ಬಸ್‌ನಲ್ಲಿ ಬಂದು ನರ್ಸ್ ಹೆರಿಗೆ ಮಾಡಿಸಿಬೇಕಾಯಿತು ; ಬಿಜೆಪಿ ಶಾಸಕರ ತವರೂರಲ್ಲಿಯೇ ಇಂಥ ದುಸ್ಥಿತಿ

ಅಥಣಿ ಶಾಸಕ ಮಹೇಶ್ ಕುಮಟಳ್ಳಿಯವರ ಸ್ವಗ್ರಾಮ ತೆಲಸಂಗ ಗ್ರಾಮ ತೆಲಸಂಗ ಗ್ರಾಮದಿಂದ ಅಥಣಿ ತಾಲೂಕು ಕೇಂದ್ರ ಆಸ್ಪತ್ರೆಗೆ ಬರಬೇಕು ಅಂದ್ರೆ ಸುಮಾರು 30 ಕಿ. ಮೀ ದೂರ ಬರಬೇಕು. 

G Hareeshkumar | news18-kannada
Updated:December 30, 2019, 4:28 PM IST
ಬಸ್‌ನಲ್ಲಿ ಬಂದು ನರ್ಸ್ ಹೆರಿಗೆ ಮಾಡಿಸಿಬೇಕಾಯಿತು ; ಬಿಜೆಪಿ ಶಾಸಕರ ತವರೂರಲ್ಲಿಯೇ ಇಂಥ ದುಸ್ಥಿತಿ
ತೆಲಸಂಗ ಸರ್ಕಾರಿ ಆಸ್ಪತ್ರೆ
  • Share this:
ಚಿಕ್ಕೋಡಿ(ಡಿ.30): ಹೆರಿಗೆ ನೋವಿನಿಂದ ನರಳುತ್ತಾ ಗಂಟೆಗೂ ಅಧಿಕ ಸಮಯ ಗರ್ಭಿಣಿಯೊಬ್ಬಳು ವೈದ್ಯರಿಗಾಗಿ ಕಾದು ಯಾತನೆ ಅನುಭವಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ನಿನ್ನೆ(ಭಾನುವಾರ) ಸಂಜೆ ಸಮೀಪದ ಐಗಳಿ ಗ್ರಾಮದಿಂದ ತೆಲಸಂಗ ಸರ್ಕಾರಿ ಆಸ್ಪತ್ರೆಗೆ ಕಲಾವತಿ ಗೋಪಾಲ ಬಾಳಪ್ಪಗೋಳ ಹೆರಿಗೆ ನೋವಿನಿಂದ ನರಳುತ್ತಾ ಆಸ್ಪತ್ರೆಗೆ ಬಂದಿದ್ದರು.ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಇರಬೇಕು. ಆದರೆ, ಭಾನುವಾರ ರಜೆ ಇದ್ದ ಕಾರಣ ಆಸ್ಪತ್ರೆಯಲ್ಲಿ ಸಿಪಾಯಿ ಒಬ್ಬರನ್ನ ಬಿಟ್ಟು ಯಾರೂ ಇರಲಿಲ್ಲ. ಹೀಗಾಗಿ ಮಹಿಳೆ ಹೆರಿಗೆ ನೋವಿನಿಂದ ಆಸ್ಪತ್ರೆಯಲ್ಲಿ ನೆಲದ ಮೇಲೆಯೇ ಬಿದ್ದು ಒದ್ದಾಡಿದ್ದಾರೆ. ಆಸ್ಪತ್ರೆಯಲ್ಲಿದ್ದ ಸಿಪಾಯಿ ವೈದ್ಯರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ.

ಇನ್ನು ಹೆರಿಗೆ ನೋವು ಕ್ಷಣ ಕ್ಷಣಕ್ಕೂ ಹೆಚ್ಚುತ್ತಾ ಹೋಗಿದೆ. ಮಹಿಳೆಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಸುಮಾರು 1 ಗಂಟೆಯ ನಂತರ 20 ಕಿ.ಮೀ ದೂರದ ತಿಕೋಟಾ ಗ್ರಾಮದಲ್ಲಿದ್ದ ಸ್ಟಾಫ್ ನರ್ಸ್ ಬಸ್ಸಿನಲ್ಲಿ ಆಸ್ಪತ್ರೆಗೆ ಆಗಮಸಿ 10 ನಿಮಿಷದಲ್ಲಿ ಹೆರಿಗೆ ಮಾಡಿಸಿದ್ದಾರೆ.

ಸಿಬ್ಬಂದಿ ಕಡಿತ ಮಾಡಿರುವ ಸರ್ಕಾರ

ದಿನದ 24 ಗಂಟೆ ಹೆರಿಗೆ ಆಸ್ಪತ್ರೆ ಇದಾಗಿದ್ದರೂ ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಟಾಫ್ ನರ್ಸ್ ಕೊಟ್ಟಿಲ್ಲ. 4 ಜನ ಕೆಲಸ ಮಾಡುವ ಸ್ಥಳದಲ್ಲಿ ಕೇವಲ ಇಬ್ಬರು ಕೆಲಸ ನಿರ್ವಹಿಸುತ್ತಿದ್ದಾರೆ. ಒಬ್ಬರು ರಾತ್ರಿ ಇನ್ನೊಬ್ಬರು ಹಗಲು ಕೆಲಸ ಮಾಡುತ್ತಿದ್ದಾರೆ. ಇವರು ಪ್ರತಿ ಭಾನುವಾರ ಸಿಫ್ಟ್ ಬದಲಾಯಿಸಿಕೊಳ್ಳುತ್ತಾರೆ. ಹೀಗಾಗಿ ರವಿವಾರ ಯಾರೂ ಆಸ್ಪತ್ರೆಗೆ ಆಗಮಿಸಿರಲಿಲ್ಲ.

ಇನ್ನು ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಹೆರಿಗೆ ಪ್ರಮಾಣದ ಕಡಿಯಾಗಿದೆ ಹಾಗಾಗಿ ಆಯಾ ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನ ತಾಲೂಕಾ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡುತ್ತಿದೆ ಪರಿಣಾಮ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಿಬ್ಬಂದಿ ಕೊರತೆಯಿಂದ ಗುಣಮಟ್ಟದ ಸೇವೆ ನೀಡುವಲ್ಲಿ ಹಿಂದೆ ಉಳಿಯುತ್ತಿವೆ

ಶಾಸಕರ ಸ್ವಗ್ರಾಮದಲಿಲ್ಲ ಗುಣಮಟ್ಟದ ಚಿಕಿತ್ಸೆಇನ್ನು ಅಥಣಿ ಶಾಸಕ ಮಹೇಶ್ ಕುಮಟಳ್ಳಿಯವರ ಸ್ವಗ್ರಾಮ ತೆಲಸಂಗ ಗ್ರಾಮ ತೆಲಸಂಗ ಗ್ರಾಮದಿಂದ ಅಥಣಿ ತಾಲೂಕು ಕೇಂದ್ರ ಆಸ್ಪತ್ರೆಗೆ ಬರಬೇಕು ಅಂದ್ರೆ ಸುಮಾರು 30 ಕಿ. ಮೀ ದೂರ ಬರಬೇಕು. ಸರಿಯಾದ ರಸ್ತೆ ಇಲ್ಲದೆ ಗರ್ಭಿಣಿಯರು ತಾಲೂಕು ಕೇಂದ್ರದ ಆಸ್ಪತ್ರೆಗೆ ಬರಬೇಕು ಅಂದ್ರೆ ನರಕದ ಹಾದಿಯೆ ಸರಿ. ಇರೋ ಆಸ್ಪತ್ರೆಯಲ್ಲಿ ಸರಿಯಾದ ಸಿಬ್ಬಂದಿ ಒದಗಿಸಿದರೆ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯ ಶಾಸಕರ ಕ್ಷೇತ್ರದಲ್ಲಿ ಸಿಬ್ಬಂದಿ ಕೊರತೆ ಆದ್ರೆ ಬೇರೆ ಆಸ್ಪತ್ರೆಗಳ ಕಥೆ ಏನು ಅಂತಾರೆ ಇಲ್ಲಿನ ಜನರು.

ಇದನ್ನೂ ಓದಿ : ಕೆಪಿಸಿಸಿ ಅಧ್ಯಕ್ಷ ಪಟ್ಟ ತಾನಾಗಿಯೇ ಒಲಿದು ಬಂದರೆ ನಿರ್ವಹಿಸುತ್ತೇನೆ : ಮುದ್ದಹನುಮೇಗೌಡ

ಇನ್ನಾದರೂ ಕ್ಷೇತ್ರದ ಶಾಸಕರು, ಅಧಿಕಾರಿಗಳು ಎಚ್ಚೆತ್ತುಕೊಂಡು ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ.

(ವರದಿ : ಲೋಹಿತ್​ ಶಿರೋಳ)
First published:December 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ