• Home
  • »
  • News
  • »
  • state
  • »
  • Pramod Muthalik: ಪಾಲಿಸ್ಟರ್ ಧ್ವಜ ಬಳಕೆಯನ್ನು ನಿಲ್ಲಿಸಿ, ಬೇಕಾಬಿಟ್ಟಿ ಧ್ವಜ ಹಾರಿಸೋದು ಬೇಡ: ಮುತಾಲಿಕ್ ಕಿಡಿ

Pramod Muthalik: ಪಾಲಿಸ್ಟರ್ ಧ್ವಜ ಬಳಕೆಯನ್ನು ನಿಲ್ಲಿಸಿ, ಬೇಕಾಬಿಟ್ಟಿ ಧ್ವಜ ಹಾರಿಸೋದು ಬೇಡ: ಮುತಾಲಿಕ್ ಕಿಡಿ

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

ಪಾಲಿಸ್ಟರ್ ರಾಷ್ಟ್ರಧ್ವಜ ಬಳಕೆ ಮಾಡಲಾಗುತ್ತಿದೆ ಇದನ್ನು ನಿಲ್ಲಿಸಿ. ದೇಶಭಕ್ತಿಯ ಹಿನ್ನೆಲೆಯಲ್ಲಿ ಅನಾಹುತಕ್ಕೆ ಅವಕಾಶ ಮಾಡಬೇಡಿ. ಬೇಕಾಬಿಟ್ಟಿ  ಏನ್ ಬೇಕಾದ್ದು ಮಾಡಬಹುದು ಅನ್ನೋದು ಧ್ವಜಕ್ಕೆ ಅವಮಾನ‌ಮಾಡಿದಂತೆ.

  • Share this:

ಧಾರವಾಡ: 75 ನೇ ವರ್ಷದ ಸ್ವಾತಂತ್ರ್ಯೋತ್ಸವ (Independence Day) ಅಂಗವಾಗಿ ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜ (Flag) ಆರಿಸುವ ಅಭಿಯಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಲ ಪಾಲಿಸ್ಟರ್ ರಾಷ್ಟ್ರಧ್ವಜ ಬಳಕೆಗೆ ಅನುಮತಿ ನೀಡಿರುವುದನ್ನು ಶ್ರೀರಾಮ ಸೇನೆ ಮುಖ್ಯಸ್ಥ  ಪ್ರಮೋದ‌ ಮುತಾಲಿಕ (Pramod Muthalik) ತೀವ್ರವಾಗಿ ಖಂಡಿಸಿದರು. ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಇಂದು ಪಾಲಿಸ್ಟರ್ ರಾಷ್ಟ್ರಧ್ವಜ ಬಳಕೆ ಮಾಡಲಾಗುತ್ತಿದೆ ಇದನ್ನು ನಿಲ್ಲಿಸಿ. ದೇಶಭಕ್ತಿಯ ಹಿನ್ನೆಲೆಯಲ್ಲಿ ಅನಾಹುತಕ್ಕೆ ಅವಕಾಶ ಮಾಡಬೇಡಿ. ಬೇಕಾಬಿಟ್ಟಿ  ಏನ್ ಬೇಕಾದ್ದು ಮಾಡಬಹುದು ಅನ್ನೋದು ಧ್ವಜಕ್ಕೆ ಅವಮಾನ‌ಮಾಡಿದಂತೆ. ಬಿಜೆಪಿ ಅವರು ಕೋಟಿಗಟ್ಟಲೇ ಧ್ವಜವನ್ನು ಹಾರಿಸಬೇಕು ಅನ್ನೋದು ಸ್ವಾಗತಾರ್ಹ. ಕಾದಿ ಬಟ್ಟೆಯಲ್ಲಿ ಧ್ವಜ ತಯಾರಿಕೆಗೆ ಅವಕಾಶ ಇತ್ತು. ಅದನ್ನು ಬಿಟ್ಟು ಕೋಟಿಗಟ್ಟಲೇ ಧ್ವಜ ಬೇಕಿರೊ ಹಿನ್ನೆಲೆಯಲ್ಲಿ ಪಾಲಿಸ್ಟರ್ ಬಟ್ಟೆ ಧ್ವಜಗಳನ್ನು ತಯಾರಿಕೆ ಮಾಡಲಾಗುತ್ತಿದೆ. ಈ ಪಾಲಿಸ್ಟರ್ ಧ್ವಜವನ್ನು ನೋಡಿದ್ರೆ ಗೊತ್ತಾಗುತ್ತದೆ. ಧ್ವಜಗಳ ಫಿನಿಸಿಂಗ್‌ ಇಲ್ಲ, ಬಟ್ಟೆ ಹರದಿದೆ. ರಾಷ್ಟ್ರಧ್ವಜ ಕ್ಕೆ‌ ಕಿಮ್ಮತ್ತು ಇಲ್ವಾ, ದೇಶದ ಗೌರವವನ್ನು ಹಾಳು ಮಾಡುತ್ತಿದ್ದೀರಿ ಎಂದು ಆಕ್ರೋಶ ಹೊರ ಹಾಕಿದರು.


ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ


ಧ್ವಜಕ್ಕೆ ಒಂದು ಅಳತೆ ಇದೆ, ಆದರೆ ಪಾಲಿಸ್ಟರ್ ಧ್ವಜಗಳಿಗೆ ಅಳತೆ ಇಲ್ಲ. ಬೇಕಾಬಿಟ್ಟು ಮಾಡಿ ದೇಶಭಕ್ತಿ ತೋರಿಸುವ ಅವಶ್ಯಕತೆ ಇಲ್ಲ. ನಾವು ಕೂಡ ಒಂದು ಸಾವಿರ ಕಾರ್ಯಕರ್ತ‌ ಮನೆಯ ಮೇಲೆ ಧ್ವಜ ಹಾರಿಸಲಿದ್ದೆವೆ. ಎಲ್ಲವೂ ಖಾದಿ ಧ್ವಜಗಳನ್ನೆ ಬಳಕೆ‌ ಮಾಡುತ್ತಿದ್ದೇವೆ. ಪಾಲಿಸ್ಟರ್ ಧ್ವಜದಲ್ಲಿನ ತಪ್ಪುಗಳನ್ನು ತೋರಿಸಿ ಕೇಂದ್ರ ಸರ್ಕಾರಕ್ಕೆ ಮುತಾಲಿಕ್​ ತರಾಟೆ ತೆಗೆದುಕೊಂಡರು.


ಇದನ್ನೂ ಓದಿ: Amit Shah: ‘ಈಗ ಸ್ವಾತಂತ್ರ್ಯದ 75ನೇ ವರ್ಷ ಆಚರಿಸುತ್ತಿದ್ದೇವೆ, 100ನೇ ವರ್ಷವನ್ನೂ ನಾವೇ ಆಚರಿಸ್ತೇವೆ’


ಎಷ್ಟೊಂದು‌ ಕಿರಿಕಿರಿ ಕೊಡುತ್ತಿದ್ದಾರೆ


ಇನ್ನು ಗಣೇಶೋತ್ಸವವಕ್ಕೆ ಅನುಮತಿ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ವರ್ಷದಲ್ಲಿ ಒಮ್ಮೆ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಲಾಗುತ್ತದೆ. ಎಲ್ಲರೂ ಏಕತೆ ಮೂಡಿಸುತ್ತದೆ. ಸರ್ಕಾರದ ನಿಬಂಧನೆಗಳುಂದ ತೊಂದರೆ ಆಗುತ್ತುದೆ. ಧಾರ್ಮಿಕ ವಿಧಿ ವಿಧಾನಗಳಿಗೆ ತೊಂದರೆ ಕೊಡುತ್ತಿದ್ದಾರೆ. ವಿದ್ಯುತ್, ಪೆಂಡಾಲ್, ಸ್ಪೀಕರ್ ಗಳ ಅನುಮತಿ ಪಡೆಯಬೇಕಿದೆ. ಪೋಲಿಸ್ ಠಾಣೆ, ಕಾರ್ಪೊರೇಷನ್ ಹಾಗೂ ಅಗ್ನಿಶಾಮಕ ದಳ ಪರವಾನಿಗೆ ಸಹ ಪಡೆಯಬೇಕಿದೆ. ಎಷ್ಟೊಂದು‌ ಕಿರಿಕಿರಿ ಕೊಡುತ್ತಿದ್ದಾರೆ. ನಮಗೆ ಸ್ವಾತಂತ್ರ್ಯವೇ ಇಲ್ಲವಾಗಿದೆ. ಈ ನೀತಿಯನ್ನು ನಾನು ವಿರೋಧಿಸುತ್ತೆನೆ. ಇದು ಬಿಜೆಪಿ ಸರ್ಕಾರದಲ್ಲೇ ಹೀಗಾಗುತ್ತಿದೆ ಎಂದು ಕಿಡಿಕಾರಿದರು.


ಒಂದೇ ಕಡೆ ಅನುಮತಿ ಕೊಡಿ


ಕರ್ನಾಟಕ ಒನ್ ಅಂತಾ ಸರ್ಕಾರ ಮಾಡಿದೆ. ಎಲ್ಲ ಬಿಲ್‌ಗಳನ್ನು ಒಂದೇ ಕಡೆ ತುಂಬುವ ಪ್ರಕ್ರಿಯೆ ಇದರಲ್ಲಿದೆ. ಅದೇ ಮಾದರಿಯಲ್ಲಿ ಗಣೇಶೋತ್ಸವಕ್ಕೆ ಒಂದೇ ಕಡೆ ಅನುಮತಿ ಕೊಡಬೇಕು. ಒಂದೇ ಕಡೆಗೆ ಅನುಮತಿ ವ್ಯವಸ್ಥೆ ಮಾಡಬೇಕು. ಓಡಾಡಿಸುವುದು, ಸುತ್ತಾಡಿಸುವುದು ಬಿಡಬೇಕು. ಗಣೇಶೋತ್ಸವಕ್ಕೆ ಡಿಜೆ ಮಾಡದಂತೆ ನಾವೂ ಮಂಡಳಿಗಳಿಗೆ ಹೇಳಿದ್ದೇವೆ. ಡಿಜೆ ಕರೆಸಬಾರದು ಎಂಬುದಕ್ಕೆ ನಮ್ಮದೂ ಸಹಮತ ಇದೆ. ಆದರೆ ಮೈಕ್‌ಗೆ ಅನುಮತಿ ನಾವು ಪಡೆಯುವುದಿಲ್ಲ. ಮೊದಲು ಮುಸ್ಲಿಂ ಮಸೀದಿಗಳ ಮೈಕ್ ಅನುಮತಿ ತೋರಿಸಲಿ. ಎಷ್ಟು ಅನುಮತಿ ಪಡೆದಿದ್ದಾರೆ ತೋರಿಸಲಿ. ಆ ಬಳಿಕ ಬೇಕಾದರೆ ನಾವು ಗಣೇಶೋತ್ಸವವ ಮೈಕ್‌ಗೆ ಅನುಮತಿ ತಗೋತ್ತೀವಿ ಎಂದು ಸವಾಲು ಎಸೆದರು.


ಸುಪ್ರಿಂ ಕೋರ್ಟ್ ಆದೇಶ ಅವರಿಗೆ ಇಲ್ಲವಾ, ನಮ್ಮ ಧಾರ್ಮಿಕ ಆಚರಣೆಗೆ ಯಾಕೆ ಅಡ್ಡಿ ಮಾಡುತ್ತೀರಿ. ಒಂದೇ ಕಡೆ ಅನುಮತಿ ಕೊಡಬೇಕು. ಇಲ್ಲದೇ ಹೋದಲ್ಲಿ ಬಹುದೊಡ್ಡ ಆಂದೋಲನ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಆಗುತ್ತಿರೊ ಸರಣಿ ಹತ್ಯೆಯನ್ನು ನೆನಪು ಮಾಡಿಕೋಳ್ಳಬೇಕಿದೆ ಎಂದರು.

Published by:Kavya V
First published: