Siddaramaiah: ಮನೆಯಲ್ಲಿ ಏನಾದ್ರೂ ತಿನ್ನಿ, ದೇವಸ್ಥಾನಕ್ಕೆ ಹೋಗುವಾಗ ಶಿಷ್ಟಾಚಾರ ಪಾಲಿಸಿ: ಪ್ರತಾಪ್ ಸಿಂಹ

ನಮ್ಮಲ್ಲಿ ಆಸ್ತಿಕರು ಹಾಗೂ ನಾಸ್ತಿಕರು ಎಲ್ಲಾ ತರಹದ ಜನರಿದ್ದಾರೆ. ಸಾರ್ವಜನಿಕವಾಗಿ ಗುಡಿಗೆ ಹೋಗಬೇಕಾದ್ರೆ ಶಿಷ್ಟಾಚಾರ ಇರುತ್ತದೆ. ಆ ಶಿಷ್ಟಾಚಾರ ಪಾಲನೆ ಮಾಡಿ ಎಂದು ಪ್ರತಾಪ್ ಸಿಂಹ ಸಲಹೆ ನೀಡಿದರು.

ಪ್ರತಾಪ್ ಸಿಂಹ

ಪ್ರತಾಪ್ ಸಿಂಹ

  • Share this:
ಇಂದು ಮೈಸೂರಿನಲ್ಲಿ (Mysuru) ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ (MP Pratap Simha) ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ವಿರುದ್ಧ ವಾಗ್ದಾಳಿ ನಡೆಸಿದರು. ನೀವು ನಮ್ಮ ಮನೆಯಲ್ಲಿ ಯಾವ ಆಹಾರವನ್ನಾದ್ರು (food) ತಿನ್ನಿ. ಆದ್ರೆ ದೇವಸ್ಥಾನ ಎನ್ನುವುದು ಪವಿತ್ರ ಸ್ಥಳ.ಅಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿರುತ್ತಾರೆ. ಅಲ್ಲಿಗೆ ಹೋಗಬೇಕಾದ್ರೆ ಮಡಿ ಮತ್ತು ಮೈಲಿಗೆಯಿಂದ ಹೋಗುತ್ತಾರೆ. ಚಾಮುಂಡಿ ಹಬ್ಬವನ್ನು (Chamundi Habba) ಮೈಸೂರಿನ ಹಳ್ಳಿ ಹಳ್ಳಿಯಲ್ಲಿ ಮಾಡುತ್ತಾರೆ. ಬಹಳ ಮಡಿಯಿಂದ ಮೊಸರನ್ನವನ್ನು ನೈವೇದ್ಯ ಅರ್ಪಿಸುತ್ತಾರೆ. ನಂತರ ಮರಿ ಹೊಡೆದುಕೊಂಡು ತಿನ್ನುತ್ತಾರೆ. ಮರಿ ಹೊಡೆದು ತಿನ್ನುವ ಮೈಸೂರಿಗರೇ ಚಾಮುಂಡಿ ಬೆಟ್ಟಕ್ಕೆ (Chamundi Betta) ಹೋಗುವಾಗ ಮಡಿಯಿಂದ ಹೋಗ್ತಾರೆ ಎಂದು ಹೇಳಿದರು.

ನೀವು ಯಾವ ಆಹಾರವನ್ನು ಬೇಕಾದ್ರು ತಿನ್ನಿ. ನಾನು ಕೂಡ ಎಲ್ಲಾ ಆಹಾರವನ್ನು ತಿ‌ನ್ನುತ್ತೇನೆ. ಆದರೆ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಬಾರದು. ಈ ಹಿಂದೆ ವೀರಶೈವ ಹಾಗೂ ಲಿಂಗಾಯಿತ ಧರ್ಮ ಒಡೆಯಲು ಹೋದರು. ಅವರು ಪೂಜಿಸುವ ಬಸವೇಶ್ವರ ದೇವಸ್ಥಾನಕ್ಕೆ ಮಾಂಸ ತಿಂದು ಹೋಗಿದ್ದೀರಾ ಎಂದು ಪ್ರಶ್ನಿಸಿದರು.

ದೇವಸ್ಥಾನಕ್ಕೆ ಹೋಗುವಾಗ ಶಿಷ್ಟಾಚಾರ ಪಾಲಿಸಿ

ನೀವು ಮನೆಯಲ್ಲಿ ಮಾಂಸ, ಕೋಳಿ, ಮೀನು ಹಂದಿ ಏನು ಬೇಕಾದ್ರು ತಿನ್ನಬಹುದು. ದೇವರು ಇತಂಹ ಆಹಾರ ತಿಂದು ಬನ್ನಿ ಎಂದು ಹೇಳಿದ್ದಾನಾ ಎಂದು ಮುಸ್ಲಿಮರನ್ನು ಕೇಳಿ. ಮುಸ್ಲಿಮರಿಗೆ ಹಂದಿ ತಿನ್ನಬಾರದು ಎಂದು ಹೇಳಿದ್ದಾರಾ? ದನನೇ ತಿನ್ನಿ ಅಂತಾ ಹೇಳಿದಾರಾ? ಸಿದ್ದರಾಮಯ್ಯ ಅವರೇ ಅದನ್ನು ಕೇಳಲು ನಿಮಗೆ ತೊಡೆ ನಡುಗುತ್ತಾ ಎಂದು ಕಿಡಿಕಾರಿದರು.

ನಮ್ಮಲ್ಲಿ ಆಸ್ತಿಕರು ಹಾಗೂ ನಾಸ್ತಿಕರು ಎಲ್ಲಾ ತರಹದ ಜನರಿದ್ದಾರೆ. ಸಾರ್ವಜನಿಕವಾಗಿ ಗುಡಿಗೆ ಹೋಗಬೇಕಾದ್ರೆ ಶಿಷ್ಟಾಚಾರ ಇರುತ್ತದೆ. ಆ ಶಿಷ್ಟಾಚಾರ ಪಾಲನೆ ಮಾಡಿ ಎಂದು ಪ್ರತಾಪ್ ಸಿಂಹ ಸಲಹೆ ನೀಡಿದರು.ಮೈಸೂರಿನಲ್ಲಿ ಬಿಜೆಪಿ ರಥಯಾತ್ರೆಗೆ ಭರ್ಜರಿ ಸಿದ್ಧತೆ

ಮೈಸೂರಿನ ಹೊರವಲಯ ಕೊಲಂಬಿಯಾ ಏಷ್ಯಾ( ಮಣಿಪಾಲ್) ಆಸ್ಪತ್ರೆ ಜಂಕ್ಷನ್ ಬಳಿ ಖಾಕಿ ಸರ್ಪಗಾವಲು ಹಾಕಲಾಗಿದೆ. ಬೆಳಗ್ಗೆ 11.30ಕ್ಕೆ ರಥಯಾತ್ರೆಗೆ (BJP Rathayatra, Mysuru) ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಚಾಲನೆ ನೀಡಲಿದ್ದಾರೆ. ಮೈಸೂರಿನ ಪ್ರಮುಖ 9 ಬೀದಿಗಳಲ್ಲಿ ರಥಯಾತ್ರೆ ಸಂಚರಿಸಲಿದೆ. ರಥಯಾತ್ರೆಯಲ್ಲಿ ವೀರ ಸಾವರ್ಕರ್ ಫೋಟೋ (Veer Savarkar Photo) ಸಹ ಇರಿಸಲಾಗುತ್ತಿದೆ.

ಇದನ್ನೂ ಓದಿ: Narendra Modi: ಮೋದಿ ಮಂಗಳೂರು ಭೇಟಿಗೆ ಮುಹೂರ್ತ ಫಿಕ್ಸ್! ಯಾವಾಗ ಬರ್ತಾರೆ ಗೊತ್ತಾ ಪ್ರಧಾನಿ?

ರಥಯಾತ್ರೆಯಲ್ಲಿ 2 ಸಾವಿರ ಜನ ಭಾಗಿ ಸಾಧ್ಯತೆ

ಬಿಜೆಪಿ ರಥಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ರಥಯಾತ್ರೆ ಸಂಚರಿಸಲಿರುವ ಪ್ರತಿ ಏರಿಯಾದಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನೂ ರಥಯಾತ್ರೆಯಲ್ಲಿ ಯಡಿಯೂರಪ್ಪ ಅವರಿಗೆ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಬಿಜೆಪಿ ಹಾಲಿ ಹಾಗೂ ಮಾಜಿ ಶಾಸಕರು ಮತ್ತು ಸಂಸದ ಪ್ರತಾಪ್ ಸಿಂಹ ಸಾಥ್ ನೀಡಲಿದ್ದಾರೆ. ರಥಯಾತ್ರೆಯಲ್ಲಿ ಸುಮಾರು 2 ಸಾವಿರ ಜನರು ಭಾಗಿಯಾಗುವ ಸಾಧ್ಯತೆಗಳಿವೆ.

Pratap Simha speaks about Siddaramaiah visits temple mrq
ಜಗದೀಶ್ ಶೆಟ್ಟರ್ ಹೇಳಿಕೆ


ಮಡಿಕೇರಿಯಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ

ಕೋಲಾರದ KGF ನಲ್ಲಿ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರ (Home Minister Araga Jnanendra), ಮಡಿಕೇರಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಅಲ್ಲಿನ ಜನತೆಯ ಶಾಂತಿ ನೆಮ್ಮದಿ ಮುಖ್ಯ. ಶಾಂತಿ ಕದಡುವ ಕೆಲಸ ಆಗಬಾರದು ಎಂದು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಮಡಿಕೇರಿಯಲ್ಲಿ ನಮ್ಮವರ ಪ್ರತಿಭಟನೆಗೂ ಅವಕಾಶವಿಲ್ಲ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್​ನವರೇ ಸಾವರ್ಕರ್ ವಿಚಾರ ಮೊದಲು ಚರ್ಚೆಗೆ ತೆಗೆದುಕೊಂಡು ಬಂದರ. ಸಾವರ್ಕರ್ ಫೋಟೋ ಮುಸ್ಲಿಂ ಕೇರಿಯಲ್ಲಿ ಹಾಕಿದ್ದು ಯಾಕೆಂದು ಪ್ರಶ್ನಿಸಿದ್ರು. ಸಾವರ್ಕರ್ ಒಬ್ಬರು ಗೌರವಾನ್ವಿತ ಸ್ವಾತಂತ್ರ್ಯ ಹೋರಾಟಗಾರ. ಅವರು ಬ್ರಿಟಿಷರ ಬೂಟು ನೆಕ್ಕಿದ್ರು ಎಂದು ಆರೋಪಿಸಿದ್ರು.

Pratap Simha speaks about Siddaramaiah visits temple mrq
ಮುನಿಸ್ವಾಮಿ ಹೇಳಿಕೆ


ಇದನ್ನೂ ಓದಿ:  Dinesh Gundurao: ಮಾಂಸಾಹಾರಿಗಳ ವೋಟ್ ಬೇಡ ಅನ್ನೋ ತಾಕತ್ತು ಬಿಜೆಪಿಗಿದೆಯೇ? ದಿನೇಶ್ ಗುಂಡೂರಾವ್ ಪ್ರಶ್ನೆ

ಈಗ ಎಲ್ಲಾ ವಿವಾದಗಳು ತಣ್ಣಗಾಗಿದೆ. ಗಣೇಶೋತ್ಸವ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ.  ಗಣೇಶೋತ್ಸವ ಕಾರ್ಯಕ್ರಮ ಚೆನ್ನಾಗಿ ನಡೆಯಬೇಕು. ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಬಗ್ಗೆ ಕಂದಾಯ ಇಲಾಖೆ ನಿರ್ಧಾರ ಮಾಡುತ್ತದೆ ಎಂದು ಮಾಹಿತಿ ನೀಡಿದರು.
Published by:Mahmadrafik K
First published: