Praveen Nettar: ಪ್ರವೀಣ್ ನೆಟ್ಟಾರು ಕೊಲೆಗೆ ಹೇಗಿತ್ತು ಪ್ಲಾನ್- ಆರೋಪಿಗಳು ಬಾಯ್ಬಿಟ್ಟಿದ್ದೇನು?

ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳ ಬಂಧನವಾಗಿದೆ. ಕೃತ್ಯ, ಅದರ ಹಿಂದಿನ ಪ್ಲಾನ್ ಬಗ್ಗೆ ಹಂತಕರು ಬಾಯ್ಬಿಟ್ಟಿದ್ದಾರೆ. ಕೊಲೆಯ ಬಳಿಕ ಆರೋಪಿಗಳು ಮಸೀದಿಗೆ ತೆರಳಿದ್ದಾರೆ ಅನ್ನೋದು ಗೊತ್ತಾಗಿದೆ.

ಹತ್ಯೆಯಾದ ಪ್ರವೀಣ್

ಹತ್ಯೆಯಾದ ಪ್ರವೀಣ್

  • Share this:
ಬಿಜೆಪಿ ಮುಖಂಡ (BJP Leader) ಪ್ರವೀಣ್ ನೆಟ್ಟಾರು (Praveen Nettar) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಪೋಲೀಸರು (Police) ಇದೀಗ 10 ಆರೋಪಿಗಳನ್ನು ಬಂಧಿಸಿದ್ದಾರೆ. ಇಂದು ಮೂವರನ್ನು ಅರೆಸ್ಟ್ (Arrest) ಮಾಡಲಾಗಿದೆ. ಇವರೇ ಕೊಲೆಯ (Murder) ಪ್ರಮುಖ ಆರೋಪಿಗಳು. ಇನ್ನೂ ಹಲವರು ಈ ಕೃತ್ಯದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವ ಬಗ್ಗೆ ಶಂಕೆ ಹಿನ್ನೆಲೆ ಪೋಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ (Accused) ಪತ್ತೆಗಾಗಿ 6 ವಿಶೇಷ ಪೋಲೀಸ್ ತಂಡವನ್ನು ರಚಿಸಲಾಗಿತ್ತು. 16 ದಿನಗಳಿಂದ ಎಡಬಿಡದೆ ನಡೆಸಿದ ಕಾರ್ಯಾಚರಣೆಯಿಂದಾಗಿ (Operation) ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳ ಬಂಧನವಾಗಿದೆ. ಆರೋಪಿಗಳು ಕೃತ್ಯ, ಅದರ ಹಿಂದಿನ ಪ್ಲಾನ್ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಪ್ರವೀಣ್ ನೆಟ್ಟಾರು ಕೊಲೆಗೈದು ಆರೋಪಿಗಳ ಕೇರಳದಲ್ಲಿ ತಲೆಮರೆಸಿಕೊಂಡಿದ್ದರು. ಪೊಲೀಸರ ಸತತ ಕಾರ್ಯಾಚರಣೆಯಿಂದ ಎಲ್ಲರೂ ಖೆಡ್ಡಾಕ್ಕೆ ಬಿದ್ದಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಬಂಧಿತರು ಯಾರ್ಯಾರು?

1.ಸವಣೂರು ನಿವಾಸಿ ಝಾಕಿರ್ (29)

2.ಬೆಳ್ಳಾರೆ ನಿವಾಸಿ ಶಫೀಕ್ (27)

3.ಬೆಳ್ಳಾರೆ ಪಳ್ಳಿಮೊಗರು ನಿವಾಸಿ ಸದ್ದಾಂ (32)

4.ಬೆಳ್ಳಾರೆ ಪಳ್ಳಿಮಜಲು ನಿವಾಸಿ ಹಾರಿಸ್ (42)

5.ಸುಳ್ಯದ ನಾವೂರು ನಿವಾಸಿ ಹಬೀದ್ (22)

6.ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್ (28)

7.ಸುಳ್ಯ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್ (33)

8.ಸುಳ್ಯ ನಿವಾಸಿ ಶಿಹಾಬುದ್ದೀನ್(33)

9.ಪುತ್ತೂರಿನ‌ ಅಂಕತ್ತಡ್ಕ ನಿವಾಸಿ ರಿಯಾಜ್(27)

10.ಸುಳ್ಯದ ಎಲಿಮಲೆ‌ ನಿವಾಸಿ ಬಶೀರ್(28)

Praveen Nettar Murder case 10 accused arrest they says pre plan
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು


ಪಿಎಫ್​​ಐ ನಂಟಿನ ಮಾಹಿತಿ

ಹತ್ಯೆಯ ಪ್ರಮುಖ ಆರೋಪಿಯಾಗಿರುವ ಶಿಹಾಬುದ್ದೀನ್ ಪಿಎಫ್​​ಐ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಬಗ್ಗೆ ಪೋಲೀಸರಿಗೆ ಮಾಹಿತಿ ಲಭ್ಯವಾಗಿದೆ. ಪಿಎಫ್​​ಐನ ಸೇಫ್ & ರೆಸ್ಕ್ಯೂ ತಂಡದ ಸದಸ್ಯನಾಗಿರುವ ಶಿಹಾಬುದ್ದೀನ್​ಗೆ ಪಿಎಫ್​​ಐ ನಾಯಕರಿಗೆ ರಕ್ಷಣೆ ನೀಡುವ ಕೆಲಸವನ್ನು ನೀಡಲಾಗಿತ್ತು.

Praveen Nettar Murder case 10 accused arrest they says pre plan
ಆರೋಪಿ ಶಿಹಾಬುದ್ದೀನ್


ಇದನ್ನೂ ಓದಿ: ನೋಡನೋಡ್ತಿದ್ದಂತೆ ಬಸ್ ಬ್ರೇಕ್​​ಫೇಲ್, 30 ಪ್ರಯಾಣಿಕರು ಗ್ರೇಟ್​ ಎಸ್ಕೇಪ್!

ತಲೆಗೆ ತಲೆ ತೆಗೆಯೋ ಪ್ಲಾನ್!

ಒಂದು ವೇಳೆ ಮಸೂದ್ ಸಾವನ್ನಪ್ಪಿದ್ದೇ ಆದರೆ ಆತನ ಸಾವಿಗೆ ಇನ್ನೊಂದು ಹೆಣವನ್ನು ಉರುಳಿಸುವ ಪಣವನ್ನೂ ಶಿಹಾಬುದ್ದೀನ್ ತೊಟ್ಟಿದ್ದ. ಮಸೂದ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೇ ಅಲರ್ಟ್ ಆದ ಶಿಹಾಬುದ್ದೀನ್ ಜುಲೈ 24 ರಂದು ಸುಳ್ಯದ ಪಿಎಫ್​ಐ ಕಚೇಗೆ ಇತರ ಆರೋಪಿಗಳನ್ನು ಕರೆಸಿ ಇನ್ನೊಂದು ಸುತ್ತಿನ ಮೀಟಿಂಗ್ ಮಾಡಿದ್ದ.

Praveen Nettar Murder case 10 accused arrest they says pre plan
ಆರೋಪಿ ಶಫೀಕ್


ಆ ಮೀಟಿಂಗ್​​ನಲ್ಲಿ ಬೆಳ್ಳಾರೆಯಲ್ಲಿ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡ ಇಲ್ಲವೇ ಬಿಜೆಪಿಯಲ್ಲಿ ಗುರುತಿಸಿಕೊಂಡ ಪ್ರಮುಖರೊಬ್ಬರನ್ನು ಬಲಿ ಪಡೆಯುವ ಅಜೆಂಡಾವನ್ನೂ ಇಟ್ಟುಕೊಳ್ಳಲಾಗಿತ್ತು. ಪ್ರವೀಣ್ ನೆಟ್ಟಾರು ಜೊತೆಗೆ ಇನ್ನೂ ಹಲವರ ಪಟ್ಟಿ ತಯಾರಿಸಿದ್ದ ಹಂತಕರು ತಮಗೆ ಸುಲಭವಾಗಿ ಸಿಗುವವರನ್ನು ಮೊದಲು ಟಾರ್ಗೆಟ್ ಮಾಡಲು ನಿರ್ಧರಿಸಿತ್ತು.

ಪ್ರವೀಣ್ ನೆಟ್ಟಾರು ಹತ್ಯೆ 3 ಬಾರಿ ಸ್ಕೆಚ್!

ಅದೇ ಪ್ರಕಾರ ಪ್ರವೀಣ್ ನೆಟ್ಟಾರನ್ನು ಬಲಿ ತೆಗೆಯಲು ನಿರ್ಧರಿಸಿದ್ದ ಹಂತಕರ ತಂಡ 3 ಬಾರಿ ಸ್ಕೆಚ್ ಹಾಕಿತ್ತು. ಜುಲೈ 26 ರಂದು ಏಕಾಏಕಿ ಪ್ರವೀಣ್ ತಲೆ ಮೇಲೆ ತಲವಾರು ಬೀಸಿ ಹತ್ಯೆ ಮಾಡಿದ್ದಾರೆ. ಬೈಕ್ ಮೂಲಕ ಬಂದಿದ್ದ ಮೂವರ ತಂಡ ಈ ಕೃತ್ಯ ನಡೆಸಿತ್ತು.

Praveen Nettar Murder case 10 accused arrest they says pre plan
ಆರೋಪಿ ಝಾಕಿರ್


ಬೈಕ್​ನ್ನು ಚಲಾಯಿಸಲು ರಿಯಾಜ್​​ನ್ನು ನೇಮಿಸಿದ್ದು, ಬಶೀರ್ ಮತ್ತು ಶಿಹಾಬುದ್ದೀನ್ ತಲವಾರು ದಾಳಿ ನಡೆಸುವುದು ಎಂದು ಮೊದಲೇ ನಿಗದಿಯಾದಂತೆ ಹತ್ಯೆ ನಡೆದಿತ್ತು. ಕೊಲೆ ನಡೆಸಿದ ಬಳಿಕ ಹಂತಕರ ತಂಡ ಬೈಕ್ ಮೂಲಕ ಪೆರುವಾಜೆ, ಸವಣೂರು ಮಾರ್ಗವಾಗಿ ಅಜ್ಞಾತ ಸ್ಥಳವೊಂದಕ್ಕೆ ಸೇರಿದೆ.

ಹತ್ಯೆ ಬಳಿಕ ಮಸೀದಿಗೆ ತೆರಳಿದ್ದ ಹಂತಕರು!

ಕೊಲೆ ಬಳಿಕ ಹಂತಕರು ಮಂಗಳೂರಿಗೆ ಹೋಗಿದ್ದು, ಅಲ್ಲಿಂದ ಕಾಸರಗೋಡಿನ ಮಾಲಿಕ್ ದಿನಾರ್ ಮಸೀದಿಗೆ ಹೋಗಿದ್ದರು. ಅಲ್ಲಿಂದ ಕೇರಳದ ಹಲವು ಕಡೆಗಳಿಗೆ ಹಂತಕರ ತಂಡ ಓಡಾಡಿತ್ತು. ತಮ್ಮ ಸುಳಿವು ಪೋಲೀಸರಿಗೆ ದೊರೆಯದಂತೆ ತಂಡ ನಿರಂತರವಾಗಿ ತಮ್ಮ ನೆಲೆಯನ್ನು ಬದಲಾಯಿಸುತ್ತಿತ್ತು.

ಇದನ್ನೂ ಓದಿ: ಕೊಪ್ಪಳದಲ್ಲಿ ಗಲಾಟೆ, ಕಲ್ಲುತೂರಾಟ; ಇಬ್ಬರು ಸಾವು- ನಿಷೇಧಾಜ್ಞೆ ಜಾರಿ

ಕೊನೆಗೆ ಒಂದು ಕಡೆ ಪೋಲೀಸ್ ತಂಡ ಮೂವರನ್ನು ಹೆಡೆಮುರಿ ಕಟ್ಟಿ ಕರೆ ತಂದಿದೆ. ಬಂಟ್ವಾಳ ಸರ್ಕಲ್ ಇನ್ಸ್ ಸ್ಪೆಕ್ಟರ್ ಡಿ.ಟಿ.ನಾಗರಾಜ್, ಬಂಟ್ವಾಳ ಎಸ್.ಐ. ಪ್ರಸನ್ನ, ವಿಟ್ಲ ಠಾಣೆಯ ಹೆಚ್.ನಾಗರಾಜ್, ಸಂಪ್ಯ ಠಾಣೆಯ ಉದಯರವಿ, ಸುಳ್ಯ ಸರ್ಕಲ್ ನವೀನ್ ಜೋಗಿ, ಮಡಿಕೇರಿ ಸಿಸಿಬಿ ತಂಡ, ಸಿಐಡಿ ಅಧಿಕಾರಿ ಎಂ.ಎನ್.ಅನುಚೇತ್, ದಕ್ಷಿಣ ಕನ್ನಡ ಜಿಲ್ಲಾ ಅಡಿಷನ್ ಎಸ್​​ಪಿ ಕುಮಾರಚಂದ್ರ ತಂಡ ಕಳೆದ 16 ದಿನಗಳಿಂದ ಎಡಬಿಡದೆ ನಡೆಸಿದ ಕಾರ್ಯಾಚರಣೆಯಿಂದಾಗಿ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳ ಬಂಧನವಾಗಿದೆ.
Published by:Thara Kemmara
First published: