• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Yadagiri: ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ, ಚಿಕಿತ್ಸೆಗೆ ಬರುವ ಗರ್ಭಿಣಿಯರ ಗೋಳು ಕೇಳೋರಿಲ್ಲ!

Yadagiri: ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ, ಚಿಕಿತ್ಸೆಗೆ ಬರುವ ಗರ್ಭಿಣಿಯರ ಗೋಳು ಕೇಳೋರಿಲ್ಲ!

ಗರ್ಭಿಣಿಯರ ಪರದಾಟ

ಗರ್ಭಿಣಿಯರ ಪರದಾಟ

ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿಯರು ಹೆರಿಗೆ ನೋವಿನಿಂದ ನರಳಾಡುವಂತಾಗಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಗರ್ಭಿಣಿಯರು ಅಲೆದಾಡುವಂತಾಗಿದೆ. ಸ್ತ್ರೀರೋಗ ತಜ್ಞ ವೈದ್ಯರಿಲ್ಲದೇ ಸಂಕಷ್ಟ ಎದುರಿಸುವಂತಾಗಿದೆ.

  • Share this:

ಯಾದಗಿರಿ: ಹೆರಿಗೆಗೆಂದು (Delivery) ಆಸ್ಪತ್ರೆಗೆ (Hospital) ದಾಖಲಾಗುವ ಗರ್ಭಿಣಿಯರು (Pregnant Women) ಹೆರಿಗೆ ನೋವಿನಿಂದ (Pain) ನರಳಾಡುವಂತಾಗಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಗರ್ಭಿಣಿಯರು ಅಲೆದಾಡುವಂತಾಗಿದೆ. ಸ್ತ್ರೀ ರೋಗ ತಜ್ಞ ವೈದ್ಯರಿಲ್ಲದೇ ಸಂಕಷ್ಟ ಎದುರಿಸುವಂತಾಗಿದೆ. ಯಾದಗಿರಿ (Yadagiri) ಜಿಲ್ಲಾ ಕೇಂದ್ರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಿತ್ಯವೂ ಗರ್ಭಿಣಿಯರು ಪರದಾಡುವಂತಾಗಿದೆ. ಸಂಜೆಯಾದರೆ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ ವೈದ್ಯರು ಇಲ್ಲದೇ ಸಂಜೆ ಹಾಗೂ ರಾತ್ರಿ ವೇಳೆ ಹೆರಿಗೆಗೆಂದು ಬರುವ ಗರ್ಭಿಣಿಯರು ಪರದಾಡುವಂತಾಗಿದ್ದು, ವೈದ್ಯರಿಲ್ಲದ ಕಾರಣ ಖಾಸಗಿ ಆಸ್ಪತ್ರೆಗೆ (Privet Hospital) ತೆರಳುವುದು ಅನಿವಾರ್ಯವಾಗಿದೆ. ದೂರದ ಊರಿಂದ ಬರುವ ಗರ್ಭಿಣಿಯರು ಹೆರಿಗೆ ನೋವು ಅನುಭವಿಸಿ ವೈದ್ಯರು ಇಲ್ಲದ ಕಾರಣ ಬೇರೆ ಆಸ್ಪತ್ರೆಗೆ ತೆರಳುತ್ತಾರೆ.


ತಜ್ಞ ವೈದ್ಯರಿಲ್ಲದೇ ಗರ್ಭಿಣಿಯರ ಪರದಾಟ


ಈ ಆಸ್ಪತ್ರೆಯಲ್ಲಿ ಇಬ್ಬರು ಸ್ತ್ರೀರೋಗ  ತಜ್ಞರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಬೆಳಿಗ್ಗೆಯಿಂದ ಸಂಜೆವರಗೆ ಮಾತ್ರ ವೈದ್ಯರು  ಗರ್ಭಿಣಿಯರನ್ನು ತಪಾಸಣೆ ಮಾಡಿ ಸಾಮಾನ್ಯ ಹೆರಿಗೆ ಇಲ್ಲವೇ ಸಿಜೆರಿಯನ್ ಮಾಡುತ್ತಾರೆ. ಆದರೆ, ವೈದ್ಯರು ತಮ್ಮ ಕೆಲಸದ ಅವಧಿ ಮುಗಿದ ನಂತರ ಮನೆಗೆ ತೆರಳುತ್ತಾರೆ. ಸಂಜೆಯಿಂದ ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞ ವೈದ್ಯರು ಇರುವದಿಲ್ಲ. ಈ ವೇಳೆ ಗರ್ಭಿಣಿಯರು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾದರೆ ಸಾಮಾನ್ಯ ಹೆರಿಗೆ ಮಾತ್ರ ನರ್ಸ್ ಗಳು ಮಾಡುತ್ತಾರೆ. ಆದರೆ, ಸಿಜೆರಿನ್ ಮಾಡಬೇಕಾದರೆ ವೈದ್ಯರು ಇರದ ಕಾರಣ ಖಾಸಗಿ ಆಸ್ಪತ್ರೆಗೆ ಹೋಗುವದು ಅನಿವಾರ್ಯವಾಗಿದೆ.


ನಿತ್ಯವೂ ಸುರಪುರ ಹಾಗೂ ಶಹಾಪುರ ತಾಲೂಕಿನಿಂದ ಸಿಜೆರಿನ್‌ಗಾಗಿ ಗರ್ಭಿಣಿಯರು ಹೆಚ್ಚು ಬರುತ್ತಾರೆ. ಆದರೆ, ಸಂಜೆಯಿಂದ ಹಾಗೂ ರಾತ್ರಿ ವೇಳೆ ವೈದ್ಯರಿಲ್ಲದೇ ಸರಕಾರಿ ಆಸ್ಪತ್ರೆಗೆ ಆಗಮಿಸಿ ವಾಪಸ್ ಹೋಗುತ್ತಾರೆ.


ಸಾಲ ಮಾಡಬೇಕಾದದ್ದು ಅನಿವಾರ್ಯ


ಸರಕಾರಿ ಆಸ್ಪತ್ರೆಯಲ್ಲಿ ಬಡವರು ಉಚಿತ ಹೆರಿಗೆಯಾಗುತ್ತದೆಂದು ಬಂದರೆ ವೈದ್ಯರಿಲ್ಲದೇ ಸಾಲ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆರಿಗೆ ಮಾಡಿಸಿಕೊಳ್ಳುವಂತಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ 50 ಸಾವಿರದಿಂದ 60 ಸಾವಿರ ರೂಪಾಯಿ ಬಿಲ್ ಆಗುತ್ತದೆ. ಒಂದು ವೇಳೆ ಹಣ ಇಲ್ಲದಿದ್ದರೆ ಸಂಕಷ್ಟ ಎದುರಿಸುವ ಪರಿಸ್ಥಿತಿ ತಲೆದೊರಲಿದೆ.


ಇದನ್ನೂ ಓದಿ: BBMP: ಮೋದಿ ಬಂದು ಹೋದ 1 ವಾರಕ್ಕೆ ಮತ್ತೊಂದು ಕಡೆ ಕಿತ್ತು ಹೋಗಿದೆ ರಸ್ತೆ ಡಾಂಬರು


ಹಲವು ಊರುಗಳಿಂದ ಬರುವ ಗರ್ಭಿಣಿಯರು


ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ, ವಡಗೇರಾ, ಯರಗೋಳ ಸೇರಿದಂತೆ ಮೊದಲಾದ ಭಾಗದಿಂದ ನಿತ್ಯವೂ ಗರ್ಭಿಣಿಯರು ಹೆರಿಗೆಂದು ಬರುತ್ತಾರೆ. ಆದರೆ, ವೈದ್ಯರ ಕೊರತೆ ಕಾರಣ ಗರ್ಭಿಣಿಯರು ಪರದಾಡುವಂತಾಗಿದೆ. ಇನ್ನಿಬ್ಬರ ಸ್ತ್ರೀರೋಗ ತಜ್ಞ ವೈದ್ಯರು ಹಾಗೂ ಅರವಳಿಕೆ ತಜ್ಞರಿಬ್ಬರ ವೈದ್ಯರ ಅವಶ್ಯಕತೆವಿದೆ. ಈ ಕೊರತೆ ನಿಗಿಸಿದರೆ ವೈದ್ಯರು ತಂಡ ರಚನೆ ಮಾಡಿ ದಿನದ 24 ಗಂಟೆಯು ಹೆರಿಗೆ ಮಾಡಲು ಸೇವೆ ನೀಡಬಹುದಾಗಿದೆ.


ಈ ಬಗ್ಗೆ ಅಧಿಕಾರಿಗಳು ಹೇಳುವುದೇನು?


ಈ ಬಗ್ಗೆ ಜಿಲ್ಲಾಶಸ್ತ್ರ ಚಿಕಿತ್ಸಕರಾದ ಡಾ.ನೀಲಮ್ಮ ಎಸ್ .ರೆಡ್ಡಿ ಅವರು ಮಾತನಾಡಿ, ವೈದ್ಯರ ಕೊರತೆ ಕಾರಣ ಸಮಸ್ಯೆಯಾಗುತ್ತಿದೆ. ವೈದ್ಯರ ಕೊರತೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.


ಮಹಿಳೆಯರ ಸಂಬಂಧಿಕರ ಆಕ್ರೋಶ


ಕಳೆದ ಜನವರಿಯಿಂದ ಮೇ ತಿಂಗಳ ವರಗೆ ಸಾಮಾನ್ಯ ಹೆರಿಗೆ 1170 ಮಾಡಲಾಗಿದೆ. ಅದೆ ರೀತಿ 525 ಸಿಜೆರಿನ್ ಮಾಡಲಾಗಿದೆ. ವೈದ್ಯರಿಲ್ಲದ ಕಾರಣ ಗರ್ಭಿಣಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರಿ ಆಸ್ಪತ್ರೆಗೆ ಬಡವರೇ ಬರುತ್ತಾರೆ. ದುಡ್ಡು ಇದ್ದರೆ ನಾವು ಇಲ್ಲಿ ಯಾಕೆ ಬರುತ್ತೆವೆ. ವೈದ್ಯರು ಇಲ್ಲದಿದ್ದರೆ ಆಸ್ಪತ್ರೆ ಯಾಕೆ ಇಡಬೇಕೆಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Shivamogga: ಆಸ್ಪತ್ರೆಯಲ್ಲಿ ಕೊಟ್ಟ ಇಂಜೆಕ್ಷನ್​ನಿಂದ 14 ಮಕ್ಕಳು ದಿಢೀರ್​ ಅಸ್ವಸ್ಥ; ಸ್ಥಳಕ್ಕೆ ಶಾಸಕರ ದೌಡು


ಸರಕಾರ ಕೂಡಲೇ ಈ ಬಗ್ಗೆ ಎಚ್ಚರಿಕೆ ವಹಿಸಿ ಕೊರತೆವಿರುವ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರ ಕೊರತೆ ನಿಗಿಸಿ ರೋಗಿಗಳ ಹೀತ ಕಾಪಾಡಬೇಕಿದೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು