ವೈದ್ಯರಿಲ್ಲದೆ ಬಾಣಂತಿ ನರಳಾಟ, ಮಾನವೀಯತೆ ಮರೆತ ವೈದ್ಯರು!


Updated:July 28, 2018, 3:20 PM IST
ವೈದ್ಯರಿಲ್ಲದೆ ಬಾಣಂತಿ ನರಳಾಟ, ಮಾನವೀಯತೆ ಮರೆತ ವೈದ್ಯರು!
  • Share this:
ರಾಚಪ್ಪ ಬನ್ನಿದಿನ್ನಿ, ನ್ಯೂಸ್​ 18 ಕನ್ನಡ

ಬಾಗಲಕೋಟೆ(ಜು.28): ಬಾದಾಮಿ ಶಾಸಕ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲೇ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರಾತ್ರಿಯಿಡಿ ಬಾಣಂತಿ-ಮಗು ಬಳಲಿರೋ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.ಹೊಸೂರ ಗ್ರಾಮದ ಸಾವಿತ್ರಿ ಎಂಬುವವರು ನಿನ್ನೆ ಮಧ್ಯಾಹ್ನ ಆಟೋ ಮೂಲಕ ಆಸ್ಪತ್ರೆಗೆ ಬರುವಾಗ ,ಆಟೋದಲ್ಲೆ ಹೆರಿಗೆಯಾಗಿದೆ‌. ಬಳಿಕ ಬೇಲೂರದಲ್ಲಿರೋ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಸಿದ್ದಾರೆ. ಆದರೆ ರಾತ್ರಿ ಇಲ್ಲಿನ ವೈದ್ಯರು, ನರ್ಸ್ ಗಳು ಸೂಕ್ತ ಚಿಕಿತ್ಸೆ ನೀಡಿಲ್ಲವೆಂದು ಆರೋಪಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ಇಡೀ ರಾತ್ರಿ ಚಿಕಿತ್ಸೆ ಇಲ್ಲದೆ ಬಾಣಂತಿ-ಮಗು ಆಸ್ಪತ್ರೆಯ ಲ್ಲಿ ಬಳಲಿದ್ದಾರೆ. ಅದೃಷ್ಟವಶಾತ್ ತಾಯಿ ಮಗು ಆರೋಗ್ಯವಾಗಿದ್ದಾರೆ.

ಇನ್ನು ಬಾಣಂತಿ ಸಂಬಂಧಿಗಳು ಆಸ್ಪತ್ರೆಯ ದುರಾವಸ್ಥೆಗೆ ಆಕ್ರೋಶವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯ ತೋರಿದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ದ ಶಿಸ್ತುಕ್ರಮಕ್ಕೆ ಕುಟುಂಬಸ್ಥರ ಆಗ್ರಹಿಸಿದ್ದಾರೆ. ಆದರೆ ತಾಲೂಕು ವೈದ್ಯಾಧಿಕಾರಿ ರೇವಣ ಸಿದ್ದಪ್ಪ, ಆಸ್ಪತ್ರೆಯಲ್ಲಿ ಸಂಜೆಯವರಗೂ ಚಿಕಿತ್ಸೆ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದು. ಸ್ಟಾಪ್ ನರ್ಸ್ ನಿರ್ಲಕ್ಷ್ಯ ತೋರದಂತೆ ತಾಕೀತು ಮಾಡಲಾಗಿದೆ. ಸದ್ಯ ಉಳಿದಂತೆ ಬಾಣಂತಿ-ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ..
First published: July 28, 2018, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading