• Home
  • »
  • News
  • »
  • state
  • »
  • Masjid v/s Mandir: ಶ್ರೀರಂಗಪಟ್ಟಣದಲ್ಲಿ ಧರ್ಮ ದಂಗಲ್; ಜೂನ್ 4ಕ್ಕೆ ಮಸೀದಿ ಪ್ರವೇಶಿಸ್ತಾರಂತೆ ಹನುಮ ಭಕ್ತರು!

Masjid v/s Mandir: ಶ್ರೀರಂಗಪಟ್ಟಣದಲ್ಲಿ ಧರ್ಮ ದಂಗಲ್; ಜೂನ್ 4ಕ್ಕೆ ಮಸೀದಿ ಪ್ರವೇಶಿಸ್ತಾರಂತೆ ಹನುಮ ಭಕ್ತರು!

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯ ಮಸೀದಿ ವಿವಾದ ಮುನ್ನಲೆಗೆ ಬಂದಿದೆ. ಜೂನ್ 4 ರಂದು ಹನುಮ ಭಕ್ತರು ಜಾಮಿಯ ಮಸೀದಿ ಪ್ರವೇಶ ಮಾಡಲು ಸಿದ್ದತೆ ಮಾಡಿಕೊಳ್ತಿದ್ದಾರೆ..

  • Share this:

ಮಂಡ್ಯ: ಮತ್ತೊಂದು ಧರ್ಮ ದಂಗಲ್ ಗೆ ಮಂಡ್ಯ (Mandya) ಜಿಲ್ಲೆ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಯಾವಾಗ ವಾರಣಾಸಿಯ (Varanasi) ಜ್ಞಾನವಾಪಿ (Gyanavapi) ಮಸೀದಿಯಲ್ಲಿ (Masjid) ವಿಡಿಯೋ ಚಿತ್ರೀಕರಣಕ್ಕೆ (Video Recording) ನ್ಯಾಯಾಲಯ (Court) ಅವಕಾಶ ಕೊಟ್ಟಿತೋ, ಆಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ (Srirangapatna) ಜಾಮಿಯ ಮಸೀದಿ ವಿವಾದ (Jamia Masjid Controversy) ಮುನ್ನಲೆಗೆ ಬಂದಿದೆ. ಜೂನ್ 4 ರಂದು ಹನುಮ ಭಕ್ತರು (Hanuma Devotees) ಜಾಮಿಯ ಮಸೀದಿ ಪ್ರವೇಶ (Entry) ಮಾಡಲು ಸಿದ್ದತೆ ಮಾಡಿಕೊಳ್ತಿದ್ದಾರೆ.. ಅಷ್ಟಕ್ಕೂ ಹಿಂದೂ (Hindu) ಪರ ಸಂಘಟನೆಗಳ ವಾದವೇನು? ಅವರು ಪಾದ ಯಾತ್ರೆ ಮಾಡ್ಬೇಕು ಅಂತಿರೋದು ಯಾಕೆ? ಈ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿ…


ಜೂನ್ 4 ರಂದು ಶ್ರೀರಂಗಪಟ್ಟಣ ಚಲೋ ಅಭಿಯಾನಕ್ಕೆ ಸಿದ್ದತೆ


ಯಾವಾಗ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ನ್ಯಾಯಾಲಯ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿತೋ ಆಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯ ಮಸೀದಿ ವಿವಾದ ಮುನ್ನಲೆಗೆ ಬಂದಿದೆ. ಈ ಹಿಂದೆ ಜಾಮಿಯ ಮಸೀದಿ ಮೂಡಲ ಬಾಗಿಲು ಆಂಜನೇಯ ದೇವಾಲಯವಾಗಿತ್ತು. ಈ ಹಿನ್ನಲೆ ಜಾಮಿಯ ಮಸೀದಿಯಲ್ಲಿ ಚಿತ್ರೀಕರಣ ಆಗಬೇಕು ಹಾಗೂ ಈ ಬಾರಿಯ ಹನುಮ ಜಯಂತಿಗೆ ಹನುಮ ಮಾಲಾದಾರಿಗಳು ಪ್ರವೇಶ ಮಾಡಲು ಅವಕಾಶ ಮಾಡಿ ಕೊಡ್ಬೇಕು ಎಂಬ ಕೂಗು ಹೆಚ್ಚಾಗಿದೆ.


ಮೇ 20ರಂದು ಜಿಲ್ಲಾಡಳಿತಕ್ಕೆ ಮನವಿ


ಇನ್ನು ಇದೇ ಮೇ 20 ರಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಜಿಲ್ಲಾಡಳಿತಕ್ಕೆ ಹಾಗೂ ಪ್ರಾಚೀನ ಪುರಾತತ್ವ ಇಲಾಖೆಗೆ ಮನವಿಯೊಂದನ್ನ ನೀಡಿದ್ರು. ಜಾಮಿಯ ಮಸೀದಿಯಲ್ಲಿ ಅಕ್ರಮವಾಗಿ ಮದರಸವನ್ನ ನಡೆಸುತ್ತಿದ್ದಾರೆ. ಅಲ್ಲೆ ವಾಸ ಮಾಡುತ್ತಿದ್ದಾರೆ ಹಾಗಾಗಿ ಅವರನ್ನ ಆದಷ್ಟು ಬೇಗ ತೆರವು ಗೊಳಿಸುವಂತೆ ಮನವಿ ಮಾಡಿದ್ರು.


ಇದನ್ನೂ ಓದಿ: BBMP Election : ಕೋರ್ಟ್​​ ಸೂಚನೆ ಬೆನ್ನಲ್ಲೇ ಡಿ ಲಿಮಿಟೇಷನ್ ಕರುಡು ಸರ್ಕಾರಕ್ಕೆ ಸಲ್ಲಿಸಿದ ಪಾಲಿಕೆ !


ಸ್ಪಂದನೆ ಸಿಗದೇ ಇದ್ದುದರಿಂದ ಅಭಿಯಾನ


ಆದ್ರೆ ಯಾವಾಗ ಜಿಲ್ಲಾಡಳಿತ ಹಾಗೂ ಪ್ರಾಚೀನ ಹಾಗೂ ಪುರಾತತ್ವ ಇಲಾಖೆಯಿಂದ ಸ್ಪಂದನೆ ಸಿಗದೆ ಹೋಯ್ತೊ ಈಗ ಹಿಂದೂ ಪರ ಸಂಘಟನೆಗಳು ಶ್ರೀರಂಗಪಟ್ಟಣ ಚಲೋ ಅಭಿಯಾನಕ್ಕೆ ಕರೆ ಕೊಟ್ಟಿದೆ.


ಜಾಮಿಯ ಮಸೀದಿ ಪ್ರವೇಶ ಮಾಡಿಯೇ ತಿರುತ್ತೇವೆಂದು ಪಣ


ಇನ್ನು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿರುವ ಹಿಂದು ಪರ ಮುಖಂಡರ ಜೊತೆ ಜಿಲ್ಲಾಡಳಿತ ಮಾತುಕತೆ ಮಾಡು ಪ್ರಯತ್ನ ಮಾಡಿದೆ. ಜೂನ್ 4 ರ ಶ್ರೀರಂಗಪಟ್ಟಣ ಚಲೋ ಕೈಬಿಡುವಂತೆ ತಿಳಿಸಿದೆ. ಆದ್ರೆ ಈಗಾಗಲೇ ಹಿಂದೂಪರ ಸಂಘಟನೆಗಳು ಸಿದ್ದತೆ ಮಾಡಿಕೊಂಡಿದ್ದು, ಹನುಮ ಮಂದಿರ ಇತ್ತು ಎಂಬ ಜಾಮಿಯಾ ಮಸೀದಿಗೆ ಹೋಗುವುದಾಗಿ ಪಟ್ಟು ಹಿಡಿದಿದ್ದಾರೆ.


ಪಾದಯಾತ್ರೆ ತಡೆದ್ರೆ ಉಗ್ರ ಹೋರಾಟದ ಎಚ್ಚರಿಕೆ


ಇನ್ನು ಈ ಪಾದಯಾತ್ರೆಯನ್ನ ಯಾರಿಂದಲು ತಡೆಯಲು ಸಾಧ್ಯವಿಲ್ಲ ಒಂದು ತಡೆಯೋ ಪ್ರಯತ್ನ ಮಾಡಿದ್ರೆ ಉಗ್ರ ಹೋರಾಟದ ಸೂಚನೆಯನ್ನ ಹಿಂದುಪರ ಸಂಘಟನೆಗಳು ನೀಡಿವೆ.


ಇದನ್ನೂ ಓದಿ: Bribe: ಬೆಂಗಳೂರು ನಗರ DHO ವಿರುದ್ಧ ಲಂಚ ಪಡೆದ ಆರೋಪ; AAPನಿಂದ ಪ್ರತಿಭಟನೆ


ಯಾವ ಹಂತಕ್ಕೆ ಹೋಗಲಿದೆ ಧರ್ಮ ದಂಗಲ್?


ಅದೇನೆ ಆಗ್ಲಿ ದಿನ ಕಳೆದಂತೆ ಜಾಮಿಯ ಮಸೀದಿಯ ವಿವಾದ ತಾರಕಕ್ಕೆ ಏರುತ್ತಿದೆ. ಇತ್ತ ಹಿಂದೂ ಪರ ಸಂಘಟನೆಗಳು ಮೂಡಲ ಬಾಗಿಲು ಆಂಜನೇಯ ದೇವಾಲಯವನ್ನ ಪಡೆದೆ ತೀರುತ್ತೇವೆಂದು ಪಟ್ಟು ಹಿಡಿದಿದ್ದು, ಇತ್ತ ಇದು ನಮ್ಮ ಮಸೀದಿ ನಾವು ಬಿಟ್ಟು ಕೊಡುವುದಿಲ್ಲವೆಂದು ಹಠ ಹಿಡಿದಿದೆ. ಈ ಧರ್ಮ ದಂಗಲ್ ಮುಂದೆ ಯಾವ ಹಂತಕ್ಕೆ ಹೋಗಲಿದೆ ಎಂದು ಕಾದು ನೋಡ ಬೇಕಿದೆ.

Published by:Annappa Achari
First published: