ಬೆಳಗಾವಿ: ಡಿಸೆಂಬರ್ 19ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ (Suvarna Soudha, Belagavi) ಚಳಿಗಾಲದ ಅಧಿವೇಶನ (Winter Session) ನಡೆಯಲಿದ್ದು ವಿಧಾನಮಂಡಲ ಅಧಿವೇಶನಕ್ಕೆ ಬೆಳಗಾವಿ ಸಜ್ಜಾಗಿದೆ. ಬೆಳಗಾವಿ ಅಧಿವೇಶನ ವೇಳೆ ಭದ್ರತೆಗಾಗಿ ಐದು ಸಾವಿರಕ್ಕೂ ಹೆಚ್ಚು ಪೊಲೀಸ್ (Police) ಸಿಬ್ಬಂದಿಗೆ ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಅಧಿವೇಶನ ವೇಳೆಯೇ ಸಾಲು ಸಾಲು ಪ್ರತಿಭಟನೆಗಳು (Protest) ಸಹ ಇರುವ ಹಿನ್ನೆಲೆ ಪ್ರತಿಭಟನಾಕಾರರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
ಡಿಸೆಂಬರ್ 19ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
5 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ
ವಿಶೇಷವಾಗಿ ಬೆಳಗಾವಿಯ ಅಧಿವೇಶನ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 5,500 ಪೊಲೀಸರ ಸಿಬ್ಬಂದಿ ನಿಯೋಜಿಸಲಾಗಿದೆ.
ಅಧಿವೇಶನಕ್ಕೆ ಆಗಮಿಸುವ 5 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ವಸತಿಗಾಗಿ ಸುವರ್ಣ ವಿಧಾನಸೌಧ ಬಳಿ ಟೌನ್ಶಿಪ್ ನಿರ್ಮಾಣ ಮಾಡಲಾಗಿದೆ.
ಏಳು ಬೃಹತ್ ಟೆಂಟ್ ನಿರ್ಮಾಣ
ಈ ಟೌನ್ ಶಿಫ್ ನಲ್ಲಿ 7 ಬೃಹತ್ ಟೆಂಟ್ ನಿರ್ಮಿಸಲಾಗಿದ್ದು ಒಂದು ಟೆಂಟ್ ನಲ್ಲಿ 400- 500 ಜನ ಸಿಬ್ಬಂದಿಯ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ.
1500 ಜನ ಸಿಬ್ಬಂದಿ ಹಾಗೂ 300 ಜನ ಅಧಿಕಾರಿಗಳಿಗೆ ವಾಸ್ತವ್ಯ ವ್ಯವಸ್ಥೆ ಮಾಡಿದ್ದು ಊಟಕ್ಕಾಗಿ 28 ಪ್ರತ್ಯೇಕ ಕೌಂಟರ್ ಸ್ಥಾಪಿಸಲಾಗಿದೆ. ಪ್ರತಿಯೊಬ್ಬ ಸಿಬ್ಬಂದಿಗೆ ಕಾಟ್, ಬೆಡ್, ಸ್ನಾನಕ್ಕೆ ಬಿಸಿ ನೀರು, ಮೊಬೈಲ್ ಚಾರ್ಜಿಂಗ್ ಸೌಲಭ್ಯ ಸೇರಿ ಸಕಲ ವ್ಯವಸ್ಥೆ ಮಾಡಲಾಗಿದೆ.
ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ವ್ಯವಸ್ಥೆ
ಇನ್ನುಳಿದ ಸಿಬ್ಬಂದಿಗೆ ಭಂಟರ ಭವನ, ಮುಕ್ತಿ ಮಠದ ಸಮೂದಾಯ ಭವನ, ಏರ್ ಫೋರ್ಸ್ ಟ್ರೈನಿಂಗ್ ಸೆಂಟರ್ ವ್ಯವಸ್ಥೆ ಮಾಡಿದ್ದು ಮಹಿಳಾ ಸಿಬ್ಬಂದಿಗೆ ಕೆ ಎಸ್ ಆರ್ ಪಿ ಮಚ್ಛೆ ಘಟಕದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ನ್ಯೂಸ್18ಗೆ ನಗರ ಪೊಲೀಸ್ ಆಯುಕ್ತ ಡಾ. ಎಂ ಬಿ ಬೋರಲಿಂಗಯ್ಯ ವಿವರಿಸಿದರು.
ಇದನ್ನೂ ಓದಿ: Belagavi: ಅಧಿವೇಶನಕ್ಕೆ ಬರುತ್ತಿದ್ದ ವಾಹನದ ಮೇಲೆ ಮರಾಠಿ ಪುಂಡರಿಂದ ಕಲ್ಲು ತೂರಾಟ; ಚಾಲಕನಿಗೆ ಜೀವ ಬೆದರಿಕೆ
ಸುವರ್ಣಸೌಧದ ಒಂದು ಕಿ.ಮೀ. ದೂರದಲ್ಲಿ ಪ್ರತಿಭಟನಾಕಾರರಿಗೆ ಟೆಂಟ್
ಪ್ರತಿಭಟನಾಕಾರರಿಗೆ ಸುವರ್ಣಸೌಧದಿಂದ ಒಂದು ಕಿಲೋಮೀಟರ್ ಅಂತರದಲ್ಲಿ ಇರುವ ಬಸ್ತವಾಡ ಗ್ರಾಮದ ಬಳಿ ಟೆಂಟ್ಗಳನ್ನು ನಿರ್ಮಿಸಲಾಗಿದೆ. ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಧಿವೇಶನ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಕಲ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿ ನಗರ ಸೇರಿ ಸುವರ್ಣಸೌಧ ಬಳಿ ಭದ್ರತೆಗಾಗಿ ಆರು ಎಸ್ಪಿ, 11 ಎಎಸ್ಪಿ, 40 ಡಿವೈಎಸ್ಪಿ, 106 ಸಿಪಿಐ , 275 ಪಿಎಸ್ಐ, 234 ಮಹಿಳಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಬೆಳಗಾವಿಯಲ್ಲಿ ಪೊಲೀಸರ ಹದ್ದಿನ ಕಣ್ಣು
ಇನ್ನು ಇತ್ತ ಪಂಚಮಸಾಲಿ, ಮಾದಿಗ ದಂಡೋರ ಸಮಿತಿ, ರೈತ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಳಗಾವಿಯಾದ್ಯಂತ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಎಂಇಎಸ್ ಸಂಘಟನೆ ಸಹ ಕ್ಯಾತೆ ತೆಗೆಯಲು ಸಿದ್ದತೆ ನಡೆಸಿದೆ.
ರಮೇಶ್ ಜಾರಕಿಹೊಳಿ, ಈಶ್ವರಪ್ಪ ಕನಸು ನನಸಾಗುತ್ತಾ?
ಸಂಪುಟ ಸೇರಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್.ಈಶ್ವರಪ್ಪ ತುದಿಗಾಲಿನಲ್ಲಿ ನಿಂತಿದ್ದಾರೆ. ಇತ್ತ ಸಂಪುಟ ಸೇರುವ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಇವರ ಹೆಸರಿದೆ.
ಬೆಳಗಾವಿ ಅಧಿವೇಶನಕ್ಕೆ ಮಂತ್ರಿಯಾಗಿ ಬರಬೇಕು ಎಂಬ ಕನಸು ಕಂಡಿರುವ ರಮೇಶ್ ಜಾರಕಿಹೊಳಿ ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರಂತೆ. ಇತ್ತ ಕ್ಲೀನ್ಚಿಟ್ ಸಿಕ್ಕ ಬಳಿಕ ಸಂಪುಟ ಸೇರಿ ತಮ್ಮ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ನಾಯಕರಿಗೆ ತಿರುಗೇಟು ನೀಡಲು ಮತ್ತೆ ಮಂತ್ರಿ ಆಗುವ ಆಸೆಯಲ್ಲಿದ್ದಾರೆ.
ಮಂತ್ರಿಯಾಗೇ ಸದನದಲ್ಲಿ ಭಾಗಿಯಾಗಬೇಕು ಅಂತ ಅಂದುಕೊಂಡಿರುವ ರಮೇಶ್ ಜಾರಕಿಹೊಳಿ ಈ ಹಿಂದೆ ಅಧಿವೇಶನಗಳಿಂದ ದೂರ ಉಳಿದಿದ್ದರು. ಕೊನೆ ಅಧಿವೇಶನದಲ್ಲಾದ್ರೂ ಮಂತ್ರಿಯಾಗಿ ಭಾಗಿಯಾಗಲು ಆಸೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ