Pramod Mutalik: ಹಿಂದೂಗಳು ತಮ್ಮ ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಿ! ಕರೆ ಕೊಟ್ಟಿದ್ದೇಕೆ ಪ್ರಮೋದ್ ಮುತಾಲಿಕ್?

"ಹಿಂದೂಗಳು ಕ್ಷತ್ರೀಯ ಗುಣ ಬೆಳೆಸಿಕೊಳ್ಳಬೇಕು. ತಮ್ಮ ರಕ್ಷಣೆಗೆ ತಮ್ಮ ತಮ್ಮ ಮನೆಯಲ್ಲಿ ತಲವಾರ್ ಇಟ್ಟುಕೊಳ್ಳಬೇಕು" ಅಂತ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • Share this:
ಉತ್ತರ ಕನ್ನಡ: ಶ್ರೀರಾಮಸೇನೆ (Srirama Sene) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಬಿಜೆಪಿ ವಿರುದ್ಧ ಗುಡುಗಿದ್ದಾರೆ. ಹಿಂದೂ ಸಂಘಟನೆಗಳು (Hindu Originations) ತಾವೇ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಬಿಜೆಪಿಯನ್ನು ನಂಬಿ ಕೂತರೆ ಪ್ರಯೋಜನವಿಲ್ಲ ಅಂತ ಅವರು ಹೇಳಿದ್ದಾರೆ. ಯಾವುದಾದರೂ ಘಟನೆ ಆದಾಗ ಕಠಿಣ ಕ್ರಮ ಕೈಗೊಳ್ಳುತ್ತೇವೆ ಅಂತ ಸರ್ಕಾರ (Government) ಹೇಳುತ್ತದೆ. ಆದರೆ ಸರ್ಕಾರದ ಬೊಗಳೆ ಮಾತನ್ನು ನಂಬಲು ಜನರು ತಯಾರಿಲ್ಲ. ಸಾಥ್ ಕೊಟ್ಟರೆ ಕೊಡಿ, ಇಲ್ಲ ಒದ್ದು ಮುನ್ನಡೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಹಿಂದೂಗಳು ಕ್ಷತ್ರೀಯ ಗುಣ ಬೆಳೆಸಿಕೊಳ್ಳಬೇಕು. ತಮ್ಮ ರಕ್ಷಣೆಗೆ ತಮ್ಮ ತಮ್ಮ ಮನೆಯಲ್ಲಿ ತಲವಾರ್ ಇಟ್ಟುಕೊಳ್ಳಬೇಕು  ಅವರು ಹೇಳಿದ್ದಾರೆ.

ಟಿಪ್ಪು ವಿರುದ್ಧ ಮುತಾಲಿಕ್ ಆಕ್ರೋಶ

ಉತ್ತರ ಕನ್ನಡದ ಶಿರಸಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕರು ತುಷ್ಟೀಕರಣದ ಸಲುವಾಗಿ ದೇಶದ್ರೋಹಿಗಳಿಗೂ ದೇಶಭಕ್ತರ ಪಟ್ಟ ಕಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಟಿಪ್ಪುನಂತಹ ಹಿಂದೂ ವಿರೋಧಿಯನ್ನು ಕಾಂಗ್ರೆಸ್ ನಾಯಕರು ಮೆರೆಸಿದ್ದಾರೆ. ವೀರ ಸಾವರ್ಕರ್ ಬಗ್ಗೆ ಅರಿಯದ ಮುಸ್ಲಿಂ ಗೂಂಡಾಗಳು ಅವರನ್ನು ಅವಮಾನಿಸಿದ್ದಾರೆ. ಅಂತಹವರನ್ನು ಹುಡುಕಿ ಗುಂಡೇಟು ಹಾಕಬೇಕು ಅಂತ ಅವರು ಹೇಳಿದ್ದಾರೆ.

“ಹಿಂದೂಗಳ ಸುರಕ್ಷತೆ ಬಗ್ಗೆ ಆತಂಕ”

ರಾಜ್ಯದಲ್ಲಿ ಹಿಂದೂಗಳ ಮೇಲೆ ಸಾಲು ಸಾಲು ಮಾರಕ ದಾಳಿಗಳು ನಡೆಯುತ್ತಿರುವುದು ಬಿಜೆಪಿ ಸರ್ಕಾರದ ಮೇಲೆ ಕೈ ಮಾಡಿ ತೋರಿಸುವಂತಾಗಿದೆ. ಶಿವಮೊಗ್ಗ ಹರ್ಷ ಕೊಲೆ ಪ್ರಕರಣ, ದಕ್ಷಿಣ ಕನ್ನಡದಲ್ಲಿ ಪ್ರವೀಣ್​ ನೆಟ್ಟಾರು ಹತ್ಯೆ ಬಳಿಕ ಇದೀಗ ಶಿವಮೊಗ್ಗದಲ್ಲಿ ಮತ್ತೆ ಚಾಕು ಇರಿತವಾಗಿದ್ದು ರಾಜ್ಯದ ಜನತೆ ತಮ್ಮ ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡಿಕೊಳ್ಳುವಂತಾಗಿದೆ ಅಂತ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಇದನ್ನೂ ಓದಿ: Shivamogga: ಮನೆಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿತ, ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ

 “ಹಿಂದೂಗಳು ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಲಿ”

ರಾಜ್ಯದಲ್ಲಿ ಶಾಂತಿ ಕದಡುವ ಘಟನೆಗಳು ನಡೆಯುತ್ತಿರುವ ನಡುವೆಯೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಹಿಂದೂಗಳು ಇನ್ಮುಂದೆ ಮನೆಯಲ್ಲಿ ತಲವಾರ್​ ಇಟ್ಟುಕೊಳ್ಳಬೇಕೆಂದು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ.

 ನಿರ್ಬಂಧ ಹೇರಿದ್ದಕ್ಕೆ ಮುತಾಲಿಕ್ ಆಕ್ರೋಶ

ಹಿಂದೂ ಸಮಾಜಕ್ಕೆಂದು ಹೋರಾಡುವ ನನ್ನಂಥವನಿಗೆ ರಾಜ್ಯದ 21 ಜಿಲ್ಲೆಗಳಲ್ಲಿ ನಿರ್ಬಂಧ ಹೇರಿದ್ದಾರೆ ಅಂತ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯೇ ಅಧಿಕಾರದಲ್ಲಿರುವ ಗೋವಾಗೆ ಕಳೆದ 8 ವರ್ಷಗಳಿಂದ ನನಗೆ ಪ್ರವೇಶಿಸಲು ನಿರ್ಬಂಧ ಹೇರಲಾಗಿದೆ. ಕಾಂಗ್ರೆಸ್​ ನಾಯಕರು ತುಷ್ಟೀಕರಣಕ್ಕಾಗಿ ದೇಶದ್ರೋಹಿಗಳನ್ನೂ ದೇಶಭಕ್ತರೆಂದು ಕರೆದಿದ್ದಾರೆ . ಹೀಗಾಗಿಯೇ ಹಿಂದೂ ವಿರೋಧಿಯಾಗಿದ್ದ ಟಿಪ್ಪು ಸುಲ್ತಾನನ್ನು ಕಾಂಗ್ರೆಸ್ಸಿಗರು ಮೆರೆಸುತ್ತಿದ್ದಾರೆ, ವೀರ ಸಾವರ್ಕರ್​​ನನ್ನು ಅವಮಾನಿಸುವ ಮುಸ್ಲಿಂ ಗೂಂಡಾಗಳನ್ನು ಹುಡುಕಿ ಗುಂಡೇಟು ಹಾಕಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಹಾರಿದ ಮುತಾಲಿಕ್

ಇನ್ನು ಶಿವಮೊಗ್ಗದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಧಾರವಾಡದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​, ಶಿವಮೊಗ್ಗದಲ್ಲಿ ಟಿಪ್ಪು ಸುಲ್ತಾನನ ಫೋಟೋವನ್ನು ಮುಂದಿಟ್ಟುಕೊಂಡು ಬೇಕಂತಲೇ ಶಾಂತಿ ಕದಡುವ ಯತ್ನವನ್ನು ಮಾಡಲಾಗಿದೆ. ಟಿಪ್ಪು ಸುಲ್ತಾನ ಓರ್ವ ಮತಾಂಧ. ಆತ ಸಾವಿರಾರು ಮಂದಿರಗಳನ್ನು ಧ್ವಂಸ ಮಾಡಿದ್ದಾನೆ. ಲಕ್ಷಾಂತರ ಹಿಂದೂಗಳ ಹತ್ಯೆಯನ್ನು ಮಾಡಿದ್ದಾನೆ. ಆತ ಕನ್ನಡ ವಿರೋಧಿಯಾಗಿದ್ದ. ಇಂತಹ ವ್ಯಕ್ತಿಯ ಫೋಟೋವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಬಳಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Savarkar Photo: ಮಂಗಳೂರಲ್ಲೂ ಸಾವರ್ಕರ್ ಫೋಟೋ ವಿವಾದ, ಸ್ವಾತಂತ್ರ್ಯ ಸಂಭ್ರಮದ ನಡುವೆ ಪರ-ವಿರೋಧ!

ಇವರೆಲ್ಲ ಮೊನ್ನೆಯೇ ಸಾರ್ವಕರ್​ ಫೋಟೋ ವಿಚಾರವಾಗಿ ಶಿವಮೊಗ್ಗದಲ್ಲಿ ತಗಾದೆ ತೆಗೆದಿದ್ದರು. ಸಾವರ್ಕರ್​ ಅಪ್ಪಟ ದೇಶ ಭಕ್ತ. ಆದರೆ ಅಂತಹ ವ್ಯಕ್ತಿಯ ಫೋಟೋವನ್ನು ಸ್ವಾತಂತ್ರ್ಯ ಹೋರಾಟಗಾರರ ಸಾಲಿನಿಂದ ತೆಗೆದು ಹಾಕುವಂತಹ ನೀಚ ಕೃತ್ಯವನ್ನು ಮಾಡಿದ್ದರು. ಇವರನ್ನು ಅಂದೇ ಒದ್ದು ಒಳಗೆ ಹಾಕಬೇಕಿತ್ತು. ಆದರೆ ಏನೂ ಮಾಡಲಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.
Published by:Annappa Achari
First published: