ಕಪ್ಪತಗುಡ್ಡಕ್ಕೆ ಮತ್ತೆ ಕಂಟಕ; ಖಾಸಗಿ ಕಂಪನಿ ಚಿನ್ನದ ಗಣಿಗಾರಿಕೆ ನಡೆಸಲು ಅನುಮತಿ ನೀಡಲು ನಡೆದಿದೆಯೇ ಸಿದ್ಧತೆ?

ಅಪಾರ ಪ್ರಮಾಣದ ಸಸ್ಯರಾಶಿ, ಅಪರೂಪದ ಪ್ರಾಣಿಗಳನ್ನು ಹೊಂದಿರುವ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಬಾರದು. ಒಂದು ವೇಳೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ಗಣಿಗಾರಿಕೆಗೆ ಸರ್ಕಾರ ಅವಕಾಶ ನೀಡಿದರೆ ಹೋರಾಟ ಅನಿವಾರ್ಯ ಅಂತ ಎಚ್ಚರಿಕೆ ನೀಡಿದ್ದಾರೆ.

news18-kannada
Updated:May 23, 2020, 7:52 PM IST
ಕಪ್ಪತಗುಡ್ಡಕ್ಕೆ ಮತ್ತೆ ಕಂಟಕ; ಖಾಸಗಿ ಕಂಪನಿ ಚಿನ್ನದ ಗಣಿಗಾರಿಕೆ ನಡೆಸಲು ಅನುಮತಿ ನೀಡಲು ನಡೆದಿದೆಯೇ ಸಿದ್ಧತೆ?
ಕಪ್ಪತಗುಡ್ಡ.
  • Share this:
ಗದಗ: ಅದೇನೋ ಗೊತ್ತಿಲ್ಲ ಉತ್ತರದ ಸಹ್ಯಾದ್ರಿ ಅಂತಲೇ ಹೆಸರಾಗಿರುವ ಕಪ್ಪತಗುಡ್ಡಕ್ಕೆ ಕಂಟಕ ಎದುರಾಗುತ್ತಲೇ ಇದೆ. ಈಗಾಗಲೇ ಪೋಸ್ಕೋ ಕಂಪನಿ ವಿರುದ್ಧ ಹೋರಾಡಿ ಗುಡ್ಡವನ್ನು ಉಳಿಸಿಕೊಳ್ಳಲಾಗಿತ್ತು. ನಂತರ ಸಂರಕ್ಷಣಾ ಪ್ರದೇಶದ ಘೋಷಣೆಯನ್ನೂ ಸಹ ಮರಳಿ ಜಾರಿಗೊಳಿಸುವಲ್ಲಿ ಹೋರಾಟಗಾರರು ಯಶಸ್ವಿಯಾಗಿದ್ದರು. ‌ಈಗ ಮತ್ತೊಮ್ಮೆ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಆರಂಭವಾಗುವ ಸೂಚನೆಗಳು ಕಾಣುತ್ತಿವೆ. ಹೀಗಾಗಿ ಇಂದು ಕಪ್ಪತಗುಡ್ಡ ಉಳಿಸಿ ಹೋರಾಟ ಸಮಿತಿಯ ಸದಸ್ಯರು ಸಭೆ ಸೇರಿ ಮತ್ತೊಂದು ಸುದೀರ್ಘ ಹೋರಾಟದ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದ್ದಾರೆ.

ಗದಗದ ಕಪ್ಪತಗುಡ್ಡದಲ್ಲಿ ಬಲ್ಡೋಟಾ ಒಡೆತನದ ರಾಮಘಡ ಮಿನರಲ್ಸ್ ಕಂಪನಿಯಿಂದ ಚಿನ್ನದ ಗಣಿಗಾರಿಕೆ ಆರಂಭಿಸಲಾಗುತ್ತಿದೆ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. ಇನ್ನು ಸರ್ಕಾರದ ಹಂತದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಹಾಗೂ ಗಣಿ ಇಲಾಖೆ ಸಚಿವ ಸಿ ಸಿ ಪಾಟೀಲ್ ಅವರ ನೇತೃತ್ವದಲ್ಲಿ ಕಳೆದ ಎರಡು ದಿನಗಳ ಹಿಂದೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆದಿದೆ ಎನ್ನೋ ಮಾಹಿತಿಯ ಹಿನ್ನೆಲೆಯಲ್ಲಿ ಇಂದು ಗದಗ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ತೋಂಟದ ಸಿದ್ದರಾಮ ಶ್ರೀಗಳ ನೇತೃತ್ವದಲ್ಲಿ, ಎಸ್ ಆರ್ ಹಿರೇಮಠ ಸೇರಿದಂತೆ ಅನೇಕ ಹೋರಾಟಗಾರರು ಮಹತ್ವದ ಸಭೆ ನಡೆಸಿದರು.

ಸಭೆ ನಂತರ ಮಾತನಾಡಿದ ತೋಂಟದಾರ್ಯ ಮಠದ  ಶ್ರೀ ತೋಂಟದ ಸಿದ್ದರಾಮ ಶ್ರೀಗಳು, ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಆರಂಭ ಮಾಡಿದರೆ ಹೋರಾಟ ಅನಿವಾರ್ಯ ಅಂತ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಈ ಭಾಗದ ಜೀವನಾಡಿಯಾದ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸೋದಕ್ಕೆ ಅವಕಾಶ ನೀಡಲ್ಲ. ಪಕೃತಿ ಮೇಲೆ ಅತ್ಯಾಚಾರವಾಗಲು ಬಿಡಲ್ಲ ಅಂತ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ಮಾತನಾಡಿ, ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ, ಕಪ್ಪತಗುಡ್ಡದಲ್ಲಿ ಕಬ್ಬಿಣ ಹಾಗೂ ಚಿನ್ನದ ಗಣಿಗಾರಿಕೆಗೆ ಅನುಮತಿ ನೀಡುವ ಕುರಿತು ಶಂಕೆ ವ್ಯಕ್ತವಾಗಿದೆ. ಈಗಾಗಲೇ ಕಪ್ಪತಗುಡ್ಡ ವನ್ಯಜೀವಿಧಾಮವಾಗಿ ಘೋಷಿತವಾಗಿದೆ. ಅಪಾರ ಪ್ರಮಾಣದ ಸಸ್ಯರಾಶಿ, ಅಪರೂಪದ ಪ್ರಾಣಿಗಳನ್ನು ಹೊಂದಿರುವ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಬಾರದು. ಒಂದು ವೇಳೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ಗಣಿಗಾರಿಕೆಗೆ ಸರ್ಕಾರ ಅವಕಾಶ ನೀಡಿದರೆ ಹೋರಾಟ ಅನಿವಾರ್ಯ ಅಂತ ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ: ಜನರ ಭೇಟಿಯಿಲ್ಲದ ಕಬ್ಬನ್ ಪಾರ್ಕ್ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಕಬ್ಬನ್ ಪಾರ್ಕ್ ಸದ್ಯದ ಚಿತ್ರಣ...

ಈಗಾಗಲೇ ದಿ.ತೋಂಟದ ಸಿದ್ದಲಿಂಗ ಶ್ರೀಗಳ‌ ನೇತೃತ್ವದಲ್ಲಿ 2011ರಲ್ಲಿ ಪೋಸ್ಕೋ ವಿರುದ್ಧ 2018 ರಲ್ಲಿ ಸರ್ಕಾರದ ನಡೆ ವಿರುದ್ಧ ಹೋರಾಟ ಮಾಡಿ ಕಪ್ಪತಗುಡ್ಡವನ್ನು ಉಳಿಸಿಕೊಳ್ಳಲಾಗಿದೆ. ಈಗೇನಾದರೂ ಸರ್ಕಾರ ಮತ್ತೆ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದರೆ ತೋಂಟದಾರ್ಯ ಮಠದ ಈಗಿನ ತೋಂಟದ ಸಿದ್ದರಾಮ ಶ್ರೀಗಳ ನೇತೃತ್ವದಲ್ಲಿ ಹೋರಾಟ ಶತಸಿದ್ಧ ಎಂಬ ಸಂದೇಶವನ್ನು ಇಂದಿನ ಸಭೆ ನೀಡಿದೆ.
First published: May 23, 2020, 7:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading