• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಡ್ರಗ್ಸ್​ ಪ್ರಕರಣದಲ್ಲಿ Anushree: ಆಡಿಯೋ ರಿಲೀಸ್ ಮಾಡುವುದಾಗಿ ಹೇಳಿದ Prashanth Sambargi

ಡ್ರಗ್ಸ್​ ಪ್ರಕರಣದಲ್ಲಿ Anushree: ಆಡಿಯೋ ರಿಲೀಸ್ ಮಾಡುವುದಾಗಿ ಹೇಳಿದ Prashanth Sambargi

ಪ್ರಶಾಂತ್​ ಸಂಬರಗಿ

ಪ್ರಶಾಂತ್​ ಸಂಬರಗಿ

ಗ್ಸ್​ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್​ಶೀಟ್​ ವಿಷಯದ ಬಗ್ಗೆ ಮಾತನಾಡಿರುವ ಅವರು ಆರೋಪಿ ಪಟ್ಟಿಯಲ್ಲಿ ತರುಣ್​ ಹಾಗೂ ಅನುಶ್ರೀ ಅವರ ಹೆಸರು ಉಲ್ಲೇಖ ಮಾಡಲಿಲ್ಲ. ಒಬ್ಬರನ್ನು ತಪ್ಪಿಸಲು ಹೋಗಿ ಮತ್ತೊಬ್ಬರನ್ನೂ ಬಿಡಲಾಗಿದೆ. ಇದನ್ನು ನೋಡಿದರೆ ಇಲ್ಲಿರುವ ಲೋಷದೋಷ ಎದ್ದು ಕಾಣುತ್ತಿದೆ ಎಂದು ಪ್ರಶಾಂತ್​ ಸಂಬರಗಿ ಆರೋಪಿಸಿದ್ದಾರೆ.

ಮುಂದೆ ಓದಿ ...
  • Share this:

ಮಾದಕ ವಸ್ತು ಪ್ರಕರಣದಲ್ಲಿ ಈ ಹಿಂದೆ ವಿಚಾರಣೆ ಎದುರಿಸಿದ್ದ ಖ್ಯಾತ ನಿರೂಪಕಿ ಅನುಶ್ರೀ  (Anchor Anushree) ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್​ ಕನ್ನಡ ಸೀಸನ್​ 8ರ (Bigg Boss Kannada Season 8) ಸ್ಪರ್ಧಿಯಾಗಿದ್ದ ಪ್ರಶಾಂತ್​ ಸಂಬರಗಿ  (Prashanth Sambargi)ಅವರು ಸುದ್ಧಿಗೋಷ್ಠಿ ನಡೆಸಿದ್ದಾರೆ. ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವಿಚಾರಣೆ ಎದುರಿಸಿದ್ದ ಅನುಶ್ರೀ ಅವರ ಹೆಸರನ್ನು ಚಾರ್ಜ್​ಶೀಟ್​ನಲ್ಲಿ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯ ಹರಿದಾಡುತ್ತಿದ್ದಂತೆಯೇ ಪ್ರಶಾಂತ್​ ಸಂಬರಗಿ ಅವರು ಈ ಸಂಬಂಧ ಹೇಳಿಕೆ ನೀಡಲಾರಂಭಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಆಡಿಯೋ ಬಿಡುಗಡೆ ಮಾಡುವುದಾಗಿ ಹೇಳಿರುವ ಪ್ರಶಾಂತ್ ಸಂಬರಗಿ ರಾಜಕೀಯ ವ್ಯಕ್ತಿಗಳ ಪ್ರಭಾವ ಬಳಕೆಯಾಗಿರುವ ಕುರಿತಾಗಿಯೂ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. 


ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್​ಶೀಟ್​ ವಿಷಯದ ಬಗ್ಗೆ ಮಾತನಾಡಿರುವ ಅವರು ಆರೋಪಿ ಪಟ್ಟಿಯಲ್ಲಿ ತರುಣ್​ ಹಾಗೂ ಅನುಶ್ರೀ ಅವರ ಹೆಸರು ಉಲ್ಲೇಖ ಮಾಡಲಿಲ್ಲ. ಒಬ್ಬರನ್ನು ತಪ್ಪಿಸಲು ಹೋಗಿ ಮತ್ತೊಬ್ಬರನ್ನೂ ಬಿಡಲಾಗಿದೆ. ಇದನ್ನು ನೋಡಿದರೆ ಇಲ್ಲಿರುವ ಲೋಷದೋಷ ಎದ್ದು ಕಾಣುತ್ತಿದೆ. ಆಗಿದ್ದ ಪೊಲೀಸ್​ ಅಧಿಕಾರಿಗೆಳ ನಿರ್ಲಕ್ಷ ಕಾಣಿಸುತ್ತಿದೆ. ತರುಣ್ ಅವರು ಕೊಟ್ಟಿದ್ದ ಹೇಳಿಕೆಯಲ್ಲೇ ಅನುಶ್ರೀ ಅವರ ಹೆಸರು ಇದೆ, ಅನುಶ್ರೀ ಅವರನ್ನು ಉಳಿಸಲು ಅವರ ಹೆಸರನ್ನು ಬಿಟ್ಟು ಕೊಡುತ್ತಾರೆ ಎಂದು ಸಂಬರಗಿ ಆರೋಪಿಸಿದ್ದಾರೆ.


Famous Anchor Anushree name is not there in Drugs case here is the details ae
ನಿರೂಪಕಿ ಅನುಶ್ರೀ


ಡ್ರಗ್ಸ್​ ಪ್ರಕರಣಲ್ಲಿ ಯಾರಿಗಾದರೂ ನೋಟೀಸ್​ ಬಂದರೆ ಮರುದಿನವೇ ಅವರು ವಿಚಾರಣೆಗೆ ಹಾಜರಾಗಬೇಕು. ಅದೇ ಅನುಶ್ರೀ ಅವರ ವಿಚಾರದಲ್ಲಿ ತಡವಾದರೂ ಯಾರೂ ಪ್ರಶ್ನಿಸುವುದಿಲ್ಲ. ಸಿಸಿಬಿಗೆ ಹೋಗೋಕೆ ಅನೇಕ ನಾಟಕ ಆಗುತ್ತೆ. ಆದರೆ ಅನುಶ್ರೀ ಪೊಲೀಸರನ್ನು 7 ದಿನ ಕಾಯಿಸ್ತಾರೆ. ಬಳಿಕ ಫ್ಯಾಷನ್ ಪರೇಡ್ ತರ ಮಾಡ್ತಾರೆ. ಇದಕ್ಕೆಲ್ಲ ಕಾರಣ ಮಾಜಿ ಮುಖ್ಯಮಂತ್ರಿಯೊಬ್ಬರ ಪ್ರಭಾವ ಇದೆ ಎಂದು ಆರೋಪಿಸಿದ್ದಾರೆ ಪ್ರಶಾಂತ್​.


ಇದನ್ನೂ ಓದಿ: ಪಾಪರಾಜಿಗಳ ಕಣ್ಣು ತಪ್ಪಿಸಲು ಕಾರಿನ ಬೂಟ್​ ಸ್ವೇಸ್​ನಲ್ಲಿ ಬಚ್ಚಿಟ್ಟುಕೊಳ್ಳುವ Janhvi Kapoor


ಮಾದಕ ವಸ್ತು ಪ್ರಕರಣದಲ್ಲಿ ಅನುಶ್ರೀ ಅವರ ಪ್ರಕರಣದಿಂದ ಪಾರು ಮಾಡಲು ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಯಿತು. ಆಗಲೇ ಈ ಪ್ರಕರಣ ವೀಕ್ ಆಗಿತ್ತು. ಅನುಶ್ರೀ ಅವರಿಗೆ ಬೆಂಬಲವಾಗಿ ಮಾಜಿ ಮುಖ್ಯಮಂತ್ರಿಯೊಬ್ಬರು ಇದ್ದಾರೆ.  ಈ ಸಂಬಂಧ ಶೀಘ್ರದಲ್ಲೇ ಒಂದು ಡಿಯೋ ಬಾಂಬ್ ಸಿಡಿವುದಾಗಿಯೂ ಎಚ್ಚರಿಕೆ ಕೊಟ್ಟಿದ್ದಾರೆ ಸಂಬರಗಿ.


ಸೆಪ್ಟೆಂಬರ್ 2020ರಲ್ಲಿ ಶುಗರ್ ಡ್ಯಾಡಿ ಅಂತ ಟ್ವೀಟ್ ಮಾಡಿದ್ದೆ. ಈ ಪುಸ್ತಕವನ್ನು ನವೆಂಬರ್​ನಲ್ಲಿ ಬಿಡುಗಡೆ ಮಾಡುವುದಾಗಿಯೂ ಹಾಗೂ ಇದರಲ್ಲಿ ಇಬ್ಬರು ಕನ್ನಡ ಚಿತ್ರರಂಗದ ನಟ ಹಾಗೂ ನಟಿ ಡ್ರಗ್ಸ್ ಡೋಸ್ ಹೆಚ್ಚಾಗಿ ಸಾವನ್ನಪ್ಪಿರುವ ಬಗ್ಗೆಯೂ ಪುಸ್ತಕದಲ್ಲಿ ಬರೆದಿದ್ದೇನೆ. ಇದರಲ್ಲಿ ಸಾವಿನವಹಾಗೂ ರಾಜಕಾರಣ ಪ್ರಸ್ತಾಪ ಮಾಡಿದ್ದೇನೆ. ಅನುಶ್ರೀ ಬಿಟ್ಟು ಹೋಗಿದ್ರು, ಆದರೆ ಆ ಪುಸ್ತಕದಲ್ಲಿ ಈಗ ಮತ್ತೆ ಸೇರಿಸ್ತಿದ್ದೇನೆ ಎಂದಿದದಾರೆ ಪ್ರಶಾಂತ್ ಸಂಬರಗಿ.


ಪ್ರಕರಣದ ವಿವರ: 


ಬೆಂಗಳೂರು ಸಿಸಿಬಿ ಪೊಲೀಸರು ದಾಖಲಿಸಿದ್ದ ಡ್ರಗ್ ಕೇಸ್​ನಿಂದ ಮಂಗಳೂರು ಡ್ರಗ್ ಜಾಲ ಬೆಳಕಿಗೆ ಬಂದಿತ್ತು. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಸುಮಾರು 20ಕ್ಕೂ ಹೆಚ್ಚು ಜನರನ್ನ ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಓರ್ವ ಆರೋಪಿ ಕೊಟ್ಟ ಸುಳಿವಿನಿಂದ ಮಂಗಳೂರು ಡ್ರಗ್ಸ್ ಜಾಲ ಬೆಳಕಿಗೆ ಬಂದಿತ್ತು. ಎ 15 ಪ್ರತೀಕ್ ಶೆಟ್ಟಿ ವಿಚಾರಣೆ ವೇಳೆ ಸಿಕ್ಕಿದ್ದ ಮಹತ್ವದ ಸುಳಿವಿನಿಂದಾಗಿ ಈ ಪ್ರಕರಣಕ್ಕೆ ತಿರುವು ಸಿಕ್ಕಿತ್ತು.


ಪ್ರತೀಕ್ ಶೆಟ್ಟಿ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ತರುಣ್ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಬೆಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ರಿಂದ ಮಂಗಳೂರು ಸಿಸಿಬಿಗೆ ಮಾಹಿತಿ ರವಾನೆ ಮಾಡಿಸಿದ್ದರು. ಕಡಲನಗರಿಯ ಡ್ರಗ್ಸ್ ಜಾಲದ ಬಗ್ಗೆ ಕಣ್ಣಿಡುವಂತೆ ಮನವಿ ಮಾಡಿದ್ದರು. ಬೆಂಗಳೂರು ಸಿಸಿಬಿ ಪೊಲೀಸರ ಮಾಹಿತಿ ಮೇರೆಗೆ ಅಲರ್ಟ್ ಆದ ಮಂಗಳೂರು ಸಿಸಿಬಿ ಪೊಲೀಸರು ತನಿಖೆ ನಡೆಸಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ತರುಣ್ ಬಂಧಿಸಿದ್ದರು.


ಇದನ್ನೂ ಓದಿ: ಶ್ರೀಮುರಳಿ ಅಭಿನಯದ Madhagaja Release ಕುರಿತಾಗಿ ಅಪ್ಡೇಟ್​ ಕೊಟ್ಟ ನಿರ್ದೇಶಕ ಮಹೇಶ್​


ಡ್ಯಾನ್ಸರ್ ಕಿಶೋರ್ ಶೆಟ್ಟಿ ಜೊತೆಗಿನ ಸಂಪರ್ಕದಿಂದಾಗಿ ಅನುಶ್ರೀ ಅವರಿಗೆ ಮಂಗಳೂರು ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು.ಕಿಶೋರ್ ಶೆಟ್ಟಿ ಹೇಳಿಕೆ ಮತ್ತು ಪೋನ್ ಸಿಡಿಆರ್ ಆಧರಿಸಿ ನಿರೂಪಕಿ ಅನುಶ್ರೀ ಅವರನ್ನು ವಿಚಾರಣೆ ಕರೆಸಲಾಗಿತ್ತು. ಅಲ್ಲದೆ ಬೆಂಗಳೂರಿನಲ್ಲಿ ಬಂಧಿತರಾಗಿದ್ದ ಪ್ರತೀಕ್ ಶೆಟ್ಟಿ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ತರುಣ್ ಮೂವರು ಗೆಳೆಯರಾಗಿದ್ದರು. ಡ್ರಗ್ಸ್ ಪ್ರಕರಣದ ಚಾರ್ಜ್​ಶೀಟ್​​ನಲ್ಲಿ ಅನುಶ್ರೀ ಹೆಸರು ಬಹಿರಂಗ ಆಗುತ್ತಿದ್ದಂತೆ ಅವರು ಪ್ರತಿಕ್ರಿಯೆಗೆ ಸಿಕ್ಕಿರಲಿಲ್ಲ. ನಂತರ ಅನುಶ್ರೀ ವಿಚಾರಣೆಗೆ ಹಾಜರಾಗಿದ್ದರು. ಆರೋಪಿಗಳ ಜತೆ ನನಗೆ ಪರಿಚಯವಿತ್ತು, ಆದರೆ ಈ ಪ್ರಕರಣದ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದರು ನಿರೂಪಕಿ.

Published by:Anitha E
First published: