Praveeen Nettaru Murder: ಎನ್ಐಎ ತನಿಖೆಯಲ್ಲಿ ಪ್ರವೀಣ್ ಹತ್ಯೆಯ ಉದ್ದೇಶ ಬಹಿರಂಗ

ತನಿಖೆಯ ಭಾಗವಾಗಿ‌ ಸೆಪ್ಟೆಂಬರ್ 6 ರಂದು ದಕ್ಷಿಣ ಕನ್ನಡ, ಕೊಡಗು ಮತ್ತು ಮೈಸೂರಿನ ಸುಮಾರು 33 ಕಡೆಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ಉಪಯೋಗಿಸಿದ ಶಸ್ತ್ರಾಸ್ತಗಳು ಸೇರಿದಂತೆ ಡಿಜಿಟಲ್ ದಾಖಲೆಗಳು, ಪ್ರಚೋದನಕಾರಿ ಪತ್ರಗಳು ಮತ್ತು ಗ್ರಂಥಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಪ್ರವೀಣ್ ನೆಟ್ಟಾರು

ಪ್ರವೀಣ್ ನೆಟ್ಟಾರು

  • Share this:
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (BJP Youth Leader Praveen Nettaru) ಹತ್ಯೆ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿರುವ ರಾಷ್ಟ್ರೀಯ ತನಿಖಾ ದಳದ (NIA) ತನಿಖೆಯಲ್ಲಿ ಹತ್ಯೆಯ ಹಿಂದಿನ ಬೆಚ್ಷಿ ಬೀಳಿಸುವ ಸಂಗತಿ ಹೊರಬಿದ್ದಿದೆ. ಸಮಾಜದ ಒಂದು ವರ್ಗದಲ್ಲಿ ಭಯ ಉಂಟು ಮಾಡುವ ಷಡ್ಯಂತ್ರದ ಒಂದು ಭಾಗವಾಗಿ ಈ ಹತ್ಯೆ ನಡೆಸಲಾಗಿದೆ ಎನ್ನುವ ವಿಚಾರ ತನಿಖೆಯಿಂದ (Investigation) ಹೊರ ಬಂದಿದೆ. ಜುಲೈ 26 ರಂದು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sulya) ತಾಲೂಕಿನ ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರು ಅವರನ್ನು ಬೈಕ್​​ನಲ್ಲಿ ಬಂದ ಮೂವರು ದುಷ್ಕರ್ಮಿಗಳು ತಲವಾರ್​​ನಲ್ಲಿ ಕೊಚ್ಚಿ ಹತ್ಯೆ ಮಾಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಬೆಳ್ಳಾರೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳು ಸೇರಿದಂತೆ 10 ಮಂದಿಯನ್ನು  ಬಂಧಿಸಿದ್ದರು.

ಪ್ರವೀಣ್ ನೆಟ್ಟಾರು ಹತ್ಯೆಯನ್ನು ಎನ್ಐಎ ತನಿಖೆಗೆ ಒಳಪಡಿಸಬೇಕೆಂದು ಕೆಲವು ಸಂಘಟನೆಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಎನ್ಐಎಗೆ ಸರ್ಕಾರ ವರ್ಗಾಯಿಸಿತ್ತು.

ತನಿಖೆಯ ಭಾಗವಾಗಿ‌ ಸೆಪ್ಟೆಂಬರ್ 6 ರಂದು ದಕ್ಷಿಣ ಕನ್ನಡ, ಕೊಡಗು ಮತ್ತು ಮೈಸೂರಿನ ಸುಮಾರು 33 ಕಡೆಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ಉಪಯೋಗಿಸಿದ ಶಸ್ತ್ರಾಸ್ತಗಳು ಸೇರಿದಂತೆ ಡಿಜಿಟಲ್ ದಾಖಲೆಗಳು, ಪ್ರಚೋದನಕಾರಿ ಪತ್ರಗಳು ಮತ್ತು ಗ್ರಂಥಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Praveen nettaru murder reason reveal in NIA investigation akp mrq
ಎನ್​​ಐಎ ದಾಳಿ


ಭಯ ಹುಟ್ಟಿಸುವ ಷಡ್ಯಂತ್ರ

ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳೂ ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಕ್ರಿಯ ಸದಸ್ಯರಾಗಿರುವ ವಿಚಾರವೂ ಎನ್ಐಎ ತನಿಖೆಯಲ್ಲಿ ಸ್ಪಷ್ಟವಾಗಿದ್ದು, ಸಮಾಜದ ಒಂದು ವರ್ಗಕ್ಕೆ ಭಯ ಸೃಷ್ಠಿಸುವ ಷಡ್ಯಂತ್ರದ ಒಂದು ಭಾಗ ಪ್ರವೀಣ್ ಹತ್ಯೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪಿಎಫ್ಐ ಮತ್ತು ಎಸ್​ಡಿಪಿಐಯ ಒಟ್ಟು ನಾಲ್ವರು ಮುಖಂಡರ ಮನೆಗೆ ದಾಳಿ ನಡೆಸಲಾಗಿದ್ದು, ಇದರ ಜೊತೆಗೆ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳ ಮನೆಗಳಲ್ಲೂ ಶೋಧ ಕಾರ್ಯ ನಡೆಸಲಾಗಿದೆ.

ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದ ಎನ್​​ಐಎ

ಪಿಎಫ್ಐ ಸಂಘಟನೆಯ ಕಾರ್ಯಕರ್ತರಿಗೆ ತರಭೇತಿ ನೀಡುವ ರಾಜ್ಯದ ಪ್ರಮುಖ ಕೇಂದ್ರವಾಗಿರುವ ಬಂಟ್ವಾಳ ತಾಲೂಕಿನ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್ ಮೇಲೂ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರವೀಣ್ ಹತ್ಯೆ ಹಾಗೂ ಈ ಹಿಂದೆ ಕರಾವಳಿ ಭಾಗದಲ್ಲಿ ನಡೆದ ಮುಖ್ಯವಾಗಿ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡವರ ಹತ್ಯೆಗಳ ಬಗ್ಗೆಯೂ ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುವ ಸಾಧ್ಯತೆಯೂ ಇದೆ.

Praveen nettaru murder reason reveal in NIA investigation akp mrq
ಪ್ರವೀಣ್ ನೆಟ್ಟಾರು


ಇದನ್ನೂ ಓದಿ:  Real Hero: ಮುಸ್ಲಿಂ ಯುವಕನ ಜೀವ ಉಳಿಸಿದ ಹಿಂದೂ ಯುವಕ! ಮಾನವೀಯತೆಗಿಂತ ಮಿಗಿಲಾದ ಧರ್ಮ ಇಹುದೇನು?

ಈ ನಡುವೆ ಪಾಪ್ಯುಲರ್ ಫ್ರಂಟ್ ಮತ್ತು ಎಸ್​​ಡಿಪಿಐ ಯನ್ನು ಗುರಿಯಾಗಿಸಿಕೊಂಡು ರಾಷ್ಟ್ರೀಯ ತನಿಖಾ ದಳ ಕಾರ್ಯಾಚರಿಸುತ್ತಿದ್ದು, ಇದಕ್ಕೆ ಪಿಎಫ್ಐ ತನ್ನ ವಿರೋಧ ವ್ಯಕ್ತಪಡಿಸಲು ಆರಂಭಿಸಿದೆ.

ಕಾರ್ಯಚರಣೆ ವಿರುದ್ಧ ಪ್ರತಿಭಟನೆ ನಡೆಸಲು ಪ್ಲಾನ್

ಈ ಕಾರ್ಯಾಚರಣೆ ವಿರುದ್ಧವಾಗಿ ಪ್ರತಿಭಟನೆ ನಡೆಸಲೂ ಸಂಘಟನೆ ಸಿದ್ಧವಾಗುತ್ತಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ತನಿಖೆಯ ಜೊತೆಗೆ ಸಂಘಟನೆಗಳ ವಿರೋಧವನ್ನೂ ರಾಷ್ಟ್ರೀಯ ತನಿಖಾ ದಳ ಎದುರಿಸುವ ಸಾಧ್ಯತೆಗಳೂ ಗೋಚರಿಸಲಾರಂಭಿಸಿದೆ.

Praveen nettaru murder reason reveal in NIA investigation akp mrq
ಪ್ರವೀಣ್ ನೆಟ್ಟಾರು


ಇದನ್ನೂ ಓದಿ:  Praveen Nettaru; ಪ್ರವೀಣ್ ಅಗಲಿಕೆ ಬಳಿಕ ಆಹಾರ ತ್ಯಜಿಸಿದ್ದ ಮುದ್ದು ನಾಯಿಮರಿ ಜಾನಿ ಸಾವು

ಹಂತಕರ ಹಿಡಿದ ಖಾಕಿಗೆ ಬಹುಮಾನ ಹಂಚಿಕೆ

ಪ್ರಕರಣದ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಬ್ ಇನ್ಸ್‌ಪೆಕ್ಟರ್​ಗಿಂತ ಕೆಳ‌ಹಂತದ ಸಿಬ್ಬಂದಿಗಳಿಗೆ ಮೂರು ಶ್ರೇಣಿಯಲ್ಲಿ ಬಹುಮಾನದ ಮೊತ್ತವನ್ನು ವಿತರಿಸಲಾಗಿದೆ. ಪ್ರಮುಖ ಕಾರ್ಯಾಚರಣೆ ಮಾಡಿದ‌ ಸಿಬ್ಬಂದಿಗೆ ತಲಾ 12 ಸಾವಿರ, ಬಳಿಕದ ಕಾರ್ಯಾಚರಣೆ ಮಾಡಿದ ಸಿಬ್ಬಂದಿಗೆ ಕ್ರಮವಾಗಿ 7 ಸಾವಿರ ಮತ್ತು 5 ಸಾವಿರ ರೂಪಾಯಿಗಳನ್ನು ನೀಡಲಾಗಿದೆ.
Published by:Mahmadrafik K
First published: