• Home
  • »
  • News
  • »
  • state
  • »
  • Pramod Mutalik: ಶ್ರೀರಾಮಸೇನೆಯಿಂದ 25 ಪ್ರಖರ ಹಿಂದುತ್ವವಾದಿಗಳ ಸ್ಪರ್ಧೆ! ಹಿಂದೂಗಳ ರಕ್ಷಣೆಗಾಗಿ ಚುನಾವಣೆ ಎಂದ ಮುತಾಲಿಕ್

Pramod Mutalik: ಶ್ರೀರಾಮಸೇನೆಯಿಂದ 25 ಪ್ರಖರ ಹಿಂದುತ್ವವಾದಿಗಳ ಸ್ಪರ್ಧೆ! ಹಿಂದೂಗಳ ರಕ್ಷಣೆಗಾಗಿ ಚುನಾವಣೆ ಎಂದ ಮುತಾಲಿಕ್

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

"ದೇಶದಲ್ಲಿ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಹೊರತುಪಡಿಸಿ ಮತ್ಯಾರೂ ಹಿಂದೂ ಧರ್ಮ ಹಾಗೂ ಹಿಂದೂಗಳ ಉಳಿವಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತಿಲ್ಲ" ಅಂತ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಚಿಕ್ಕಮಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ (assembly elections) ಶ್ರೀರಾಮಸೇನೆಯಿಂದ (Srirama Sene) 25 ಪ್ರಖರ ಹಿಂದುತ್ವವಾದಿಗಳನ್ನು ಸ್ವತಂತ್ರವಾಗಿ 25 ಕ್ಷೇತ್ರಗಳಲ್ಲಿ ಕಣಕ್ಕಿಳಿಸಲಾಗುವುದು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ. ದತ್ತಪೀಠದ (Dattapeetha) ಆವರಣದಲ್ಲಿ ಮಾತನಾಡಿದ ಅವರು, ಸದ್ಯ ದೇಶದಲ್ಲಿ ಪ್ರಧಾನಿ ಮೋದಿ (PM Modi) ಹಾಗೂ ಯುಪಿ ಸಿಎಂ ಯೋಗಿ (Yogi) ಹೊರತುಪಡಿಸಿ ಮತ್ಯಾರು ಹಿಂದೂ ಧರ್ಮ ಹಾಗೂ ಹಿಂದೂಗಳ ಉಳಿವಿಗಾಗಿ ಪ್ರಮಾಣಿಕವಾಗಿ ಪ್ರಯತ್ನ ನಡೆಸುತ್ತಿಲ್ಲ. ಹಿಂದುತ್ವದ ಹೆಸರಿನಲ್ಲಿ ಮೂಲಕ ಅಧಿಕಾರಕ್ಕೇರಿದ ಬಹುತೇಕ ಬಿಜೆಪಿ ಶಾಸಕರು, ಮಂತ್ರಿಗಳು ಹಿಂದೂಗಳ ಪರವಾಗಿ ಕೆಲಸ ಮಾಡುತ್ತಿಲ್ಲ. ಅವರೆಲ್ಲೂ ಡೋಂಗಿ ಹಿಂದುತ್ವವಾದಿಗಳಾಗಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ.


“ಪ್ರಖರ ಹಿಂದುತ್ವವಾದಿಗಳು ಕಣಕ್ಕೆ”
ಹಿಂದುತ್ವಕ್ಕಾಗಿ ಹೋರಾಡಿದವರ ಮೇಲೆ ರೌಡಿಶೀಟರ್ ಕೇಸ್‍ಗಳನ್ನು ಹಾಕಲಾಗಿದೆ, ಕೆಲವರು ಗೂಂಡಾ ಕೇಸ್ ಹಾಕಿಸಿಕೊಂಡು ಓಡಾಡುತ್ತಿದ್ದಾರೆ. ಅವರ ರಕ್ಷಣೆಗೆ ಬಿಜೆಪಿ ಸರಕಾರ ಕ್ರಮಕೈಗೊಂಡಿಲ್ಲ ಅಂತ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಕೆಲ ಹಿಂದೂ ಕಾರ್ಯಕರ್ತರು ಕೊಲೆಯಾಗಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಗೆದ್ದವರಿಗೆ ಹಿಂದುಗಳ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಪ್ರಖರ ಹಿಂದುತ್ವವಾದಿಗಳು, ಸ್ವಾಮೀಜಿಗಳನ್ನು ಚುನಾವಣಾ ಕಣಕ್ಕಿಳಿಸಲಾಗುವುದು ಎಂದಿದ್ದಾರೆ.


ದತ್ತಮಾಲೆ ಧರಿಸಿದ ಮುತಾಲಿಕ್


ಬಿಜೆಪಿ ವಿರುದ್ಧ ಕಿಡಿಕಿಡಿ


ರಾಜಕೀಯ ಅಧಿಕಾರ ಪಡೆದು ಹಿಂದೂಗಳ ರಕ್ಷಣೆ ಮಾಡುತ್ತೇವೆ. ದತ್ತಪೀಠಕ್ಕೆ ಮುಕ್ತಿ ನೀಡುತ್ತೇವೆ, ಮುಂದಿನ ವರ್ಷದ ದತ್ತಮಾಲೆ ಅಭಿಯಾನ ನಮ್ಮ ಕೊನೆ ಅಭಿಯಾನ ಆಗಲಿದೆ ಎಂದರು. ಬಿಜೆಪಿ ಹುಟ್ಟಿದ್ದೇ ಹಿಂದುತ್ವಕ್ಕಾಗಿ, ಪಾರ್ಲಿಮೆಂಟ್, ವಿಧಾನಸಭೆಯಲ್ಲಿ ಹಿಂದೂಗಳ ರಕ್ಷಣೆ ಮಾಡುತ್ತೇವೆಂದು ಗೆದ್ದವರು ಈಗ ಮೌನ ವಹಿಸಿದ್ದಾರೆ. ಬಿಜೆಪಿಯವರು ಕಳೆದ 25 ವರ್ಷಗಳಿಂದ ದತ್ತಪೀಠದ ಹೆಸರೇಳಿಕೊಂಡು ಲಾಭ ಪಡೆದಿದ್ದಾರೆ. ಇನ್ನು ಇವರನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.


ದತ್ತಮಾಲೆ ಅಭಿಯಾನ


“ದತ್ತಪೀಠ ಸಮಸ್ಯೆಗೆ ಮುಕ್ತಿ ನೀಡುತ್ತೇವೆ”


ನಾವು ರಾಜಕೀಯ ಅಧಿಕಾರ ಪಡೆದು ದತ್ತಪೀಠಕ್ಕೆ ಮುಕ್ತಿ ನೀಡುತ್ತೇವೆ, ಗೋಹತ್ಯೆ ತಡೆಯುತ್ತೇವೆ, ಮತಾಂತರಕ್ಕೆ ಕಡಿವಾಣ ಹಾಕುತ್ತೇವೆ, ಲವ್ ಜಿಹಾದ್ ನಿಲ್ಲಿಸುತ್ತೇವೆ ಎಂದು ದತ್ತಪೀಠದಲ್ಲಿ ಸಂಕಲ್ಪ ಮಾಡಿದ್ದೇವೆ ಎಂದರು. ದತ್ತಪೀಠದ ಹೆಸರಿನಲ್ಲಿ ಅಧಿಕಾರ ಪಡೆದವರು ದತ್ತಪೀಠವನ್ನು ಹಿಂದೂ ಗಳಿಗೆ ಒಪ್ಪಿಸುವಲ್ಲಿ ನಿರ್ಲಕ್ಷ್ಯವಹಿಸಿದ್ದು, ಶ್ರೀರಾಮ ಸೇನೆ ರಾಜಕೀಯ ಶಕ್ತಿ ಪಡೆದು ದತ್ತ ಪೀಠವನ್ನು ಹಿಂದೂಗಳಿಗೆ ಒಪ್ಪಿಸುವ ಕೆಲಸ ಮಾಡಲಿದೆ ಎಂದು ಮುತಾಲಿಕ್ ಹೇಳಿದರು.


ದತ್ತ ಭಕ್ತರ ಸಮೂಹ


ಸಿಟಿ ರವಿ ವಿರುದ್ಧ ಮುತಾಲಿಕ್ ಕಿಡಿ


ಹಿಂದೂ ಅರ್ಚಕರನ್ನು ನೇಮಿಸಿ ಎಂದು ನ್ಯಾಯಾಲಯ ಹೇಳಿದೆ. 24ಗಂಟೆಯಲ್ಲಿ ಹಿಂದೂ ಅರ್ಚಕರನ್ನು ನೇಮಿಸಿ ಪೂಜೆ ಪ್ರಾರಂಭ ಮಾಡಿದರೇ ನಿಮ್ಮಪ್ಪನ ಗಂಟು ಏನು ಹೋಗುತ್ತೇ ಎಂದು ಸಿ.ಟಿ.ರವಿಯವರನ್ನು ಪ್ರಶ್ನಿಸಿದರು. ತಡೆಯಾಜ್ಞೆ ತರುತ್ತಾರೆಂದು ದೊಡ್ಡ ದೊಡ್ಡದಾಗಿ ಹೇಳುತ್ತಾರೆ. ಮುಸ್ಲಿಂ ಸಮುದಾಯದವರ ಜೊತೆ ಚರ್ಚಿಸಿ ಸೌಹಾರ್ದತೆಯಿಂದ ಬಗೆಹರಿಸಲು ಆಗೋದಿಲ್ಲವೇ ಎಂದ ಅವರು, ಪರಿಹರಿಸಲು ಇಚ್ಛಾಶಕ್ತಿಬೇಕು. ಅದನ್ನು ಬಿಟ್ಟು ರಾಜಕೀಯ ನಾಟಕವಾಡುತ್ತೀದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.


“ಉಸಿರು ಇರುವವರೆಗೂ ದತ್ತಪೀಠಕ್ಕಾಗಿ ಹೋರಾಟ”


ನಾವು ಉಸಿರುವರೆಗೂ ದತ್ತಪೀಠಕ್ಕಾಗಿ ಹೋರಾಟ ಮಾಡುತ್ತೇವೆ. ಶ್ರೀರಾಮಸೇನೆ ರಾಜಕೀಯ ಶಕ್ತಿ ಪಡೆದುಕೊಂಡು ಮುಂದಿನ ವರ್ಷ ದತ್ತಮಾಲಾ ಅಭಿಯಾನ ಕೊನೆಗೊಳಿಸಿ ದತ್ತಪೀಠವನ್ನು ಹಿಂದೂಗಳ ಪೀಠ ಮಾಡುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಇದನ್ನೂ ಓದಿ: Kanakadasa Jayanti: ಗೋಮೂತ್ರದಿಂದ ಈದ್ಗಾ ಮೈದಾನ ಶುದ್ಧೀಕರಣ ಮಾಡಿ ಕನಕ ಜಯಂತಿ ಆಚರಿಸಿದ ಮುತಾಲಿಕ್!


ನಗರದಲ್ಲಿ ಅದ್ದೂರಿ ಶೋಭಾಯಾತ್ರೆ
ಶ್ರೀರಾಮಸೇನೆಯಿಂದ ಹಮ್ಮಿಕೊಂಡಿದ್ದ 18ವರ್ಷದ ದತ್ತಮಾಲಾ ಅಭಿಯಾನದ ಹಿನ್ನಲೆಯ ಲ್ಲಿ ದತ್ತಭಕ್ತರಿಂದ ನಗರದಲ್ಲಿ ಅದ್ದೂರಿ ಶೋಭಾಯಾತ್ರೆ ನಡೆಸಲಾಯಿತು. ನಗರದ ಶ್ರೀಶಂಕರಮಠ ಆರಂಭಗೊಂಡ ಶೋಭಾಯಾತ್ರೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಚಾಲನೆ ನೀಡಿದರು. ಅಲ್ಲಿಂದ ಆರಂಭಗೊಂಡ ಶೋಭಾಯಾತ್ರೆ ಹನುಮಂತಪ್ಪ ವೃತ್ತ ಪ್ರವೇಶಿಸಿ ಎಂ.ಜಿ.ರಸ್ತೆ ಮೂಲಕ ಆಜಾದ್‍ಪಾರ್ಕ್ ವೃತ್ತದಲ್ಲಿ ಸಮಾಪ್ತಿ ಗೊಂಡಿತು.

Published by:Annappa Achari
First published: