HOME » NEWS » State » PREGNANT WOMEN DELIVERY IN YADGIRI GOVERNMENT HOSPITAL GNR

ಮಳೆಯಿಂದ ಸೋರುತ್ತಿರುವ ಯಾದಗಿರಿ ಸರ್ಕಾರಿ ಆಸ್ಪತ್ರೆ - ಟಾರ್ಪಲಿನ್​​ ಹೊದಿಸಿ ಗರ್ಭಿಣಿಗೆ ಹೆರಿಗೆ ಮಾಡಿದ ಸಿಬ್ಬಂದಿ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ಜರುಗಿದೆ. ಸಗರ ಗ್ರಾಮದ ಪಿಂಜಾರದೊಡ್ಡಿಯ ನಿವಾಸಿ ಚಾಂದ್ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಶಹಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಅನಿವಾರ್ಯವಾಗಿ ಗ್ರಾಮದ ಸರಕಾರಿ ಆಸ್ಪತ್ರೆಗೆ ಆಟೋದಲ್ಲಿ ಕರೆದುಕೊಂಡು ಹೋಗಲಾಗಿತ್ತು.

news18-kannada
Updated:August 17, 2020, 2:44 PM IST
ಮಳೆಯಿಂದ ಸೋರುತ್ತಿರುವ ಯಾದಗಿರಿ ಸರ್ಕಾರಿ ಆಸ್ಪತ್ರೆ - ಟಾರ್ಪಲಿನ್​​ ಹೊದಿಸಿ ಗರ್ಭಿಣಿಗೆ ಹೆರಿಗೆ ಮಾಡಿದ ಸಿಬ್ಬಂದಿ
ತಾಯಿ ಮಗು
  • Share this:
ಯಾದಗಿರಿ(ಆ.17): ಭಾರೀ ಮಳೆಗೆ ಪ್ರಾಥಮಿಕ ಆರೋಗ್ಯ ಕೇಂದ್ರವು ಕಳೆದ ಐದು ದಿನದಿಂದ ಸೋರುತ್ತಿದೆ. ಆಸ್ಪತ್ರೆ ಆವರಣ ಹಾಗೂ ಆಸ್ಪತ್ರೆ ಕೋಣೆಯಲ್ಲಿ ನೀರು ಸಂಗ್ರಹಗೊಂಡಿವೆ. ಹೀಗಾಗಿ ಸೋರುತ್ತಿರುವ ಆಸ್ಪತ್ರೆಯಲ್ಲಿ ದಾಖಲಾದ ಗರ್ಭಿಣಿಯ ಹೆರಿಗೆಯನ್ನು ಟಾರ್ಪಲಿನ್ ರಕ್ಷಣೆಯೊಂದಿಗೆ ಆಸ್ಪತ್ರೆ ಸಿಬ್ಬಂದಿಗಳು ಹೆರಿಗೆ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ಜರುಗಿದೆ. ಸಗರ ಗ್ರಾಮದ ಪಿಂಜಾರದೊಡ್ಡಿಯ ನಿವಾಸಿ ಚಾಂದ್ ಬಿ ಎಂಬುವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಶಹಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗಿರಲಿಲ್ಲ. ಅನಿವಾರ್ಯವಾಗಿ ಗ್ರಾಮದ ಸರಕಾರಿ ಆಸ್ಪತ್ರೆಗೆ ಆಟೋದಲ್ಲಿ ಕರೆದುಕೊಂಡು ಹೋಗಲಾಗಿತ್ತು. ಆದರೆ, ಆಸ್ಪತ್ರೆ ಕೊಣೆಯ ಮೇಲ್ಛಾವಣಿಯು ಹಾಳಾದ ಹಿನ್ನೆಲೆಯಲ್ಲಿ ನೀರು ಸೋರುತಿತ್ತು. ಈ ವೇಳೆ ಆಸ್ಪತ್ರೆ ಸಿಬ್ಬಂದಿಗಳು ಕೂಡ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಹೆರಿಗೆ ಮಾಡುವುದು ಕಷ್ಟಕರವಾಗಿತ್ತು.

ಆದರೆ, ಗರ್ಭಿಣಿ ನರಳಾಟ ಅರಿತು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡ ಸಿಬ್ಬಂದಿಗಳು ಸೋರುತ್ತಿರುವ ದುಸ್ಥಿತಿಯಲ್ಲಿಯೇ ತಾತ್ಕಾಲಿಕವಾಗಿ ಟಾರ್ಪಲಿನ್ ಹಿಡಿದು ನೀರು ಬೀಳದಂತೆ ನೋಡಿಕೊಂಡು ಕಾಳಜಿಯಿಂದ ಹೆರಿಗೆ ಮಾಡಿದ್ದಾರೆ. ಈಗ ಗರ್ಭಿಣಿ ತಾಯಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಬಾಣಂತಿಗೆ ಚಿಕಿತ್ಸೆ ನೀಡಿ ಕೂಡಲೇ ಬಾಣಂತಿ ಹಾಗೂ ಮಗುವಿಗೆ ಮನೆಗೆ ವ್ಯಾಪಾಸ ಕಳುಹಿಸುವ ಕಾರ್ಯ ಮಾಡಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಬಾಣಂತಿ ಚಿಕ್ಕಪ್ಪ ರಂಜಾನ್ ಮಾತನಾಡಿ, ಆಸ್ಪತ್ರೆಯಲ್ಲಿ ನೀರು ಸೋರುತ್ತಿವೆ ಯಾವುದೇ ದುರಸ್ತಿ ಮಾಡಿಲ್ಲ. ಇದರಿಂದ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ಪರಿಹಾರ ಕಲ್ಪಿಸಬೇಕಾಗಿದೆ ಎಂದರು.

ಇದನ್ನೂ ಓದಿ: ಡಿ.ಜೆ ಹಳ್ಳಿ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಸಂಬಂಧ ಸಿಎಂ ಸಭೆ: ಮಹತ್ವದ ನಿರ್ಧಾರಗಳು ಕೈಗೊಂಡ ಯಡಿಯೂರಪ್ಪ

ಆಸ್ಪತ್ರೆಯು ಸೋರುತ್ತಿರುವ ಹಿನ್ನೆಲೆ ಆಸ್ಪತ್ರೆಯಲ್ಲಿನ ವಸ್ತುಗಳು ಹಾಗೂ ಯಂತ್ರಗಳು ಹಾಳಾಗಲಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ಇದ್ದರು ಯಾವುದೇ ಕ್ರಮಕೈಗೊಂಡಿಲ್ಲ ಎಂದರು. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಟಿಎಚ್​ಓ ಅವರೊಂದಿಗೆ ಮಾತನಾಡಿ ನೀರು ಸೋರದಂತೆ ಕ್ರಮಕೈಗೊಳ್ಳಲಾಗುತ್ತದೆ ಎಂದರು.
Youtube Video
ನಿರಂತರವಾಗಿ ಆಸ್ಪತ್ರೆ ಸೋರುತ್ತಿರುವ ಹಿನ್ನೆಲೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿಲ್ಲ‌.ಕೇವಲ ಓಪಿಡಿ ವ್ಯವಸ್ಥೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೋರುತ್ತಿರುವ ಆಸ್ಪತ್ರೆಯ ಸಮಸ್ಯೆ ನಿಗಿಸುವ ಕಾರ್ಯ ಮಾಡಬೇಕಿದೆ.
Published by: Ganesh Nachikethu
First published: August 17, 2020, 2:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories