• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬಿಜೆಪಿ ಟಿಕೆಟ್ ಕೊಟ್ರೆ ಲೋಕಸಭೆ ಚುನಾವಣೆಗೆ ನಿಲ್ತೀನಿ; ಇಲ್ಲಾಂದ್ರೆ ರಾಜಕೀಯ ನಿವೃತ್ತಿ ಎಂದ ಮುತಾಲಿಕ್

ಬಿಜೆಪಿ ಟಿಕೆಟ್ ಕೊಟ್ರೆ ಲೋಕಸಭೆ ಚುನಾವಣೆಗೆ ನಿಲ್ತೀನಿ; ಇಲ್ಲಾಂದ್ರೆ ರಾಜಕೀಯ ನಿವೃತ್ತಿ ಎಂದ ಮುತಾಲಿಕ್

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

ನನಗೀಗ 66 ವರ್ಷ ವಯಸ್ಸಾಗಿದೆ. ಸದ್ಯ ಲೋಕಸಭೆಗೆ ಎರಡೂವರೆ ವರ್ಷ ಅವಧಿ ಮಾತ್ರ ಇದೆ. ಹೀಗಾಗಿ ಇದು ನನ್ನ ಕೊನೆಯ ಚುನಾವಣೆಯಾಗಲಿದೆ

  • Share this:

ಹುಬ್ಬಳ್ಳಿ (ಮಾ. 22) : ರಾಜ್ಯದಲ್ಲಿ ಎರಡು ವಿಧಾನಸಭೆ  ಮತ್ತು ಒಂದು ಲೋಕಸಭೆಗೆ ಉಪ ಚುನಾವಣೆ  ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ ಕಣಕ್ಕೆ ಇಳಿಯುವ ಇಂಗಿತವನ್ನು  ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವ್ಯಕ್ತಪಡಿಸುತ್ತಿದ್ದಾರೆ. ಇದೇ ಹಿನ್ನಲೆ ಇಂದು ಈ ಕುರಿತು ಮಾತನಾಡಿದ ಅವರು, ಬೆಳಗಾವಿ ಲೋಕಸಭೆ ಉಪ ಚುನಾವಣೆ ಬಿಜೆಪಿ ಟಿಕೆಟ್ ಕೊಟ್ಟರೆ ನಿಲುತ್ತೇನೆ.  ಇಲ್ಲದಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಟಿಕೆಟ್ ಸಿಗುಲಿದೆ ಎನ್ನುವ ಭರವಸೆ ಇದೆ. ಟಿಕೆಟ್ ಕೊಟ್ಟರೆ ನಾನು ಸ್ಪರ್ಧೆ ಮಾಡುತ್ತೇನೆ. ನನಗೀಗ 66 ವರ್ಷ ವಯಸ್ಸಾಗಿದೆ. ಸದ್ಯ ಲೋಕಸಭೆಗೆ ಎರಡೂವರೆ ವರ್ಷ ಅವಧಿ ಮಾತ್ರ ಇದೆ. ಹೀಗಾಗಿ ಇದು ನನ್ನ ಕೊನೆಯ ಚುನಾವಣೆಯಾಗಲಿದೆ ಎಂದರು.


ಬಿಜೆಪಿಯ ಹಿರಿಯ ಮುಖಂಡರ ಜತೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಟಿಕೆಟ್ ಸಿಗುವ ಭರವಸೆ ಸಿಕ್ಕಿದ್ದು, ಶೇ. 90 ಟಿಕೆಟ್ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ. ಬಿಜೆಪಿ ಅಭ್ಯರ್ಥಿ ಬಯಸಿದಲ್ಲಿ ಲೋಕಸಭಾ ಉಪಚುನಾವಣೆಯಲ್ಲಿ ಪ್ರಚಾರ ಮಾಡುತ್ತೇನೆ. ಎಲ್ಲವೂ ಬಜೆಪಿ ಹೈಕಮಾಂಡ್ ನಿರ್ಧಾರದ ಮೇಲೆ ಅವಲಂಬಿಸಿದೆ. ದೇಶದ ಹಿತಕ್ಕಾಗಿ ಎಲ್ಲ ಅಪಮಾನಗಳನ್ನು ಸಹಿಸಿ ಕೊಳ್ಳುತ್ತಿದ್ದೇನೆ ಎಂದು  ತಿಳಿಸಿದ್ದಾರೆ.


ಕೃಷಿ ವಿ.ವಿ. ಕುಲಪತಿ ಮೇಲೆ ಕ್ರಮಕ್ಕೆ ಆಗ್ರಹ


ಧಾರವಾಡ ಕೃಷಿ ವಿ. ವಿ. ಭ್ರಷ್ಟಾಚಾರ, ಲೈಂಗಿಕ ಶೋಷಣೆ, ಅತಿಕ್ರಮಣ ತಾಂಡವವಾಗಿದೆ  ಇದೇ ವೇಳೆ ಆರೋಪಿಸಿದ್ದಾರೆ. ಧಾರವಾಡ ವಿ. ವಿ. ಗೆ  50 ವರ್ಷವಾಗಿದೆ. ಕೃಷಿ ಕೇಂದ್ರ ಆರಂಭವಾಗಿ 75 ವರ್ಷಕ್ಕೆ ಕಾಲಿಡುತ್ತೆ. ಆದರೆ ರೈತರ ಹೆಸರಲ್ಲಿ ವಂಚನೆ ನಡೆದಿದೆ.
ಇಬ್ಬರು ಅಮಾಯಕ ಹುಡುಗಿರ ಬಲಿ ತೆಗೆದುಕೊಳ್ಳಲಾಗಿದೆ. ಇಬ್ಬರು ಮಹಿಳಾ ಸಿಬ್ಬಂದಿಗೆ ಬೆದರಿಕೆ ಹಾಕಿ ಗೋವಾಕ್ಕೆ ಕರೆದೊಯ್ದು, ಮದ್ಯ ಕುಡಿಸಿ, ಅತ್ಯಾಚಾರ ಮಾಡಲಾಗಿದೆ. ಕಾರು ಅಪಘಾತದ ನೆಪದಲ್ಲಿ ರೇಖಾ ಮತ್ತು ಮೇಘಾ ಎನ್ನುವವರನ್ನು ಬಲಿ ಪಡೆಯಲಾಗಿದೆ. ವಿ.ವಿ.ಯ ಮಹಿಳಾ ಸಿಬ್ಬಂದಿ ಸಾವು ಸಂಭವಿಸಿ 2 ತಿಂಗಳಾದ್ರೂ ಇದುವರೆಗೂ ಎಫ್.ಐ.ಆರ್. ಆಗಿಲ್ಲ ಎಂದು ಕಿಡಿಕಾರಿದರು.


ಸಿಬ್ಬಂದಿ ಸಾವಿನ ತನಿಖೆಯಾಗಬೇಕು. ಇಬ್ಬರ ಕುಟುಂಬಕ್ಕೂ ತಲಾ 25  ಲಕ್ಷ ಪರಿಹಾರ ಕೊಡಬೇಕು.ಇಬ್ಬರ ಕುಟುಂಬದ ಸದಸ್ಯರಿಗೆ ಕೂಡಲೇ ಕೃಷಿ ವಿ. ವಿ. ಯಲ್ಲಿ ನೌಕರಿ ಕೊಡಬೇಕು. ವಿ. ವಿ ಕುಲಪತಿ ಎಂ.ಬಿ. ಛಟ್ಟಿ ಹಾಗೂ ಪಿ.ಎ. ಎಂ.ಎ.ಮುಲ್ಲಾ, ಹಿರಿಯ ಸಹಾಯಕ ಯು.ಬಿ.ಮೆಸ್ತಿ ಅವರನ್ನು ಅಮಾನತು ಮಾಡಬೇಕು. ಈ ಸಂಬಂಧ ಸಂಬಂಧಪಟ್ಟ ಸಚಿವರು, ಅಧಿಕಾರಿಗಳ ಗಮನ ಸೆಳೆಯಲಾಗುವುದು. ನಂತರ ವಿ.ಸಿ. ಮತ್ತು ಮುಲ್ಲಾ ಹಟಾವೋ, ಕೃಷಿ ವಿ. ವಿ. ಬಚಾವೊ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.


(ವರದಿ - ಶಿವರಾಮ ಅಸುಂಡಿ)

Published by:Seema R
First published: