Har Ghar Tiranga: ಮನೆ ಮನೆಯಲ್ಲೂ ಹಾರಾಡಲಿದೆ ತಿರಂಗಾ, ಬಾಗಲಕೋಟೆಯಲ್ಲಿ ಭರ್ಜರಿ ಸಿದ್ಧತೆ

ಆ. 13 ರಿಂದ ಆರಂಭವಾಗುವ ಹರ್ ಘರ್ ತಿರಂಗಾ ಅಭಿಯಾನವು ಆ. 15ರ ಸ್ವಾತಂತ್ರ್ಯ ದಿನೋತ್ಸವದವರೆಗೂ ನಡೆಯಲಿದೆ. ಈ ಅಭಿಯಾನದಲ್ಲಿ ಗ್ರಾಮಗಳ ಮನೆ ಮನೆಯಲ್ಲಿ ರಾಷ್ಟ್ರೀಯ ಧ್ವಜ ಹಾರಿಸುವಂತೆ ಪ್ರೇರೇಪಿಸುವುದರ ಮೂಲಕ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರ ಪ್ರೇಮವನ್ನು ಮೂಡಿಸುವುದು ಮೂಲ ಉದ್ದೇಶವಾಗಿದೆ.

ರಾಷ್ಟ್ರಧ್ವಜ ತಯಾರಿಕೆಯಲ್ಲಿ ನಿರತರಾದ ಮಹಿಳೆಯರು

ರಾಷ್ಟ್ರಧ್ವಜ ತಯಾರಿಕೆಯಲ್ಲಿ ನಿರತರಾದ ಮಹಿಳೆಯರು

 • Share this:
  ಬಾಗಲಕೋಟೆ: ಭಾರತದ 75 ನೇಯ ಸ್ವಾತಂತ್ರ್ಯ ದಿನೋತ್ಸವದ (75th Independence Day of India) ಅಂಗವಾಗಿ ಆಗಸ್ಟ್ 13 ರಿಂದ 15ರವರೆಗೆ ಉದ್ದೇಶಿಸಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ (Azadi Ka Amrit Mahotsav) ಬಾಗಲಕೋಟೆ (Bagalkot) ಜಿಲ್ಲೆ ಸಜ್ಜಾಗುತ್ತಿದೆ. ಹರ್ ಘರ್ ತಿರಂಗಾ (Har Ghar Tiranga) ಅಭಿಯಾನದಡಿ (Campaign) ಮನೆ ಮನೆಗೆ ರಾಷ್ಟ್ರೀಯ ಧ್ವಜ (National Flag) ಕಾರ್ಯಕ್ರಮಕ್ಕಾಗಿ ಜಿಲ್ಲಾ ಪಂಚಾಯತ (Zilla Panchayat) ಕಾರ್ಯೋನ್ಮುಖವಾಗಿದೆ ಅಂತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ZP CEO) ಟಿ. ಭೂಬಾಲನ್ ತಿಳಿಸಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಡಿ ಪ್ರತಿ ಗ್ರಾಮ ಪಂಚಾಯಿತಿಗೆ 450 ರಾಷ್ಟ್ರ ಧ್ವಜಗಳನ್ನು ಖರೀದಿಸಿ ನೀಡಲು ಯೋಜನೆ ರೂಪಿಸಲಾಗಿದೆ.

  20 ಸ್ವ-ಸಹಾಯ ಸಂಘಕ್ಕೆ ತರಬೇತಿ

  ಜಿಲ್ಲೆಯಲ್ಲಿ 20 ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ರಾಷ್ಟ್ರ ಧ್ವಜ ತಯಾರಿಸಲು ನಗರದ ರೂಡ್‍ಸೆಟ್ ಸಂಸ್ಥೆಯಲ್ಲಿ ಧ್ವಜಗಳನ್ನು ಹೇಗೆ ತಯಾರಿಸಬೇಕು ಎಂಬ ವಿಶೇಷ ತರಬೇತಿ ನೀಡಲಾಗಿದೆ. ತರಬೇತಿ ಪಡೆದ ಸ್ವ-ಸಹಾಯ ಸಂಘದ ಮಹಿಳೆಯರು ಪಾಲಿಸ್ಟರ್ ಬಟ್ಟೆಗಳಿಂದ ಪ್ರತಿ ದಿನ ನೂರಾರು ಧ್ವಜಗಳನ್ನು ತಯಾರಿಸುತ್ತಿದ್ದಾರೆ.

  ಹಾರಾಟಕ್ಕೆ ಸಜ್ಜಾದ ರಾಷ್ಟ್ರಧ್ವಜಗಳು


  ಗ್ರಾಮ ಪಂಚಾಯತ್‌ಗಳಿಗೆ 450 ರಾಷ್ಟ್ರಧ್ವಜ

  ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಡಿ ಪ್ರತಿ ಗ್ರಾಮ ಪಂಚಾಯಿತಿಗೆ 450 ರಾಷ್ಟ್ರ ಧ್ವಜಗಳನ್ನು ಖರೀದಿಸಿ ನೀಡಲಾಗುತ್ತದೆ. ಸ್ಥಳೀಯ ಸಂಸ್ಥೆಗಳಾದ ಪಂಚಾಯತ್ ರಾಜ್ ಸಂಸ್ಥೆಗಳು, ಸ್ವ-ಸಹಾಯ ಸಂಘಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಚೆ ಕಛೇರಿಗಳು, ಸಹಕಾರ ಸಂಘಗಳು, ಗ್ರಂಥಾಲಯಗಳ ಮತ್ತು ಇತರೆ ಸರಕಾರಿ ಕಟ್ಟಡಗಳು ಮೇಲೆ ಧ್ವಜ ಹಾರಿಸುವದೊಂದಿಗೆ ರೋಜಗಾರ ಸೇವಕರು ಹಾಗೂ ಶಿಕ್ಷಕರುಗಳು ಈ ಅಭಿಯಾನಕ್ಕೆ ಪಥ ಸಂಚಲನ ಹಾಗೂ ಸೆಮಿನಾರ್ ಮೂಲಕ ಮನೆ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸುವಂತೆ ನಾಗರಿಕರಿಗೆ ಉತ್ತೇಜನ ನೀಡುವಂತೆ ಬಾಗಲಕೋಟೆ ಜಿಲ್ಲಾ ಪಂಚಾಯತ ಕ್ರಮಕೈಗೊಂಡಿದೆ.

  ಇದನ್ನೂ ಓದಿ: Pottery: ಸಾಂಪ್ರದಾಯಿಕ ಗುಡಿಕೈಗಾರಿಕೆಯತ್ತ ಯುವಕರ ನಿರ್ಲಕ್ಷ್ಯ, ಕುಂಬಾರಿಕೆಗೆ ಈಗ ಸಿಗುತ್ತಿದೆ ಆಧುನಿಕತೆಯ ಸ್ಪರ್ಶ

  ಮನೆ ಮನೆಯಲ್ಲಿ ಧ್ವಜ ಹಾರಿಸಲು ಉತ್ತೇಜನ

  ಪ್ರತಿ ಗ್ರಾಮ ಪಂಚಾಯತ್‌ಗೆ ನೀಡುವ 450 ಧ್ವಜಗಳ ವೆಚ್ಚವನ್ನು ಗ್ರಾಮ ಪಂಚಾಯತಯು ಬಾವುಟ ಪೂರೈಕೆ ಮಾಡವವರಿಗೆ ಸ್ವಂತ ಸಂಪನ್ಮೂಲದಿಂದ ಪಾವತಿ ಮಾಡಬೇಕು. ಈ ಧ್ವಜಗಳನ್ನು ಪಂಚಾಯತ ವ್ಯಾಪ್ತಿಯ ಸರ್ಕಾರಿ, ಅರೆ ಸರ್ಕಾರಿ, ಸಹಕಾರ ಸಂಘಗಳು, ಸ್ವ-ಸಹಾಯ ಸಂಘಗಳು ಹಾಗೂ ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಸ್ಥೆಗಳಿಗೆ ವಿತರಿಸಿ ರಾಷ್ಟ್ರೀಯ ಧ್ವಜ ಮನೆ ಮನೆಗೆ ಅಭಿಯಾನ ಉತ್ತೇಜಿಸುವಂತೆ ಕ್ರಮ ವಹಿಸುವಂತೆ ಗ್ರಾಮ ಪಂಚಾಯತಿಗಳಿಗೆ ತಿಳಿಸಲಾಗಿದೆ ಎಂದರು.

  ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಜ್ಜು


  ಹರ್ ಘರ್ ತಿರಂಗಾ ಅಭಿಯಾನಕ್ಕೆ ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿದ ರಾಷ್ಟ್ರ ಧ್ವಜಗಳನ್ನು ಬಳಸಲಾಗುತ್ತಿದೆ. ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಟಿ.ಭೂಬಾಲನ್ ತಿಳಿಸಿದ್ದಾರೆ.

  ಆಗಸ್ಟ್ 13ರಿಂದ 15ರವರೆಗೆ ಅಭಿಯಾನ

  ಅಗಷ್ಟ-13 ರಿಂದ ಆರಂಭವಾಗುವ ಹರ್ ಘರ್ ತಿರಂಗಾ ಅಭಿಯಾನವು ಅಗಷ್ಟ್-15 ಸ್ವಾತಂತ್ರ್ಯ ದಿನೋತ್ಸವ ದವರೆಗೂ ನಡೆಯುವ ಈ ಅಭಿಯಾನದಲ್ಲಿ ಗ್ರಾಮಗಳ ಮನೆ ಮನೆಯಲ್ಲಿ ರಾಷ್ಟ್ರೀಯ ಧ್ವಜ ಹಾರಿಸುವಂತೆ ಪ್ರೇರೇಪಿಸುವುದರ ಮೂಲಕ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರ ಪ್ರೇಮವನ್ನು ಮೂಡಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.

  ಇದನ್ನೂ ಓದಿ: Miracle: ಅನಂತಶಯನನ ಪಾದದಡಿ ಉದ್ಭವಿಸುತ್ತಾಳೆ ಗಂಗೆ! ಲಕ್ಷ್ಮೀವೆಂಕಟೇಶ್ವರನ ಪವಾಡಕ್ಕೆ ಕೈಮುಗಿದ ಭಕ್ತರು

  ಇನ್ನು ರಾಷ್ಟ್ರ ಧ್ವಜ ತಯಾರಿಸುವ ಮೂಲಕ ದೇಶ ಸೇವೆ ತೊಡಗಿರುವುದು ಹೆಮ್ಮೆಯ ವಿಷಯ. ಇದು ಒಂದು ಉತ್ತಮ ಅನುಭವಾಗಿದೆ ಎಂದು ಶಿರೋಳದ ಮಹಾಲಕ್ಷ್ಮೀ ಸ್ವ-ಸಹಾಯ ಸಂಘದ ಸದಸ್ಯೆ ಸವಿತಾ ಅಶೋಕ ಚಿನ್ನಾಳ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  (ವರದಿ: ಮಂಜುನಾಥ್ ತಳವಾರ)
  Published by:Annappa Achari
  First published: