Madikeri Chalo: ಕೊಡಗಿಗೆ ಟಿಪ್ಪು ಬಂದಾಗಲೇ ಹೆದರಲಿಲ್ಲ, ಸಿದ್ದು ಸುಲ್ತಾನ್ ಬಂದ್ರೆ ಹೆದರ್ತೀವಾ?; ಪ್ರತಾಪ್ ಸಿಂಹ

2017ರಲ್ಲಿ ನಾಟಿ ಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟಿಸಿದ್ದರು. ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಅದೇ ಕಾರಣಕ್ಕೆ ಮುಂದೆ ತಾಯಿ ಚಾಮುಂಡೇಶ್ವರಿ ಅವರಿಗೆ ಆ ಅವಕಾಶ ಕೊಡಲಿಲ್ಲ.

ಸಿದ್ದರಾಮಯ್ಯ ಮತ್ತು ಪ್ರತಾಪ್ ಸಿಂಹ

ಸಿದ್ದರಾಮಯ್ಯ ಮತ್ತು ಪ್ರತಾಪ್ ಸಿಂಹ

  • Share this:
ಆಗಸ್ಟ್ 26 ರಂದು ಮಡಿಕೇರಿ ಚಲೋ (Madikeri Chalo) ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ (MP Pratap Simha) ಪ್ರತಿಕ್ರಿಯೆ ನೀಡಿದ್ದಾರೆ. ಟಿಪ್ಪು (Tipu Sultan) ಕೊಡಗಿಗೆ (kodagu) ಬಂದಾಗಲೇ ಹೆದರಲಿಲ್ಲ, ಸಿದ್ದು ಸುಲ್ತಾನ್ ಬಂದರೇ ಹೆದರುತ್ತೀವಾ ಎಂದು ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ (Siddaramaiah) ಮೈಸೂರು, ಮಂಡ್ಯ, ಹಾಸನ‌ ಮಾತ್ರವಲ್ಲ ಪಕ್ಕದ ಕೇರಳದ (Kerala) ನಿಮ್ಮ ಸಾಕು ಮಕ್ಕಳನ್ನು ಕರೆದುಕೊಂಡು ಬನ್ನಿ ಎಂದರು. ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತಾ ದೇವರು ಹೇಳಿದ್ದಾರಾ ಎಂಬ ಸಿದ್ದರಾಮಯ್ಯ (Former CM Siddaramaiah) ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ನಿಮ್ಮ ಶ್ರೀಮತಿ ಚಾಮುಂಡೇಶ್ವರಿ (Chamundeshwari Devei) ಭಕ್ತೆ ಅವರು ಸಹ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ ಎಂದಿದ್ದಾರೆ. ಒಂದು ವೇಳೆ ನಿಮ್ಮ ಶ್ರೀಮತಿ ಅವರು ಆ ರೀತಿ ಬಂದು ಹೇಳಿದ್ರೆ ನಾವು ಒಪ್ಪಿಕೊಳ್ಳುತ್ತೇವೆ ಎಂದರು.

ಮೊನ್ನೆ ಸಿದ್ದರಾಮೇಶ್ವರ ಜಾತ್ರೆಗೆ ಏಕೆ ಸಿಹಿ ಊಟ ಹಾಕಿಸಿದಿರಿ? ಸಿದ್ದರಾಮಯ್ಯ ಪದೇ ಪದೇ ಈ ರೀತಿ ಮಾಡುತ್ತಾರೆ. 2017ರಲ್ಲಿ ನಾಟಿ ಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟಿಸಿದ್ದರು. ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಅದೇ ಕಾರಣಕ್ಕೆ ಮುಂದೆ ತಾಯಿ ಚಾಮುಂಡೇಶ್ವರಿ ಅವರಿಗೆ ಆ ಅವಕಾಶ ಕೊಡಲಿಲ್ಲ. ಈಗ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬಸವ ತತ್ವ ಅನುಯಾಯಿಗಳ ನಂಬಿಕೆ ಒಡೆದಿದ್ದಾರೆ.

ಇದನ್ನೂ ಓದಿ:  Vijayapura: ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ ಬಿಜೆಪಿ ಮುಖಂಡ; ಯತ್ನಾಳ್​ ಸವಾಲು ಹಾಕಿದ್ದು ಯಾರಿಗೆ?

ಸಂಪತ್ ಬಿಜೆಪಿ ಕಾರ್ಯಕರ್ತ ಅಲ್ಲ

ಮೊಟ್ಟೆ ಹೊಡೆದ ಸಂಪತ್ ಬಿಜೆಪಿ ಕಾರ್ಯಕರ್ತ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಪೋಟೋ ಇದ್ದ ಮಾತ್ರಕ್ಕೆ ಆತ ಬಿಜೆಪಿ ಕಾರ್ಯಕರ್ತ ಆಗಲ್ಲ. ಆತ ನನ್ನ ಚುನಾವಣೆಯಲ್ಲೂ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾನೆ ಎಂದು ಹೇಳಿದರು.

ಹಂದಿ ಸಹ ಆಹಾರ ಪದ್ಧತಿಯಾಗಿದೆ. ಅದನ್ನು ತಿನ್ನಬೇಡಿ ಅಂತಾ ಯಾವ ದೇವರು ಹೇಳಿಲ್ಲ.  ಜಮೀರ್ ಅಹಮದ್ ಹಾಗೂ ಆತನ ಬೆಂಬಲಿಗರಿಗೆ ಹಂದಿ ತಿನ್ನಲು ಹೇಳಿ. ನೀವು ಅದನ್ನು ಹೇಳುವುದಿಲ್ಲ. ನಿಮಗೆ ಆ ರೀತಿ ಹೇಳಲು ಧೈರ್ಯ ಇಲ್ಲ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಪರ ಮುತಾಲಿಕ್ ಬ್ಯಾಟ್

ಕೊಡಗಿಗೆ (Kodagu) ಭೇಟಿ ನೀಡಿದ್ದ ವೇಳೆ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ಅವರು ಮಾಂಸಾಹಾರ (Non veg) ಸೇವನೆ ಮಾಡಿ ದೇವಸ್ಥಾನಕ್ಕೆ ತೆರಳಿದ್ದರು ಎಂದು ಬಿಜೆಪಿ (BJP) ಆರೋಪಿಸಿದೆ. ಈ ಸಂಬಂಧ ನಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂದು ಕಮಲ ಶಾಸಕರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ಈ ಸಂಬಂಧ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್​ ಮುತಾಲಿಕ್ (Srirama sena Founder Pramod Muthalik), ಮಾಂಸ ತಿಂದು ದೇವಸ್ಥಾನಕ್ಕೆ (Temple) ಹೋದ್ರೆ ಏನು ತಪ್ಪು ಎಂದು ಸಿದ್ದರಾಮಯ್ಯ ಅವರ ಬ್ಯಾಟ್ ಬೀಸಿದ್ದಾರೆ.

ಬಿಜೆಪಿ ಅವರಿಗೆ ಬೇರೆ ವಿಷಯಗಳೇ ಇಲ್ಲ

ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತ ದೇವರು ಹೇಳಿದ್ದಾನಾ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಮುತಾಲಿಕ್, ಅದು ಚರ್ಚೆಯ ವಿಷಯವೇ ಅಲ್ಲ. ನಾನು ಆ ಬಗ್ಗೆ ಮಾತನಾಡಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Hijab Row: ಸಡಿಲಗೊಳ್ಳದ ಹಿಜಾಬ್ ಹಠ, ಶಿಕ್ಷಣ ಸಂಸ್ಥೆಗಳಿಗೆ ಗುಡ್ ​ಬೈ; 145 ಮಕ್ಕಳು ಹೊರಟ್ಟಿದ್ದೆಲ್ಲಿಗೆ?

ಬಿಜೆಪಿ ಅವರಿಗೆ ಮಾತನಾಡಲು ಬೇರೆ ವಿಷಯಗಳೇ ಇಲ್ಲ. ಬಿಜೆಪಿಯವರು ಸುಮ್ಮನೆ ಸಿದ್ದರಾಮಯ್ಯನವರನ್ನ ಎಳೆದು ತರುತ್ತಿದ್ದಾರೆ ಎಂದು ಆರೋಪಿಸಿದರು.
Published by:Mahmadrafik K
First published: