Praveen Murder: ಇದೊಂದು ವ್ಯವಸ್ಥಿತವಾದ ಸಂಚು, ಶೀಘ್ರವೇ ಕೊಲೆಗಡುಕರ ಬಂಧನ: ಸಿಎಂ ಬೊಮ್ಮಾಯಿ

ಪೊಲೀಸರು ಕಾನೂ ಸುವ್ಯವಸ್ಥೆ ಕಾಪಾಡಿಕೊಳ್ಳಲು ಕ್ರಮ ತೆಗೆದುಕೊಳ್ತಾರೆ. ಅಲ್ಲಿ ಜನರನ್ನು ಮನವೊಲಿಸುವ ಪ್ರಯತ್ನ ಮಾಡುತ್ತೇವೆ.  ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ತೀವಿ ಎಂದು ಭರವಸೆ ನೀಡಿದರು.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ (Puttur, Dakshina Kannada) ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Hindu Activist Praveen Nettaru) ಹತ್ಯೆ ಸಂಬಂಧ ಇಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಪ್ರತಿಕ್ರಿಯೆ ನೀಡಿದ್ದಾರೆ. ಶೀಘ್ರವೇ ಕೊಲೆಗಡುಕರ ಬಂಧನಕ್ಕೆ ಸೂಚನೆ ನೀಡಿದ್ದೇವೆ. ಕೇರಳ ಬಾರ್ಡರ್ (Kerala Border) ದಾಟಿಯಾದ್ರು ಬಂಧಿಸುವಂತೆ ಸೂಚನೆ ನೀಡಿದ್ದೇವೆ ಯಾರು ಇಲ್ಲದೇ ಇದ್ದಾಗ ಮೋಸ ಮಾಡಿ ಕೊಲೆ ಮಾಡಿದ್ದಾರೆ. ಇದೊಂದು ವ್ಯವಸ್ಥಿತವಾದ ಸಂಚು.ಇವರನ್ನು ಸದೆ ಬಡಿಯುವ ಕೆಲಸವನ್ನು ನಾವು ಮಾಡ್ತಿದ್ದೇವೆ. ಯಾರೂ ಇಲ್ಲದಿರುವಾಗ ಹಿಂದಿನಿಂದ ಬಂದು ಕೊಲೆ ಮಾಡಿದ್ದಾರೆ.  ಕೊಲೆಗಡುಕರ ದಸ್ತಗಿರಿ ಮಾಡಿ ಕ್ರಮ ತಗೋತೇವೆ.  ಒಬ್ಬ ಅಮಾಯಕ ಕೊಲೆಯಾದಾಗಾ ಜನಾಕ್ರೋಶ ಇರುತ್ತೆ. ಹೋಂ ಮಿನಿಸ್ಟರ್ (Home Minister), ಪೊಲೀಸರಿಗೆ ಕೊಲೆಗಾರರನ್ನು ಬಂಧಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಪ್ರವೀಣ್ ಕೊಲೆ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಇದು ದುರದೃಷ್ಟಕರ ಸಂಗತಿ. ಅಮಾಯಕ ಯುವಕ ತನ್ನ ಅಂಗಡಿ ಮುಚ್ಚಿ ಮನೆಗೆ ಹೋಗುವ ವೇಳೆ ಘಟನೆ ನಡೆದಿದೆ. ಕರಾವಳಿಯಲ್ಲಿ ಬಹಳ ವರ್ಷಗಳಿಂದ ಇಂತ ಘಟನೆಗಳು ನಡೆಯುತ್ತಿವೆ. ಪೋಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಂಡರು.

ಇದನ್ನೂ ಓದಿ:  School: ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕರು; ಗ್ರಾಮಸ್ಥರಿಂದ ಛೀಮಾರಿ

ಕೊಲೆಯಂತಹ ಕೃತ್ಯಗಳು ನಡೆಯಬಾರದು

ಸಹಜವಾಗಿಯೇ ಆ ಭಾಗದ ಜನ ಉದ್ವೇಗಕ್ಕೆ ಒಳಗಾಗಬೇಡಿ, ಶಾಂತಿ, ಸುವ್ಯವಸ್ಥೆ ಕೈಗೊಳ್ಳಲು ಕ್ರಮ ತೆಗೆದುಕೊಂಡಿದ್ದೇವೆ. ಸೈದ್ದಾಂತಿಕವಾಗಿ ಏನೇ ಭಿನ್ನಾಭಿಪ್ರಾಯ ಇರಬಹುದು. ಆದರೆ ಕೊಲೆಯಂತಹಾ ಕೃತ್ಯಗಳು ನಡೆಯಬಾರದು. ಸಾಕಷ್ಟು ದೊಡ್ದ ಪ್ರಮಾಣದಲ್ಲಿ ಪೊಲೀಸರಿದ್ದಾರೆ.

postmortem of praveen of puttur has been completed
ಹತ್ಯೆಯಾದ ಪ್ರವೀಣ್


ಪೊಲೀಸರು ಕಾನೂ ಸುವ್ಯವಸ್ಥೆ ಕಾಪಾಡಿಕೊಳ್ಳಲು ಕ್ರಮ ತೆಗೆದುಕೊಳ್ತಾರೆ. ಅಲ್ಲಿ ಜನರನ್ನು ಮನವೊಲಿಸುವ ಪ್ರಯತ್ನ ಮಾಡುತ್ತೇವೆ.  ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ತೀವಿ ಎಂದು ಭರವಸೆ ನೀಡಿದರು.

ಎರಡೂ ರಾಜ್ಯಗಳಲ್ಲಿ ಕಾರ್ಯಾಚರಣೆ

ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ, ಪಕ್ಷದ ವಿರುದ್ಧ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಮತಾಂಧ ಶಕ್ತಿಗಳು ಒಂದು ರಾಜ್ಯದಲ್ಲಿ ಮಾತ್ರ ಕಾರ್ಯಾಚರಣೆ ಮಾಡ್ತಿಲ್ಲ. ಅವರ ಕಾರ್ಯಾಚರಣೆ ಎರಡು ರಾಜ್ಯಗಳಲ್ಲಿ ನಡೀತಿದೆ. ಗಡಿ ಭಾಗದಲ್ಲಿ ಈ ಕೃತ್ಯಗಳನ್ನು ಮಾಡ್ತಿದಾರೆ. ಕೇರಳ ಸರ್ಕಾರದ ಜತೆ ಸಿಎಂ ಸಹ‌ ಮಾತಾಡಿದ್ದಾರೆ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಮದು

ಕತ್ತಲಲ್ಲಿ ಕೊಲೆಗಡಕರು ಕೊಲೆಗೈದಿದ್ದಾರೆ.ಈ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಎಡಿಜಿಪಿಯವರು ಕೂಡಲೇ ಸ್ಥಳಕ್ಕೆ ಹೋಗ್ತಿದ್ದಾರೆ. ಕರಾವಳಿ ಭಾಗದಲ್ಲೇ ಈ ರೀತಿ ಪ್ರಕರಣಗಳು ನಡೆಯುತ್ತಿವೆ. ಪೊಲೀಸರ ನಿಗಾ ಮೀರಿ ಈ ರೀತಿಯ ಕೃತ್ಯ ನಡೆಯುತ್ತಿವೆ ಎಂದರು.

ಇದನ್ನೂ ಓದಿ:  Praveen Murder: ಪ್ರವೀಣ್ ಮರಣೋತ್ತರ ಪರೀಕ್ಷೆ ಮುಕ್ತಾಯ, ಅಂತಿಮಯಾತ್ರೆಗೆ ಸಿದ್ಧತೆ; ಕರಾವಳಿಯಲ್ಲಿ ಹೈಅಲರ್ಟ್

ನಾವು ಬಂದ್ಮೇಲೆ ನಿರ್ಲಕ್ಷ್ಯ ಮಾಡ್ತಿಲ್ಲ

ನೀಚ ಸಂಘಟನೆಗಳಿಂದ ಈ ರೀತಿಯ ಕೃತ್ಯ ನಡೆದಿದೆ. ಇಂತಹ ಸಂಘಟನೆಗಳ ವಿರುದ್ಧ ಮುಂದೆ ತಕ್ಕ ಶಾಸ್ತ್ಯ ಮಾಡ್ತೀವಿ. ಅಲ್ಲಿನ ಜನರು ಶಾಂತಿ ಕಾಪಾಡಲು ಪೊಲೀಸರಿಗೆ ಸಹಕಾರ ಕೊಡಬೇಕು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇಂತಹ ಪ್ರಕರಣವನ್ನು ಸಾಮಾನ್ಯವಾಗಿ ತೆಗೆದುಕೊಳ್ಳುತ್ತಿತ್ತು. ಆದರೆ ನಾವು ಬಂದ ಮೇಲೆ ಎಲ್ಲಿಯೂ ನಿರ್ಲಕ್ಷ್ಯ ಮಾಡ್ತಿಲ್ಲ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.

ಇಂತಹ ಘಟನೆ ಆದ ಕೂಡಲೇ ಆರೋಪಿಗಳನ್ನು ಬಂಧಿಸಿ, ತಕ್ಕ ಕ್ರಮ ಕೈಗೊಳ್ಳುವ ಕೆಲಸ ಮಾಡಿದ್ದೇವೆ. ಆಕಸ್ಮಿಕವಾಗಿ ನಡೆಯುವ ಇಂತಹ ಘಟನೆಗಳಿಂದ ಸ್ವಲ್ಪ ಕಷ್ಟ ಆಗ್ತಿದೆ. ಕೆಲವರಿಗೆ ಇದರಿಂದ ಹತಾಶೆ ಕೂಡ ಆಗ್ತಿದೆ.ಇಂತಹ ಘಟನೆಗಳ ತಡೆಗೆ ಮುಂದೆ ಸರ್ಕಾರದದಿಂದ ಬಿಗಿಯಾದ ನಿಲುವು ತೆಗೆದುಕೊಳ್ಳುತ್ತೇವೆ. ‌
Published by:Mahmadrafik K
First published: