• Home
  • »
  • News
  • »
  • state
  • »
  • Kanakadasa Jayanti: ಗೋಮೂತ್ರದಿಂದ ಈದ್ಗಾ ಮೈದಾನ ಶುದ್ಧೀಕರಣ ಮಾಡಿ ಕನಕ ಜಯಂತಿ ಆಚರಿಸಿದ ಮುತಾಲಿಕ್!

Kanakadasa Jayanti: ಗೋಮೂತ್ರದಿಂದ ಈದ್ಗಾ ಮೈದಾನ ಶುದ್ಧೀಕರಣ ಮಾಡಿ ಕನಕ ಜಯಂತಿ ಆಚರಿಸಿದ ಮುತಾಲಿಕ್!

ಪ್ರಮೋದ್ ಮುತಾಲಿಕ್​

ಪ್ರಮೋದ್ ಮುತಾಲಿಕ್​

ಟಿಪ್ಪು ಜಯಂತಿಯಿಂದಾಗಿ ಈದ್ಗಾ ಮೈದಾನ ಅಪವಿತ್ರ ಆಗಿದೆ ಎಂದು ಪ್ರಮೋದ್ ಮುತಾಲಿಕ್ ಗೋಮೂತ್ರದಿಂದ ಮೈದಾನ ಶುದ್ಧೀಕರಿಸಿ ನಂತರ ಕನಕ ಜಯಂತಿ ಆಚರಿಸಿದರು. ಮೈಸೂರಲ್ಲಿ ಟಿಪ್ಪು ಪುತ್ಥಳಿ ನಿರ್ಮಾಣಕ್ಕೆ ಬಿಡೋದಿಲ್ಲ ಎಂದು ಎಚ್ಚರಿಸಿರೋ ಮುತಾಲಿಕ್, ಚುನಾವಣೆಗೆ ಸ್ಪರ್ಧಿಸೋ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಹುಬ್ಬಳ್ಳಿ (ನ.11): ಈದ್ಗಾ ಮೈದಾನದಲ್ಲಿ (Idgah Maidan) ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಈದ್ಗಾ ಮೈದಾನ ಗೋಮೂತ್ರದಿಂದ ಶುಚಿಗೊಳಿಸಿದ ನಂತರ ಕನಕ ಜಯಂತಿ ಆಚರಿಸಲಾಯಿತು. ಗೋಮುತ್ರ ಸಿಂಪಡಿಸುವ ಮೂಲಕ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramodh Mutalik) ಈದ್ಗಾ ಮೈದಾನ ಶುಚಿಗೊಳಿಸಿದರು. ಟಿಪ್ಪು ಜಯಂತಿ (Tipu Jayanti) ಆಚರಣೆ  ಹಿನ್ನೆಲೆ ಈದ್ಗಾ ಮೈದಾನ ಅಪವಿತ್ರವಾಗಿದೆ ಎಂದು ಮುತಾಲಿಕ್ ಕಿಡಿಕಾರಿದರು. ಕನಕ ಜಯಂತಿ ಆಚರಣೆಗೂ ಮುನ್ನ ಈದ್ಗಾ ಮೈದಾನ ಶುಚಿಗೊಳಿಸಲಾಯಿತು. ನಂತರ ಕನಕ ಜಯಂತಿಯನ್ನು ಆಚರಿಸಲಾಯಿತು.


ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆ


ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ನಂತರ ಮಾತನಾಡಿದ ಪ್ರಮೋದ್ ಮುತಾಲಿಕ್, ನಿನ್ನೆ ಟಿಪ್ಪು ಜಯಂತಿ ಆಚರಣೆ ಮಾಡಿ ಮೈದಾನವನ್ನ ಅಪವಿತ್ರಗೊಳಿಸಿದ್ದಾರೆ. ಹೀಗಾಗಿ ನಾವು ಇಂದು ಗೋಮೂತ್ರ ಸಿಂಪಡಿಸಿ ಶುದ್ದೀಕರಣ ಮಾಡಿದ್ದೇವೆ. ರಾಜಕೀಯ ಬೇಳೆ ಬೇಯಿಸಿಕೊಳ್ಳೋಕೆ ಬಿಜೆಪಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ನೀಡಿದೆ. ಟಿಪ್ಪು ಒಬ್ಬ ಮತಾಂಧ, ಕನ್ನಡ ದ್ರೋಹಿ. ಅಂತಹ ದ್ರೋಹಿಯ ಜಯಂತಿಗೆ ಅನುಮತಿ ನೀಡಿರುವುದು ಸರಿಯಲ್ಲ ಎಂದ್ರು.


pramod Muthalik celebrated Kanaka Jayanti in hubballi Idga Maidan pvn


ತನ್ವೀರ್ ಸೇಠ್ ವಿರುದ್ಧ ಮುತಾಲಿಕ್​ ಕಿಡಿ


ದೇಶದ್ರೋಹಿಯ ಜಯಂತಿಗೆ ಅನುಮತಿ ನೀಡುವ ಮೂಲಕ ಚುನಾವಣಾ ಗಿಮಿಕ್ ನಡೆಯುತ್ತಿದೆ. ಟಿಪ್ಪು ಜಯಂತಿ ವಿಚಾರದಲ್ಲಿ ಪಾಲಿಕೆ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದರು. ಟಿಪ್ಪುವಿನ ನೂರು ಅಡಿ ಪ್ರತಿಮೆಯನ್ನ ಮೈಸೂರಿನಲ್ಲಿ ಸ್ಥಾಪನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುತಾಲಿಕ್ ತನ್ವೀರ್ ಸೇಠ್ ವಿರುದ್ಧ ಹರಿಹಾಯ್ದರು. ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲ್ಲ. ಒಂದು ವೇಳೆ ಮೂರ್ತಿ ಪ್ರತಿಷ್ಠಾಪನೆಯಾದಲ್ಲಿ ಮೂರ್ತಿಯನ್ನ ಧ್ವಂಸಗೊಳಿಸುತ್ತೇವೆ.


pramod Muthalik celebrated Kanaka Jayanti in hubballi Idga Maidan pvn
ಪ್ರಮೋದ್ ಮುತಾಲಿಕ್​


ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದಂತೆ ಟಿಪ್ಪು ಮೂರ್ತಿ ಧ್ವಂಸಗೊಳಿಸುತ್ತೇವೆ ಎಂದು ಎಚ್ಚರಿಸಿದರು. ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾದ ದೇಶಗಳು. ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಿ ಮುಸ್ಲಿಂ ರಾಷ್ಟ್ರವಾಯಿತು. ಅದೇ ರೀತಿ ಭಾರತವೂ ಕೂಡ ಹಿಂದೂ ರಾಷ್ಟ್ರ. ಒಂದೇ ದೇಶದಲ್ಲಿ ಎರಡು ಧರ್ಮೀಯರು ಇರಬಾರದು ಎಂಬ ಉದ್ದೇಶದಿಂದಲೇ ಗಾಂಧೀಜಿ ಹಾಗೂ ಜಿನ್ನಾ ದೇಶವನ್ನ ಇಬ್ಭಾಗ ಮಾಡಿದ್ರು ಎಂದು ಪ್ರಮೋದ್ ಮುತಾಲಿಕ್ ಅಭಿಪ್ರಾಯಪಟ್ಟರು.


ಇದನ್ನೂ ಓದಿ: Khapri God: ಮದ್ಯ, ಸಿಗರೇಟು ಇವೇ ಖಾಫ್ರಿ ದೇವರ ನೈವೇದ್ಯ! ಜೋಯ್ಡಾದಲ್ಲಿ ಜಾತ್ರೆ


ಚುನಾವಣೆಯಲ್ಲಿ ಸ್ಪರ್ಧಿಸ್ತೇನೆ ಎಂದ ಮುತಾಲಿಕ್


ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧೆಗಿಳಿಯಲಿದ್ದೇನೆ. ದಕ್ಷಿಣ ಕನ್ನಡದ ಮೂರು ಕ್ಷೇತ್ರ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಸ್ಪರ್ಧೆಗೆ ಚಿಂತನೆ ನಡೆದಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ನನಗೆ ಬೆಂಬಲದ ಅವಶ್ಯಕತೆ ಇಲ್ಲ. ನಮ್ಮಂಥವರು ಬಿಜೆಪಿಗೆ ಬೇಡವಾಗಿದ್ದಾರೆ ಎಂದು ಕಿಡಿಕಾರಿದರು.


ಇದನ್ನೂ ಓದಿ: Hanuman Tree: ಮರದಲ್ಲಿ ಮೂಡಿದ ಮಾರುತಿ! ಉತ್ತರ ಕನ್ನಡದ ವಿಡಿಯೋ ವೈರಲ್


ಜಾರಕಿಹೊಳಿ, ಕಾಂಗ್ರೆಸ್ ವಿರುದ್ಧ ಕಿಡಿ


ಹಿಂದೂ ಧರ್ಮದ ಬಗ್ಗೆ ಸತೀಶ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಬುದ್ಧಿಜೀವಿಗಳು  ಕೇವಲ ಗೊಂದಲ ಸೃಷ್ಠಿಸುವ ಕೆಲಸ ಮಾಡ್ತಿದಾರೆ. ನಾವೇನಾದರೂ ಸಿಡಿದೆದ್ದರೆ ಅವರು ಉಳಿಯುವುದಿಲ್ಲ. ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಬಗ್ಗೆ ಇವರು ಮಾತನಾಡುವುದಿಲ್ಲ. ಅವರಲ್ಲೇ ಹೆಚ್ಚು ಮೌಢ್ಯಗಳಿವೆ ಹೀಗಾಗಿ ಹಿಂದೂ ಧರ್ಮದ ಮಾತನಾಡುತ್ತಾರೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಈ ರೀತಿ ಹೇಳಿಕೆಗಳನ್ನ ನೀಡುತ್ತಿದ್ದಾರೆ ಎಂದು ಮುತಾಲಿಕ್ ಕಿಡಿಕಾರಿದರು.

Published by:ಪಾವನ ಎಚ್ ಎಸ್
First published: