CM Basvaraja Bommai: ಪ್ರವೀಣ್ ಹತ್ಯೆ ಪ್ರಕರಣ NIAಗೆ ಹಸ್ತಾಂತರ- ಸಿಎಂ ಬೊಮ್ಮಾಯಿ

ಪ್ರವೀಣ್ ಹತ್ಯೆ ಪ್ರಕರಣವನ್ನ NIAಗೆ ಹಸ್ತಾಂತರ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.  ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಡಿಜಿ ಐಜಿಪಿ ಪ್ರವೀಣ್ ಸೂದ್ ಜೊತೆ ಚರ್ಚೆ ನಿರ್ಧಾರ ಕೈಗೊಂಡಿರೋದಾಗಿ ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ. 

ಬಸವರಾಜ ಬೊಮ್ಮಾಯಿ, ಹತ್ಯೆಯಾದ ಪ್ರವೀಣ್​

ಬಸವರಾಜ ಬೊಮ್ಮಾಯಿ, ಹತ್ಯೆಯಾದ ಪ್ರವೀಣ್​

  • Share this:
ಬೆಂಗಳೂರು (ಜು.29): ಪ್ರವೀಣ್ ಹತ್ಯೆ ಪ್ರಕರಣವನ್ನ NIAಗೆ ಹಸ್ತಾಂತರ ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ (CM Basvaraja Bommai) ಹೇಳಿದ್ದಾರೆ.  ಪ್ರವೀಣ್ ಹತ್ಯೆ ಪ್ರಕರಣ (Praveen Murder Case) ಸಂಬಂಧ ಡಿಜಿ ಐಜಿಪಿ ಪ್ರವೀಣ್ ಸೂದ್ ಜೊತೆ ಚರ್ಚೆ ನಿರ್ಧಾರ ಕೈಗೊಂಡಿರೋದಾಗಿ ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.  ಪ್ರವೀಣ್ ಹತ್ಯೆ ಕೇಸ್ ಒಂದು ವ್ಯವಸ್ಥಿತವಾಗಿ ನಡೆದಿರೋ ಹತ್ಯೆ.  ಪ್ರಕರಣದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಪ್ರಕರಣದ ತನಿಖೆ ತ್ವರಿತಗತಿಯಾಗಿ ನಡೆಯುತ್ತಿದೆ. ಪ್ರಕರಣ 2 ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ NIAಗೆ ಲೆಟರ್ ಬರೆಯೋದಕ್ಕೆ ಹೇಳಿದ್ದೇನೆ. ಪ್ರಕರಣವನ್ನ NIAಗೆ ವಹಿಸಲು ತೀರ್ಮಾನಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ. 

ಹತ್ಯೆ ಹಿಂದಿದೆ ಹೊರ ರಾಜ್ಯದ ಲಿಂಕ್ 

ಕೇರಳ ಬಾರ್ಡರ್‌ನಲ್ಲಿ ಸಿಸಿಟಿವಿ ಅಳವಡಿಸಿ, ಚೆಕ್ ಪೋಸ್ಟ್ ಹಾಕಿ ಕಣ್ಗಾವಲು ಇಡಲು ಸೂಚನೆ ನೀಡಲಾಗಿದೆ. ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಕ್ಯಾಂಪ್ ಮಾಡಲು ತಿಳಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಹೆಚ್ಚುವರಿ ಕೆ.ಎಸ್. ಆರ್.ಪಿ ತುಕಡಿ ನಿಯೋಜಿಸಲು ಸೂಚನೆ ನೀಡಲಾಗಿದೆ. ರಾತ್ರಿ ಹೊತ್ತು ಹೆಚ್ಚು ಗಸ್ತು ನಿಯೋಜನೆ ಮಾಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೊಲೆಗಾರರನ್ನು ಬಂಧಿಸಲು ತಂಡ ರಚನೆ

ನಿನ್ನೆ ಸುರತ್ಕಲ್​ನಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ ಅವರು, ತೀವ್ರಗತಿಯಲ್ಲಿ ತನಿಖೆ  ಮಾಡಲಾಗುವುದು, ತಪ್ಪಿತಸ್ಥರನ್ನ ಬಂಧಿಸಬೇಕು. ಕೊಲೆಗಾರರನ್ನು ಬಂಧಿಸಲು ತಂಡಗಳನ್ನು ರಚಿಸಲು ನಿರ್ಧಾರ ಮಾಡಲಾಗಿದೆ. ಎಲ್ಲಾ  ಧಾರ್ಮಿಕ ಮುಖಂಡರನ್ನ ಕರೆದು ಜಿಲ್ಲಾ ಮಟ್ಟದಲ್ಲಿ ಶಾಂತಿ ಸಭೆಯನ್ನ ಖಂಡಿತವಾಗಿ ಮಾಡ್ತೀವಿ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

ಇದನ್ನೂ ಓದಿ:  Siddaramaiah ಅಧಿಕಾರವಧಿಯಲ್ಲಿ 32 ಕೊಲೆ, ನಾವು ಎಲ್ಲವನ್ನು ನಿಭಾಯಿಸಿದ್ದೇವೆ: CM Bommai

ಪ್ರವೀಣ್​ ಕುಟುಂಬಕ್ಕೆ ₹ 50 ಲಕ್ಷ ಮೊತ್ತದ ಪರಿಹಾರದ ಚೆಕ್‌

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರದಿಂದ ₹25 ಲಕ್ಷ ಹಾಗೂ ಬಿಜೆಪಿ ವತಿಯಿಂದ ₹ 25 ಲಕ್ಷ ಸೇರಿ ಒಟ್ಟು ₹ 50 ಲಕ್ಷ ಮೊತ್ತದ ಪರಿಹಾರದ ಚೆಕ್‌ ಹಸ್ತಾಂತರಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕುಟುಂಬಕ್ಕೆ ಪ್ರವೀಣ್ ಅವರೇ ಆಧಾರವಾಗಿದ್ದರು. ಚಿಕ್ಕ ಅಂಗಡಿಯೇ ಅವರ ಕುಟುಂಬದ ಆದಾಯದ ಮೂಲವಾಗಿತ್ತು. ಅವರ ಕುಟುಂಬದವರಿಗೆ ಪಕ್ಷ ಮತ್ತು ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: HD Kumaraswamy: ಪ್ರತಿ ಕೊಲೆಗೂ ತಾನೇ ಮುಂದೆ ನಿಂತು BJP ಹೊಸ ಟ್ವಿಸ್ಟ್ ನೀಡ್ತಿದೆ; HDK ಆರೋಪ

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಗೆ ಗುರುವಾರ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕುಟುಂಬಕ್ಕೆ ಸಾಂತ್ವಾನ ಹೇಳಿ, 25 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು. ಬಿಜೆಪಿ ಮುಖಂಡನ ಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇಂದು ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸುಳ್ಯ ತಾಲೂಕಿನ ನೆಟ್ಟೂರು ಗ್ರಾಮಕ್ಕೆ ಭೇಟಿ ನೀಡಿ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಾಂತ್ವನ ಹೇಳಿದರು.

ಪ್ರವೀಣ್ ಕುಟುಂಬಸ್ಥರಿಗೆ ಸಿಎಂ ಸಾಂತ್ವನ

ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲೂ ಸರ್ಕಾರ ತನಿಖೆ ನಡೆಸುತ್ತಿದೆ. ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು. ಸರ್ಕಾರ ಮತ್ತು ಬಿಜೆಪಿ ನಿಮ್ಮೊಂದಿಗೆ ಇದೆ ಎಂದು ಸಿಎಂ ಬೊಮ್ಮಾಯಿ ಪ್ರವೀಣ್ ಕುಟುಂಬಕ್ಕೆ ಧೈರ್ಯ ತುಂಬಿದರು.
Published by:Pavana HS
First published: