• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Praveen Nettar Murder: ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನ; ಹೇಗಿತ್ತು ಕೊಲೆ ಸ್ಕೆಚ್​?

Praveen Nettar Murder: ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನ; ಹೇಗಿತ್ತು ಕೊಲೆ ಸ್ಕೆಚ್​?

ಪ್ರವೀಣ್ ನೆಟ್ಟಾರು

ಪ್ರವೀಣ್ ನೆಟ್ಟಾರು

ಬೆಳ್ಳಾರೆ ಆಸುಪಾಸಿನ ಸಂಘ ಪರಿವಾರದ ಪ್ರಮುಖನ ಹತ್ಯೆಗೆ ಸ್ಕೆಚ್ ಮಾಡಿದ್ದರು. ಹಂತಕರು ಹತ್ಯೆಗಾಗಿ ಒಂದು ವಾರ ತಯಾರಿ ಮಾಡಿದ್ದರು. ಜುಲೈ 26ರ ರಾತ್ರಿ 8.30ಕ್ಕೆ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಮೂವರು ಪರಾರಿಯಾಗಿದ್ರು.

  • Share this:

ಹಿಂದೂ ಯುವ ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ (Praveen Nettaru Murder Case) ಸಂಬಂಧಿಸಿದಂತೆ ಪ್ರಮುಖ ಮೂರು ಆರೋಪಿಗಳನ್ನು (Accused) ಬಂಧಿಸಲಾಗಿದೆ. ಮೂರು ಆರೋಪಿಗಳು ಸೇರಿದಂತೆ ಒಟ್ಟು ಹತ್ತು ಮಂದಿಯ ಬಂಧನವಾಗಿರುವ ಮಾಹಿತಿ ಲಭ್ಯವಾಗಿದೆ. ಇನ್ನೂ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಡಿ ಮೂವರು ಮಹಿಳೆಯರನ್ನು (Woman Detained) ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ಆಶ್ರಯ ನೀಡಿದ್ದ ಒಟ್ಟು 9 ಮಂದಿ ವಶಕ್ಕೆ ಪಡೆಯಲಾಗಿದೆ. ಹಂತಕರು ಅಂತಾ ತಿಳಿದಿದ್ದರೂ ಊಟ,ಆಶ್ರಯ, ಹಣ ನೀಡಿದ್ದರು ಎಂದು ತಿಳಿದು ಬಂದಿದ್ದರು. ಹತ್ಯೆಗೆ ಬಳಸಿದ ಆಯುಧ, ಬೈಕ್​ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಸುಳ್ಯ ನಿವಾಸಿ ಶಿಯಾಬ್‌, ಎಲಿಮಲೆ ನಿವಾಸಿ ಬಶೀರ್ ಮತ್ತು ಅಂಕತಡ್ಕ ನಿವಾಸಿ ರಿಯಾಜ್‌ ಬಂಧಿತ ಆರೋಪಿಗಳು. 12 ಮಂದಿಯ ತಂಡ ಮೂವರ ಕೊಲೆಗೆ ಸ್ಕೆಚ್ ಹಾಕಿತ್ತಂತೆ ಎನ್ನಲಾಗಿದೆ. ಜುಲೈ 24-25 ರಂದೇ ಪ್ರವೀಣ್ ಹತ್ಯೆಗೆ ತೆರಳಿತ್ತು. ಆದ್ರೆ ಅಂದು ಹಂತಕರ ಪ್ಲಾನ್ ಮಿಸ್ ಆಗಿತ್ತು. ಜುಲೈ 26ರಂದು ಬೈಕ್​ನಲ್ಲಿ ತ್ರಿಬಲ್ ರೈಡ್ ಬಂದ ಹಂತಕರು ಪ್ರವೀಣ್ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.


ಜಟ್ಕಾ-ಹಲಾಲ್‌ ವಿವಾದಕ್ಕೆ ಕೊಲೆ?


ರಾಜ್ಯದಲ್ಲಿ ಹಲಾಲ್-ಜಟ್ಕಾ ವಿವಾದ ಬಳಿಕ ಪ್ರವೀಣ್ ನೆಟ್ಟಾರು ಕೋಳಿ ಅಂಗಡಿ ಆರಂಭಿಸಿದ್ದರು. ಇದೇ ವೇಳೆ ನಡೆದ ಮಸೂದ್ ಕೊಲೆಯಿಂದ ಕಿಚ್ಚು ಹೆಚ್ಚಾಗಿತ್ತು. ಇದೆಲ್ಲದರ ಪ್ರತಿಕಾರವಾಗಿ ಪ್ರವೀಣ್ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.


ಇದನ್ನೂ ಓದಿ:  Murder Case: ಚಿಕನ್​ ಅಂಗಡಿ ತೆರೆದಿದ್ದೇ ಕೊಲೆಗೆ ಕಾರಣವಾಯ್ತಾ? ಪ್ರವೀಣ್​ ಸಹೋದರನ ಸ್ಫೋಟಕ ಹೇಳಿಕೆ


ಹೇಗಿತ್ತು ಕೊಲೆ ಸ್ಕೆಚ್​?


ಜುಲೈ 19ರಂದು ಬೆಳ್ಳಾರೆಯಲ್ಲಿ ಮಸೂದ್ ಮೇಲೆ ಹಲ್ಲೆ ನಡೆಯುತ್ತದೆ. ಜುಲೈ 21ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಸೂದ್ ಸಾವು ಆಗುತ್ತದೆ. ಜುಲೈ 21ರಂದು ಬೆಳ್ಳಾರೆಯಲ್ಲೇ ಪ್ರತೀಕಾರದ ಹತ್ಯೆಗೆ ಹಂತಕರು ಸ್ಕೆಚ್ ಹಾಕ್ತಾರೆ.


Praveen Nettar Murder case Three Accused arrest mrq
ಪ್ರವೀಣ್ ನೆಟ್ಟಾರು


ಬೆಳ್ಳಾರೆ ಆಸುಪಾಸಿನ ಸಂಘ ಪರಿವಾರದ ಪ್ರಮುಖನ ಹತ್ಯೆಗೆ ಸ್ಕೆಚ್ ಮಾಡಿದ್ದರು. ಹಂತಕರು ಹತ್ಯೆಗಾಗಿ ಒಂದು ವಾರ ತಯಾರಿ ಮಾಡಿದ್ದರು. ಜುಲೈ 26ರ ರಾತ್ರಿ 8.30ಕ್ಕೆ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಮೂವರು ಪರಾರಿಯಾಗಿದ್ರು.


ಪ್ರವೀಣ್ ಮೇಲೆ ಕಣ್ಣಿಟ್ಟಿದ್ದ ಆರೋಪಿಗಳು


ಹಂತಕರು ಜುಲೈ 21ರ ಬಳಿಕ ಪ್ರತಿದಿನ ಪ್ರವೀಣ್ ಅಂಗಡಿ ಬಳಿ ಬರುತ್ತಿದ್ದರು. ಪ್ರವೀಣ್ ಜೊತೆ ಪತ್ನಿ ಇರೋದನ್ನು ನೋಡಿ ವಾಪಾಸ್ ಹೋಗ್ತಿದ್ರು. ಜುಲೈ 26 ರಂದು ಪ್ರವೀಣ್ ಒಬ್ಬನೇ ಇದ್ದಾಗ ಇರಿದು ಕೊಲೆ ಮಾಡಿ, ಹಳೆಯ ಬೈಕ್ ಬಳಸಿ ಪರಾರಿಯಾಗಿದ್ದರು. ಬೈಕ್ ನಂಬರ್ ಅಸ್ಪಷ್ಟವಾಗಿ ಕಾಣಿಸುತ್ತಿತ್ತು.


ಕೇರಳದಲ್ಲಿ ಸಿಕ್ಕಿಬಿದ್ದ ಹಂತಕರು


ಕೊಲೆ ಬಳಿಕ ಹಂತಕರು ಮೊದಲೇ ಕೇರಳದಲ್ಲಿ ಅಡಗುತಾಣವನ್ನು ಗುರುತು ಮಾಡಿಕೊಂಡಿದ್ದರು. ಕೇರಳದ ತಲಶೇರಿ, ಬಳಿಕ ಕಣ್ಣೂರು, ಮಲಪುರಂನಲ್ಲಿ ಅಡಗುತಾಣ ಮಾಡಿಕೊಂಡು,15 ದಿನದ ಅಂತರದಲ್ಲಿ 7 ಕಡೆ ಅಶ್ರಯ ಪಡೆದಿದ್ದರು. ಸದ್ಯ ಪೊಲೀಸರು ಆರೋಪಿಗಳಿಂದ ಮಾಹಿತಿ ಕಲೆ ಹಾಕುತ್ತಿದ್ದರು.


ಪ್ರವೀಣ್ ಸಾಕಿದ್ದ ನಾಯಿಮರಿ ಸಾವು


ಪ್ರವೀಣ್ ನೆಟ್ಟಾರು ಅವರು ಪ್ರೀತಿಯಿಂದ ಸಾಕಿದ್ದ ಮುದ್ದು ನಾಯಿಮರಿ (Dog Died) ಸಾವನ್ನಪ್ಪಿದೆ. ಒಡೆಯ ಪ್ರವೀಣ್ ನೆಟ್ಟಾರು ಅಗಲಿಕೆ ಬಳಿಕ ನಾಯಿ ಜಾನಿ ಆಹಾರ (Food) ತ್ಯಜಿಸಿತ್ತು. ಹೀಗಾಗಿ ಜಾನಿ ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


ನಿರ್ಬಂಧ ತೆರವು


ಕೊಲೆಗಳಿಂದ ಬೆಚ್ಚಿಬಿದ್ದಿದ್ದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡೋ ನಿಟ್ಟಿನಲ್ಲಿ ವ್ಯಾಪಾರ ವಹಿವಾಟು ಹಾಗೂ ಜನರ ಓಡಾಟಕ್ಕೆ ಸಂಬಂಧಿಸಿದಂತ ಜಿಲ್ಲಾಡಳಿತ (District Administration) ಕೆಲವು ನಿರ್ಬಂಧ ಜಾರಿಗೊಳಿಸಿತ್ತು.


ಇದನ್ನೂ ಓದಿ :BS Yediyurappa: ಪಕ್ಷದಿಂದ ನನಗೆ ಅನ್ಯಾಯ ಆಗಿಲ್ಲ, ಸಿಎಂ ಬದಲಾವಣೆ ಇಲ್ಲ; ಬಿ ಎಸ್ ಯಡಿಯೂರಪ್ಪ


ಆಗಸ್ಟ್ 7ರಂದು ಈ ನಿರ್ಬಂಧಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಆದರೆ ಜಿಲ್ಲೆಯಾದ್ಯಂತ ಸೆಕ್ಷನ್‌ 144 (Section 144 ) ಜಾರಿಯಲ್ಲಿರಲಿದೆ. ನಿಷೇಧಾಜ್ಞೆ ಆಗಸ್ಟ್​ 14ರ ಮಧ್ಯರಾತ್ರಿವರೆಗೆ ಮುಂದುವರಿಯಲಿದೆ. ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ (Rajendra K.V) ತಿಳಿಸಿದ್ದಾರೆ.

top videos
    First published: