ಮಗಳನ್ನು ಸುದ್ದಿಗೋಷ್ಠಿಗೆ ಕರೆ ತಂದು ಕಥುವಾ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಾ ಕುಳಾಯಿ

news18
Updated:April 16, 2018, 5:14 PM IST
ಮಗಳನ್ನು ಸುದ್ದಿಗೋಷ್ಠಿಗೆ ಕರೆ ತಂದು ಕಥುವಾ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಾ ಕುಳಾಯಿ
news18
Updated: April 16, 2018, 5:14 PM IST
ಭರತ್​ ರಾಜ್​​, ನ್ಯೂಸ್​ 18 ಕನ್ನಡ

ಮಂಗಳೂರು, (ಏ.16): ಬಿಜೆಪಿಯ ಹಿಂದೂಗಳು ಭಾರತ್​ ಮಾತಾ ಕೀ ಜೈ ಎನ್ನುತ್ತಾರೆ ಹೊರತು ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವುದಿಲ್ಲ ಎಂದು ಮಂಗಳೂರು ಉತ್ತರ ಕ್ಷೇತ್ರದ ಕಾರ್ಪೋರೇಟರ್ ‌ಹಾಗೂ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ತನ್ನ ಎಂಟು ವರ್ಷದ ಮಗಳನ್ನೂ ಕರೆದುಕೊಂಡು ಬಂದು   ಕಥುವಾ ಪ್ರಕರಣಕ್ಕೆ ಖಂಡನೆ ವ್ಯಕ್ತಪಡಿಸಿ ಸುದ್ದಿಗೋಷ್ಠಿಯನ್ನು ಅವರು ಮಾತನಾಡಿದರು.

ತಾನು ಭಾರತೀಯಳು ಎಂದು ಹೇಳಲು ನಾಚಿಗೆಯಾಗುತ್ತೆ. ಈ ಮಾತು ಹೇಳಿದ ಬಳಿಕ ನಾಳೆ ಹಿಂದೂಗಳು ನನ್ನ ಕಾರಿಗೆ ಕಲ್ಲು ತೂರಬಹುದು ಎಂದು ಆತಂಕ ವ್ಯಕ್ತಪಡಿಸಿದರು

ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಿಭಾ, ನರೇಂದ್ರ ಮೋದಿ ಹೆಂಡತಿಗೇ ಹಿಂಸೆ ನೀಡಿ ದೌರ್ಜನ್ಯ ಎಸಗಿದ್ದಾರೆ. ಯೋಗಿ ಆದಿತ್ಯನಾಥ್ ಜೋಗಿಯಾಗಿದ್ದು, ಅವರಿಗೆ ಹೆಂಡತಿ ಮಕ್ಕಳಿಲ್ಲ. ಇಬ್ಬರಿಗೂ ಹೆಂಗಸರ ಜತೆಯಿದ್ದು ತಿಳಿದಿಲ್ಲ, ಅವರ ನೋವು ಅರ್ಥವಾಗಲ್ಲ ಎಂದು ಟೀಕಿಸಿದ್ದಾರೆ.‌

 
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...