Mandya: 6 ತಿಂಗಳ ಗರ್ಭಿಣಿ ಆತ್ಮಹತ್ಯೆ; ಕಾರಣ ಮಾತ್ರ ಕ್ಷುಲ್ಲಕ

ಇನ್ನು ಮೇಘನಾಳ ಸಾವಿಗೆ ಇಡೀ ಗ್ರಾಮಕ್ಕೆ ಗ್ರಾಮವೇ ದುಃಖದ ಮಡುವಿನಲ್ಲಿದೆ. ಇನ್ನ ಎರಡು ಮೂರು ತಿಂಗಳು ಕಳೆದಿದ್ದರೆ ಮೇಘನಾಳಿಗೆ ಪ್ರಸವವಾಗ್ತಿತ್ತು. ಅಷ್ಟರಲ್ಲಿ ಈ ರೀತಿ ದುಡುಕಿನ ನಿರ್ಧಾರ ಮಾಡಿಬಿಟ್ಟಿದ್ದಾಳೆ ಅಂತ ಡಿಂಕಾ ಗ್ರಾಮದ ಜನ ಮರುಗಿದ್ದಾರೆ.

ಮೇಘನಾ

ಮೇಘನಾ

  • Share this:
6 ತಿಂಗಳ ತುಂಬು ಗರ್ಭಿಣಿ (Pregnant) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತ ದುರ್ಘಟನೆ ಸಕ್ಕರೆ ನಾಡು ಮಂಡ್ಯದ ಡಿಂಕಾ (Dinka Village, Mandya) ಗ್ರಾಮದಲ್ಲಿ ನಡೆದಿದೆ. 20 ವರ್ಷದ ಮೇಘನಾ ಎಂಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಕಾರಣ ಮಾತ್ರ ಕ್ಷುಲ್ಲಕ. ಹೌದು.. ಡಿಂಕಾ ಗ್ರಾಮದ ಮೇಘನಾ ಎಂಬ ಗೃಹಿಣಿ ಶುಕ್ರವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ ಮನೆಯವರು ಮತ್ತು ಮೇಘನಾ ಜೊತೆ ಸಣ್ಣ ಜಗಳವಾಗಿತ್ತು ಎಂದು ಹೇಳಲಾಗ್ತಿದೆ. ಇದೆ ಕಾರಣಕ್ಕೆ‌ ಮೇಘನಾ ತನ್ನ ಬದುಕಿನ ಪಯಣವನ್ನ ಮುಗಿಸಿದ್ದಾಳೆ.

ಮಂಡ್ಯದ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿ ಗ್ರಾಮದ ಮೇಘನಾರಿಗೆ ತಂದೆ ತಾಯಿ ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಸಂಬಂಧಿಕರ ಅರೈಕೆಯಲ್ಲಿ ಮೇಘನಾ ಬೆಳೆದಿದ್ದರು. ಮೂರು ವರ್ಷಗಳ ಹಿಂದೆ ಡಿಂಕಾ ಗ್ರಾಮದ ರಮೇಶ್ ಎಂಬುವವರಿಗೆ ಮೇಘಾನಳನ್ನ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಒಂದು ಗಂಡು  ಮಗು ಕೂಡ ಆಗಿದ್ದು, ಈಗ ಮತ್ತೆ ಆರು ತಿಂಗಳ ಗರ್ಭಿಣಿಯಾಗಿದ್ರು.

ಜಗತ್ತು ಕಾಣಬೇಕಿದ್ದ ಮಗು!

ಆದ್ರೆ ಕೌಟುಂಬಿಕ ಕಲಹದ ಹಿನ್ನೆಲೆ ತಾನು ಸಾಯುವುದರ ಜೊತೆಗೆ ಪ್ರಪಂಚವನ್ನೆ ನೋಡದೆ ಹೊಟ್ಟೆಯಲ್ಲಿದ್ದ ಮಗುವನ್ನ ಕೂಡ ಸಾಯಿಸಿದ್ದಾರೆ.

ಇದನ್ನೂ ಓದಿ:  Snails: ಈ ಊರಿನಲ್ಲಿ ಎಲ್ಲಿ ನೋಡಿದ್ರೂ ಶಂಖದ ಹುಳುಗಳು; ಇವುಗಳ ಉಪಟಳಕ್ಕೆ ಬೇಸತ್ತ ದೇವಿನಗರದ ನಿವಾಸಿಗಳು

ಇನ್ನು ಮೇಘನಾಳ ಸಾವಿಗೆ ಇಡೀ ಗ್ರಾಮಕ್ಕೆ ಗ್ರಾಮವೇ ದುಃಖದ ಮಡುವಿನಲ್ಲಿದೆ. ಇನ್ನ ಎರಡು ಮೂರು ತಿಂಗಳು ಕಳೆದಿದ್ದರೆ ಮೇಘನಾಳಿಗೆ ಪ್ರಸವವಾಗ್ತಿತ್ತು. ಅಷ್ಟರಲ್ಲಿ ಈ ರೀತಿ ದುಡುಕಿನ ನಿರ್ಧಾರ ಮಾಡಿಬಿಟ್ಟಿದ್ದಾಳೆ ಅಂತ ಡಿಂಕಾ ಗ್ರಾಮದ ಜನ ಮರುಗಿದ್ದಾರೆ.

ಅಸಹಜ ಸಾವು ಪ್ರಕರಣ

ಸದ್ಯ ಮೇಘನಾ ಮೃತದೇಹ ಪಾಂಡವಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಶವ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯ್ತು. ಈ ಬಗ್ಗೆ ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗರ್ಭಿಣಿಯರಿಗೆ ಹಾರ್ಮೋನ್ ವ್ಯತ್ಯಾಸ

ಇನ್ನು ಗರ್ಭಿಣಿಯರಿಗೆ ಹಾರ್ಮೋನ್ ವ್ಯತ್ಯಾಸದಿಂದ ಕೋಪ ಬರುವುದು ಸಹಜ. ಸಣ್ಣ ಸಣ್ಣ ವಿಚಾರಕ್ಕೆ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವ ಸಾಧ್ಯತೆ ಇರತ್ತೆ. ಇದು ಕೆಲವು ಮಹಿಳೆಯರಲ್ಲಿ ಕಂಡು ಬರುವುದು ಸಹಜ. ಹೀಗಾಗಿ ಗರ್ಭಾವಸ್ಥೆ ಸಂದರ್ಭದಲ್ಲಿ ಗರ್ಭಿಣಿಯರನ್ನ ಸೂಕ್ಷ್ಮವಾಗಿ ನೋಡಿಕೊಳ್ಳಬೇಕು ಎಂದು ಸ್ತ್ರೀ ತಜ್ಞೆ ವಸುಮತಿ ಅವರು ಅಭಿಪ್ರಾಯವಾಗಿದೆ.

ನಾಲೆಯಲ್ಲಿ ತೇಲಿ ಬಂದ ಅರ್ಧ ಕತ್ತರಿಸಿದ ಮಹಿಳೆಯರ ಮೃತದೇಹ

ಮಂಡ್ಯ ಜಿಲ್ಲೆಯ ಎರಡು ಕಡೆ ಹೊಟ್ಟೆ ಭಾಗದಿಂದ ಕೆಳಗೆ ಕತ್ತರಿಸಿರುವ ಇಬ್ಬರು ಮಹಿಳೆಯರ ಮೃತದೇಹಗಳು (Woman Deadbody) ನಾಲೆಯಲ್ಲಿ (Canal) ತೇಲಿ ಬಂದಿವೆ. ಇಷ್ಟು ಭಯಾನಕ ಕೊಲೆ ಕಂಡ  ಜನರು ಬೆಚ್ಚಿಬಿದ್ದಿದ್ದಾರೆ. ಇಬ್ಬರು ಮಹಿಳೆಯರ ಗುರುತು (Deadbody Identity) ಪತ್ತೆಯಾಗಿಲ್ಲ. ಹೊಟ್ಟೆ ಭಾಗದಿಂದ ಕೆಳಗೆ ಕತ್ತರಿಸಿದ ದೇಹದ ಭಾಗವನ್ನು ಚೀಲದಲ್ಲಿ ಕಟ್ಟಿ ನಾಲೆಯಲ್ಲಿ ತೇಲಿ ಬಿಡಲಾಗಿದೆ.

ಇದನ್ನೂ ಓದಿ:  Kuja Dosha: ಪ್ರೀತಿಸಿದವನ ಜೊತೆ ಮದುವೆಗೆ ಕುಜದೋಷವೇ ಅಡ್ಡಿಯಾಯ್ತು! ನೊಂದ ಲೇಡಿ ಕಾನ್ಸ್‌ಟೇಬಲ್ ಸಾವಿಗೆ ಶರಣು

ಬೇರೆ ಎಲ್ಲಿಯೋ ಕೊಲೆ ಮಾಡಿ, ಮೃತದೇಹವನ್ನು ಇಲ್ಲಿ ಬಂದು ಎಸೆದು ಹೋಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಮಂಡ್ಯ ಜಿಲ್ಲೆಯ ಪಾಂಡವಪುರ (Pandavapura) ಟೌನ್ ಪೊಲೀಸ್ ಹಾಗೂ ಶ್ರೀರಂಗಪಟ್ಟಣ (Srirangaptna) ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಮಹಿಳೆಯರ ಕತ್ತರಿಸಿದ ಮೃತದೇಹ ಪತ್ತೆಯಾಗಿದೆ.

ಸಿಡಿಎಸ್ ನಾಲೆಯಲ್ಲಿ ತೇಲಿಬಂದ ಶವ

ಪಾಂಡವಪುರ ತಾಲೂಕಿನ ಬೇಬಿ ಕೆರೆ- ಕೆ.ಬೆಟ್ಟಹಳ್ಳಿ ಮಾರ್ಗ ಮಧ್ಯೆದಲ್ಲಿರುವ ನಾಲೆಯಲ್ಲಿ ಸುಮಾರು 30 ರಿಂದ 35 ವರ್ಷದ ಮಹಿಳೆ ಶವ ಪತ್ತೆಯಾಗಿದೆ. ಶವದ ಆರ್ಧಭಾಗ ಮಾತ್ರ ಸಿಕ್ಕಿದೆ. ಇತ್ತ  ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಅರೆ ಕೆರೆ ಗ್ರಾಮದ ಬಳಿಯ ಸಿಡಿಎಸ್ ನಾಲೆಯಲ್ಲಿ‌ಯೂ ಶವ ತೇಲಿ ಬಂದಿದೆ.
Published by:Mahmadrafik K
First published: