ಭವಿಷ್ಯ (Predictions) ಹೇಳುವುದರಲ್ಲೇ ಪ್ರಖ್ಯಾತಿ ಪಡೆದ ಹಾಸನ (Hassan) ಜಿಲ್ಲೆಯ ಕೋಡಿಮಠದ (Kodimatha) ಪೀಠಾಧ್ಯಕ್ಷ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದರು. ವಿಶ್ವದಾದ್ಯಂತ ಹೆಚ್ಚುತ್ತಿರುವ ಕೊರೊನಾ (Corona) ಸೋಂಕಿನ ಭೀತಿ, ಸಂಕ್ರಾಂತಿ ಭವಿಷ್ಯ (Sankranthi Predictions) ಸೇರಿದಂತೆ ಹಲವು ವಿಚಾರಗಳ ಬಗ್ಗೆ ಭವಿಷ್ಯ ನುಡಿದ ಇವರು ಈಬಾರಿ ಯಾರು ಗೆಲ್ಲುತ್ತಾರೆ ಎಂದು ಹೇಳಿದ್ದರು ಗೊತ್ತಾ? ಹಾಗಾದರೆ ಈ ಭವಿಷ್ಯ ನಿಜವಾಯ್ತಾ? ಸುಳ್ಳಾಯ್ತಾ? ಇಲ್ಲಿದೆ ಮಾಹಿತಿ
“ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಲ್ಲ, ಒಂದು ಪಕ್ಷಕ್ಕೆ ಮಾತ್ರ ಅಧಿಕಾರ” ಎಂದು ಈ ಹಿಂದೆ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ಇನ್ನು ಕರ್ನಾಟಕ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಬಗ್ಗೆಯೂ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಅಂದಿದ್ದಾರೆ.
ಒಲೆ ಹೊತ್ತಿ ಉರಿದರೆ ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು
ನಂತರ ಒಲೆ ಹೊತ್ತಿ ಉರಿದರೆ ಅಡುಗೆ ಆಗುತ್ತದೆ ಆದರೆ ಭೂಮಿ ಹೊತ್ತಿ ಉರಿದರೆ ಏನಾಬಹುದು ಎಂದು ಹೇಳುವ ಮೂಲಕ ಎಲ್ಲರಲ್ಲಿಯೂ ಗೊಂದಲ ಮೂಡಿಸಿದ್ದರು. ಅಲ್ಲದೇ ಈ ಬಗ್ಗೆ ಮುಂದೆ ಭವಿಷ್ಯದಲ್ಲಿ ಹೇಳುತ್ತೇವೆ ಎಂದು ತಮ್ಮ ಉತ್ತರವನ್ನು ಕಾಯ್ದಿರಿಸಿದ್ದರು. ಕೋಡಿ ಮಠ ಶ್ರೀಗಳ ಈ ಹೇಳಿಕೆ ಜನರ ಮನಸ್ಸಿನಲ್ಲಿ ಆತಂಕವನ್ನು ಸೃಷ್ಟಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ