Mandya: ‘ಅಂದು ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್ ಬದಲು, ಭಾರತ್ ಮಾತಾ ಕೀ ಜೈ ಎಂದು ಕೂಗಲಿಲ್ಲ ಏಕೆ?’

ಯುವತಿಯ ಅಲ್ಲಾಹು ಅಕ್ಬರ್​ ಘೋಷಣೆಗೆ ಪ್ರಮೋದ್​ ಮುತಾಲಿಕ್​ (Pramod Muthalik) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಹುಡುಗಿ ಅಂದು ಭಾರತ್ ಮಾತಾ ಕೀ ಜೈ (Bharat Mata Ki Jai) ಎನ್ನಬಹುದಿತ್ತು, ಆದ್ರೆ ಆ ಹೆಣ್ಣುಮಗಳು ಅಲ್ಲಾಹು ಅಕ್ಬರ್ ಎಂದಳು.

ಅಲ್ಲಾಹು ಅಕ್ಬರ್​​ ಘೋಷಣೆ ಕೂಗಿದ್ದ ವಿದ್ಯಾರ್ಥಿನಿ

ಅಲ್ಲಾಹು ಅಕ್ಬರ್​​ ಘೋಷಣೆ ಕೂಗಿದ್ದ ವಿದ್ಯಾರ್ಥಿನಿ

  • Share this:
ಮಂಡ್ಯ: ಕೆಲ ದಿನಗಳ ಹಿಂದೆ ಹಿಜಾಬ್​​ ವರ್ಸಸ್​​ ಕೇಸರಿ ಶಾಲು (Hijab vs Saffron Shawl) ಸಂಘರ್ಷದ ಸಮಯದಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಶ್ರೀರಾಮ್​​ ಘೋಷಣೆ ಕೂಗುತ್ತಿದ್ದ ಯುವಕರ ಗುಂಪಿನ ಎದುರು ಅಲ್ಲಾಹು ಅಕ್ಬರ್​ (Allahu Akbar) ಎಂದು ಘೋಷಣೆ ಕೂಗಿದ್ದರು. ಆ ವಿಡಿಯೋ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ವಿದ್ಯಾರ್ಥಿನಿಗೆ ಮುಸ್ಲಿಂ ಸಂಘಟನೆಯೊಂದು 5 ಲಕ್ಷ ಬಹುಮಾನವನ್ನು ಘೋಷಿತ್ತು. ಯುವತಿಯ ಅಲ್ಲಾಹು ಅಕ್ಬರ್​ ಘೋಷಣೆಗೆ ಹಿಂದೂ ಸಂಘಟನೆ ಮುಖಂಡ ಪ್ರಮೋದ್​ ಮುತಾಲಿಕ್​ (Pramod Muthalik) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಹುಡುಗಿ ಅಂದು ಭಾರತ್ ಮಾತಾ ಕೀ ಜೈ (Bharat Mata Ki Jai) ಎನ್ನಬಹುದಿತ್ತು, ಆದ್ರೆ ಆ ಹೆಣ್ಣುಮಗಳು ಅಲ್ಲಾಹು ಅಕ್ಬರ್ ಎಂದಳು. ಅದಕ್ಕೆ ಮಹಾರಾಷ್ಟ್ರ ಶಾಸಕ ಉಡುಗೊರೆ ನೀಡಿದ್ದಾನೆ, ಮತ್ತಷ್ಟು ಮುಸ್ಲಿಂ ಮುಖಂಡರು ಹಾಡಿ ಹೊಗಳಿದ್ದಾರೆ. 5-10 ಲಕ್ಷ ಅಲ್ಲ, ನಮ್ಮ ಹರ್ಷನ ಕುಟುಂಬಕ್ಕೆ 60-70 ಲಕ್ಷ ನೆರವು ಸಿಕ್ಕಿದೆ. ಆಕೆಗೆ ಸಿಕ್ಕಿದ್ದಕ್ಕಿಂತ ಹತ್ತು ಪಟ್ಟು ಹೆಚ್ಚಿಗೆ ಸಿಕ್ಕಿದೆ ಎಂದು ಶ್ರೀರಂಗಪಟ್ಟಣದಲ್ಲಿ ಮುತಾಲಿಕ್ ಹೇಳಿಕೆ ನೀಡಿದರು.

ಇದನ್ನೂ ಓದಿ: Hijab ವಿವಾದ ಬಗೆಹರಿಯುವ ಮುನ್ನವೇ ಖಾಸಗಿ ಶಾಲೆಗಳಿಂದ ಪೋಷಕರಿಗೆ ಡ್ರೆಸ್ ಕೋಡ್

‘ಇಸ್ಲಾಮಿಕ್ ಶಕ್ತಿಗಳು ಬಲಿ ತೆಗೆದುಕೊಂಡಿವೆ’

ಕಾವೇರಿ ನದಿಯಲ್ಲಿ ಶಿವಮೊಗ್ಗದ ಹರ್ಷನ ಅಸ್ಥಿ ವಿಸರ್ಜಿಸಿದ ಬಳಿಕ ಮಾತನಾಡಿದ ಅವರು, ಹರ್ಷನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳುವುದಿಲ್ಲ. ಮೋಸದಿಂದ ಹರ್ಷ ಕೊಲೆ ಮಾಡಿದ್ದಾರೆ. ಕೊಲೆಗಡುಕರ ಸಾವಿನ ನಂತರವೇ ಹರ್ಷನಿಗೆ ಶಾಂತಿ ದೊರೆಯುತ್ತೆ. ಒಬ್ಬ ದೇಶಭಕ್ತ, ರಾಷ್ಟ್ರೀಯವಾದಿ ತನ್ನ ಕೆಲಸ ಅರ್ಧಕ್ಕೆ ನಿಲ್ಲಿಸಿದ್ದಾನೆ ಎಂಬ ನೋವಿದೆ. 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಇಸ್ಲಾಮಿಕ್ ಶಕ್ತಿಗಳು ಬಲಿ ತೆಗೆದುಕೊಂಡಿವೆ. ಹಿಂದುತ್ವ ನಾಶ ಮಾಡಲು ಕೊಲೆ ಮಾಡಿದ್ದಾರೆ. ಆದ್ರೆ ನಾವು ಹಿಂದುತ್ವ ಕಾರ್ಯವನ್ನ ಪೂರ್ಣ ಮಾಡುತ್ತೇವೆ. ಈ‌ ಮೂಲಕ ಹರ್ಷ ಅರ್ಧಕ್ಕೆ ನಿಲ್ಲಿಸಿದ ಕೆಲಸವನ್ನ ಮುಂದುವರೆಸುತ್ತೇವೆ ಎಂದರು.

ಮುತಾಲಿಕ್​ ವಿವಾದಾತ್ಮಕ ಹೇಳಿಕೆ

ದುಷ್ಟ ಶಕ್ತಿಗಳು ಹಿಂದೂಗಳ‌ ಕಡೆ ನೋಡಿದ್ರೆ ಅವರ ಕಣ್ಣು ಕಿತ್ತು ಬಿಸಾಕುವ ಶಕ್ತಿ ಹಿಂದೂಗಳಿಗಿದೆ. ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿ ತುರ್ತಾಗಿ ಕೊಲೆಗಾರರನ್ನ ಗಲ್ಲಿಗೇರಿಸಬೇಕು. ತ್ಯಾಗ ಬಲಿದಾನ ಮಾಡಿದ ನಮ್ಮ ಕಾರ್ಯಕರ್ತರು ಹತ್ಯೆಯನ್ನು ಯಾರು ಮರೆಯಬೇಡ. ರಕ್ತ ಕುದಿಯುತ್ತಿದೆ ಇದನ್ನ ಹಿಂದೂಗಳು ಮರೆಯಬಾರದು. ನೀವು ಶಿಕ್ಷೆ ಕೊಡ್ತಿರಿ ಇಲ್ಲ ನಾವು ಶಿಕ್ಷೆ ಕೊಡಬೇಕಾ? ಎಸ್ ಡಿ.ಪಿ‌, ಪಿಎಫ್ ಐ ಸಂಘಟನೆಯನ್ನ ಹದ್ದುಬಸ್ತಿನಲ್ಲಿ ಇಡಬೇಕು. ಇಲ್ಲ ನಾವು ಹದ್ದುಬಸ್ತಿನಲ್ಲಿ ಇಡುತ್ತೇವೆ. ಮಚ್ಚು ಹಿಡಿದುಕೊಂದು ಓಡಾಡಲು ಇದು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನ ಅಲ್ಲ. ನೀವು ಮಚ್ಚು ಹಿಡಿದ್ರೆ ನಮಗೂ ಎರಡು ಕೈಗಳಿದೆ ಎಂದು ಆಕ್ರೋಶಭರಿತಾಗಿ ಮಾತನಾಡಿದರು.

ಇದನ್ನೂ ಓದಿ: Shivamogga Murder Case: ಮುಸ್ಲಿಂ ಕುಟುಂಬವನ್ನು ಉದ್ರಿಕ್ತರ ಗುಂಪಿನಿಂದ ರಕ್ಷಿಸಿದ ಮೆಗ್ಗಾನ್‌ ಆಸ್ಪತ್ರೆಯ ವೈದ್ಯರು!

ಎಸ್.ಡಿ.ಪಿ.ಐ ,ಪಿಎಫ್ ಐನಿಂದ ಹತ್ತಾರು ಹಿಂದೂ ದೇಶಗಳನ್ನ ನಾವು ಕಳೆದುಕೊಂಡಿದ್ದೇವೆ. ಇವುಗಳನ್ನು ನೀವು ಬ್ಯಾನ್ ಮಾಡದಿದ್ರೆ ಬಿಜೆಪಿಯನ್ನ ಗದ್ದಿಗೆಯಲ್ಲಿ ಕೂರಿಸಲು ಬಿಡುವುದಿಲ್ಲ. ತರಬೇತಿ ಪಡೆದವರೇ ಹರ್ಷನ ಕೊಲೆ ಮಾಡಿದ್ದಾರೆ. ಇದನ್ನ ಸೂಕ್ತ ತನಿಖೆ ಮಾಡಬೇಕು ಎಂದು ಶ್ರೀರಂಗಪಟ್ಟಣದಲ್ಲಿ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

‘ಕಾಂಗ್ರೆಸ್ಸಿನವರಿಂದಲೇ ಹಿಂದೂಗಳ ಕಗ್ಗೊಲೆ’

ಕಾಂಗ್ರೆಸ್ಸಿನವರಿಂದಲೇ ರಾಜ್ಯದಲ್ಲಿ ಹಿಂದೂಗಳ ಕಗ್ಗೊಲೆ ಆಗುತ್ತಿದೆ ಎಂದು ಕೊಡಗಿನಲ್ಲಿ ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದರು. ಹಿಂದೆ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಕಗ್ಗೊಲೆಗಳು ಆಗುತ್ತಿದ್ದವು, ಈಗಲೂ ಅದು ರಾಜ್ಯದಲ್ಲಿ ಮುಂದುವರೆದಿದೆ. ಕಗ್ಗೊಲೆ ಮಾಡುವವರನ್ನು ಕಾಂಗ್ರೆಸ್ ಪೋಷಿಸುತ್ತಿದೆ. ಅಂತಹವರನ್ನು ಅಧಿಕಾರಕ್ಕೆ ತಂದರೆ ಏನಾಗುತ್ತದೆ. ಹೀಗಾಗಿ ನಮ್ಮ ಪ್ರಶಿಕ್ಷಣಾ ವರ್ಗದಲ್ಲೂ ನಮ್ಮ ಕಾರ್ಯಕರ್ತರಿಗೆ ಅದನ್ನೇ ಹೇಳಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎಂದು ಹೇಳಿದ್ದೇನೆ ಎಂದು ಮಡಿಕೇರಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
Published by:Kavya V
First published: