Praveen Nattar: ಪ್ರವೀಣ್ ನೆಟ್ಟಾರ್‌ ಹತ್ಯೆ ಕೇಸ್ ಎನ್‌ಐಎಗೆ ಹಸ್ತಾಂತರ, ಕೊಲೆ ಹಿಂದಿದ್ದವರ ಎದೆಯಲ್ಲಿ ಶುರುವಾಗಿದೆ ನಡುಕ!

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ತನಿಖೆ ಹೊಣೆ ಎನ್ಐಎ ಹೆಗಲಿಗೇರಿದೆ. ಈಗಾಗಲೇ ನಾಲ್ವರ ಮೇಲೆ ಆಗಸ್ಟ್  4ರಂದೇ  ಪ್ರಕರಣ ದಾಖಲಾಗಿತ್ತು. ಸದ್ಯ ಸುಳ್ಯ ನ್ಯಾಯಾಲಯದಲ್ಲಿ ಪ್ರಕರಣದ ಹಸ್ತಾಂತರ ಪ್ರಕ್ರಿಯೆಯನ್ನು ಪೊಲೀಸರು ಪೂರ್ಣಗೊಳಿಸಿದ್ದಾರೆ.  

ಹತ್ಯೆಯಾದ ಪ್ರವೀಣ್ ನೆಟ್ಟಾರ್

ಹತ್ಯೆಯಾದ ಪ್ರವೀಣ್ ನೆಟ್ಟಾರ್

  • Share this:
ಸುಳ್ಯ, ದಕ್ಷಿಣ ಕನ್ನಡ: ಬಿಜೆಪಿ ಮುಖಂಡ (BJP Leader) ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ (Praveen Nettar Murder Case) ತನಿಖೆ ಹೊಣೆಯನ್ನು ಎನ್ಐಎಗೆ (NIA) ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕಿರಿಯ ಸಿವಿಲ್ ನ್ಯಾಯಾಲಯದ (Court) ಮೂಲಕ ಕೇಸ್‌ ತನಿಖೆಯನ್ನು ಕರ್ನಾಟಕ ಪೊಲೀಸರು (Karnataka Police) ಎನ್‌ಐಎಗೆ ನೀಡಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ನಾಲ್ವರ ಮೇಲೆ ಎನ್ಐಎ ಪ್ರಕರಣ ದಾಖಲಿಸಿಕೊಂಡಿದೆ. ಸವಣೂರು ನಿವಾಸಿ ಝಾಕೀರ್, ಬೆಳ್ಳಾರೆ ನಿವಾಸಿ ಮಹಮ್ಮದ್ ಶಾಫೀಕ್, ಶೀಖ್ ಸದ್ಧಾಂ ಹುಸೈನ್, ಅಬ್ದುಲ್ ಹ್ಯಾರೀಸ್ ಮೇಲೆ ಪ್ರಕರಣ ದಾಖಲಾಗಿದೆ. ಈ ನಾಲ್ವರ ಮೇಲೆ ಆಗಸ್ಟ್  4 ರಂದೇ  ಪ್ರಕರಣ ದಾಖಲಾಗಿತ್ತು. ಸದ್ಯ ಸುಳ್ಯ ನ್ಯಾಯಾಲಯದಲ್ಲಿ ಪ್ರಕರಣದ ಹಸ್ತಾಂತರ ಪ್ರಕ್ರಿಯೆಯನ್ನು ಪೊಲೀಸರು ಪೂರ್ಣಗೊಳಿಸಿದ್ದಾರೆ.  

10 ಆರೋಪಿಗಳಿಗೆ ನ್ಯಾಯಾಂಗ ಬಂಧನ

ಜುಲೈ 26 ರಂದು ಬೆಳ್ಳಾರೆಯಲ್ಲಿ ನಡೆದಿದ್ದ ಪ್ರವೀಣ್ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ 10 ಆರೋಪಿಗಳಿಗೆ ಆಗಸ್ಟ್ 24 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣಕ್ಕೆ‌ ಸಂಬಂಧಿಸಿದಂತೆ ಪೋಲೀಸ್ ಕಸ್ಟಡಿಯಲ್ಲಿದ್ದ ಪ್ರವೀಣ್ ಹತ್ಯೆಯ‌ ಪ್ರಮುಖ ಆರೋಪಿಗಳಾದ ಶಹಾಬುದ್ದೀನ್, ಬಶೀರ್ ಮತ್ತು‌ ರಿಯಾಝ್ ನನ್ನ ಪೋಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನಲೆಯಲ್ಲಿ ಇಂದು ಸುಳ್ಯ‌ ಕಿರಿಯ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು  ಮೂವರು ಆರೋಪಿಗಳ ಜೊತೆಗೆ ಈ ಹಿಂದೆ ಪೋಲೀಸರಿಂದ ಬಂಧಿಸಲ್ಪಟ್ಟ ಉಳಿದ 7 ಜನ ಆರೋಪಿಗಳನ್ನು ಸೇರಿಸಿ ಎಲ್ಲಾ  10 ಆರೋಪಿಗಳಿಗೆ ಆಗಸ್ಟ್  24 ತನಕ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಆರೋಪಿಗಳು ಕೋರ್ಟ್‌ಗೆ ಹಾಜರು


ಜುಲೈ 26ರಂದು ನಡೆದಿದ್ದ ಹತ್ಯೆ

ಜುಲೈ 26 ರಂದು ಶಹಾಬುದ್ದೀನ್, ಬಶೀರ್ ಮತ್ತು ರಿಯಾಝ್ ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಬಿಜೆಪಿ  ಯುವ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಮೇಲೆ ತಲವಾರು ಬೀಸಿ ಹತ್ಯೆಗೈದಿದ್ದರು. ಈ ಸಂಬಂಧ ಬೆಳ್ಳಾರೆ ಪೋಲೀಸರು ಪ್ರಕರಣ ದಾಖಲಿಸಿ, ಆರೋಪಿಗಳ ಪತ್ತೆಗಾಗಿ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೊನಾವಣೆ ಆರು ವಿಶೇಷ ಪೋಲೀಸ್ ತಂಡವನ್ನು ರಚಿಸುವ ಮೂಲಕ ಹತ್ಯೆಯಲ್ಲಿ ನೇರವಾಗಿ ಭಾಗಿಯಾದ, ಹತ್ಯೆಗೆ ಸಹಕರಿಸಿ ಎಲ್ಲಾ 10 ಆರೋಪಿಗಳನ್ನು ಬಂಧಿಸಲಾಗಿತ್ತು.

 ಇದನ್ನೂ ಓದಿ: Praveen Nettar Murder: ಹಂತಕರಿಗೆ ಟಾರ್ಗೆಟ್ ಆಗಿದ್ದೇಕೆ ಪ್ರವೀಣ್ ನೆಟ್ಟಾರ್? ಬಿಜೆಪಿ ಕಾರ್ಯಕರ್ತನ ಹತ್ಯೆ ಹೇಗಾಯ್ತು?

 ತೀವ್ರ ಸಂಚಲನ ಮೂಡಿಸಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಕೇಸ್

ಪ್ರವೀಣ್ ನೆಟ್ಟಾರು ಹತ್ಯೆ ದೇಶದೆಲ್ಲೆಡೆ ಭಾರೀ ಸಂಚಲನವನ್ನೂ ಉಂಟುಮಾಡಿತ್ತು. ಅಲ್ಲದೆ ಈ ಹತ್ಯೆಯ ಹಿಂದೆ ಪಿಎಫ್ಐ ಹಾಗು ಕೇರಳ‌ ಮೂಲದ ಆರೋಪಿಗಳ ಕೈವಾಡವಿದೆ ಎನ್ನುವ ಸಂಶಯವೂ ವ್ಯಕ್ತವಾಗಿತ್ತು. ಈ‌ ಕಾರಣಕ್ಕಾಗಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಬೇಕು ಎನ್ನುವ ಒತ್ತಾಯವೂ ಕೇಳಿ ಬಂದಿತ್ತು.

ಆರೋಪಿಗಳು ಕೋರ್ಟ್‌ಗೆ ಹಾಜರು


ಈಗಾಗಲೇ ನಾಲ್ವರ ವಿರುದ್ಧ ಕೇಸ್

ಈ ಹಿನ್ನಲೆಯಲ್ಲಿ ಸ್ವತಹ‌ ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಪ್ರವೀಣ್ ನೆಟ್ಟಾರು ಹತ್ಯೆಯ ತನಿಖೆಯನ್ನು ಎನ್.ಐ.ಎ ಗೂ ವಹಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ ಹತ್ಯೆಗೆ ಸಂಬಂಧಿಸಿದಂತೆ 4 ಜನ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದೆ. ಸವಣೂರು ನಿವಾಸಿ ಝಾಕೀರ್, ಬೆಳ್ಳಾರೆ ನಿವಾಸಿ ಮಹಮ್ಮದ್ ಶಾಫೀಕ್, ಸುಳ್ಯ ನಿವಾಸಿ ಶೇಖ್ ಸದ್ಧಾಂ ಹುಸೈನ್ ಮತ್ತು ಬೆಳ್ಳಾರೆ ನಿವಾಸಿ ಅಬ್ದುಲ್ ಹ್ಯಾರೀಸ್  ವಿರುದ್ಧ 120 b, 302 ಮೊದಲಾದ ಸೆಕ್ಷನ್ ಮೂಲಕ ಪ್ರಕರಣವನ್ನು ದಾಖಲಿಸಿದೆ.

ಇನ್ನುಳಿದ ಆರೋಪಿಗಳಿಗೂ ನಡುಕ

ಅಲ್ಲದೆ ಪ್ರಕರಣದಲ್ಲಿ ಭಾಗಿಯಾದ ಇನ್ನುಳಿದ ಆರೋಪಿಗಳ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ. ದಕ್ಷಿಣಕನ್ನಡ ಜಿಲ್ಲಾ ಪೋಲೀಸರು  ಈಗಾಗಲೇ ಆರೋಪಿಗಳನ್ನು ಕಸ್ಟಡಿಗೆ ಪಡೆದು ಒಂದು ಹಂತದ ತನಿಖೆಯನ್ನು ಪೂರ್ಣಗೊಳಿಸಿದ್ದು, ಮುಂದಿನ ಹಂತದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸಲಿದೆ.

ಇದನ್ನೂ ಓದಿ: Explained: ಕೇವಲ 10 ದಿನಗಳಲ್ಲಿ 3 ಹತ್ಯೆ, ಬಡ ಕುಟುಂಬಗಳ ಕಣ್ಣೀರು ಒರೆಸುವವರು ಯಾರು?

ನ್ಯಾಯಾಲಯವು ಸ್ಥಳೀಯ ಪೋಲೀಸರು ತನಿಖೆ ನಡೆಸಿದ ಪ್ರಕರಣದ ಎಲ್ಲಾ ಮಾಹಿತಿಗಳುಳ್ಳ ಪೈಲನ್ನು ಎನ್.ಐ.ಎ ಗೆ ಒಪ್ಪಿಸಿದ್ದು, ರಾಷ್ಟ್ರೀಯ ತನಿಖಾ ದಳ ತನ್ನ ಪೂರ್ಣ ಮಟ್ಟದ ತನಿಖೆಯನ್ನು ಅರಂಭಿಸಲಿದೆ. ಪ್ರವೀಣ್ ನೆಟ್ಟಾರು ಹತ್ಯೆಯ ಹಿಂದೆ ಮತೀಯ ಹಾಗೂ ದೇಶದ್ರೋಹಿ ಸಂಘಟನೆಗಳ ಕೈವಾಡವಿದೆ ಎನ್ನುವ ಸಂಶಯದ ಹಿನ್ನಲೆಯಲ್ಲಿ ರಾಜ್ಯ ಸರಕಾರ ಕೇಂದ್ರ ಗೃಹಖಾತೆಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ರಾಷ್ಟ್ರೀಯ ತನಿಖಾ ದಳದಿಂದ ಪ್ರಕರಣದ ತನಿಖೆ ನಡೆಸಬೇಕೆಂದು ಆಗ್ರಹಿಸಿತ್ತು.
Published by:Annappa Achari
First published: