ಮೈಸೂರು ದಸರಾ 2019: ದಸರಾ ಸಂಭ್ರಮದಿಂದ ಹೊರ ಬಿದ್ದ ತುಂಬು ಗರ್ಭಿಣಿ ವರಲಕ್ಷ್ಮೀ ಆನೆ

ದಸರಾದಲ್ಲಿ ಭಾಗಿಯಾಗಲು ಬಂದಿದ್ದ ಮೊದಲ ತಂಡದ 14 ಆನೆಗಳಲ್ಲಿ ಈಗಾಗಲೇ 2 ಆನೆಗಳು ಈ ಸಂಭ್ರಮದಿಂದ ಹೊರಬಿದ್ದಿದೆ.

Seema.R | news18-kannada
Updated:September 20, 2019, 10:42 AM IST
ಮೈಸೂರು ದಸರಾ 2019: ದಸರಾ ಸಂಭ್ರಮದಿಂದ ಹೊರ ಬಿದ್ದ ತುಂಬು ಗರ್ಭಿಣಿ ವರಲಕ್ಷ್ಮೀ   ಆನೆ
ಕಾಡಿಗೆ ಮರಳುತ್ತಿರುವ ವರಲಕ್ಷ್ಮೀ ಆನೆ
  • Share this:
ಮೈಸೂರು (ಸೆ.20): ಜಂಬೂಸಾವರಿಯಲ್ಲಿ ಭಾಗಿಯಾಗಲು ಬಂದಿದ್ದ ವರಲಕ್ಷ್ಮೀ ಆನೆ ತುಂಬು ಗರ್ಭಿಣಿಯಾಗಿದ್ದು, ಅದಕ್ಕೆ ವಿಶ್ರಾಂತಿ ಅವಶ್ಯಕತೆ ಇರುವ ಹಿನ್ನೆಲೆ ಕಾಡಿಗೆ ವಾಪಸ್ಸು ಕಳುಹಿಸಲಾಗಿದೆ.

ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದ ವರಲಕ್ಷ್ಮೀ ಗರ್ಭಿಣಿಯಾದ ವಿಷಯ ತಿಳಿದೇ ಉತ್ಸವಕ್ಕೆ ಕರೆತರಲಾಗಿತ್ತು. ಈ ಹಿಂದೆಯಲ್ಲ ದಸರಾ ಸಂಭ್ರಮದಲ್ಲಿ ಭಾಗಿಯಾದ ಅನುಭವದ ಹಿನ್ನೆಲೆ ಅದನ್ನು ಕರೆತರಲಾಗಿತ್ತು. ಆದರೆ, ಆನೆ ತುಂಬು ಗರ್ಭಿಣಿಯಾಗಿರುವ ಹಿನ್ನೆಲೆ ಅದನ್ನು ಶಿಬಿರಕ್ಕೆ ಕಳುಹಿಸುವ ಬಗ್ಗೆ ಹಿರಿಯ ಅಧಿಕಾರಿಗಳು ಚಿಂತನೆ ನಡೆಸಿದ್ದರು.

ಜಂಬೂ ಸವಾರಿಗೆ ಇನ್ನೇನು ಬೆರಳೆಣಿಕೆಯ ದಿನವಿರುವಾಗ ವರಲಕ್ಷ್ಮೀ ಆನೆಯನ್ನು ಉತ್ಸವದಿಂದ ಕೈ ಬಿಡಲಾಗಿದೆ, ಇಂದು ಅಧಿಕಾರಿಗಳ ಸಲಹೆ ಮೇರೆಗೆ ಅರಮನೆಯಿಂದ ಆನೆಯನ್ನು ಶಿಬಿರಕ್ಕೆ ಕಳುಹಿಸಲಾಗಿದೆ.

ಈಶ್ವರ ಕೂಡ ಕಾಡಿಗೆ

ದುಬಾರೆ ಆನೆ ಶಿಬಿರದಿಂದ ಮೊದಲ ಬಾರಿ ದಸರಾ ಸಂಭ್ರಮದಲ್ಲಿ ಭಾಗಿಯಾಗಲು ಬಂದಿದ್ದ ಈಶ್ವರನನ್ನು ಕೂಡ ಈಗಾಗಲೇ ಕಾಡಿಗೆ ಕಳುಹಿಸಲಾಗಿದೆ. ಅರಮನೆಗೆ ಕರೆತಂದು ವಾರವಾದರೂ ಈಶ್ವರ ನಗರದ ವಾತಾವರಣಕ್ಕೆ ಹೊಂದಿಕೊಂಡಿರಲಿಲ್ಲ

ಇದನ್ನು ಓದಿ: ದಸರಾ ಉದ್ಘಾಟಕರಾಗಿ ಸಾಹಿತಿ ಎಸ್​.ಎಲ್​.ಭೈರಪ್ಪ ಅವರಿಗೆ ಸರ್ಕಾರದಿಂದ ಅಧಿಕೃತ ಆಹ್ವಾನ

ಮೆರವಣಿಗೆ ವೇಳೆಯೂ ಸಾಕಷ್ಟು ಗಾಬರಿಗೆ ಒಳಗಾಗುತ್ತಿದ್ದ ಈಶ್ವರ, ಒಂದು ವಾರ ವಾದರೂ ಹೊಂದಿಕೊಳ್ಳದ ಹಿನ್ನೆಲೆ ಅವನನ್ನು ಈಗಾಗಲೇ ಕಾಡಿಗೆ ಕಳುಹಿಸಲಾಗಿತ್ತು.ದಸರಾದಲ್ಲಿ ಭಾಗಿಯಾಗಲು ಬಂದಿದ್ದ ಮೊದಲ ತಂಡದ 14 ಆನೆಗಳಲ್ಲಿ ಈಗಾಗಲೇ 2 ಆನೆಗಳು ಈ ಸಂಭ್ರಮದಿಂದ ಹೊರಬಿದ್ದಿದೆ.

First published:September 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ