಿದೆ?

ಇನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಜಾರ್ಖಂಡ್ ತಿದ್ದುಪಡಿ) ಮಸೂದೆ, 2020 ನ್ಯಾಯಾಲಯಗಳು ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ವಿಚಾರಣೆಗಳನ್ನು ನಡೆಸಲು ಮತ್ತು ಅವರ ಅನುಪಸ್ಥಿತಿಯಲ್ಲಿ ಅವರನ್ನು ಶಿಕ್ಷಿಸಲು ಅನುಮತಿಸುತ್ತದೆ. ಅಸ್ತಿತ್ವದಲ್ಲಿರುವ ನಿಬಂಧನೆಗಳ ಅಡಿಯಲ್ಲಿ, ನ್ಯಾಯಾಲಯವು ಸಾಕ್ಷಿಗಳನ್ನು ಪರೀಕ್ಷಿಸಲು ಮತ್ತು ಅವರ ಠೇವಣಿಗಳನ್ನು ದಾಖಲಿಸಬಹುದು, ಆದ್ದರಿಂದ ಓಡಿಹೋಗಿರುವ ಆರೋಪಿಗಳನ್ನು ಬಂಧಿಸಿದಾಗ ಅದರ ಆಧಾರದ ಮೇಲೆ ವಿಚಾರಣೆಯನ್ನು ನಡೆಸಬಹುದು.
Published by:Annappa Achari
First published: