• Home
  • »
  • News
  • »
  • state
  • »
  • ಸರ್ಕಾರಿ ಮನೆ ತೊರೆದು ಸ್ವಕ್ಷೇತ್ರಕ್ಕೆ ತೆರಳಿದ ಸಭಾಪತಿ ಪ್ರತಾಪ್​ ಚಂದ್ರ ಶೆಟ್ಟಿ

ಸರ್ಕಾರಿ ಮನೆ ತೊರೆದು ಸ್ವಕ್ಷೇತ್ರಕ್ಕೆ ತೆರಳಿದ ಸಭಾಪತಿ ಪ್ರತಾಪ್​ ಚಂದ್ರ ಶೆಟ್ಟಿ

ಪ್ರತಾಪ್​ ಚಂದ್ರ ಶೆಟ್ಟಿ

ಪ್ರತಾಪ್​ ಚಂದ್ರ ಶೆಟ್ಟಿ

ಪರಿಷತ್​ ಸಭಾಪತಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡದ ಪ್ರತಾಪ್​ ಚಂದ್ರ ಶೆಟ್ಟಿ, ಸರ್ಕಾರಿ ಬಂಗಲೆ ತೊರೆದಿದ್ದಾರೆ

  • Share this:

ಬೆಂಗಳೂರು (ಡಿ. 21): ವಿಧಾನ ಪರಿಷತ್​ನಲ್ಲಿ ಕಳೆದ ವಾರ ನಡೆದ ಕೋಲಾಹಲ ಬೆನ್ನಲ್ಲೇ ಇದೀಗ ವಿಧಾನಪರಿಷತ್​ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ತಮ್ಮ ಸರ್ಕಾರಿ ಬಂಗಲೆ ಮತ್ತು ಕಾರನ್ನು ವಾಪಸ್​ ಮಾಡಿದ್ದಾರೆ. ಸರ್ಕಾರಿ ಮನೆ ತೊರೆದಿರುವ ಅವರು ತಮ್ಮ ಸ್ವ ಕ್ಷೇತ್ರಕ್ಕೆ ತೆರಳಿದ್ದಾರೆ. ಅಲ್ಲದೇ ತಮ್ಮ ಮನೆಯ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗುವಂತೆ ಸಭಾಪತಿಯವರೇ ಲೋಕೋಪಯೋಗಿ ಇಲಾಖೆಗೆ ಕರೆ ಮಾಡಿ ಸೂಚನೆ ನೀಡಿದ್ದಾರೆ. ಪರಿಷತ್ ಸಭಾಪತಿ​ ಸ್ಥಾನಕ್ಕೆ ರಾಜೀನಾಮೆಯನ್ನು ನೀಡದ ಪ್ರತಾಪ್​ ಚಂದ್ರ ಶೆಟ್ಟಿ, ಸರ್ಕಾರಿ ಬಂಗಲೆ ತೊರೆದಿದ್ದಾರೆ. ಇನ್ನು ಘಟನೆ ಬೆನ್ನಲ್ಲೇ ಅವರು ರಾಜೀನಾಮೆ ನೀಡಲು ಮುಂದಾಗಿದ್ದರೂ ಕಾಂಗ್ರೆಸ್​ ಅವರನ್ನು ತಡೆದಿತ್ತು. ಪರಿಷತ್​ನಲ್ಲಿ ಆದ ಗಲಾಟೆ ಬಳಿಕವೂ ಹುದ್ದೆಯಲ್ಲಿ ಮುಂದುವರೆದರೆ ಅಧಿಕಾರಕ್ಕಾಗಿ ತಾವು ಇನ್ನು ಹುದ್ದೆಯಲ್ಲಿದ್ದೇವೆ ಎಂಬ ಸಂದೇಶ ರವಾನೆಯಾಗುತ್ತದೆ. ಈ ಹಿನ್ನಲೆ ರಾಜೀನಾಮೆ ನೀಡುತ್ತೇವೆ ಎಂದು ಪ್ರತಾಪ್​ ಚಂದ್ರ ಶೆಟ್ಟಿ ತಿಳಿಸಿದ್ದರು. ಆದರೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದಕ್ಕೆ ತಡೆಯಾಗಿದ್ದಾರೆ. ಅಲ್ಲದೇ ಅವಿಶ್ವಾಸ ಸೂಚನೆ ಚರ್ಚೆಯಾಗಿ ಮತದಾನದ ಕ್ಷಣದವರೆಗೂ ರಾಜೀನಾಮೆ ಪ್ರಸ್ತಾಪ ಮಾಡದಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆ ಪ್ರತಾಪ ಚಂದ್ರ ಶೆಟ್ಟಿ ಇನ್ನು ರಾಜೀನಾಮೆ ಬಗ್ಗೆ ನಿರ್ಧರಿಸಿಲ್ಲ ಎನ್ನಲಾಗಿದೆ.


ಆದರೆ, ಬಿಜೆಪಿ ನಾಯಕರು ಸಭಾಪತಿಯವರಿಗೆ ಸಂಖ್ಯಾಬಲ ಇಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಜೆಡಿಎಸ್​ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್​ ಬೆಂಬಲ ನೀಡುವುದಾಗಿ ತಿಳಿಸಿದೆ. ಈ ಹಿನ್ನಲೆ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ. ವಿಧಾನಪರಿಷತ್​ನಲ್ಲಿ ನಡೆದ ಘಟನೆ ಕುರಿತು ಡಿ. 15ರೊಳಗೆ ಪರಿಷತ್​ ಕಾರ್ಯದರ್ಶಿಗೆ ವಿವರಗಳನ್ನು ನೀಡುವಂತೆ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿಗೆ ನೋಟಿಸ್​ ಜಾರಿಗೊಳಿಸಿದ್ದಾರೆ.


ಅನಿರ್ಧಿಷ್ಟಾವಧಿ ಸಭೆ ಮುಂದೂಡಿರುವ ಸಭಾಪತಿ:


ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಬಿಜೆಪಿಗೆ ಜೆಡಿಎಸ್​ ಕೂಡ ಬೆಂಬಲ ನೀಡಿತ್ತು. ಆದರೆ, ಕಲಾಪದ ಆರಂಭಕ್ಕೂ ಮುನ್ನ ಉಪಸಭಾಪತಿ ಧರ್ಮೇ ಗೌಡರನ್ನು ಸಭಾಪತಿ ಪೀಠದಲ್ಲಿ ಕೂರಿಸಿ, ಸಭಾಪತಿಗಳನ್ನು ಕಲಾಪದ ಒಳಗೆ ಬಾರದಂತೆ ತಡೆಯೊಡ್ಡಿ ಹೈಡ್ರಾಮಾ ಸೃಷ್ಟಿಸಿದ್ದ ಬಿಜೆಪಿಗೆ ಕಾಂಗ್ರೆಸ್​ ಮತ್ತೊಮ್ಮೆ ಶಾಕ್ ನೀಡಿತು. ಇಂದು ಹೊಸ ಸಭಾಪತಿಯನ್ನು ಆಯ್ಕೆ ಮಾಡಿ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಪಾಸ್ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದ ಬಿಜೆಪಿಗೆ ಕಾಂಗ್ರೆಸ್ ಮತ್ತೊಮ್ಮೆ ನಿರಾಸೆ ಮೂಡಿಸಿದೆ. ಮತ್ತೊಮ್ಮೆ ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿರುವುದರಿಂದ ಬಿಜೆಪಿ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಇಂದು ಜೆಡಿಎಸ್ ಬೆಂಬಲದೊಂದಿಗೆ ಹೊಸ ಸಭಾಪತಿ ಆಯ್ಕೆ ಮಾಡಿ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಪಾಸ್ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದ ಬಿಜೆಪಿಯ ಯೋಚನೆಯನ್ನು ತಲೆಕೆಳಗು ಮಾಡಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮತ್ತೊಮ್ಮೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು