• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Satyameva Jayate: ರಾಹುಲ್ ಗಾಂಧಿ ಕಾರ್ಯಕ್ರಮಕ್ಕಾಗಿ ಸಿದ್ಧತೆ; ಕೋಲಾರದತ್ತ ದೇಶದ ಚಿತ್ತ

Satyameva Jayate: ರಾಹುಲ್ ಗಾಂಧಿ ಕಾರ್ಯಕ್ರಮಕ್ಕಾಗಿ ಸಿದ್ಧತೆ; ಕೋಲಾರದತ್ತ ದೇಶದ ಚಿತ್ತ

ರಾಹುಲ್ ಗಾಂಧಿ

ರಾಹುಲ್ ಗಾಂಧಿ

15 ಎಕರೆ ಜಾಗದಲ್ಲಿ ಬೃಹತ್ ಪೆಂಡಾಲ್ ಹಾಕಲು ನೆಲ ಸಮತಟ್ಟು ಕಾರ್ಯ ನಡೆದಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸುಮಾರು 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರನ್ನ ಸೇರಿಸಲು ಕೈ ನಾಯಕರು ಸಜ್ಜಾಗಿದ್ದಾರೆ.

  • News18 Kannada
  • 2-MIN READ
  • Last Updated :
  • Kolar, India
  • Share this:

ಬೆಂಗಳೂರು: 2019ರಲ್ಲಿ ಕೋಲಾರದಲ್ಲಿ (Kolar) ನೀಡಿದ್ದ ಹೇಳಿಕೆಯಿಂದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Congress Leader Rahul Gandhi) ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಈಗ ಅದೇ ಕೋಲಾರಕ್ಕೆ ಏಪ್ರಿಲ್ 5ರಂದು ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಏಪ್ರಿಲ್ 5  ಕೋಲಾರದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಸತ್ಯಮೇವ ಜಯತೆ (Satyameva Jayate) ಸಮಾವೇಶ ನಡೆಯಲಿದೆ. ಡಿಸಿ ಕಚೇರಿ ಪಕ್ಕದ ಖಾಸಗಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. 15 ಎಕರೆ ಜಾಗದಲ್ಲಿ ಬೃಹತ್ ಪೆಂಡಾಲ್ ಹಾಕಲು ನೆಲ ಸಮತಟ್ಟು ಕಾರ್ಯ ನಡೆದಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸುಮಾರು 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನರನ್ನ ಸೇರಿಸಲು ಕೈ ನಾಯಕರು ಸಜ್ಜಾಗಿದ್ದಾರೆ.


ಯಾವ ಜಾಗದಲ್ಲಿ ನಿಂತು ಮೋದಿ ಅವರನ್ನು ಕಳ್ಳರಿಗೆ ಹೋಲಿಸಿದರೋ, ಯಾವ ಜಾಗದಲ್ಲಿ ನಿಂತು ಹೇಳಿಕೆ ಕೊಟ್ಟು ಜೈಲಿ ಶಿಕ್ಷೆಗೆ ಗುರಿಯಾದರೋ, ಯಾವ ಜಾಗದಲ್ಲಿ ನಿಂತು ಆಡಿದ ಮಾತಿಗೆ ಸಂಸದ ಸ್ಥಾನದಿಂದ ಅನರ್ಹತೆಗೆ ಒಳಗಾದರೋ ಅದೇ ಜಾಗದಲ್ಲಿ ರಾಹುಲ್ ​ಗಾಂಧಿ ಕರ್ನಾಟದಲ್ಲಿ ಚುನಾವಣೆ ರಣ ಕಹಳೆ ಊದಲು ಆಗಮಿಸುತ್ತಿದ್ದಾರೆ.


ಈ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ್ಯ ಮಲ್ಲಿಕಾರ್ಜುನ ಖರ್ಗೆ, ಕೆ,ಸಿ ವೇಣುಗೋಪಾಲ್, ಪಿ, ಚಿದಂಬರಂ, ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.




‘ಕೈ’ನಿಂದ ಪಂಜಿನ ಮೆರವಣಿಗೆ


ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ರದ್ದಾಗಿದ್ದನ್ನು ಖಂಡಿಸಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್​​ ಪಂಜಿನ ಮೆರವಣಿಗೆ ನಡೆಸಿತು. ಬಿ.ವಿ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ  ನೂರಾರು ಕೈ ಕಾರ್ಯಕರ್ತರು ಭಾಗಿಯಾಗಿದ್ದರು.


ಇದನ್ನೂ ಓದಿ: Rahul Gandhi: ರಾಹುಲ್​ 'ಸತ್ಯಮೇವ ಜಯತೆ' ಸಮಾವೇಶ; ಒಂದೇ ಏಟಿಗೆ ಐದು ಹಕ್ಕಿ ಹೊಡೆಯಲು ಮುಂದಾದ ಕಾಂಗ್ರೆಸ್​​!

top videos


    ಪ್ರತಿಭಟನೆ ಶುರುವಾಗ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಕರ್ತರ ಮೇಲೆ  ನೀರು ಹಾಯಿಸಿದ್ರು. ಕೆಲ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು.

    First published: