Yadagiri: ಹಂತಕರನ್ನು ಶೂಟ್ ಔಟ್ ಮಾಡಿ! BJP ಮುಖಂಡ ಪ್ರವೀಣ್ ಹತ್ಯೆಗೆ ಶಾಸಕ ರಾಜುಗೌಡ ಅಕ್ರೋಶ

ಬಿಜೆಪಿ ಮುಖಂಡ ಹತ್ಯೆ ಪ್ರಕರಣದ ಆರೋಪಿಗಳಿಗೆ ಶೂಟ್ ಔಟ್ (Shootout) ಮಾಡಬೇಕು ಪೊಲೀಸರಿಗೆ ಅದೊಂದೆ ದಾರಿ ಅಂತಾ ಸುರಪುರ ಶಾಸಕ‌ ರಾಜುಗೌಡ ಹೇಳಿಕೆ ನೀಡಿದ್ದಾರೆ.

ಶಾಸಕ ರಾಜು ಗೌಡ

ಶಾಸಕ ರಾಜು ಗೌಡ

  • Share this:
ಯಾದಗಿರಿ(ಜು.28): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ (BJP Leader) ಪ್ರವೀಣ್ ಹತ್ಯೆ (Praveen Murder) ಮಾಡಿದ ಘಟನೆಗೆ ರಾಜ್ಯಾದ್ಯಂತ ಅಕ್ರೋಶ ವ್ಯಕ್ರವಾಗಿದೆ. ರಾಜ್ಯದಲ್ಲಿ ಹಿಂದು ಸಮುದಾಯದವರಿಗೆ ಸುರಕ್ಷತೆ ಇಲ್ಲವಾ,ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲವಾ ಎಂಬ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಬಿಜೆಪಿ ಮುಖಂಡ ಹತ್ಯೆ ಪ್ರಕರಣದ ಆರೋಪಿಗಳಿಗೆ ಶೂಟ್ ಔಟ್ (Shootout) ಮಾಡಬೇಕು ಪೊಲೀಸರಿಗೆ ಅದೊಂದೆ ದಾರಿ ಅಂತಾ ಸುರಪುರ ಶಾಸಕ‌ ರಾಜುಗೌಡ ಹೇಳಿಕೆ ನೀಡಿದ್ದಾರೆ. ಯಾದಗಿರಿ (Yadagiri) ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಮಾತನಾಡಿದ ಶಾಸಕ ರಾಜುಗೌಡ,ಬಿಜೆಪಿ ಮುಖಂಡನ  ಕೊಲೆಯಾಗಿದ್ದು ಇಂತಹ ಘಟನೆಗಳು ನಡೆದಾಗ ಸಿರಿಯಸ್ ಆಗಿ ಆಕ್ಷನ್ ತೆಗೆದುಕೊಳ್ಳದಿದ್ದಾಗ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತುವೆ ಎಂದು ಹೇಳಿದರು.

ಸುಮ್ಮನೆ ಕಾನೂನು ಕ್ರಮಕೈಗೊಳ್ಳುತ್ತೆವೆಂದು ತಾತ್ಕಾಲಿಕ ಉತ್ತರ ಕೊಟ್ಟರೆ ಸಮಸ್ಯೆ ಬಗೆ ಹರಿಯುವದಿಲ್ಲ,ಯಾವುದೇ ಧರ್ಮದವರು ಕೊಲೆ ಮಾಡಲಿ ಯಾರೇ ಕೊಲೆ ಮಾಡಲಿ ಇಂತಹ ಪ್ರಕರಣದಲ್ಲಿ ಆರೋಪಿಗಳಿಗೆ ಶೂಟ್ ಔಟ್ ಮಾಡಬೇಕು. ಪೊಲೀಸರಿಗೆ ಫ್ರೀಯಾಗಿ ಬಿಡಬೇಕು ಎಂದು ಪ್ರತಿಕ್ರಿಯಿಸಿದರು.

ಪೊಲೀಸರಿಗೆ ಒತ್ತಡ

ಪೊಲೀಸರು ಯಾರಿಗಾದರು ಶೂಟ್ ಔಟ್ ಮಾಡಿದರೆ,ಪೊಲೀಸರಿಗೆ ಎಷ್ಟು ತನಿಖೆ ನಡೆಯುತ್ತದೆ ಗೊತ್ತಾ..? ಪೊಲೀಸರು ಶೂಟ್ ಔಟ್ ಮಾಡಿದ್ರೆ ಮಾನವ ಹಕ್ಕುಗಳ ಆಯೋಗ ಪೊಲೀಸರು ಯಾಕೇ ಶೂಟ್ ಔಟ್ ಮಾಡಿದ್ರು ಅಂತಾ ಪೊಲೀಸರ ಮೇಲೆ ಬಂದು ಕುಳಿತುಕೊಳ್ಳುತ್ತಾರೆ.

ಶೂಟ್ ಔಟ್ ಮಾಡುವುದು ಬಿಟ್ಟರೆ ಬೆರೆ ದಾರಿನೇ ಇಲ್ಲಾ

ಈಗ ಎಲ್ಲಿ ಹೋಗಿದ್ದಾರೆ ಮಾನವಹಕ್ಕುಗಳ ಆಯೋಗ ಎಂದು ಶಾಸಕ ರಾಜುಗೌಡ ಅವರು ಪ್ರಶ್ನಿಸಿದರು. ಶೂಟ್ ಔಟ್  ಮಾಡಿದ ಆಫೀಸರ್ ಮತ್ತೆ ಬೇಡಪ್ಪಾ ಶೂಟ್ ಔಟ್ ಸಹವಾಸವೆನ್ನುವಂತಹ ಪರಿಸ್ಥಿತಿ ಇವತ್ತು ನಿರ್ಮಾಣವಾಗಿದೆ. ಇಂತಹ ಪ್ರಕರಣದಲ್ಲಿ ಆರೋಪಿಗಳಿಗೆ,ರೌಡಿಗಳಿಗೆ ಗೂಂಡಾಗಳಿಗೆ ಶೂಟ್ ಔಟ್ ಮಾಡುವುದು ಬಿಟ್ಟರೆ ಬೆರೆ ದಾರಿನೇ ಇಲ್ಲಾ ಎಂದು ಹೇಳಿಕೆ ನೀಡಿದರು.

ಎಲ್ಲಾ ಜನಾಂಗದವರು ಒಂದಾಗಿರಬೇಕು

ಬೆರೆ ಕೊಮಿನವರಿಗೆ ಎನಾದರು ಆದರೆ ಎಲ್ಲರೂ ಬರುತ್ತಾರೆ ‌ಆದರೆ,ಹಿಂದುಗಳಿಗೆ ಎನಾದರು ಆದರೆ, ಯಾರು ಕೇಳಲ್ಲ‌.ಕೊಲೆಯಾದಾಗ ಮಾತ್ರ ಈಗ ಹಿಂದುಗಳು ಎನ್ನುತ್ತಾರೆ. ಮತ್ತೆ ಬೆರೆ ಟೈಮ್ ನಲ್ಲಿ ನಾವು ಹಿಂದುಳಿದ ವರ್ಗ,ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಲಿಂಗಾಯತ, ಬ್ರಾಹ್ಮಣ ಎನ್ನುತ್ತಾ ಕುಳಿತುಕೊಳ್ಳುತ್ತೆವೆ.ಜಾತಿ ಜಾತಿ  ಎನ್ನುವ ಬದಲು ಎಲ್ಲರೂ ಜಾತಿ ಬಿಟ್ಟು ಒಂದಾದರೆ ಇಂತಹ ಸಮಸ್ಯೆ ಬಗೆ ಹರಿಯುತ್ತದೆ ಎಂದರು.

ಬಸವರಾಜ ಬೊಮ್ಮಾಯಿ ಸರಕಾರ ಒಂದು ವರ್ಷ ಅಧಿಕಾರವಧಿ

ಪೂರ್ಣಗೊಳಿಸುತ್ತಿದ್ದು,ಬೊಮ್ಮಾಯಿ ಅವರ ಸರಕಾರ ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಮಾಡುತ್ತಿದೆ.ಯಾದಗಿರಿ ಜಿಲ್ಲೆಗೆ ನೀರಾವರಿ ಯೋಜನೆಗೆ ಅನುದಾನ ನೀಡಿದ್ದಾರೆ ಎಂದರು.
ನಿನ್ನೆ ವಿಜಯಪುರನ ಆಲಮಟ್ಟಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ್ದು,ನಿನ್ನೆಯಿಂದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನಾರಾಯಣಪುರ ಎಡದಂಡೆ ಹಾಗೂ ಬಲದಂಡೆ ಕಾಲುವೆಗೆ ನೀರು ಬಿಡಲಾಗುತ್ತಿದೆ ಎಂದರು.

ಇದನ್ನೂ ಓದಿ: Praveen Murder: 50 ಲಕ್ಷ ಪರಿಹಾರ ಘೋಷಣೆ ಮಾಡಲಿ, ಇದು ಕಾನೂನು, ಸರ್ಕಾರದ ವೈಫಲ್ಯ: ಮುತಾಲಿಕ್ ಕಿಡಿ

ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Hindu Activist Praveen Nettaru) ಹತ್ಯೆ ಸಂಬಂಧ ಇಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಪ್ರತಿಕ್ರಿಯೆ ನೀಡಿದ್ದಾರೆ. ಶೀಘ್ರವೇ ಕೊಲೆಗಡುಕರ ಬಂಧನಕ್ಕೆ ಸೂಚನೆ ನೀಡಿದ್ದೇವೆ. ಕೇರಳ ಬಾರ್ಡರ್ (Kerala Border) ದಾಟಿಯಾದ್ರು ಬಂಧಿಸುವಂತೆ ಸೂಚನೆ ನೀಡಿದ್ದೇವೆ ಯಾರು ಇಲ್ಲದೇ ಇದ್ದಾಗ ಮೋಸ ಮಾಡಿ ಕೊಲೆ ಮಾಡಿದ್ದಾರೆ. ಇದೊಂದು ವ್ಯವಸ್ಥಿತವಾದ ಸಂಚು.ಇವರನ್ನು ಸದೆ ಬಡಿಯುವ ಕೆಲಸವನ್ನು ನಾವು ಮಾಡ್ತಿದ್ದೇವೆ. ಯಾರೂ ಇಲ್ಲದಿರುವಾಗ ಹಿಂದಿನಿಂದ ಬಂದು ಕೊಲೆ ಮಾಡಿದ್ದಾರೆ. ಕೊಲೆಗಡುಕರ ದಸ್ತಗಿರಿ ಮಾಡಿ ಕ್ರಮ ತಗೋತೇವೆ. ಒಬ್ಬ ಅಮಾಯಕ ಕೊಲೆಯಾದಾಗಾ ಜನಾಕ್ರೋಶ ಇರುತ್ತೆ. ಹೋಂ ಮಿನಿಸ್ಟರ್ (Home Minister), ಪೊಲೀಸರಿಗೆ ಕೊಲೆಗಾರರನ್ನು ಬಂಧಿಸುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: Praveen Murder: ಪ್ರವೀಣ್ ಮರಣೋತ್ತರ ಪರೀಕ್ಷೆ ಮುಕ್ತಾಯ, ಅಂತಿಮಯಾತ್ರೆಗೆ ಸಿದ್ಧತೆ; ಕರಾವಳಿಯಲ್ಲಿ ಹೈಅಲರ್ಟ್

ಪ್ರವೀಣ್ ಕೊಲೆ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಇದು ದುರದೃಷ್ಟಕರ ಸಂಗತಿ. ಅಮಾಯಕ ಯುವಕ ತನ್ನ ಅಂಗಡಿ ಮುಚ್ಚಿ ಮನೆಗೆ ಹೋಗುವ ವೇಳೆ ಘಟನೆ ನಡೆದಿದೆ. ಕರಾವಳಿಯಲ್ಲಿ ಬಹಳ ವರ್ಷಗಳಿಂದ ಇಂತ ಘಟನೆಗಳು ನಡೆಯುತ್ತಿವೆ. ಪೋಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಂಡರು.
Published by:Divya D
First published: