International Yoga Day: ಹಾಸನದಲ್ಲಿ ಯೋಗ ದಿನಕ್ಕೆ ಸಿದ್ಧತೆ; ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಶೋಭಾ ಕರಂದ್ಲಾಜೆ

ಹಳೇಬೀಡಿದ ಐತಿಹಾಸಿಕ ಹೊಯ್ಸಳೇಶ್ವರ ದೇವಾಲಯದ ಆವರಣದಲ್ಲಿ ನಡೆಯುವ ಯೋಗ ಡೇ ಕಾರ್ಯಕ್ರಮದಲ್ಲಿ ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಭಾಗಿಯಾಗಲಿದ್ದಾರೆ.

ಯೋಗ ದಿನಕ್ಕೆ ಸಿದ್ಧತೆ

ಯೋಗ ದಿನಕ್ಕೆ ಸಿದ್ಧತೆ

  • Share this:
ಹಾಸನ (ಜೂ 20):  ನಾಳೆ ಜೂನ್​ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮೈಸೂರಿನಲ್ಲಿ ಯೋಗ ದಿನದಲ್ಲಿ ಪಾಲ್ಗೊಂಡು ಯೋಗ ಮಾಡಲಿದ್ದು, ಹಾಸನ (Hassan) ಜಿಲ್ಲೆಯಲ್ಲಿ ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje, ) ಯೋಗ ಡೇನಲ್ಲಿ ಭಾಗವಹಿಸಲಿದ್ದಾರೆ. ಹಾಸನ ಜಿಲ್ಲೆಯ ಮೂರು ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಯೋಗ ದಿನಾಚರಣೆ (International Yoga Day) ಕಾರ್ಯಕ್ರಮ ಆಯೋಜಿಸಲಾಗಿದೆ. ಬೇಲೂರು ತಾಲೂಕಿನ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಆವರಣ, ಚನ್ನರಾಯಪಟ್ಟಣ (Channarayapattana) ತಾಲೂಕಿನ ಶ್ರವಣಬೆಳಗೊಳ ಹಾಗೂ ಅರಸೀಕೆರೆಯ ಗಾಂಧಿ ಚಿತಾ ಭಸ್ಮದ ಆವರಣದಲ್ಲಿ ಯೋಗ ದಿನಾಚರಣೆ ನಡೆಯಲಿದೆ‌.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯೋಗ

ನಾಳೆ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಹಳೇ ಬೀಡಿನ ಹೊಯ್ಸಳೇಶ್ವರ ದೇವಾಲಯದ ಆವರಣದಲ್ಲಿ ಸುಮಾರು 750 ವಿದ್ಯಾರ್ಥಿಗಳು, 400 ಮೆಡಿಕಲ್, ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ 1500 ಮಂದಿಯ ಜೊತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಯೋಗ ಮಾಡಲಿದ್ದಾರೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಆರ್. ಗಿರೀಶ್ ಭೇಟಿ, ಪರಿಶೀಲನೆ

ಈಗಾಗಲೇ ದೇವಾಲಯದ ಆವರಣದಲ್ಲಿ ಕಳೆದ ಒಂದು ವಾರದಿಂದ ಯೋಗಭ್ಯಾಸದಲ್ಲಿ ವಿದ್ಯಾರ್ಥಿಗಳು ತೊಡಗಿದ್ದಾರೆ. ಇಂದು ಸಂಜೆ ಸಚಿವರು ಹಳೇಬೀಡಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ. ಜಿಲ್ಲಾಧಿಕಾರಿ ಆರ್.ಗಿರೀಶ್ ಹಳೇಬೀಡಿಗೆ ಭೇಟಿ ನೀಡಿ ಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ದೈಹಿಕ ಶಿಕ್ಷಕ ವೆಂಕಟೇಶ್‌ಮೂರ್ತಿ ಮಕ್ಕಳಿಗೆ ಯೋಗ ತರಬೇತಿ ನೀಡಿದರು.

ಇದನ್ನೂ ಓದಿ:  Karnataka Rains: ಮತ್ತಷ್ಟು ಚುರುಕು ಆಗಲಿದೆ ಮುಂಗಾರು; ಮತ್ತೆ 14 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಯೋಗ ಮ್ಯಾಟ್ ಇಲ್ಲದೆ ಪರದಾಟ 

ಇನ್ನೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜೊತೆ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಕ್ಕಳು ಮ್ಯಾಟ್ ಇಲ್ಲದೆ ಪರದಾಟ ನಡೆಸಿದರು. ಕಳೆದ ಒಂದು ವಾರದಿಂದ ಹೊಯ್ಸಳೇಶ್ವರ ದೇವಾಲಯದ ಆವರಣದಲ್ಲಿ ಹಳೇಬೀಡು ವ್ಯಾಪ್ತಿಗೆ ಬರುವ ಶಾಲೆಗಳು ಸುಮಾರು 750 ಮಕ್ಕಳು ಮ್ಯಾಟ್ ಇಲ್ಲದೆ ಟವೆಲ್, ಬ್ಲಾಂಕೆಟ್, ವೇಲ್, ಹಳೆ ಬಟ್ಟೆಯನ್ನೆ ಮ್ಯಾಟ್ ಮಾಡಿಕೊಂಡು ಅಭ್ಯಾಸ ನಡೆಸಿದ್ದಾರೆ.

ಮ್ಯಾಟ್ ಹಾಗೂ ಟೀ ಶರ್ಟ್ ನೀಡುವಂತೆ ಸೂಚನೆ

ನಾಳೆ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಸಮ್ಮುಖದಲ್ಲಿ ನಡೆಯಲಿರುವ ಯೋಗ ಡೇ ಕಾರ್ಯಕ್ರಮದಲ್ಲಿ ಇದೇ ಮಕ್ಕಳು ಭಾಗವಹಿಸಲಿದ್ದಾರೆ. ಮಕ್ಕಳಿಗೆ ಮ್ಯಾಟ್ ನೀಡದ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದು ಇದರಿಂದ ಎಚ್ಚೆತ್ತ  ಜಿಲ್ಲಾಧಿಕಾರಿ ಆರ್.ಗಿರೀಶ್ ಎಲ್ಲರಿಗೂ ಮ್ಯಾಟ್ ಹಾಗೂ ಟೀ ಶರ್ಟ್ ನೀಡುವಂತೆ ಅಧಿಕಾರಿಗಳಿಗೆ ಸ್ಥಳದಲ್ಲಿ ಸೂಚನೆ ನೀಡಿದರು.

ಇದನ್ನೂ ಓದಿ: Dharwad: ಸರ್ಕಾರಿ ಶಾಲೆಯ ಮೈದಾನ ಅತಿಕ್ರಮಣ; ಕೋಟ್ಯಂತರ ಬೆಲೆ ಬಾಳುವ ಜಾಗ ಖಾಲಿ ಮಾಡಲು ಹಿಂದೇಟು

ಮಳೆ ಮುನ್ಸೂಚನೆ ಹಿನ್ನೆಲೆ ಶಾಮಿಯಾನ

ಕೇಂದ್ರ ತಂಡವೂ ಹಳೇಬೀಡಿನಲ್ಲಿ ವಾಸ್ತವ್ಯ ಹೂಡಿದ್ದು ಎಲ್ಲಾ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು. ಮಳೆಯ ಮುನ್ಸೂಚನೆ ಇರುವುದರಿಂದ ಯೋಗ ದಿನಾಚರಣೆ ಭಾಗವಹಿಸುವವರಿಗೆ ಅನಾನುಕೂಲವಾಗದಂತೆ ಶಾಮಿಯಾನ ಹಾಕಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಲಾಗಿದೆ.
Published by:Pavana HS
First published: