ಮಾನ್ಯ ಸಿದ್ದರಾಮಯ್ಯನವರೇ ಅವರು ನಿಮ್ಮನ್ನು ಬಿಡೋಲ್ಲ.. Pramod Muthalik ಎಚ್ಚರಿಸ್ತಿರೋದು ಯಾರ ಬಗ್ಗೆ?

ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ಹೆಸರಿನಲ್ಲಿ ರಾಮ ಇದ್ದಾನೆ. ಕಾಂಗ್ರೆಸ್ ಇರೋದೇ ಮುಸ್ಲಿಮರಿಗಾಗಿ, ಸಿದ್ದರಾಮಯ್ಯನವರು SDPI, PFI ಕೇಸ್ ಗಳನ್ನು ವಾಪಸ್ ತಗೊಂಡ್ರು. ಮಾನ್ಯ ಸಿದ್ದರಾಮಯ್ಯನವರೇ ನಿಮ್ಮನ್ನು ಬಿಡೋಲ್ಲ ಅವರು ಎಂದು ಎಚ್ಚರಿಸಿದರು.

ಸಿದ್ದರಾಮಯ್ಯ, ಮುತಾಲಿಕ್​​

ಸಿದ್ದರಾಮಯ್ಯ, ಮುತಾಲಿಕ್​​

  • Share this:
ಶಿವಮೊಗ್ಗ: ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ ಅವರ (Shivamogga Harsha Murder Case) ಅಸ್ತಿಯನ್ನು ನಿನ್ನೆ ಶ್ರೀರಂಗಪಟ್ಟಣದಲ್ಲಿ ವಿಸರ್ಜಿಸಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್(Pramod Muthalik) , ಇಂದು ಹರ್ಷ ಅವರ ಮನೆಗೆ ಭೇಟಿ ನೀಡಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದರು. ಹರ್ಷನ ಕೊಲೆ ಹೀನಾಯವಾಗಿ‌ ನಡೆದಿದೆ‌. ಈ ಸಂಬಂಧ ನಾನು ಗೃಹಮಂತ್ರಿ, ಸಿಎಂ ಅವರನ್ನು ಭೇಟಿಯಾಗಿದ್ದೇನೆ. ಅಪರಾಧಿಗಳನ್ನು ಎನ್​ಕೌಂಟರ್​ ಮಾಡಬೇಕು ಎಂದು ಆಗ್ರಹಿಸಿದರು. ಒಂದು ವರ್ಷದೊಳಗೆ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಶಿಕ್ಷಿಸಬೇಕು. ಹರ್ಷನ ಕೊಲೆ ಹಿಂದುತ್ವಕ್ಕಾಗಿ ನಡೆದ ಕೊಲೆ ಆಗಿದೆ, ತರಬೇತಿ ಪಡೆದವರಿಂದ ಕೊಲೆ ಆಗಿದೆ. ಕೊಲೆ ಹಿಂದೆ ಇಸ್ಲಾಮಿಕ್ ಶಕ್ತಿ ಇದೆ ಎಂದು ಆಪಾದಿಸಿದರು.

ಇದನ್ನೂ ಓದಿ: Russia-Ukraine Crisis; ಕೋಡಿಮಠ ಶ್ರೀಗಳ ಭವಿಷ್ಯ ನಿಜವಾಯ್ತಾ? ಅಂದು ಸ್ವಾಮೀಜಿಗಳು ಹೇಳಿದ್ದೇನು?

ಸಿದ್ದರಾಮಯ್ಯನವರೇ ನಿಮ್ಮನ್ನು ಬಿಡೋಲ್ಲ ಅವರು..

ಡಿಜಿ ಹಳ್ಳಿ, ಕೆಜಿ ಹಳ್ಳಿ ಘಟನೆ ,ಬೆಂಗಳೂರಿನ ರುದ್ರೇಶ್, ಮಡಿಕೇರಿ ಕುಟ್ಟಪ್ಪ ಕೇಸ್ ನ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆ ರೀತಿ ಹರ್ಷನ ಪ್ರಕರಣದಲ್ಲಿ ಆಗಬಾರದು ಎಂದರು. ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ಹೆಸರಿನಲ್ಲಿ ರಾಮ ಇದ್ದಾನೆ. ಕಾಂಗ್ರೆಸ್ ಇರೋದೇ ಮುಸ್ಲಿಮರಿಗಾಗಿ, ಸಿದ್ದರಾಮಯ್ಯನವರು ಎಸ್ ಡಿಪಿಐ, ಪಿ ಎಫ್​​ ಐ ಕೇಸ್ ಗಳನ್ನು ವಾಪಸ್ ತಗೊಂಡ್ರು. ಮಾನ್ಯ ಸಿದ್ದರಾಮಯ್ಯನವರೇ ನಿಮ್ಮನ್ನು ಬಿಡೋಲ್ಲ ಅವರು ಎಂದು ಎಚ್ಚರಿಸಿದರು. ಹರ್ಷನ ಸಾವಿನ ನಂತರ ನೀವು 144 ಸೆಕ್ಷನ್​​ ನಿಷೇಧಾಜ್ಞೆ ಹಾಕಿದ್ದು ಏಕೆ...? ಘಟನೆಗೆ ಸಂಬಂಧಿಸಿದಂತೆ ಯಾವ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕುವಂತಿಲ್ಲ. ಮಚ್ಚು, ತಲ್ವಾರ ಹಿಡಿದ ಮುಸ್ಲಿಮರ ಮೇಲೆ ಕೇಸ್ ಹಾಕಿ. ಕಲ್ಲು ತೂರಿದವರ ಮೇಲೆ ಕೇಸ್ ಹಾಕಬೇಡಿ ಎಂದ ಮುತಾಲಿಕ್ ಆಗ್ರಹಿಸಿದರು.

‘ಬೇರೆ ದೇಶಕ್ಕೆ ಹೋಗಿ..’

ನೂರಕ್ಕೆ ನೂರು SDPI, PFIನ ಕೈವಾಡ ಇದ್ದು ಅವುಗಳನ್ನು ಬ್ಯಾನ್ ಮಾಡಬೇಕು. ಕೋಕ್ ಆಕ್ಟ್ ಹಾಕಿ ಅವರನ್ನು ಶಿಕ್ಷಿಸಬೇಕೆಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು. ಇದು ಷರಿಯಾ ಕಾನೂನು ಇರುವ ದೇಶವಲ್ಲ,  ಸಂವಿಧಾನ ಇರುವ ದೇಶ. ಸಂವಿಧಾನಕ್ಕೆ ಗೌರವ ಕೊಡೋದಾದ್ರೆ ಇಲ್ಲಿರಿ ಇಲ್ಲಾ ಅಂದ್ರೆ ಬೇರೆ ದೇಶಕ್ಕೆ ಹೋಗಿ ಎಂದು ಕಿಡಿಕಾರಿದರು.

ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್​​ ಸರ್ಕಾರ ಅಧಿಕಾರಕ್ಕೆ ಬರುವಂತ ವಾತಾವರಣ ಇದೆ; ಮಾಜಿ ಸಿಎಂ ಸಿದ್ದರಾಮಯ್ಯ

ಕೇಸ್ ಮುಚ್ಚಿಹಾಕಲು ಬಿಡಲ್ಲ..

ಹರ್ಷ ಸ್ವಂತದ ಕಾರಣಕ್ಕೆ ಸ್ವಾರ್ಥದ ಹಿನ್ನೆಲೆ ಕೊಲೆಯಾಗಿಲ್ಲ, ಅವನ ಸಾವು ವ್ಯರ್ಥ ಆಗಬಾರದು. ಹಣ, ಹುಡುಗಿ, ಜಮೀನು ವಿಚಾರದಲ್ಲಿ ಹರ್ಷ ಕೊಲೆಯಾಗಿಲ್ಲ. ಹಿಂದುತ್ವದ ಹಿನ್ನೆಲೆ ಕೊಲೆ ಆಗಿದ್ದು, ಅವನು ಹಿಂದೂ ಕಾರ್ಯಕರ್ತ. ಬೇರೆ ಕೊಲೆ ಕೇಸ್ ತರ 302 ಕೇಸ್ ಹಾಕಿ ಕೈ ತೊಳೆದುಕೊಳ್ಳಬಾರದು. ರಾಕ್ಷಸಿ ಸ್ವರೂಪದಲ್ಲಿ ಹರ್ಷನ ಕೊಲೆಯಾಗಿದೆ, ತರಬೇತಿ ಪಡದೆವರೇ ಕೊಲೆ ಮಾಡಿದ್ದಾರೆ. ಅವರ ಮಧ್ಯೆ ದ್ವೇಷ ಇತ್ತು ಎಂದು ಹೇಳಿ ಕೇಸ್ ಮುಚ್ಚಿಹಾಕಲು ಬಿಡಲ್ಲ.

ನಮಗೆ ಕಣ್ಣೀರಾಕಲು ಅವಕಾಶ ಇಲ್ವಾ..?

ಹಿಜಾಬ್ ಸಂಬಂಧ ನ್ಯಾಯಾಲಯಕ್ಕೆ ಹೋದವರು ಯಾರು? ಕೋರ್ಟ್ ಆದೇಶ ಉಲ್ಲಂಘಿಸಿದ್ದು ಯಾರು? 144 ಸೆಕ್ಷನ್ ಧಿಕ್ಕರಿಸಿ ಆಯ್ತು, ಷರಿಯತ್, ಕುರಾನ್ ಮುಖ್ಯ ಅಂದ್ರೆ ನಿಮ್ಮ ದೇಶಕ್ಕೆ ಹೋಗಬಹುದು. ಶವಯಾತ್ರೆಯಲ್ಲಿ ಭಾಗಿಯಾದ ಕಾರ್ಯಕರ್ತರ ಮೇಲೆ ಕೇಸ್ ಹಾಕಬೇಡಿ. ನಮಗೆ ಕಣ್ಣೀರಾಕಲು ಅವಕಾಶ ಇಲ್ವಾ, ನಮ್ ಕೈಯಲ್ಲಿ ಮಚ್ವು-ಲಾಂಗ್ ಇರಲಿಲ್ಲ ಎಂದು ಸಮರ್ಥಿಸಿಕೊಂಡರು. ಹಿಂದೂ ಕಾರ್ಯಕರ್ತ ಕೊಲೆ ಹಿಂದೆ ಕಾಂಗ್ರೆಸ್​​ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.
Published by:Kavya V
First published: