ನಾವು ಕುಡುಕ ಗಂಡನ್ನ ಮದುವೆ ಆಗಿದ್ದೇವೆ, ಬಿಡಂಗಿಲ್ಲ ಇತ್ತ ಸಂಸಾರನೂ ಮಾಡಂಗಿಲ್ಲ: Pramod Muthalik

ಬಿಜೆಪಿಯವರೇ ನೀವು ಈ ಸಂಘಟನೆಗಳ ಮೇಲೆ ನಿಗಾ ಇರಿಸಿದ್ದರೆ ಹಷ೯ನ ಕೊಲೆಯಾಗುತ್ತಿರಲಿಲ್ಲ. ಈ ಹೇಳಿಕೆ ನೀಡಿ ದೇಶದ್ರೋಹಿ ಭಯೋತ್ಪಾದಕರನ್ನ ನೀವು ಸಾಕುತ್ತಿದ್ದೀರಿ..ಇದು ಸರಿಯಲ್ಲ. ಒಂದು ಸಂಸ್ಥೆ ಇಡೀ ದೇಶದಲ್ಲೆ ಭಯೋತ್ಪಾದನೆ ಚಟುವಟಿಕೆ ಮಾಡ್ತಿದೆ ಎಂದು ಆರೋಪಿಸಿದರು.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • Share this:
ಬಾಗಲಕೋಟೆ: ನಾವು ಕುಡುಕ ಗಂಡನನ್ನ (Drunkard) ಮದುವೆ (Marriage) ಮಾಡಿಕೊಂಡುಬಿಟ್ಟಿದೀವಿ ಬಿಡಂಗೂ ಇಲ್ಲ ಸಂಸಾರ ಮಾಡಂಗೂ ಇಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ (Pramod Muthalik) ಬಿಜೆಪಿ (BJP) ಯನ್ನ ಕುಡುಕ ಗಂಡನಿಗೆ ಹೋಲಿಸಿದ್ದಾರೆ.  ಜಿಲ್ಲೆಯ ಇಳಕಲ್ (Ilakal) ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವಂತೂ ಕಾರ್ನರ್ ಟು ಕಾರ್ನರ್ ರಾಜ್ಯಾದ್ಯಂತ ಹೋಗಿ, ಬಿಜೆಪಿ ಯಾಕೆ,  ಪಿಎಫ್ಐ (PFI), ಸಿಎಫ್ಐ (CFI), ಎಸ್ ಡಿಪಿಐ (SDPI)  ಬ್ಯಾನ್ ಮಾಡ್ತಿಲ್ಲ ಅಂತ ಬಟಾಬಯಲು ಮಾಡಬೇಕಾಗುತ್ತೆ. ಎಸ್ ಡಿ ಪಿಐ ಮತ್ತು ಪಿಎಫ್ ಐ ಹೇಗೆ ದೇಶದ್ರೋಹಿ, ಹೇಗೆ ಭಯೋತ್ಪಾಕರ ಜೊತೆ ಕೈ ಜೋಡಿಸುತ್ತಿದೆ ಅಂತ ಸಮಾಜದ ಎದುರುಗಡೆ ಇಡುತ್ತೇವೆ. ಆಗ ಜನ ನಿಶ್ಚಯ ಮಾಡ್ಲಿ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

ಇದೆ ವೇಳೆ ಮಾತನಾಡಿ, ಇವತ್ತಿನ ರಾಜಕೀಯದಲ್ಲಿ ಪ್ರಾಮಾಣಿಕರಿಗೆ ಹಿಂದೂ ವಾದಿಗಳಿಗೆ ಬೆಲೆ ಇಲ್ಲ. ದುಡ್ಡು, ಜಾತಿ, ಗುಂಡಾಗಿರಿ ಲಾಬಿ ಮಾಡುವವರಿಗೆ ಮಾತ್ರ ರಾಜಕೀಯ ಪ್ರವೇಶ ಇದೆ. ನಾವು ಕುಡುಕ ಗಂಡನ ಮದುವೆ ಮಾಡಿಕೊಂಡುಬಿಟ್ಟಿದ್ದೇವೆ. ಆ ಪರಿಸ್ಥಿತಿಯಲ್ಲಿ ನಾವ್ ಇದೀವಿ. ಬಿಡಂಗಿಲ್ಲ ಸಂಸಾರ ಮಾಡಂಗಿಲ್ಲ, ಕುಡುಕ ಗಂಡನನ್ನೇ ಸುಧಾರಿಸಬೇಕು. ಇವರೇ ಹಿಂದುತ್ವದ ಕೆಲಸ ಮಾಡಬೇಕು. ನೀವೇ ತಿದ್ದಬೇಕು ಅಂತ ಒತ್ತಡ ಹೇರಲು ಹಿಂದೂ ಸಮಾಜ ಸಿದ್ಧವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯವರೇ ನಿಮಗೇನಾದ್ರೂ ಮಾನ ಮರ್ಯಾದೆ ಇದೆಯಾ?

ಇನ್ನು ಎಸ್ ಡಿಪಿಐ, ಪಿಎಫ್ ಐ ಬ್ಯಾನ್ ಮಾಡುವ ಉದ್ದೇಶ ಇಲ್ಲ ಎಂದಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ವಾಗ್ದಾಳಿ ನಡೆಸಿ,  ಸ್ವಾಮೀ, ಬಿಜೆಪಿಯವರೇ ನಿಮಗೇನಾದ್ರೂ ಮಾನ ಮರ್ಯಾದೆ ಇದೆಯಾ. ಬಿಜೆಪಿಯವರೇ, ನೀವು ದೇಶದ್ರೋಹಿ ಭಯೋತ್ಪಾದಕರನ್ನ  ಸಾಕುತ್ತಿದ್ದೀರಿ. ಗೃಹ ಮಂತ್ರಿಗಳ ಈ ವಿಚಾರವನ್ನು ನಾನು ಖಂಡಿಸುತ್ತೇವೆ ಎಂದರು.

ಇದನ್ನೂ ಓದಿ:  Fetus Death: ಆಸ್ಪತ್ರೆಯ ಬಾತ್ ರೂಮ್​ನಲ್ಲಿ ಭ್ರೂಣ ಪತ್ತೆ, ಕೊಳೆತ ಸ್ಥಿತಿಯಲ್ಲಿ ನವಜಾತ ಶಿಶು

ಬಿಜೆಪಿಯವರೇ ನೀವು ಈ ಸಂಘಟನೆಗಳ ಮೇಲೆ ನಿಗಾ ಇರಿಸಿದ್ದರೆ ಹಷ೯ನ ಕೊಲೆಯಾಗುತ್ತಿರಲಿಲ್ಲ. ಈ ಹೇಳಿಕೆ ನೀಡಿ ದೇಶದ್ರೋಹಿ ಭಯೋತ್ಪಾದಕರನ್ನ ನೀವು ಸಾಕುತ್ತಿದ್ದೀರಿ..ಇದು ಸರಿಯಲ್ಲ. ಒಂದು ಸಂಸ್ಥೆ ಇಡೀ ದೇಶದಲ್ಲೆ ಭಯೋತ್ಪಾದನೆ ಚಟುವಟಿಕೆ ಮಾಡ್ತಿದೆ ಎಂದು ಆರೋಪಿಸಿದರು.

ಬ್ಯಾನ್ ಪಿಎಫ್ಐ ಆಂದೋಲನ

ಹಿಂದೂ ವಿರೋಧಿ, ರಾಷ್ಟ್ರ ವಿರೋಧಿ, ಧಮ೯ ವಿರೋಧಿ ಕೆಲಸ ಮಾಡ್ತಿದೆ. ದಾಖಲೆ ಸಮೇತ ಎಲ್ಲ ಇದೆ, ಕಾಂಗ್ರೆಸ್ ನವರು ಸಹ ಬ್ಯಾನ್ ಮಾಡಿ ಅಂತ ಹೇಳ್ತಿದ್ದಾರೆ. ಕಮ್ಯನಿಷ್ಟ್ರು ಬ್ಯಾನ್ ಮಾಡಿ ಅಂತಿದ್ದಾರೆ. ನೀವು ಕಣ್ಣಿಡ್ತಿವಿ ಅಂತಿದ್ದೀರಿ, ಇದನ್ನು ನಾವು ಒಪ್ಪಲ್ಲ. ಬಿಜೆಪಿಯವರಿಗೆ ಹೇಳೋದಿಷ್ಟೇ. ದೇಶದ, ಸಮಾಜದ, ಧಮ೯ದ ಸುರಕ್ಷತೆ ಹಿನ್ನೆಲೆ ಬ್ಯಾನ್ ಮಾಡಿ. ಬ್ಯಾನ್ ಮಾಡದೇ ಹೋದರೆ ಎಪ್ರಿಲ್ ಕೊನೆಯದಿಂದ ಇಡೀ ರಾಜ್ಯಾದ್ಯಂತ ಹೋರಾಟ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.

ಬ್ಯಾನ್ ಪಿಎಫ್ಐ ಆಂದೋಲನ ಶುರು ಮಾಡ್ತೀವಿ‌. ದಾಖಲೆಯನ್ನ ಬಿಜೆಪಿಯವರೇ ಬಿಡುಗಡೆ ಮಾಡಿದ್ದಾರೆ‌. ಆದ್ರೆ ಈಗ ಬಿಜೆಪಿಯವರೇ ಉಲ್ಟಾ ಹೊಡೆಯುತ್ತಿದ್ದೀರಿ. ನೀವೇ ಸಾಪ್ಟ್ ಕಾನ೯ರ್ ಮೂಲಕ ಅವರನ್ನ ಸಾಕುತ್ತಿದ್ದೀರಿ ಅನ್ನೋ ಸಂಶಯ ಕಾಡ್ತಿದೆ. ಇದನ್ನು ನಾವು ಒಪ್ಪಲ್ಲ ಎಂದರು.

ಶಿವಮೊಗ್ಗದಲ್ಲಿ ಹಿಜಾಬ್ ಪರ ಮತ್ತೇ ಪ್ರತಿಭಟನೆ ನಡೆಸಿದ ವಿಚಾರ‌‌‌..!

ಶಿವಮೊಗ್ಗದಲ್ಲಿ ಪ್ರತಿಭಟನೆ ಮಾಡ್ತಾರೆ, ಇವರಿಗೆಷ್ಟು ಧೀಮಾಕು & ಸೊಕ್ಕಿದೆ. ಕೋರ್ಟಿಗೆ ಹೋದವರಾರು..? 6 ಜನ ವಿದ್ಯಾರ್ಥಿಗಳೇ ನೀವೆ ಕೋರ್ಟಿಗೆ ಹೋದ್ರಿ. ಕೋರ್ಟ್ ಸಹ ಇಂಟಿರಿಯಮ್ ಆರ್ಡರ್ ಕೊಟ್ಟಿದೆ. ಪಾಲನೆ ಮಾಡೋದಕ್ಕಾಗಲ್ವಾ ಎಂದು ಕಿಡಿಕಾರಿದರು.

ಇದು ತಾಲಿಬಾನ್, ಪಾಕಿಸ್ತಾನ, ಅಪಘಾನಿಸ್ತಾನ ಅಲ್ಲ. ಇದು ಭಾರತ ಇದೆ. ಅಂಬೇಡ್ಕರ್ ಬರೆದ ಸಂವಿಧಾನದ ಮೇಲೆ ಪ್ರಜಾಪ್ರಭುತ್ವದ ಮೇಲೆ ದೇಶ ನಡೆಯುತ್ತಿದೆ.  ಮಾಜಿ ಸಿಎಂ, ಸಂಸದರು ಇರುವಲ್ಲೇ ಹೊಕ್ಕು ಹೊಡಿತಿವಿ ‌ಅಂತಿದ್ದಾರೆ. ಇವರನ್ನು ಹದ್ದುಬಸ್ತನಲ್ಲಿ ಇಡೋಕಾಗಲ್ವಾ. ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ತಕ್ಕ ಉತ್ತರ ಕೊಡಲು ಸಿದ್ಧವಾಗಿದೆ. ಹರ್ಷನ ಕೊಂದರೆ ಹೆದರೋದಿಲ್ಲ, ಇಂತಹ ಬೇಕಾದಷ್ಟು ಬಲಿದಾನ ಆಗಿವೆ. ಹೆದರುವ ರಕ್ತ ಹಿಂದುಗಳದ್ದಲ್ಲ. ಇಲ್ಲಿ ನಿಮ್ಮ ಆಟ ನಡೆಯಲ್ಲ ಎಂದು ಗುಡುಗಿದರು.

ಇದನ್ನೂ ಓದಿ:  Karnataka Assembly: "ಕಾಂಗ್ರೆಸ್‌ ನಡಿಗೆ ಈಗ ಇಟಲಿ ಕಡೆಗೆ!" ಪಂಚರಾಜ್ಯಗಳ ಚುನಾವಣೆಯಲ್ಲಿ 'ಕೈ' ಸೋಲಿಗೆ ಯತ್ನಾಳ್ ವ್ಯಂಗ್ಯ

ಹಿಜಾಬ್ ಹಿಂದೆ ಪೂರ್ವ ನಿಯೋಜಿತ ಪ್ಲ್ಯಾನ್ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಇಂದಿನ ಹಿಜಾಬ್ ಪರ ಮುಲ್ಲಾ, ಮೌಲ್ವಿ ಸೇರಿ ಪ್ರತಿಭಟನೆ ಮಾಡೋದು ನೋಡಿದ್ರೆ ಮುಂದೆ ಭಯಾನಕ ದೃಶ್ಯ ಇದೆ ಎನಿಸುತ್ತಿದೆ.

ಇವರಿಗೆ ಸಂವಿಧಾನ, ಕಾನೂನು, ಪೋಲಿಸ ಠಾಣೆ ಸಂಭಂದವಿಲ್ಲ. ಶರೀಯಾ, ಹದೀಜ್, ಕುರಾನ್ ಆಧಾರದ ಮೇಲೆ ಈ ದೇಶದ ಆಡಳಿತ ತರಬೇಕೆನ್ನುತ್ತಿದ್ದಾರೆ. ಇದನ್ನು ಹಿಂದೂ ಸಮಾಜ & ಸಕಾ೯ರ ಗಂಭೀರವಾಗಿ ತೆಗೆದುಕೊಳ್ಳಬೇಕು. ಹರ್ಷನ ಕೊಲೆ ನಂತರ ಅಂತ್ಯಕ್ರಿಯೆಯಲ್ಲಿ ತಲವಾರ್ ಹಿಡಿದು ಚಾಲೆಂಜ್ ಮಾಡ್ತಾರೆ. ವ್ಯಕ್ತಿ ಮೇಲೆ ಹಲ್ಲೆ ಮಾಡ್ತಾರೆ..ಇದನ್ನು ನಾವು ಸಹಿಸೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ಮಂಜುನಾಥ್ ತಳವಾರ
Published by:Mahmadrafik K
First published: