ಮೈಸೂರು: ರಾಜ್ಯಾದ್ಯಂತ ಪ್ರಜಾಪ್ರಭುತ್ವದ ಮತದಾನ ಜಾತ್ರೆಯಲ್ಲಿ ಜನರು ಅತ್ಯಂತ ಹುರುಪಿನಿಂದ ಭಾಗಿಯಾಗುತ್ತಿದ್ದಾರೆ. ಮೈಸೂರಿನಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ (Pramoda Devi Wadiyar) ಅವರು ದಾಖಲೆಗಳನ್ನು ಮರೆತು ಮತಗಟ್ಟೆಗೆ ಆಗಮಿಸಿದ್ದರು. ಮೊಬೈಲ್ನಲ್ಲಿ ಸಾಫ್ಟ್ ದಾಖಲೆಗಳನ್ನು ತೋರಿಸಿದ್ರೂ ಚುನಾವಣಾಧಿಕಾರಿಗಳು (Election Officer) ಮತದಾನಕ್ಕೆ ಅವಕಾಶ ನೀಡಿರಲಿಲ್ಲ. ಒರಿಜಿನಲ್ ದಾಖಲೆಗಳನ್ನು (Document) ತರುವಂತೆ ಚುನಾವಣಾಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆ ಮತಗಟ್ಟೆಯಿಂದ (Polling Booth) ಹೊರಬಂದ ಪ್ರಮೋದಾದೇವಿ ಒಡೆಯರ್ ಅವರು ಅರಮನೆಗೆ ತೆರಳಿ ದಾಖಲೆಗಳನ್ನು ತೆಗೆದುಕೊಂಡು ಬಂದರು.
ಅರಮನೆಯಿಂದ ಬಂದ ಬಳಿಕ ಸರತಿ ಸಾಲಿನಲ್ಲಿ ನಿಂತು ಕೆಆರ್ ಕ್ಷೇತ್ರದ ಮತಗಟ್ಟೆ 179ರಲ್ಲಿ ಮತದಾನ ಮಾಡಿದರು. ಮತದಾನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಮೋದಾದೇವಿ ಒಡೆಯರ್, ಎಲ್ಲರೂ ಬಂದು ಮತದಾನ ಮಾಡಿ ಎಂದು ಹೇಳಿದರು.
ಮೈಸೂರಿನ ಶ್ರೀಕಾಂತ ಶಾಲೆಯ ಮತಗಟ್ಟೆಯಲ್ಲಿ ಯದುವೀರ್ ಒಡೆಯರ್ ಮತ್ತು ತ್ರಿಷಿಕಾ ಒಡೆಯರ್ ಮತ ಚಲಾಯಿಸಿದರು.
ಕ್ಷೇತ್ರದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು
ಜನರೇಷನ್ ಚೇಂಜ್ ಆಗಿದ್ದು, ನಿಮಗಾಗಿ ಕೆಲಸ ಮಾಡಿದ್ದವರನ್ನು ಪ್ರಶಂಸಿಬೇಕು. ಕೆಲಸ ಮಾಡದವರಿಗೆ ಹೇಳಬೇಕು. ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಕ್ಷಣದಿಂದ ಜನಪ್ರತಿನಿಧಿ ಆಯ್ಕೆಯಾದ ನಂತರ ಏನೆಲ್ಲಾ ಕೆಲಸ ಮಾಡಬೇಕು ಅನ್ನೋದನ್ನು ಸಂವಿಧಾನ ಹೇಳುತ್ತದೆ. ಅದರ ಜೊತೆಗೆ ತಮ್ಮ ಕ್ಷೇತ್ರದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು
ನಿಮ್ಮ ಜನಪ್ರತಿನಿಧಿಗಳು ಕೆಲಸ ಮಾಡಿಲ್ಲ ಅದನ್ನ ಮತದಾರರಾದ ನಾವು ಹೇಳಬೇಕಾಗುತ್ತದೆ. ಜನಪ್ರತಿನಿಧಿಗಳು ಕೆಲಸ ಮಾಡಿಲ್ಲ ಅಂತ ಹೇಳುವದಕ್ಕಿಂತ ಅವರಿಗೆ ನಿಮ್ಮ ಸಮಸ್ಯೆಯನ್ನು ಅರ್ಥ ಮಾಡಿಸಬೇಕು. ನಮ್ಮ ಅಭಿಪ್ರಾಯಗಳನ್ನು ಎಕ್ಸ್ಪ್ರೆಸ್ ಮಾಡೋದನ್ನು ಕಲಿಯಬೇಕು ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ