ಕಲಬುರ್ಗಿ (ಫೆ.18) : ಟಂ ಟಂ ಚಾಲಕ ಮಾಡಿದ ಸಣ್ಣ ಎಡವಟ್ಟಿನಿಂದ ತುಂಬು ಗರ್ಭಿಣಿಯೋರ್ವಳು ಸಾವನ್ನಪ್ಪಿದ ಘಟನೆ ಕಲಬುರ್ಗಿ ತಾಲೂಕಿನ ಔರಾದ್ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಸಾವನ್ನಪ್ಪಿದ ಪ್ರಿಯಾಂಕ(25) ಭೂಸಣಗಿ ಗ್ರಾಮದ ನಿವಾಸಿ ಎನ್ನಲಾಗುತ್ತಿದೆ.
ಪ್ರಿಯಾಂಕ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೋಡ್ ಹಾಗು ಹೆಂಡತಿ ಜಯಶ್ರೀ, ತಮ್ಮ ಕಾರಿನಲ್ಲಿಯೇ ಗಾಯಾಳು ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದ ಕಾರಣ ಪ್ರಿಯಾಂಕ ಅಸುನೀಗಿದ್ದಾಳೆ.
ಭೂಸಣಗಿ ಗ್ರಾಮದಿಂದ ಔರಾದ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೊಟೀನ್ ಚೆಕ್ ಅಪ್ ಗಾಗಿ ಗರ್ಭಿಣಿ ಮಹಿಳೆಯರು ಬಂದಿದ್ದರು. ಚೆಕ್ ಅಪ್ ಮುಗಿದ ಮೇಲೆ ವಾಪಸ್ ಗ್ರಾಮಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಅಡ್ಡಲಾಗಿ ಬಂದ ಆಕಳನ್ನು ತಪ್ಪಿಸಲು ಹೋಗಿ ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾನೆ. ವೇಗದಲ್ಲಿ ಸಾಗುತ್ತಿದ್ದ ಟಂ ಟಂ ಮೂರು-ನಾಲ್ಕು ಪಲ್ಟಿಯಾಗಿದೆ. ಅದರಲ್ಲಿದ್ದ ಗರ್ಭಿಣಿ ಮಹಿಳೆಯರಿಗೆ ತೀವ್ರ ಪೆಟ್ಟುಗಳಾಗಿವೆ.
ಇದನ್ನೂ ಓದಿ :
ಅಶೋಕ್ ಹೆಸರು ಹೇಳಿ ತುರ್ತಾಗಿ ಪೋಸ್ಟ್ ಮಾರ್ಟಂ ಮಾಡಿಸಿದರು: ಡಾ. ಮಹಾಂತೇಶ್
ಟಂ ಟಂನಲ್ಲಿ ಗರ್ಭಿಣಿಯರ ಜೊತೆಗೆ ಇತರೆ ಪ್ರಯಾಣಿಕರೂ ಇದ್ದರು. ಗರ್ಭಿಣಿಯರಿಗೆ ಗಂಭೀರ ಗಾಯಗಳಾಗಿದ್ದು, ಇತರರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ