• Home
  • »
  • News
  • »
  • state
  • »
  • Hassan: IIT ಜಾಗದ ವಿವಾದ; 'ಯಾರೋ ಒಬ್ಬರು ಹೇಳಿದಂತೆ ಸರ್ಕಾರ ನಡೆಸಲು ಆಗಲ್ಲ'- ಹೆಚ್​​ಡಿ ರೇವಣ್ಣಗೆ ಪ್ರೀತಂ ಗೌಡ ಟಾಂಕ್

Hassan: IIT ಜಾಗದ ವಿವಾದ; 'ಯಾರೋ ಒಬ್ಬರು ಹೇಳಿದಂತೆ ಸರ್ಕಾರ ನಡೆಸಲು ಆಗಲ್ಲ'- ಹೆಚ್​​ಡಿ ರೇವಣ್ಣಗೆ ಪ್ರೀತಂ ಗೌಡ ಟಾಂಕ್

ಶಾಸಕ ಪ್ರೀತಂ ಗೌಡ/ ಮಾಜಿ ಸಚಿವ ಹೆಚ್​​ಡಿ ರೇವಣ್ಣ

ಶಾಸಕ ಪ್ರೀತಂ ಗೌಡ/ ಮಾಜಿ ಸಚಿವ ಹೆಚ್​​ಡಿ ರೇವಣ್ಣ

ದೇವೇಗೌಡರ ಕನಸಿನಂತೆ ಐಐಟಿ ಸ್ಥಾಪಿಸುವ ಉದ್ದೇಶದಿಂದ ಮೀಸಲಿಟ್ಟಿದ್ದ ಜಾಗದ ಪರಭಾರೆಗೆ ಬಿಡೋದಿಲ್ಲ ಅಂತ ಹೆಚ್​ಡಿ ರೇವಣ್ಣ ಅವರು ಎಚ್ಚರಿಕೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ತಿರುಗೇಟು ನೀಡಿರುವ ಶಾಸಕ ಪ್ರೀತಂ ಗೌಡ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದ್ದಾರೆ.

  • Share this:

ಹಾಸನ: ಜಿಲ್ಲೆಗೆ ಐಐಟಿ (IIT)  ತರುವುದು ಮಾಜಿ ಪ್ರಧಾನಿ ದೇವೇಗೌಡ (HD Devegowda) ಅವರ ಕನಸು. ಇದಕ್ಕಾಗಿ 20 ವರ್ಷಗಳ ಹಿಂದಿಯೇ ಜಾಗವನ್ನು ಮೀಸಲಿಡಲಾಗಿದೆ. ಐಐಟಿಗೆ ಮೀಸಲಿಟ್ಟ ಜಾಗವನ್ನು ಖಾಸಗಿ ಅವರಿಗೆ ಪರಭಾರೆ ಮಾಡಲು ಈಗಿನ ಸರ್ಕಾರ ಮುಂದಾಗುತ್ತಿದೆ. ಯಾವುದೇ ಕಾರಣಕ್ಕೂ ಈ ರೀತಿ ಆಗಲು ಬಿಡೋದಿಲ್ಲ. ಒಂದೊಮ್ಮೆ ಸರ್ಕಾರ ಇಂತಹ ಪ್ರಕ್ರಿಯೆ ನಡೆಸಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದ ಮಾಜಿ ಸಚಿವ ಹೆಚ್​ಡಿ ರೇವಣ್ಣ (HD Revanna) ಅವರಿಗೆ ಬಿಜೆಪಿ ಶಾಸಕ ಪ್ರೀತಂ ಗೌಡ (Preetham Gowda) ಟಾಂಗ್​ ನೀಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಶಾಸಕ ಪ್ರೀತಂ ಗೌಡ, ದೇಶದಲ್ಲಿ ಐಐಟಿಗಳು ಎಷ್ಟಿರಬೇಕು ಎಂಬುವುದನ್ನು ತೀರ್ಮಾನ ಮಾಡುವುದು ಕೇಂದ್ರ ಸರ್ಕಾರ(Central Government), ಈಗಾಗಲೇ ರಾಜ್ಯಕ್ಕೆ ಒಂದು ಐಐಟಿ ಕೇಂದ್ರ ಕೂಟ್ಟಿದೆ. ಐಐಟಿ ಸ್ಥಾಪನೆ ಮಾಡಲು 260 ಎಕರೆ ಜಾಗ ಮಾತ್ರ ಬೇಕು. ಮೀಸಲಿಟ್ಟ ಜಾಗವನ್ನು ಹೊರತು ಪಡಿಸಿ ಉಳಿದ ಜಾಗವನ್ನು ಕೈಗಾರಿಕೋದ್ಯಮಗಳಿಗೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ತಿಳಿಸಿದ್ದಾರೆ.


ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಎಚ್ಚರಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಶಾಸಕ ಪ್ರೀತಂ ಗೌಡ, ಐಐಟಿ ನಿರ್ಮಾಣ ಮಾಡಲು ಬೇಕಾಗಿರುವುದು 260 ಎಕರೆ ಜಾಗ‌ ಮಾತ್ರ. ಅಷ್ಟು ಜಾಗ ಮೀಸಲಿಟ್ಟು ಉಳಿದ ಜಾಗವನ್ನು ಕೈಗಾರಿಕೋದ್ಯಮಗಳಿಗೆ ನೀಡುವ ನಿರ್ಧಾರವನ್ನ ಸರ್ಕಾರ ಮಾಡಿದೆ. ಭೂಮಿ ನೀಡಿರುವ ರೈತರಿಗೆ ಸೂಕ್ತ ಪರಿಹಾರ ವ್ಯವಸ್ಥೆ ಮಾಡಿದ್ದೀವಿ. ಯಾರೋ ಒಬ್ಬರು ಹೇಳಿದಂತೆ ಸರ್ಕಾರ ನಡೆಸಲು ಆಗೋದಿಲ್ಲ.


ಇದನ್ನೂ ಓದಿ: Hassan: ವಿಧಿ ಆಟ ಎಂತ ಘೋರ; ಅಂದು ಅಣ್ಣ-ಇಂದು ತಮ್ಮ, ಸಹೋದರನ ವರ್ಷದ ತಿಥಿಗೆ ಬರ್ತಿದ್ದ ತಮ್ಮ ಸಾವು


ದೇವೇಗೌಡರ ವಿಮಾನ ನಿಲ್ದಾಣ ನಿರ್ಮಿಸುವ ಕನಸನ್ನು ಮಕ್ಕಳಾದ ಹೆಚ್‌ಡಿ ಕುಮಾರಸ್ವಾಮಿ ಮತ್ತು ಹೆಚ್​ಡಿ ರೇವಣ್ಣ ಸರ್ಕಾರ ಇದ್ದಾಗ ನನಸು ಮಾಡಿರಲಿಲ್ಲ. ಬಿಜೆಪಿ ಮತ್ತು ಶಾಸಕನಾದ ನಾನು ದೇವೇಗೌಡರ ವಿಮಾನ ನಿಲ್ದಾಣದ ಕನಸು ನನಸು ಮಾಡಲು ಬರಬೇಕಿತ್ತು.


ಹಾಸನ ವಿಧಾಸಭಾ ಕ್ಷೇತ್ರದ ಜನರಿಗೆ ಭೂಸ್ವಾಧೀನ ಮಾಡಿದಾಗ ಸರಿಯಾದ ರೀತಿ ಪರಿಹಾರ ನೀಡಿಲ್ಲ. ಆದರೆ ರೇವಣ್ಣ ತಮ್ಮ ಭೂಮಿಗಳನ್ನ ಕ್ಲೀನಾಗಿ ಬೇಲಿ ಹಾಕಿಕೊಂಡು ಕಾಪಾಡಿಕೊಳ್ಳುತ್ತಾರೆ. ಬೇರೆ ರೈತರ ಅಥವಾ ಸಾರ್ವಜನಿಕ ಜಮೀನಿನನ್ನು ಸರ್ಕಾರಕ್ಕೆ ಸ್ವಾಧೀನಪಡಿಸಿಕೊಂಡರೆ ಪರಿಹಾರ ಮಾತ್ರ ಸರಿಯಾಗಿ ಕೊಡಿಸುವುದಿಲ್ಲ.
ಈಗ ರೇವಣ್ಣ ಐಐಟಿಗೆ ಮೀಸಲಿಟ್ಟ ಜಾಗದಲ್ಲಿ ಏನೂ ಮಾಡಬಾರದು ಎಂದರೆ ಹೇಗೆ? ನನ್ನ ಕ್ಷೇತ್ರದಲ್ಲಿ ಏನು ಮಾಡಬೇಕು ಅನ್ನೋದನ್ನು ಸರ್ಕಾರ ತೀರ್ಮಾನ ಮಾಡುತ್ತೆ.
260 ಎಕರೆ ಜಾಗ ಮಾತ್ರ ಐಐಟಿಗೆ ಸಾಕು. ಉಳಿದ ಜಾಗದಲ್ಲಿ ಕೈಗಾರಿಕಾ ವಲಯ ಹಾಗೂ ವಸತಿ ಯೋಜನೆ ಆಗಬೇಕು ಎಂದು ಪ್ರೀತಂ ಗೌಡ ಹೇಳಿದ್ದಾರೆ.


ಇನ್ನು, ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇವಣ್ಣ ಅವರು, ಯಾವುದೇ ಕಾರಣಕ್ಕೂ ಐಐಟಿಗೆ ಮೀಸಲಿಟ್ಟ ಜಾಗ ಬೇರೆಯ ಯೋಜನೆಗಳಿಗೆ ಬಳಸಬಾರದು. ಆ ರೀತಿ ಏನಾದರೂ ಮಾಡಿದರೆ ದೇವೇಗೌಡರೇ ಧರಣಿ ಮಾಡುತ್ತಾರೆ. ನಮ್ಮ ಜಿಲ್ಲೆ ಹಾಗೂ ಅಕ್ಕಪಕ್ಕದ ಎಲ್ಲಾ ಜಿಲ್ಲೆಗಳು ಈ ಸ್ಥಳ ಪ್ರಮುಖ ಕೇಂದ್ರವಾಗಿದೆ. ಆದ್ದರಿಂದಲೇ ನಾವು ಈ ಜಾಗವನ್ನು ನಾವು ಅಂದು ಐಐಟಿಗೆ ಮೀಸಲು ಇಟ್ಟಿದ್ದೇವು.


ಇದನ್ನೂ ಓದಿ: Karnataka Election 2023: ಬಿಎಸ್​​ವೈ ಜೊತೆ ಪ್ರಧಾನಿ ಮೋದಿ 1 ಗಂಟೆ ಮಾತುಕತೆ; ಮತ್ತೆ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಮಣೆ!


ದೇವೇಗೌಡರ ಕನಸಿನಂತೆ ಐಐಟಿ ಸೇರಿದಂತೆ ವಿವಿಧ ಯೋಜನೆಗಳನ್ನು ಅಲ್ಲಿಗೆ ಸ್ಥಾಪಿಸುವ ಉದ್ದೇಶವಿದೆ. ಆದ್ದರಿಂದ ಸರ್ಕಾರ ಈ ಪ್ರಸ್ತಾಪ ಕೈಬಿಡಬೇಕು. ಇನ್ನು ಮೂರು ತಿಂಗಳು ಸರ್ಕಾರದ ಅವಧಿ ಇದೆ, ಮುಂದೆ ಏನಾಗುತ್ತೆ ಕಾದು ನೋಡೋಣಾ. ಆದ್ದರಿಂದ ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದ್ದರು. ಸದ್ಯ ಪ್ರೀತಂ ಗೌಡ ಅವರು ಸುದ್ದಿಗೋಷ್ಠಿ ನಡೆಸಿ ಐಐಟಿ ಭೂಮಿಯ ವಿವಾದ ಬಗ್ಗೆ ಮಾತನಾಡಿರುವುದು ಹೊಸ ಕಿತ್ತಾಟಕ್ಕೆ ಎಡೆಮಾಡಿಕೊಟ್ಟಿದೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು