ಪ್ರಕಾಶ್ ರೈ ಬಗ್ಗೆ ಪ್ರೀತಿ; ಸಿದ್ದರಾಮಯ್ಯಗೆ ಟೀಕೆ; ಮಂತ್ರಿ ಸ್ಥಾನ ಒಲ್ಲೆ: ಗೆಲುವಿಗೆ ಪ್ರತಾಪ್ ಸಿಂಹ ಕೃತಜ್ಞತೆ

ಅವರಿಗಾಗಿರುವ ಸೋಲಿನ ನೋವು ಅವರಿಗೆ ಮಾತ್ರ ಗೊತ್ತಿರುತ್ತದೆ. ಅವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದದ್ದು ಬಿಟ್ಟರೆ ಅವರ ಬಗ್ಗೆ ತನಗೆ ಗೌರವ ಇದೆ ಎಂದು ಪ್ರಕಾಶ್ ರೈ ಬಗ್ಗೆ ಪ್ರತಾಪ್ ಸಿಂಹ ಮಾತನಾಡಿದ್ದಾರೆ.

news18
Updated:May 28, 2019, 3:58 PM IST
ಪ್ರಕಾಶ್ ರೈ ಬಗ್ಗೆ ಪ್ರೀತಿ; ಸಿದ್ದರಾಮಯ್ಯಗೆ ಟೀಕೆ; ಮಂತ್ರಿ ಸ್ಥಾನ ಒಲ್ಲೆ: ಗೆಲುವಿಗೆ ಪ್ರತಾಪ್ ಸಿಂಹ ಕೃತಜ್ಞತೆ
ಪ್ರತಾಪ್ ಸಿಂಹ
  • News18
  • Last Updated: May 28, 2019, 3:58 PM IST
  • Share this:
ಮೈಸೂರು(ಮೇ 28): ಲೋಕಸಭೆ ಚುನಾವಣೆಗೆ ಮುನ್ನ ಪ್ರಕಾಶ್ ರೈ ಮತ್ತು ಪ್ರತಾಪ್ ಸಿಂಹ ನಡುವಿನ ವಾಗ್ಸಮರ ಸಾಕಷ್ಟು ಚರ್ಚೆ ಮತ್ತು ವಿವಾದಗಳಿಗೆ ಕಾರಣವಾಗಿತ್ತು. ಪ್ರತಾಪ್ ಸಿಂಹ ಅವರಂತೂ ವೈಯಕ್ತಿಕ ಟೀಕೆಯ ಮಟ್ಟಕ್ಕೂ ಹೋಗಿದ್ದರು. ಆಗ ಅಷ್ಟು ಉಗ್ರಾವತಾರ ತಾಳಿದ್ದ ಸಿಂಹ ಇದೀಗ ಶಾಂತರಾಗಿದ್ಧಾರೆ. ಮೈಸೂರಿನಲ್ಲಿ ಸತತ ಎರಡನೇ ಬಾರಿ ಸಂಸದರಾಗಿ ಚುನಾಯಿತರಾಗಿರುವ ಅವರು, ಪ್ರಕಾಶ್ ರೈ ಬಗ್ಗೆ ಸಹಾನುಭೂತಿಯ ಮಾತುಗಳನ್ನಾಡಿದ್ದಾರೆ.

ಪ್ರಕಾಶ್ ರೈ ಅವರು ನಟನೆಯ ವಿಚಾರದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅವರ ನಟನೆಗೆ ನಾನು ಅಭಿಮಾನಿ. ಆದರೆ, ಅವರ ಸೈದ್ಧಾಂತಿಕ ವಿಚಾರಗಳಿಗೆ ನಮ್ಮ ವಿರೋಧ ಇದೆ. ಮೋದಿ, ಅಮಿತ್ ಶಾ ಬಗ್ಗೆ ಸಭ್ಯತೆ ಮೀರಿ ಮಾತನಾಡಿದ್ದನ್ನ ನಾನು ಕಟುವಾಗಿ ಟೀಕಿಸಿದ್ದೆ ಎಂದು ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.

ಪ್ರಕಾಶ್ ರೈ ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ಪ್ರತಾಪ್ ಸಿಂಹ, ಅವರ ಸೋಲಿನ ನೋವು ಅವರಿಗೆ ಮಾತ್ರ ಗೊತ್ತಿರುತ್ತದೆ. ಈ ಸಂದರ್ಭದಲ್ಲಿ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ ಎಂದು ಹೇಳಿ ಅಚ್ಚರಿ ಹುಟ್ಟಿಸಿದರು.

ಇದನ್ನೂ ಓದಿ: 'ರಾಜ್ಯಕ್ಕೆ ಬಂದಾಗ 2 ಬ್ಯಾಗ್​ ಹಿಡಿದು ಉಡುಪಿ ಬಸ್​ಸ್ಟ್ಯಾಂಡಿನಲ್ಲಿ ನಿಂತಿದ್ದೆ...' ವಿದಾಯದ ವೇಳೆ ಕನ್ನಡಿಗರನ್ನು ಹಾಡಿ ಹೊಗಳಿದ ಅಣ್ಣಾಮಲೈ

ತಮ್ಮನ್ನು ಸತತ ಎರಡನೇ ಬಾರಿ ಆಯ್ಕೆ ಮಾಡಿದ ಮತದಾರರು ಹಾಗೂ ತಮಗೆ ನೆರವಾದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಪ್ರತಾಪ್ ಸಿಂಹ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

“ಕ್ಷೇತ್ರದ ಜನರು ಈ ಬಾರಿ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿದ್ದಾರೆ. ಮಹಾರಾಜರನ್ನು ಬಿಟ್ಟರೆ ಅತಿ ಹೆಚ್ಚು ಅಂತರದಿಂದ ಗೆದ್ದದ್ದು ನಾನೆಯೇ. ಇದಕ್ಕೆ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಬಾರಿಯ ಚುನಾವಣೆಯಲ್ಲಿ ಇಡೀ ದೇಶಕ್ಕೆ ನರೇಂದ್ರ ಮೋದಿಯೇ ಏಕೈಕ ಅಭ್ಯರ್ಥಿಯಾಗಿದ್ದರು. ಪ್ರತಾಪ್ ಸಿಂಹ ಸೋತರೆ ಅದು ತನ್ನ ಸೋಲು ಎಂದು ಯಡಿಯೂರಪ್ಪ ಹೇಳಿದ್ದರು. ನನ್ನ ಗೆಲುವಿಗೆ ಕಾರಣರಾದ ನರೇಂದ್ರ ಮೋದಿ ಮತ್ತು ಯಡಿಯೂರಪ್ಪ ಅವರಿಗೆ ಆಭಾರಿಯಾಗಿರುತ್ತೇನೆ. ಪತ್ರಕರ್ತರು ಹಾಗೂ ಸಂಘ ಪರಿವಾರದ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಪ್ರತಾಪ್ ಸಿಂಹ ತಮ್ಮ ಗೆಲುವಿಗೆ ಕಾರಣರಾದವರನ್ನು ನೆನಪಿಸಿಕೊಂಡರು.

ಇದನ್ನೂ ಓದಿ: 61 ನಗರ ಸ್ಥಳೀಯ ಸಂಸ್ಥೆಗಳಿಗೆ ಎರಡನೇ ಹಂತದ ಚುನಾವಣೆ; ಬಿಬಿಎಂಪಿಯ 2 ವಾರ್ಡ್​ಗಳಿಗೆ ಉಪಚುನಾವಣೆಸಿದ್ದರಾಮಯ್ಯ ಬಗ್ಗೆ:

ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಟೀಕಾ ಪ್ರಹಾರ ಮಾಡಿದರು. ಇಡೀ ಸರಕಾರವನ್ನು ಸಿದ್ದರಾಮಯ್ಯ ತಮ್ಮ ಕಂಟ್ರೋಲ್​ನಲ್ಲಿಯೇ ಇಟ್ಟುಕೊಂಡವರು. ತನ್ನನ್ನು ಸೋಲಿಸಲು ಸಿದ್ದರಾಮಯ್ಯ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ತಮಗೆ ಬೇಕಾದ ಅಭ್ಯರ್ಥಿಯನ್ನು ಕೊಡಗು-ಮೈಸೂರು ಕ್ಷೇತ್ರಕ್ಕೆ ತಂದು ನಿಲ್ಲಿಸಿದ್ದರು. ನನ್ನ ಯೋಜನೆಯನ್ನು ಅವರ ಯೋಜನೆ ಎಂದು ಹೇಳಿಕೊಂಡರು. ಆದರೂ ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಮೋದಿ ಅಲೆಯ ಮುಂದೆ ಹಣಬಲ, ತೋಳ್ಬಲ ಯಾವುದೂ ನಡೆಯಲಿಲ್ಲ ಎಂದು ಪ್ರತಾಪ್ ಸಿಂಹ ಟೀಕಿಸಿದರು.

ಹಾಗೆಯೇ, ತಮ್ಮನ್ನು ಮಗನಂತೆ ಕಾಣಬೇಕೆಂದೂ ಸಿದ್ದರಾಮಯ್ಯ ಅವರಲ್ಲಿ ಪ್ರತಾಪ್ ಸಿಂಹ ಮನವಿ ಮಾಡಿದರು. “ನೀವು ನಿಮ್ಮ ಮಗನನ್ನು ರಾಜಕೀಯದಲ್ಲಿ ಹೇಗೆ ಬೆಳೆಸುತ್ತಿದ್ದೀರಿ ಎಂದು ಗೊತ್ತು. ಆದರೆ, ನನ್ನನ್ನು ಬೆಳೆಸದಿದ್ದರೂ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ” ಎಂದು ಪ್ರತಾಪ್ ಸಿಂಹ ಕೋರಿಕೊಂಡರು.

ಇದನ್ನೂ ಓದಿ: ಸಂಸತ್ತಿನಲ್ಲಿ ಸುರಸುಂದರಾಂಗಿಯರು: ಮೊದಲ ದಿನವೇ ಟ್ರೋಲ್​ಗೊಳಗಾದ ಸಂಸದೆಯರು

ಸಿಂಹಗೆ ಮಂತ್ರಿ ಆಸೆ ಇಲ್ಲ?

ಪ್ರತಾಪ್ ಸಿಂಹ ಅವರು ತಾನು ಮಂತ್ರಿಯಾಬೇಕೆಂಬ ಆಸೆ ಇಟ್ಟುಕೊಂಡು ರಾಜಕಾರಣಕ್ಕೆ ಬಂದವನಲ್ಲ. ಉತ್ತಮ ಕೆಲಸ ಮಾಡಬೇಕೆಂಬ ಆಸೆಯಿಂದ ಈ ಕ್ಷೇತ್ರಕ್ಕೆ ಬಂದಿದ್ದೇನೆ. ನಾನೊಬ್ಬ ಟಿಪಿಕಲ್ ರಾಜಕಾರಣಿ ಅಲ್ಲ. ಕೆಲಸ ಮಾಡೋಕಷ್ಟೇ ಇಲ್ಲಿ ಬಂದಿದ್ದೇನೆ. ಹೊಸದಾಗಿ ಗೆದ್ದವರ್ಯಾರೂ ಕೂಡ ಮಂತ್ರಿ ಪದವಿಗೆ ಆಸೆ ಪಡಬಾರದು ಎಂದು ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.

ನಾನು ಪತ್ರಕರ್ತನಾಗಿದ್ದನಾದ್ದರಿಂದ ಸಂವೇದನೆ ಇದೆ. ಅಂತರಂಗದಲ್ಲಿ ಈಗಲೂ ನಾನು ಪತ್ರಕರ್ತನೇ. ಪತ್ರಕರ್ತರು ಬರೆಯುತ್ತಾರೆ. ನಾನು ಬರೆದದ್ದಕ್ಕೆ ಸ್ಪಂದಿಸುತ್ತೇನೆ ಎಂದು ತಮ್ಮ ಪತ್ರಕರ್ತನ ಅನುಭವವನ್ನು ಬಿಚ್ಚಿಟ್ಟರು.

ಪತ್ರಿಕಾಗೋಷ್ಠಿಗೂ ಮುನ್ನ ಅವರು ನಂಜನಗೂಡಿನ ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿ ಮಠದ ಶ್ರೀಗಳ ಆಶೀರ್ವಾದ ಪಡೆದರು.

(ವರದಿ: ಪುಟ್ಟಪ್ಪ)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:May 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading