ಉಪಚುನಾವಣಾ ಕಣದಂತೆ ರಂಗೇರಿದ ಶಿಕ್ಷಕರ ಕ್ಷೇತ್ರದ ಕದನ; ಕಾಂಗ್ರೆಸ್​​ನಿಂದ ಪ್ರವೀಣ್ ಪೀಟರ್ ನಾಮಪತ್ರ ಸಲ್ಲಿಕೆ

ಇನ್ನು ಅಕ್ಟೋಬರ್ 8 ಗುರುವಾರ ಬಿಜೆಪಿ ಅಭ್ಯರ್ಥಿಯಾಗಿ ಪುಟ್ಟಣ್ಣ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ಭಾಗಿಯಾಗುವ ಸಾಧ್ಯತೆ ಇದೆ.

ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್

ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್

  • Share this:
ಬೆಂಗಳೂರು(ಆ.06): ರಾಜ್ಯದಲ್ಲಿ ಘೋಷಣೆ ಆಗಿರುವ ಉಪಚುನಾವಣೆಯ ಕಣದಂತೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕೂಡಾ ರಂಗೇರಿದೆ.  ಅಕ್ಟೋಬರ್ 28 ರಂದು ನಡೆಯಲಿರುವ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಭರದಿಂದ ನಾಮಪತ್ರ ಸಲ್ಲಿಸುತ್ತಿದ್ದಾರೆ.  ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರವೀಣ್ ಪೀಟರ್ ಇಂದು ಬೆಂಗಳೂರಿನ ಶಾಂತಿನಗರದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ರಿಜ್ವಾನ್ ಅರ್ಷದ್ ಭಾಗವಹಿಸಿದ್ದರು. ನಿನ್ನೆ ತಾನೇ ಜೆಡಿಎಸ್ ನಿಂದ ಎ. ಪಿ ರಂಗನಾಥ್ ಕೂಡ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದರು. ಇವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಜೊತೆಯಲ್ಲಿ ಇದ್ದರು.

ಬಹು ದಿನಗಳ ಬಳಿಕ ಸಿಎಂ ತವರು ಜಿಲ್ಲಾ ಪ್ರವಾಸ; ಅ.19ಕ್ಕೆ ಯಡಿಯೂರಪ್ಪ ಶಿವಮೊಗ್ಗಕ್ಕೆ ಭೇಟಿ

ಇನ್ನು ಅಕ್ಟೋಬರ್ 8 ಗುರುವಾರ ಬಿಜೆಪಿ ಅಭ್ಯರ್ಥಿಯಾಗಿ ಪುಟ್ಟಣ್ಣ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ಭಾಗಿಯಾಗುವ ಸಾಧ್ಯತೆ ಇದೆ. ಇನ್ನೂ ಇಂದು ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದ ಪ್ರವೀಣ್ ಪೀಟರ್, ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳ ಚುನಾವಣೆಯಲ್ಲಿ ಹಾಲಿ ಪರಿಷತ್ ಸದಸ್ಯರು ನಕಲಿ ಮತಗಳ ಮೂಲಕ ಗೆದ್ದು ಬರುತ್ತಿದ್ದರು. ಈಗ ಅಂತಹ ಸಾವಿರಾರು ನಕಲಿ ಮತಗಳನ್ನು ಪಟ್ಟಿ ‘ಯಿಂದ ಡಿಲೀಟ್ ಮಾಡಿಸಲಾಗಿದ್ದು, ಇವಾಗ ಅವರು ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಸವಾಲು ಹಾಕಿದ್ದಾರೆ.

ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಪುಟ್ಟಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಮ್ಮ ಪಕ್ಷದಲ್ಲಿ ಇದ್ದು ಅಧಿಕಾರ ಅನುಭವಿಸಿದ ವ್ಯಕ್ತಿ ಇವಾಗ ನಮ್ಮ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ. ಈ ಚುನಾವಣೆಯಲ್ಲಿ ಅವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಅಲ್ಲದೆ ನಕಲಿ ಓಟ್ ಬ್ಯಾಂಕ್ ಇವಾಗ ಇಲ್ಲದೆ ಇರುವುದರಿಂದ ಅವರು ಅಷ್ಟು ಸುಲಭವಾಗಿ ಈ ಚುನಾವಣೆ ಎದುರಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದರು.
Published by:Latha CG
First published: